Breaking News
Hiring Reporter’s For more Information Contact Above Number 876 225 4007 . Program producer
Home / ಜಿಲ್ಲೆ / ಚಾಮರಾಜನಗರ

ಚಾಮರಾಜನಗರ

ಯತ್ನಾಳ್ ವಿರುದ್ಧ ಕನ್ನಡ ಪರ ಹೋರಾಟಗಾರರ ಟೊಮ್ಯಾಟೊ ಚಳುವಳಿ.

ಚಾಮರಾಜನಗರ : ಕನ್ನಡಪರ ಹೋರಾಟಗಾರರನ್ನು ಹೀಗಳೆದಿದ್ದ ಶಾಸಕ ಬಸನಗೌಡ ಯತ್ನಾಳ್ ವಿರುದ್ಧ ನಗರದಲ್ಲಿ ಕನ್ನಡಪರ ಹೋರಾಟಗಾರರು ಟೊಮ್ಯಾಟೊ ಚಳವಳಿ ಮೂಲಕ ಪ್ರತಿಭಟಿಸಿದರು. ಚಾಮರಾಜೇಶ್ವರ ದೇಗುಲ ಮುಂಭಾಗದಿಂದ ಭುವನೇಶ್ವರಿ ವೃತ್ತದವರೆಗೆ ಮೆರವಣಿಗೆ ನಡೆಸಿ ಯತ್ನಾಳ್ ಭಾವಚಿತ್ರಕ್ಕೆ ಟೊಮ್ಯಾಟೊಗಳನ್ನು ಹೊಡೆದು ಧಿಕ್ಕಾರದ ಘೋಷಣೆಗಳನ್ನು ಕೂಗಿದರು. ಕನ್ನಡಪರ ಹೋರಾಟಗಾರ ಚಾ‌.ರಂ.ಶ್ರೀನಿವಾಸಗೌಡ ಮಾತನಾಡಿ, ಯತ್ನಾಳ್ ಓರ್ವ ಬಕೆಟ್ ರಾಜಕಾರಣಿ, ಕನ್ನಡಪರ ಹೋರಾಟಗಾರರ ಬಗ್ಗೆ ಅರಿಯದೇ ಕೇವಲವಾಗಿ ಮಾತನಾಡಿರುವುದು ಸರಿಯಲ್ಲ. ಕೂಡಲೇ ಅವರು ಬೇಷರತ್ ಕ್ಷಮೆ ಯಾಚಿಸಬೇಕು. ಇಲ್ಲದಿದ್ದರೇ …

Read More »

ಚಾಮರಾಜನಗರ ವೈದ್ಯಕೀಯ ಕಾಲೇಜಿಗೆ ಸಿಗದ ಅನುಮತಿ.

ಚಾಮರಾಜನಗರ: 2020-21ನೇ ಸಾಲಿನ ಎಂಬಿಬಿಎಸ್‌ ಕೋರ್ಸ್‌ನ ಪ್ರವೇಶಾತಿಗಾಗಿ ರಾಷ್ಟ್ರೀಯ ವೈದ್ಯಕೀಯ ಆಯೋಗವು (ಎನ್‌ಎಂಸಿ) ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಅನುಮತಿ ನೀಡದೆ ಪಾಲಕರು, ವಿದ್ಯಾರ್ಥಿಗಳನ್ನು ಆತಂಕಕ್ಕೆ ದೂಡಿದೆ. ಕೋರ್ಸ್‌ ಪ್ರವೇಶಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸೀಟ್‌ ಮ್ಯಾಟ್ರಿಕ್ಸ್‌, ಕಾಲೇಜುಗಳ ವಿವರ ಹಾಗೂ ಶುಲ್ಕದ ವಿವರಗಳನ್ನು ಪ್ರಕಟಿಸಿದ್ದು, ಪಟ್ಟಿ ಮಾಡಿರುವ ಒಟ್ಟು 52 ಕಾಲೇಜುಗಳಲ್ಲಿ ಚಾಮರಾಜನಗರ ಸರ್ಕಾರಿ ವೈದ್ಯಕೀಯ ಕಾಲೇಜಿನ ಹೆಸರನ್ನು ಈ ಬಾರಿ ಕೈಬಿಡಲಾಗಿದೆ. ಇಲ್ಲಿನ ಕಾಲೇಜಿನಲ್ಲಿ 150 ವಿದ್ಯಾರ್ಥಿಗಳ ಪ್ರವೇಶಕ್ಕೆ …

Read More »

ಬೈಕ್ ಹಾಗೂ ಟೆಂಪೋ ಟ್ರಾವೆಲರ್ ಡಿಕ್ಕಿ : ಇಬ್ಬರ ಸಾವು.

