Breaking News
Hiring Reporter’s For more Information Contact Above Number 876 225 4007 . Program producer
Home / ಜಿಲ್ಲೆ / ಕೋಲಾರ

ಕೋಲಾರ

ಗಲಭೆಯಲ್ಲಿ ಭಾಗಿಯಾದವರು ಭಯೋತ್ಪಾದಕರು : ಮುನಿಸ್ವಾಮಿ ಕಿಡಿ.

ಕೋಲಾರ: ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಘಟನೆಯಲ್ಲಿ ಭಾಗಿಯಾಗಿರುವವರು ಭಯೋತ್ಪಾದಕರು ಎಂದು ಕೋಲಾರದಲ್ಲಿ ಸಂಸದ ಎಸ್.ಮುನಿಸ್ವಾಮಿ ಕಿಡಿ‌ಕಾರಿದ್ದಾರೆ. ಇಂದು ಕೋಲಾರದಲ್ಲಿ ಮಾತನಾಡಿದ ಅವರು, ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿಯಲ್ಲಿ ನಡೆದಿರುವ ಕೃತ್ಯ ಘನಘೋರವಾದದ್ದು. ಇಂತಹವರು ನಮ್ಮ ಭಾರತೀಯ ಪ್ರಜೆಗಳಾಗಲು ಸಾಧ್ಯವೇ ಇಲ್ಲ. ಸೋಷಿಯಲ್ ಮೀಡಿಯಾಗಳಲ್ಲಿನ ಪೋಸ್ಟರ್​​ಗಳ ವಿರುದ್ಧ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸುವುದರೊಂದಿಗೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳುವ ಕೆಲಸ ಮಾಡಬೇಕು. ಅದನ್ನ ಬಿಟ್ಟು ಕಾನೂನು ಕೈಗೆತ್ತಿಕೊಂಡು ಉದ್ದೇಶಪೂರ್ವಕವಾಗಿ, ಪೂರ್ವನಿಯೋಜಿತವಾಗಿ ಕೃತ್ಯ ಎಸಗಿದ್ದಾರೆಂದು …

Read More »

ಶೀಘ್ರವೇ ವೈದ್ಯರ ಹುದ್ದೆ ಭರ್ತಿ ಮಾಡಲಾಗುವುದು: ಶ್ರೀರಾಮುಲು ಭರವಸೆ.‌

ಕೋಲಾರ: ‘ಸರ್ಕಾರಿ ಆಸ್ಪತ್ರೆಗಳಲ್ಲಿನ ವೈದ್ಯರು ಹಾಗೂ ಸಿಬ್ಬಂದಿಯ ಖಾಲಿ ಹುದ್ದೆಗಳನ್ನು 2 ತಿಂಗಳಲ್ಲಿ ಭರ್ತಿ ಮಾಡುತ್ತೇವೆ’ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಭರವಸೆ ನೀಡಿದರು. ತಾಯಿ ಮತ್ತು ಮಕ್ಕಳ ಆಸ್ಪತ್ರೆ ಉದ್ಘಾಟಿಸಿ ಮಾತನಾಡಿ, ‘ರಾಜ್ಯ ಲೋಕಸೇವಾ ಆಯೋಗದ ಮೂಲಕ ವೈದ್ಯರ ನೇಮಕಾತಿ ಮಾಡುವುದು ಕಷ್ಟ. ಹೀಗಾಗಿ ಇನ್ನು ಮುಂದೆ ವೈದ್ಯರನ್ನು ನೇರ ನೇಮಕಾತಿ ಮಾಡಿಕೊಳ್ಳಲಾಗುವುದು’ ಎಂದು ತಿಳಿಸಿದರು. ‘ಕೋಲಾರದ ಶ್ರೀ ನರಸಿಂಹರಾಜ (ಎಸ್‌ಎನ್‌ಆರ್) ಜಿಲ್ಲಾ ಆಸ್ಪತ್ರೆಯಲ್ಲಿನ ವಿಶೇಷ ತಜ್ಞ ವೈದ್ಯರ ಹುದ್ದೆಗಳನ್ನು ಶೀಘ್ರವೇ ಭರ್ತಿ …

Read More »

ಮಕ್ಕಳೊಂದಿಗೆ ನೆಲದ ಮೇಲೆ ಕುಳಿತು ಊಟ ಮಾಡಿದ ಶಿಕ್ಷಣ ಸಚಿವ.

