Breaking News
Hiring Reporter’s For more Information Contact Above Number 876 225 4007 . Program producer
Home / ಜಿಲ್ಲೆ / ಚಿಕ್ಕಮಗಳೂರು

ಚಿಕ್ಕಮಗಳೂರು

ಧರ್ಮೇಗೌಡರ ತೋಟದ ಮನೆಯಲ್ಲಿಯೇ ಅಂತ್ಯಕ್ರಿಯೆಗೆ ನಿರ್ಧಾರ.

ಚಿಕ್ಕಮಗಳೂರು, ಡಿಸೆಂಬರ್ 29; ವಿಧಾನ ಪರಿಷತ್‌ನ ಉಪ ಸಭಾಪತಿ ಎಸ್. ಎಲ್. ಧರ್ಮೇಗೌಡ ಅವರ ಅಂತ್ಯಕ್ರಿಯೆ ಅವರ ನೆಚ್ಚಿನ ತೋಟದ ಮನೆಯಲ್ಲಿ ನಡೆಯಲಿದೆ. ಸಖರಾಯಪಟ್ಟಣದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಎಸ್. ಎಲ್. ಧರ್ಮೇಗೌಡ (65) ಅವರು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಯಲಿದ್ದು, ಬಳಿಕ ಕಡೂರಿನ ಸಖರಾಯಪಟ್ಟಣಕ್ಕೆ ಪಾರ್ಥಿವ ಶರೀರವನ್ನು ತರಲಾಗುತ್ತದೆ. ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸರಪನಹಳ್ಳಿಯಲ್ಲಿರುವ ಎಸ್. …

Read More »

ಧರ್ಮೆಗೌಡರ ಕಾರು ಚಾಲಕ ಬಿಚ್ಚಿಟ್ಟ ಸತ್ಯ.

ಚಿಕ್ಕಮಗಳೂರು : ವಿಧಾನಪರಿಷತ್ ಉಪಸಭಾಪತಿ ಎಸ್.ಎಲ್. ಧರ್ಮೇಗೌಡ (65) ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಕಡೂರು ತಾಲೂಕು ಮಂಗೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ರಾತ್ರಿ 7 ರಿಂದ 8 ಗಂಟೆ ವೇಳೆಗೆ ಅಂಗರಕ್ಷಕ ಹಾಗೂ ಬೆಂಗಾವಲು ಪಡೆಯ ಸಿಬ್ಬಂದಿಯನ್ನು ಮನೆಗೆ ಕಳಿಸಿದ್ದರು ಎಂದು ತಿಳಿದು ಬಂದಿದ್ದು, ತಮ್ಮ ಹಳೆಯ ಸ್ಯಾಂಟ್ರೋ ಕಾರಿನಲ್ಲಿ ಖಾಸಗಿ ಡೈವರ್ ಜೊತೆ ಮನೆಯಿಂದ ಕಡೂರು ತಾಲ್ಲೂಕು ಗುಣಸಾಗರ ಗ್ರಾಮಕ್ಕೆ ತೆರಳಿದ್ದರು. ಧರ್ಮೇಗೌಡರ ಆತ್ಮಹತ್ಯೆ ಕುರಿತಂತೆ …

Read More »

ಧರ್ಮೆಗೌಡ ಆತ್ಮಹತ್ಯೆ ಸ್ಥಳಕ್ಕೆ ಭೇಟಿ ನೀಡಿದ ಸಿ.ಟಿ. ರವಿ.

ಚಿಕ್ಕಮಗಳೂರು: ಪರಿಷತ್ ಉಪಸಭಾಪತಿ S.L.ಧರ್ಮೇಗೌಡ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜಿಲ್ಲೆಯ ಕಡೂರು ತಾಲೂಕಿನ ಗುಣಸಾಗರ ಬಳಿ ತಡರಾತ್ರಿ 1.30ರ ಸುಮಾರಿಗೆ ಧರ್ಮೇಗೌಡರ ಮೃತದೇಹ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ಸಿ.ಟಿ.ರವಿ, ಚಿಕ್ಕಮಗಳೂರು ಎಸ್‌ಪಿ ಭೇಟಿ ನೀಡಿದ್ದಾರೆ. ಈ ವೇಳೆ ಮಾತನಾಡಿದ ಸಿ.ಟಿ.ರವಿ, ಧರ್ಮೇಗೌಡ ತನ್ನ ಡೈವರ್ ಜೊತೆ ಖಾಸಗಿ ಕಾರಿನಲ್ಲಿ ಗುಣಸಾಗರಕ್ಕೆ ಬಂದಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಸುಮಾರು 4ಗಂಟೆಯಿಂದ ಇಲ್ಲೆ ಸುತ್ತಾಡಿ ಬಳಿಕ 6ಗಂಟೆಗೆ ರೈಲಿಗೆ ತಲೆ ಕೊಟ್ಟಿದ್ದಾರೆ. …

Read More »

ಗ್ರಾಮಸ್ಥರಿಂದ ಗ್ರಾ.ಪಂ. ಚುನಾವಣೆಗೆ ಬಹಿಷ್ಕಾರ ?