ಚಾಮರಾಜನಗರ: ಬೈಕ್ ಹಾಗೂ ಟೆಂಪೋ ಟ್ರಾವೆಲರ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಇಬ್ಬರು ಮೃತಪಟ್ಟಿರುವ ಘಟನೆ ಯಳಂದೂರು ತಾಲೂಕಿನ ಮದ್ದೂರಿನಲ್ಲಿ ನಡೆದಿದೆ. ಹನೂರು ತಾಲೂಕಿನ ಲೊಕ್ಕನಹಳ್ಳಿ ಗ್ರಾಮದ ಆನಂದ್(28) ಮತ್ತು ಆರ್.ಎಸ್. ದೊಡ್ಡಿ ಗ್ರಾಮದ ಸಿದ್ದರಾಜು(28) ಮೃತರು. ಇವರು ಎಳನೀರು ವ್ಯಾಪಾರಿಗಳಾಗಿದ್ದು, ವ್ಯವಹಾರ ಕುದುರಿಸಿ ಊರಿಗೆ ಹಿಂದಿರುಗುವವೇಳೆ ಬೆಂಗಳೂರಿನಿಂದ ಚಾಮರಾಜನಗರಕ್ಕೆ ಬರುತ್ತಿದ್ದ ಟೆಂಪೋ ಟ್ರಾವೆಲರ್ ಡಿಕ್ಕಿ ಹೊಡೆದಿದೆ ಎನ್ನಲಾಗ್ತಿದೆ. ಟಿಟಿಯಲ್ಲಿ 8 ಮಂದಿ ಇದ್ದರು ಎಂದು ತಿಳಿದುಬಂದಿದ್ದು, ಘಟನೆ ನಡೆದ ಕೂಡಲೇ ಚಾಲಕ …

Read More »

ಮಹಾಮಾರಿಗೆ ಬಲಿಯಾದ ಕೊರೋನಾ ವಾರಿಯರ್.

ಚಾಮರಾಜನಗರ: ಇಲ್ಲಿನ ಗ್ರಾಮಾಂತರ ಠಾಣೆಯ ಎಎಸ್​ಐ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.  ಮೃತರು ಗುಂಡ್ಲುಪೇಟೆ ತಾಲೂಕಿನ ಕುಣಗಳ್ಳಿ ಮೂಲದವರು ಎಂದು ತಿಳಿದುಬಂದಿದೆ. ಕಳೆದ ಜುಲೈ 30ರಂದು‌ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು.  ಇನ್ನು ಮೃತರಿಗೆ ಮಧುಮೇಹ ಹಾಗೂ ಬಿಪಿ ಜೊತೆಗೆ ಟೈಫಾಯ್ಡ್ ಜ್ವರವೂ ಕಾಣಿಸಿಕೊಂಡಿತ್ತು ಎನ್ನಲಾಗಿದೆ‌. ಮೃತರ ಅಂತ್ಯಕ್ರಿಯೆಯನ್ನು ಸ್ವಗ್ರಾಮದಲ್ಲಿ ಸ್ವಯಂ ಸೇವಕರು ಗೌರವಯುತವಾಗಿ ನಡೆಸಿದ್ದಾರೆ‌‌. Share

Read More »