ಕೋಲಾರ, ಫೆಬ್ರವರಿ 05: ಕೋಲಾರದಲ್ಲಿ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭಕ್ಕೆ ಬಂದಿದ್ದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಶಾಲೆಯೊಂದರಲ್ಲಿ ಮಕ್ಕಳೊಂದಿಗೆ ಕುಳಿತು ನೆಲದ ಮೇಲೆ ಕುಳಿತು ಊಟ ಮಾಡಿದರು. ಬರಪೀಡಿತ ಜಿಲ್ಲೆ ಎಂದೇ ಹೆಸರುವಾಸಿಯಾಗಿರುವ ಈ ಭಾಗದ ನಾಲ್ಕು ಸರ್ಕಾರಿ ಶಾಲೆಗಳಲ್ಲಿ ಕಳೆದ ಅಕ್ಟೋಬರ್ ನಲ್ಲಿ ಪ್ರಾಯೋಗಿಕವಾಗಿ ಆರಂಭಿಸಿದ್ದ ಸಿರಿಧಾನ್ಯಯುಕ್ತ ಬಿಸಿಯೂಟ ಕಾರ್ಯಕ್ರಮವು ಹತ್ತು ವಾರಗಳಲ್ಲಿ ನಿಂತಿದೆ. ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಪೂರಕವಾಗಿದ್ದ ಸಿರಿಧಾನ್ಯಯುಕ್ತ …

Read More »

ಡಿಕೆ ಶಿವಕುಮಾರ ನನ್ನ ರಾಜಕೀಯ ಗುರುಗಳು-ಎಚ್.ನಾಗೇಶ

ಅಬಕಾರಿ ಸಚಿವರಾದ ಮೇಲೆ ಪ್ರಥಮ ಬಾರಿಗೆ ಎಚ್.ನಾಗೇಶ ಅವರು ಕೋಲಾರಕ್ಕೆ ಇಂದು ಆಗಮಿಸಿದ್ದರು. ತಮ್ಮ ಸ್ವಕ್ಷೇತ್ರ ಮುಳಬಾಗಲು ಪಟ್ಟಣಕ್ಕೆ ಹೋಗುವ ಮಾರ್ಗ ಮಧ್ಯೆ ಸಚಿವರನ್ನು ಅವರ ಬೆಂಬಲಿಗರು ಸ್ವಾಗತಿಸಿದ್ರು. ಕಾಂತರಾಜ ಸರ್ಕಲ್ ನ ಸರ್ಕಾರಿ ಪಾಲಿಟೆಕ್ನಿಕ್ ಅವರಣದಲ್ಲಿ ಸಚಿವರಿಗೆ ಅದ್ದೂರಿ ಸ್ವಾಗತ ಕೋರಲಾಯ್ತು.ಡಿಕೆ ಶಿವಕುಮಾರ ಅವರು ನನ್ನ ರಾಜಕೀಯ ಗುರುಗಳು. ದೈವ ಬಲದಿಂದ ಡಿಕೆಶಿ ಅವರು ‘ಇಡಿ’ ತೊಂದರೆಯಿಂದ ಪಾರಾಗ್ತಾರೆ. ಗಂಗಮ್ಮ ಮತ್ತು ಮಾರಮ್ಮ ದೇವತೆಗಳ ಕೃಪೆ ಡಿಕೆಶಿವಕುಮಾರ ಅವರ …

Read More »