ಕಾಡಿನಿಂದ ನಾಡಿನತ್ತ ಬಂದ ಜೋಡಿ ಆನೆಗಳ ದಾರುಣ ಸಾವು

ಚಾಮರಾಜನಗರ: ಕಬ್ಬಿನ ಗದ್ದೆಗೆ ಹಾಕಿದ್ದ ವಿದ್ಯುತ್ ತಂತಿ ತುಳಿದು ಎರಡು ಆನೆಗಳು ದಾರುಣ ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆ ಗಡಿ ತಮಿಳುನಾಡಿನ ತಾಳವಾಡಿ ಸಮೀಪದ ಕರಳವಾಡಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಕರುಪ್ಪುಸ್ವಾಮಿ ಎಂಬುವರಿಗೆ ಸೇರಿದ ಜಮೀನಿಗೆ ನುಗ್ಗಿದ ಆನೆಗಳು ಅಕ್ರಮವಾಗಿ ಹರಿ ಬಿಟ್ಡಿದ್ದ ವಿದ್ಯುತ್ ತಂತಿ ತುಳಿದು ಸಾವನ್ನಪ್ಪಿವೆ. ಘಟನೆ ಬಳಿಕ ಜಮೀನು ಮಾಲೀಕ ಪರಾರಿಯಾಗಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ಪರಿಶೀಲನೆ ನಡೆಸಿದ್ದಾರೆ. ಜಮೀನು ಮಾಲೀಕನ ಮೇಲೆ …

Read More »

ಹಳ್ಳದಲ್ಲಿ ಕೊಳಚೆ ನೀರು: ಹೈರಾಣಾದ ಸಾರ್ವಜನಿಕರು.

ಚಾಮರಾಜನಗರ: ಸುಸಜ್ಜಿತವಾದ ಡಾಂಬರು ರಸ್ತೆ ಇದೆ. ಪಕ್ಕದಲ್ಲಿ ವ್ಯವಸ್ಥಿತ ಚರಂಡಿ ಕೂಡ ಇದೆ. ಆದರೆ, ಕೊಳಚೆ ನೀರು ಚರಂಡಿಯಲ್ಲಿ ಹರಿಯುವುದಿಲ್ಲ. ಪಕ್ಕದಲ್ಲಿರುವ ಹಳ್ಳದಲ್ಲಿ ಸಂಗ್ರಹಗೊಂಡಿದೆ! ಇದು ನಗರದ ಅಂಬೇಡ್ಕರ್‌ ಹೊಸ ಬಡಾವಣೆಯ ಶಂಕನ ಹಳ್ಳದ ಸ್ಥಿತಿ. ಶೌಚ ನೀರು ತುಂಬಿಕೊಂಡಿರುವುದರಿಂದ ಸಮೀಪದ ನಿವಾಸಿಗಳು ದುರ್ವಾಸನೆ ತಾಳಲಾರದೆ ಸಂಕಟ ಪಡುತ್ತಿದ್ದಾರೆ. ಈ ಪ್ರದೇಶ ಕರಿನಂಜನಪುರ ರಸ್ತೆಯಲ್ಲಿರುವ ಭಾರತ್‌ ಗ್ಯಾಸ್‌ ದಾಸ್ತಾನು ಕೊಠಡಿಯ ಹಿಂಭಾಗದಲ್ಲಿದೆ. ಶಂಕನಹಳ್ಳದ ಸುತ್ತಲೂ ಸುಮಾರು 30ಕ್ಕೂ ಹೆಚ್ಚು ಮನೆಗಳಿವೆ. ಎಲ್ಲ …

Read More »

ಕುರಿಗಾಹಿಯ ಬರ್ಭರ ಹತ್ಯೆ.

ಚಾಮರಾಜನಗರ: ಕುರಿಗಾಹಿಯೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ತಾಲೂಕಿನ ಮಂಗಳ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಮಹಾದೇವಗೌಡ(53) ಮೃತ ದುರ್ದೈವಿ. ದುಷ್ಕರ್ಮಿಗಳು ಕುತ್ತಿಗೆ ಬಿಗಿದು, ಕಲ್ಲಿನಿಂದ ಜಜ್ಜಿ ಕೊಲೆ ಮಾಡಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ. ಮೃತರು ತೋಟದ ಮನೆಯಲ್ಲಿ ಪತ್ನಿಯೊಂದಿಗೆ ವಾಸವಿದ್ದು, 100 ಕ್ಕೂ ಹೆಚ್ಚು ಕುರಿಗಳನ್ನು ಸಾಕಿದ್ದರು ಎಂದು ತಿಳಿದುಬಂದಿದೆ. ಇನ್ನು, ನಿನ್ನೆ ಸಂಜೆ ಕುರಿಗಳು ಮನೆಗೆ ವಾಪಸ್​ ಆದರೂ ಮಹಾದೇವಗೌಡ ಮಾತ್ರ ಬಂದಿರಲಿಲ್ಲ. ಆದ್ದರಿಂದ ಇಂದು ಬೆಳಗ್ಗೆ ಹುಡುಕಾಡಿದಾಗ ಪ್ರಕರಣ ಬೆಳಕಿಗೆ …

Read More »

ಮಾನವ ಹಕ್ಕು ಸಮಿತಿ ಪದಾಧಿಕಾರಿಗಳ ಆಯ್ಕೆ.

ಗುಂಡ್ಲುಪೇಟೆ: ಚಾಮರಾಜನಗರ ಜಿಲ್ಲಾ ವ್ಯಾಪ್ತಿಯ ಮಾನವ ಹಕ್ಕುಗಳ ಸಮಿತಿ ಪಧಾಧಿಕಾರಿಗಳನ್ನು ರಾಷ್ಟ್ರೀಯ ಅಧ್ಯಕ್ಷರಾದ ಇಬ್ರಾಹಿಂ ಅವರ ಅಧ್ಯಕ್ಷತೆಯಲ್ಲಿ ಆಯ್ಕೆ ಮಾಡಲಾಯಿತು. ಪಟ್ಟಣದ ಹೋಟೆಲ್ ಮಿಸ್ಟಿರಾಕ್ನಲ್ಲಿ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದ ಸಂಧರ್ಭದಲ್ಲಿ ನೂತನ ಪಧಾಧಿಕಾರಿಗಳ ನೇಮಕಾತಿಯನ್ನು ಮಾಡಲಾಯಿತು. ರಾಜ್ಯ ಉಪಾಧ್ಯಕ್ಷರಾಗಿ ಉಮೇಶ್ (ವಕೀಲರು), ಚಾ.ನಗರ ಜಿಲ್ಲಾಧ್ಯಕ್ಷರಾಗಿ ನಾಗೇಂದ್ರ, ಜಿಲ್ಲಾ ಕಾರ್ಯಾಧ್ಯಕ್ಷರಾಗಿ ನಾಗರಾಜು ( ಕ್ರೇಜಿ) ಕಾರ್ಯಧರ್ಶಿ ಮುತ್ತಣ್ಣ ಹುಲಸಗುಂದಿ, ಗುಂಡ್ಲುಪೇಟೆ ತಾಲೂಕು ಅಧ್ಯಕ್ಷ ಪಾಪಣ್ಣ, ಕಾರ್ಯಾಧ್ಯಕ್ಷ ಬಾಲು, ಕಾರ್ಯಧರ್ಶಿ ಮೂರ್ತಿ, …

Read More »

ಮೋದಿ ಜೊತೆ ಪರೀಕ್ಷಾ ಪೇ ಚರ್ಚಾ: ಗುಂಡ್ಲುಪೇಟೆಯ ವಿದ್ಯಾರ್ಥಿನಿ ಆಯ್ಕೆ.

ಚಾಮರಾಜನಗರ : ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನಡೆಸಲಾಗುವ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಆದರ್ಶ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಅಪೂರ್ವ ಆಯ್ಕೆಯಾಗಿದ್ದಾಳೆ.‌ಅಪೂರ್ವ ಪ್ರಬಂಧ ಬರೆಯು ಮೂಲಕ ಪ್ರಧಾನಮಂತ್ರಿಯವರ ಗಮನಸೆಳೆದಿದ್ದಾಳೆ‌.ಇವರ ತಾಯಿ ಗೀತಾರವರು ಕೂಡ ಇದೇ ಶಾಲೆಯಲ್ಲಿ ಶಿಕ್ಷಕಿಯಾಗಿ ಇರುವುದು ಮತ್ತೊಂದು ವಿಶೇಷವಾಗಿದೆ.ವಿಶೇಷವಾದಂತಹ ಕಾರ್ಯಕ್ರಮಕ್ಕೆ ಆಯ್ಕೆಯಾದ ವಿದ್ಯಾರ್ಥಿನಿಗೆ ಶಾಲೆಯಲ್ಲಿ ಶಿಕ್ಷಕರು ವಿದ್ಯಾರ್ಥಿಗಳು ಕೂಡ ಶುಭಾಶಯ ಕೋರಿದ್ದಾರೆ. ವರದಿ: ಮಹದೇವ ಪ್ರಸಾದ್ ಯಡಹುಂಡಿ Share