ದುಸ್ಸಾಹಾಸಕ್ಕೆ ಯುವಕ ಬಲಿ

ಕೋಲಾರ:- ರಸ್ತೆಯಲ್ಲಿ ಬೈಕ್ ವೀಲಿಂಗ್ ಮಾಡುವ ವೇಳೆ ಆಯಾತಪ್ಪಿ ಬಿದ್ದ ಯುವಕ ಮೃತ ಪಟ್ಟಿರುವ ಘಟನೆ ಕೋಲಾರದ ಬಂಗಾರಪೇಟೆ ತಾಲೂಕಿನ ಕಾಮಸಮುದ್ರ ರಸ್ತೆಯಲ್ಲಿ ನಡೆದಿದೆ. ಬೈಕ್ ವೀಲಿಂಗ್ ಮಾಡುವ ವೇಳೆ ಲೈಟ್ ಕಂಬಕ್ಕೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಯುವಕ ಸಾವನ್ನಪಿದ್ದಾನೆ. ಪಟ್ಟಣದ ರಹೀಮ್ ಕಾಂಪೌಂಡ್ ನಿವಾಸಿ ತಾಹೀದ್ (23) ಮೃತ ಯುವಕನಾಗಿದ್ದಾನೆ. ಈ ಕುರಿತು ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Share

Read More »

ಬೀಗ ಮುರಿದು ಚಿನ್ನಾಭರಣ ಕಳವು

ಕೋಲಾರ: ಮನೆ ಬೀಗ ಮುರಿದು ಚಿನ್ನಾಭರಣ ಕಳವು ಮಾಡಿರುವ ಘಟನೆ ಕೋಲಾರದ ಕಾರಂಜಿಕಟ್ಟೆಯ 12ನೇ ಕ್ರಾಸ್ ನಲ್ಲಿ ನಡೆದಿದೆ. ಕೋಲಾರದ ಬೆಸ್ಕಾಂ ನೌಕರ ಪ್ರಭಾಕರ್ ಮನೆಯವರು ಊರಿಗೆ ಹೋಗಿದ್ದಾಗ ಬೀಗ ಹೊಡೆದು ಕಳ್ಳರು ತಮ್ಮ ಕೈ ಚಳಕ ತೋರಿದ್ದಾರೆ. ಸುಮಾರು 3 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದು, ಸ್ಥಳಕ್ಕೆ ಕೋಲಾರ ನಗರಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. Share

Read More »

ಕೋಲಾರದಲ್ಲಿ ಅಂತರಾಷ್ಟ್ರೀಯ ಯೋಗ ದಿನ ಆಚರಣೆ.

KOLAR:-ಕೋಲಾರದಲ್ಲಿ ಅಂತರಾಷ್ಟ್ರೀಯ ಯೋಗ ದಿನ ಆಚರಣೆ ನಡೆಯುತ್ತಿದ್ದು, ನಗರದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದಿಂದ ಯೋಗ ದಿನ ಆಯೋಜಿಸಿದೆ. ಜಿಲ್ಲಾಡಳಿತದೊಂದಿಗೆ ಹಲವು ಸಂಘ ಸಂಸ್ಥೆಗಳು ಸಹಯೋಗದೊಂದಿಗೆ ದೀಪ ಬೆಳಗಿಸುವ ಮೂಲಕ ಜಿಲ್ಲಾದಿಕಾರಿ ಮಂಜುನಾಥ್ ಯೋಗ ದಿನಕ್ಕೆ ಚಾಲನೆ ನೀಡಿದರು. ಯೋಗ ದಿನಾಚರಣೆಯಲ್ಲಿ ನೂರಾರು ವಿದ್ಯಾರ್ಥಿಗಳು, ಯೋಗಪಟುಗಳು ಭಾಗಿಯಾಗಿದ್ದರು. ಸಾಮೂಹಿಕ ಯೋಗ ಪ್ರದರ್ಶನವನ್ನು ಯೋಗಪಟುಗಳು ನಡೆಸಿದರು. ಡಿಸಿ ಮಂಜುನಾಥ್, ಸಿಇಓ ಜಗದೀಶ್, ಎಸ್ಪಿ ಕಾರ್ತಿಕ್ ರೆಡ್ಡಿ ಸೇರಿದಂತೆ ಹಲವು ಅಧಿಕಾರಿಗಳು ಭಾಗಿಯಾಗಿದ್ದರು. Share

Read More »

ಯಾವ ಹುದ್ದೆಗೆ ರಾಜಿನಾಮೆ ಕೊಡಬೇಕು ಅನ್ನೋದ್ರ ಬಗ್ಗೆ ಯೋಚನೆ ಮಾಡ್ತೀನಿ.

ಮಹಾನಗರ ಪಾಲಿಕೆ ಸದಸ್ಯರಾಗಿದ್ದ ಎಸ್.ಮುನಿಸ್ವಾಮಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಇದರ ಹಿನ್ನೆಲೆಯಲ್ಲಿ ಎರಡು ಪ್ರಮುಖ ಹುದ್ದೆಗಳಲ್ಲಿ ಮುಂದುವರೆಯುವ ಸಂಸದರು ಯಾವ ಹುದ್ದೆಗೆ ರಾಜೀನಾಮೆ ನೀಡಬೇಕೆಂಬುದರ ಬಗ್ಗೆ ಯೋಚನೆ ಮಾಡುತ್ತಿದ್ದೇನೆಂದು ಕೋಲಾರದಲ್ಲಿ ಬಿಜೆಪಿ ಸಂಸದ ಎಸ್.ಮುನಿಸ್ವಾಮಿ ಹೇಳಿಕೆ ನೀಡಿದರು. ಬಿಬಿಎಂಪಿ ಕಾಡುಗುಡಿ ಕಾರ್ಪೋರೇಟರ್ ಸಹ ಆಗಿರುವ ಎಸ್.ಮುನಿಸ್ವಾಮಿ ಈಗ ಕೋಲಾರದ ಸಂಸದರು ಸಹ ಆಗಿದ್ದಾರೆ. ಹೀಗಾಗಿ ಯಾವ ಪದವಿಗೆ ರಾಜಿನಾಮೆ ಕೊಡಬೇಕು ಅನ್ನೋದ್ರ ಬಗ್ಗೆ ಯೋಚನೆ ಮಾಡ್ತೀನಿ. ಇದರ …

Read More »

ಅಕ್ರಮವಾಗಿ ಹಸುಗಳನ್ನ ಸಾಗಾಣೆ ಮಾಡುತ್ತಿದ್ದ ವ್ಯಕ್ತಿಯನ್ನು ಹಿಡಿದ ಶ್ರೀರಾಮಸೇನೆ

ಅಕ್ರಮವಾಗಿ ಹಸುಗಳನ್ನ ಸಾಗಾಣೆ ಮಾಡುತ್ತಿದ್ದ ವ್ಯಕ್ತಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಕೋಲಾರ ಹೊರವಲಯದ ಪವನ್ ಕಾಲೇಜು ಮೈದಾನದ ಬಳಿ ನಡೆದಿದೆ. ಟಾಟಾ ಏಸ್ ನಲ್ಲಿ ಅಕ್ರಮವಾಗಿ ಹಸುಗಳನ್ನು ಸಾಗಾಣಿಕೆ ಮಾಡುತ್ತಿದ್ದಾಗ ವೇಳೆ ಶ್ರೀರಾಮಸೇನೆ ಕಾರ್ಯಕರ್ತರು ಹಿಡಿದು ಪೋಲಿಸರ ವಶಕ್ಕೆ ನೀಡಿದ್ದಾರೆ. ಟಾಟಾ ಏಸ್ ವಾಹನ ಸೇರಿದಂತೆ ಒಂಬತ್ತು ಹಸುಗಳು, ಚಾಲಕನನ್ನ ನಗರಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ.ಪ್ರಕರಣವನ್ನು ದಾಖಲಿಸಿಕೊಂಡ ಪೋಲಿಸರು ವಾಹನದ ಚಾಲಕನನ್ನು ವಿಚಾರಣೆ ನಡೆಸಿದ್ದಾರೆ. Share