Read More »

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳಿಂದ ಪ್ರತಿಭಟನಾ ಮೆರವಣಿಗೆ.‌

ಗುಂಡ್ಲುಪೇಟೆ: ದೇಶದಾದ್ಯಂತ ಕಾರ್ಮಿಕರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನೀಡಿರುವ ಭಾರತ್ ಬಂದ್ ಕರೆಗೆ ಗುಂಡ್ಲುಪೇಟೆ ಪಟ್ಟಣದಲ್ಲಿ ಬೆಂಬಲ ವ್ಯಕ್ತವಾಯಿತು. ಅಂಗನವಾಡಿ ನೌಕರರು ಹಾಗೂ ಗ್ರಾಮ ಪಂಚಾಯಿತಿ ನೌಕರರು ಪ್ರತಿಭಟನೆಯ ಮೂಲಕ ಪಟ್ಟಣದ ಪ್ರವಾಸಿ ಮಂದಿರದಿಂದ ಹೊರಟು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗುವುದರ ಮೂಲಕ ಕೇಂದ್ರ ಸರ್ಕಾರದ ಕಾರ್ಮಿಕ ನೀತಿಯನ್ನು ಖಂಡಿಸಿ ಧಿಕ್ಕಾರ ಕೂಗಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ತಾಲೂಕು ಅಧ್ಯಕ್ಷರು, ಕನಿಷ್ಠ ವೇತನವನ್ನು ಜಾರಿ ಮಾಡಬೇಕು. ಹಾಗೂ ಕೇಂದ್ರ …

Read More »

ಶಬರಿ ಮಲೈ ಯಾತ್ರಿಗಳ ವಾಹನದ ಕನ್ನಡ ಧ್ವಜ ತೆಗೆಯಲು ಗಲಾಟೆ ಮಾಡಿದವರ ವಿರುದ್ಧ ಪ್ರತಿಭಟನೆ.

ಗುಂಡ್ಲುಪೇಟೆ: ಇತ್ತೀಚೆಗೆ ಗುಂಡ್ಲುಪೇಟೆ ಪಟ್ಟಣದಲ್ಲಿ ಕರ್ನಾಟಕದಿಂದ ಶಬರಿ ಮಲೈ ಯಾತ್ರಿಗಳು ತಮ್ಮ ವಾಹನದಲ್ಲಿ ಕನ್ನಡ ಧ್ವಜ ಕಟ್ಟಿ ಯಾತ್ರೆ ಮುಗಿಸಿ ತಮಿಳು ನಾಡಿನ ಪ್ರವಾಸ ಹೋಗುವಾಗ ಕೆಲವು ಪಾತಕಿಗಳು ವಾಹನವನ್ನು ಅಡ್ಡಗಟ್ಟಿ ಕನ್ನಡ ಧ್ವಜವನ್ನು ತೆಗೆಯುವಂತೆ ದಾಂಧಲೆ ಮಾಡಿದನ್ನು ವಿರೋಧಿಸಿ  ಕರ್ನಾಟಕ ಕಾವಲು ಪಡೆಯ ವತಿಯಿಂದ  ಪ್ರತಿಭಟನೆ ನಡೆಸಲಾಯಿತು. ಪಟ್ಟಣದ ಪ್ರವಾಸಿ ಮಂದಿರದಿಂದ ಹೊರಟು ತಾಲ್ಲೂಕು ದಂಡಾಧಿಕಾರಿಗಳ ಕಛೇರಿವರೆಗೆ ಮೆರವಣಿಗೆ ನಡೆಸಿ ಘೋಷಣೆ ಕೂಗುವುದರ ಮೂಲಕ ತಾಲ್ಲೂಕು ದಂಡಾಧಿಕಾರಿಗಳಿಗೆ ಮನವಿ …

Read More »

ಕ್ಷೇತ್ರದ ಅಭಿವೃದ್ಧಿಯತ್ತ ಶಾಸಕ ಮಹೇಶ್ ಗಮನ ಹರಿಸಲಿ:ದೃವನಾರಾಯಣ್.