Read More »

ಬೆಳ್ಳಂಬೆಳಗ್ಗೆ ಎಸಿಬಿ ಅಧಿಕಾರಿಗಳಿಂದ ಭ್ರಷ್ಟರ ಮೇಲೆ ದಾಳಿ

ಕೋಲಾರ ನಗರದಲ್ಲಿ ಬೆಳ್ಳಂಬೆಳಗ್ಗೆ ಎಸಿಬಿ ಭ್ರಷ್ಟರ ಮೇಲೆ ದಾಳಿ ಮಾಡುವ ಮೂಲಕ ಶಾಕ್ ನೀಡಿದ್ದಾರೆ. ವಾಣಿಜ್ಯ ತೆರಿಗೆ ಇಲಾಖೆಯ ಜಂಟಿ‌ ನಿರ್ದೇಶಕರ ಸಂಬಂಧಿಕರ ಮನೆಗಳ ಮೇಲೆ ಎಸಿಬಿ ದಾಳಿ ಮಾಡಿದೆ. ರಾಜ್ಯ ವಾಣಿಜ್ಯ ತೆರಿಗೆ ಇಲಾಖೆಯ ಜಂಟಿ‌ ನಿರ್ದೇಶಕ ನಾರಾಯಣಸ್ವಾಮಿ ಸಂಬಂಧಿಕರು ಕೋಲಾರ ನಗರದ ಅಂತರಗಂಗೆ ರಸ್ತೆಯಲ್ಲಿರುವಮನೆಗಳ ಮೇಲೆ ದಾಳಿಯಾಗಿದೆ. ಅಧಿಕಾರಿ ನಾರಾಯಣಸ್ವಾಮಿ ಮಾವ ಶಿವಪ್ಪ, ತಾಯಿ ತುಳಸಮ್ಮ ನಿವಾಸಗಳ ಮೇಲೆ ಹಾಗೂ ಬೆಂಗಳೂರಿನ‌ ಜಯನಗರ ನಿವಾಸ ಮತ್ತು ಚಿಂತಾಮಣಿ …

Read More »

ಕೋಲಾರ ನಗರಸಭೆಗೆ ಡಿಸಿ ಮಂಜುನಾಥ್ ದಿಢೀರ್ ಭೇಟಿ ನೀಡಿ ಕಡತಗಳ ಪರಿಶೀಲನೆ

ಕೋಲಾರ ನಗರಸಭೆಗೆ ಡಿಸಿ ಮಂಜುನಾಥ್ ದಿಢೀರ್ ಭೇಟಿ ನೀಡಿ ಕಡತಗಳ ಪರಿಶೀಲನೆ ಮಾಡಿದರು. ಕೋಲಾರ ನಗರಸಭೆ ಆಡಳಿತಾಧಿಕಾರಿಯಾಗಿರುವ ಡಿಸಿ ಮಂಜುನಾಥ್ ರವರು ನಗರಸಭೆ ಎಇ, ಎಇಇ ಯನ್ನ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಟೆಂಡರ್ ಆಗಿದ್ದರು ಗುತ್ತಿಗೆದಾರರಿಂದ ಕೆಲಸ ಮಾಡಿಸದ ಇಂಜಿನಿಯರ್ ಗಳು ಬಗ್ಗೆ ತೀವ್ರ ಕ್ರಮ ಕೈಗೊಳ್ಳಲು ಸೂಚನೆ ನೀಡಿದರು. ಇನ್ನೂ ಡಿಸಿಗೆ ತಪ್ಪು ಮಾಹಿತಿ ನೀಡಿದ ಎಇಇ ಪೂಜಾರಪ್ಪ ಗೆ ತೀವ್ರ ತರಾಟೆ ತೆಗೆದುಕೊಂಡು, ಟೆಂಡರ್ ಕರೆದು ಎರಡು …