ಚಾಮರಾಜನಗರ: ಅಂತರರಾಜ್ಯ ರಸ್ತೆಯಾಗಿರುವ ಮೂಗೂರು ಮತ್ತು ಸಂತೇಮರಳ್ಳಿ ರಸ್ತೆ  ರಸ್ತೆಗಳು ಸಾಕಷ್ಟು ಹದಗೆಟ್ಟ ಪರಿಸ್ಥಿತಿಯಲ್ಲಿದ್ದು, ಕೂಡಲೇ ಶಾಸಕ ಎನ್.ಮಹೇಶ್ ಇತ್ತ ಗಮನ ಹರಿಸಬೇಕು ಎಂದು ಮಾಜಿ ಸಂಸದ ಆರ್.ದೃವನಾರಾಯಣ್ ಒತ್ತಾಯಿಸಿದರು. ಸಂತೇಮರಳ್ಳಿಯಲ್ಲಿ ಇಂದು ಪ್ರತಿಭಟನೆಯಲ್ಲಿ ಪಾಲ್ಗೊಂಡ ಸಮಯದಲ್ಲಿ ಮಾಧ್ಯಮ ಪ್ರತಿನಿಧಿ ಗಳೊಂದಿಗೆ ಮಾತನಾಡಿದ ಅವರು, ಈಗಾಗಲೇ ಮಹೇಶ್ ಅವರು   ಮಂತ್ರಿಯಾಗಿದ್ದರೂ ಸಹ ಕ್ಷೇತ್ರದ ಅಭಿವೃದ್ಧಿ ಮಾತ್ರ ಆಗಿಲ್ಲ.ಮಂತ್ರಿಯಾಗಿದ್ದಾಗ ಸಾಕಷ್ಟು ಅನುದಾನ ತಂದು ರಸ್ತೆ ಅಭಿವೃದ್ಧಿ ಪಡಿಸಬಹುದಿತ್ತು. ಆದರೆ ಅವರು  ಮಾಡಲಿಲ್ಲ …

Read More »

ಸಾರ್ವಜನಿಕ ರಸ್ತೆಯಲ್ಲೇ ಹುರುಳಿ ಒಕ್ಕಣೆ :ಹೊತ್ತಿ ಉರಿದ ಓಮ್ನಿ ಕಾರು.

ಗುಂಡ್ಲುಪೇಟೆ: ಭೀಮನಬೀಡು ಗ್ರಾಮದಿಂದ ಹುಲಸಗುಂದಿ ಗ್ರಾಮಕ್ಕೆ ಹೋಗುವ ಮಾರ್ಗ ಮದ್ಯೆದಲ್ಲಿ ರೈತರು ಹಾಕಿದ್ದ ಹುರುಳಿ ಸೊಪ್ಪು ಕೇರಳ ಮೂಲದ ಓಮಿನಿ ವಾಹನದ ಇಂಜಿನ್ಗೆ ಸಿಲುಕಿ ಬೆಂಕಿ ಹೊತ್ತಿದ ಪರಿಣಾಮವಾಗಿ ಕಾರು ಸಂಪೂರ್ಣವಾಗಿ ಭಸ್ಮವಾಗಿದ್ದು ಕಾರಿನೊಳಗಿದ್ದ ಕಲ್ಪೆಟ್ಟ ಮೂಲದ ಅಶೋಕ್ ಎಂಬುವರ ಕುಟುಂಬವು ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರಾಗಿರುವ ಘಟನೆ ನಡೆದಿದೆ.. ಹುಲಸಗುಂದಿ ಮಾರ್ಗವಾಗಿ ಬರುತ್ತಿದ್ದ ಓಮ್ನಿ ಕಾರಿಗೆ ರಸ್ತೆಯಲ್ಲಿ ಹಾಕಿದ್ದ ಹುರುಳಿ ಸೊಪ್ಪು ಸಿಲುಕಿ ಬೆಂಕಿ ಹೊತ್ತಿಕೊಂಡಿದೆ ಇದನ್ನು ಗಮನಿಸಿದ ಗ್ರಾಮಸ್ಥರು …