Read More »

ಜನರಿಗೆ ಟೋಪಿ ಹಾಕಿದ ಮತ್ತೊಂದು ದೋಖಾ ಕಂಪನಿ

ರಾಜ್ಯ ರಾಜಧಾನಿಯಲ್ಲಿ ದಿನಕೊಂದು ಹೊಸ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಈಗ ಕೋಲಾರದ ಸರಧಿಯಾಗಿದ್ದು, ‘ ದಿ ಭಾರತ್ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಲಿ. ಸಂಸ್ಥೆ ವಂಚನೆ ಪ್ರಕರಣದಲ್ಲಿ ಸಿಲುಕಿಕೊಂಡಿದೆ. ಹತ್ತು ಕೋಟಿ ರುಪಾಯಿಗೂ ಹೆಚ್ಚು ವಂಚಿಸಿರುವ ದೋಖಾ ಕಂಪನಿ ದಿನಕ್ಕೆ ಒಂದು ಲಕ್ಷ ರುಪಾಯಿಗೂ ಜಾಸ್ತಿ ಪಿಗ್ಮಿ ವಸೂಲಿ ಮಾಡುತ್ತಿತ್ತು. ಆದ್ರೇ ಎರಡು ತಿಂಗಳಿಂದ ಸಂಸ್ಥೆಗೆ ಬೀಗ ಜಡಿದು ಪರಾರಿಯಾಗಿರುವ ಸಂಸ್ಥೆಯವರು ಗ್ರಾಹಕರಿಗೆ ಹೆದರಿ ತಲೆ ಮರೆಸಿಕೊಂಡಿದ್ದಾರೆ. ಇದರಿಂದ ಹಣ …

Read More »

ಲೋಕಸಭೆ ಚುನಾವಣೆಯಲ್ಲಿ ಗೆದ್ದ ಬಿಜೆಪಿಗೆ ಅಧಿಕಾರದ ಮದ ಏರಿದೆ,

ಲೋಕಸಭೆ ಚುನಾವಣೆಯಲ್ಲಿ ಗೆದ್ದ ಬಿಜೆಪಿಗೆ ಅಧಿಕಾರದ ಮದ ಏರಿದೆ, ಹಾಗಾಗಿ ಇಂತಹ ಅಸಭ್ಯ ಹೇಳಿಕೆಗಳನ್ನ ನೀಡುತ್ತಿದ್ದಾರೆಂದು ಗ್ರಾಮೀಣಾಭಿವೃದ್ದಿ ಸಚಿವ ಕೃಷ್ಣಬೈರೇಗೌಡ ಕೋಲಾರದಲ್ಲಿ ಹೇಳಿಕೆ ನೀಡಿದರು. ಕೈ ಕಡಿಯುವುದು, ತಲೆ ತೆಗೆಯುವುದು ಬಿಜೆಪಿ ಸಂಸ್ಕೃತಿಯನ್ನ ಬಿಂಬಿಸುತ್ತದೆ. ಮೇಲು ಕೀಳು ಎಂಬ ಭಾವನೆ ಅವರ ತಲೆಯಲ್ಲಿ ಹಾಗೆ ಉಳಿದಿದೆ. ಮನುಷ್ಯ ಜನ್ಮ ಸ್ವಾಭಾವಿಕವಾಗಿದ್ದು, ಹೀಗೆಲ್ಲ ಒಂದು ಸಮುದಾಯಕ್ಕೆ ನೋವಾಗುವ ರೀತಿ ಮಾತನಾಡಬಾರದು. ಸಂಸದೆ ಶೋಭಾ ಕರೆಂದ್ಲಾಜೆ ಅಸಭ್ಯ ಟ್ವಿಟ್ ಗೆ ಸಚಿವ ಕೃಷ್ಣ …

Read More »

ಕೋಲಾರದಲ್ಲಿ ಐಎಂಎ ವಿರುದ್ದ ಬೀದಿಗಿಳಿದ ಜನತೆ.