Read More »

ಅಜಾತ ಶತ್ರು ಅಟಲ್ ಜೀ ಜನ್ಮ ದಿನ ಆಚರಣೆ

ಗುಂಡ್ಲುಪೇಟೆ: ಭಾರತೀಯ ಜನತಾ ಪಾರ್ಟಿ ಗುಂಡ್ಲುಪೇಟೆ ವತಿಯಿಂದ ಮಾಜಿ ಪ್ರಧಾನಿ ಅಭಿವೃದ್ಧಿಯ ಹರಿಕಾರ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನವನ್ನು ಆಚರಿಸಲಾಯಿತು.. ಈ ಸಂಧರ್ಭದಲ್ಲಿ ಬಿಜೆಪಿ ಯುವ ಮೋರ್ಚಾ ತಾಲೂಕು ಅಧ್ಯಕ್ಷ ನಂದೀಶ್ ಮಾತನಾಡಿ ಅಟಲ್ ಜೀ ದೇಶ ಕಂಡಂತಹ ಧೀಮಂತ ವ್ಯಕ್ತಿ ತಾಯಿ ನಾಡಿಗಾಗಿ ತಮ್ಮನ್ನ ತಾವು ಅರ್ಪಿಸಿಕೊಂಡು ಭಾರತದ ತಾಕತ್ತನ್ನ ಜಗತ್ತಿಗೆ ಪರಿಚಯ ಮಾಡಿಸಿದಂತ ವ್ಯಕ್ತಿ , ಸರ್ವಧರ್ಮಿಯರ ಏಳಿಗೆಗಾಗಿ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತರುವಲ್ಲಿಯೂ …

Read More »

ನಾಳೆ ಕಂಕಣ ಸೂರ್ಯಗ್ರಹಣ : ದೇಶದ ಗಮನ ಸೆಳೆದ ಬಂಡೀಪುರ ವ್ಯಾಪ್ತಿಯ ಮಂಗಲ ಗ್ರಾಮ.

ಚಾಮರಾಜನಗರ:  ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಮಂಗಳ ಗ್ರಾಮ ನಾಳೆ ನಡೆಯಲಿರುವ ಕಂಕಣ ಸೂರ್ಯಗ್ರಹಣ ಇಡೀ ದೇಶವೇ ತಿರುಗಿ ನೋಡುವ ಹಾಗೆ ಮಾಡಿದೆ ಡಿ.26ರಂದು ಬೆಳಿಗ್ಗೆ 8.5ರಿಂದ 11ರ ತನಕ ಕಂಕಣ ಸೂರ್ಯ ಗ್ರಹಣ ಸಂಭವಿಸಲಿದೆ.ದಕ್ಷಿಣ ಭಾರತದಲ್ಲಿ ಸೂರ್ಯಗ್ರಹಣವು ವಿಶೇಷವಾಗಿ ಗುಂಡ್ಲುಪೇಟೆ ತಾಲೂಕಿನ ಮಂಗಳ ಗ್ರಾಮದಲ್ಲಿ ಪೂರ್ಣಪ್ರಮಾಣದಲ್ಲಿ ಗೋಚರವಾಗಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.ದೇಶದ ವಿವಿಧ ಭಾಗಗಳಲ್ಲಿ ಸೂರ್ಯಗ್ರಹಣವು ವಿವಿಧ ಪ್ರಮಾಣದಲ್ಲಿ ಗೋಚರವಾಗುತ್ತದೆ. ಮುಂಬೈನಲ್ಲಿ ಶೇ.78ರಸ್ಟ್ರು. ಬೆಂಗಳೂರಿನಲ್ಲಿ ಶೇ.89.4 . ಚೆನ್ನೈನಲ್ಲಿ ಶೇಕಡ …

Read More »
error: Content is protected !!