ಐಎಂಎ ವಂಚನೆಯ ವಿರುದ್ದ ಸಿಡಿದ ಜನರು ಇಂದು ಬೀದಿಗೆ ಇಳಿದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೋಲಾರದಲ್ಲಿ ನಗರದ ಮೆಕ್ಕೆ ವೃತ್ತದಲ್ಲಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ಮಾಡಿದರು. ರಸ್ತೆ ತಡೆ ನಡೆಸಿ ಐಎಂಎ ವಿರುದ್ದ ಧಿಕ್ಕಾರ ಕೂಗುತ್ತಿರುವ ಧರಣಿಕಾರರು ಮನ್ಸೂರ್ ಖಾನ್ ಬಂಧಿಸಿ ಶಿಕ್ಷಿಸಲು ಒತ್ತಾಯಿಸಿದರು. ಮನ್ಸೂರ್ ಪ್ರತಿಕೃತಿ ದಹಿಸಿ ಆಕ್ರೋಶ ಹೊರಹಾಕಿದ ಟಿಪ್ಪು ಸೆಕ್ಯೂಲರ್ ಸೇನೆ ಮತ್ತು ರೈತ ಸಂಘಟನೆಗಳು ವಂಚನೆಗೊಳಗಾದವರಿಗೆ ಹಣ ವಾಪಸ್ ಕೊಡಿಸಲು ಸರ್ಕಾರಕ್ಕೆ ಒತ್ತಾಯ ಮಾಡಿದರು. …

Read More »

ಸಂಸದ ಮುನಿಸ್ವಾಮಿಯಿಂದ ನಗರ ಪ್ರದಕ್ಷಿಣೆ

ಮಳೆಗಾಲ ಆರಂಭವಾದ ಹಿನ್ನೆಲೆಯಲ್ಲಿ ಸಂಸದ ಮುನಿಸ್ವಾಮಿಯವರು ಕೋಲಾರದಲ್ಲಿ ಸ್ವಚ್ಚತಾ ಬಗ್ಗೆನಗರ ಪ್ರದಕ್ಷಿಣೆ ಮಾಡಿದ್ದಾರೆ. ಬೆಳ್ಳಂಬೆಳ್ಳೆಗ್ಗೆಯೆ ಪೌರ ಕಾರ್ಮಿಕರ ಕಾರ್ಯವೈಕರಿ, ಕಸದ ಸಮಸ್ಯೆಯನ್ನ ವೀಕ್ಷಿಸಿದರು. ಕೋಲಾರ ನಗರಸಭೆಯಲ್ಲಿ 228 ಹೊರಗುತ್ತಿಗೆ ಹಾಗೂ ಖಾಯಂ ಪೌರ ಕಾರ್ಮಿಕರು ಇದ್ದು, ಅವರ ಆರೋಗ್ಯ ತಪಾಸಣೆ ಕಡ್ಡಾಯವಾಗಿ ಮಾಡಿಸುವಂತೆ ಸೂಚನೆ ನೀಡಿದ್ದಾರೆ. ಇದೇ ವೇಳೆ ಪೌರ ಕಾರ್ಮಿಕರು ನಗರಸಭೆ ಅಧಿಕಾರಿಗಳ ವಿರುದ್ಧ ದೂರು ನೀಡಿದ್ದಾರೆ. ಇದೇ ವೇಳೆ ಸಂಸದರು ಕಾರ್ಮಿಕರನ್ನು ದಬಾಯಿಸಿದರೇ ಪರಿಣಾಮ ನೆಟ್ಟಗಿರುವುದಿಲ್ಲ, ಸೌಜನ್ಯದಿಂದ …

Read More »
error: Content is protected !!