ಚಿಕ್ಕಮಗಳೂರು: ಗ್ರಾಮ ಪಂಚಾಯತ್​​ ಚುನಾವಣೆಗೆ ಯಾರಾದರು ನಾಮಪತ್ರ ಸಲ್ಲಿಸಿದರೆ ಅವರಿಗೆ ಹಾರ ಹಾಕಿ, ಅಂತಹವರ ಮನೆ ಮುಂದೆ ಧರಣಿ ಕೂರುವುದಾಗಿ ಮಲೆನಾಡಿಗರು ಎಚ್ಚರಿಕೆ ನೀಡಿದ್ದಾರೆ. ತಾಲೂಕಿನ ಖಾಂಡ್ಯ ಹೋಬಳಿಯ ನಾಲ್ಕು ಗ್ರಾಮ ಪಂಚಾಯತ್​​ ವ್ಯಾಪ್ತಿಯ ಜನರು ಚುನಾವಣಾ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ. ಆನ್​ಲೈನ್​​​ ಸೇರಿದಂತೆ ಯಾವುದೇ ವಿಧದಲ್ಲೂ ಯಾರೂ ಕೂಡ ನಾಮಪತ್ರ ಸಲ್ಲಿಸಬಾರದು ಎಂದು ಖಾಂಡ್ಯ ನಾಗರಿಕ ಹಿತರಕ್ಷಣಾ ವೇದಿಕೆ ಹಾಗೂ ಸಾರ್ವಜನಿಕರು ಒತ್ತಾಯಿಸಿದ್ದಾರೆ. ನಮ್ಮ ಬದುಕು ಬೀದಿಗೆ ಬೀಳುವಾಗ ಚುನಾವಣೆ …

Read More »

ಸರ್ಕಾರಿ ವೈದ್ಯರ ವಿರುದ್ಧ ಮಗು ಮಾರಟ ಆರೋಪ.

ಚಿಕ್ಕಮಗಳೂರು: ಸರ್ಕಾರಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುವ ವೈದ್ಯನ ಮೇಲೆ ಯುವತಿಯೊಬ್ಬಳು ಮಗು ಮಾರಾಟ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾಳೆ. ಈ ಕುರಿತು ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಪ್ಪ ನಗರದಲ್ಲಿರುವ ಸಾರ್ವಜನಿಕ ಸರ್ಕಾರಿ ಆಸ್ವತ್ರೆಯ ವೈದ್ಯನ ವಿರುದ್ಧ ನವಜಾತ ಶಿಶು ಮಾರಾಟ ಆರೋಪದ ಹಿನ್ನೆಲೆಯಲ್ಲಿ ಈ ದೂರು ದಾಖಲಾಗಿದೆ. ಜಿಲ್ಲೆಯ ಅವಿವಾಹಿತ ಯುವತಿಯೊಬ್ಬಳು ಗರ್ಭಿಣಿಯಾಗಿದ್ದಳು. ಆಕೆಗೆ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಲಾಗಿತ್ತು. ಮದುವೆಗೆ ಮೊದಲೇ ಮಗು ಆಗಿರುವ …

Read More »

ಉಪ್ಪಾರ್ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಗಿರೀಶ್ ಉಪ್ಪಾರ್ ನೇಮಕ.

ಚಿಕ್ಕಮಗಳೂರು: ಕರ್ನಾಟಕ ರಾಜ್ಯ ಉಪ್ಪಾರ ಅಭಿವೃದ್ಧಿ ನಿಗಮದ ನೂತನ ಅಧ್ಯಕ್ಷರಾಗಿ ಕಡೂರು ತಾಲೂಕಿನ ಜಿ.ಕೆ. ಗಿರೀಶ್ ಉಪ್ಪಾರ್ ನೇಮಕ ವಿರುದ್ಧ ಅಪಸ್ವರ ಕೇಳಿಬಂದಿದೆ. ಈ ಹಿನ್ನೆಲೆ ಕಡೂರು ಮಂಡಲದ ಎಲ್ಲಾ ಪದಾಧಿಕಾರಿಗಳು ಅವರು ಆಯ್ಕೆಯನ್ನು ವಿರೋಧಿಸಿ ಸಾಮೂಹಿಕ ರಾಜೀನಾಮೆ ನೀಡಿದ್ದಾರೆ. ಕಡೂರು ತಾಲೂಕಿನ ಜಿ.ಕೆ. ಗಿರೀಶ್ ಉಪ್ಪಾರ್ ಅವರನ್ನು ಕರ್ನಾಟಕ ರಾಜ್ಯ ಉಪ್ಪಾರ ಅಭಿವೃದ್ಧಿ ನಿಗಮ ಅಧ್ಯಕ್ಷರನ್ನಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇಮಿಸಿ ಆದೇಶ ಹೊರಡಿಸಿರುವ ಬೆನ್ನಲ್ಲೇ ಅಸಮಾಧಾನ ಭುಗಿಲೆದ್ದಿದೆ. ಬಿಜೆಪಿ …

Read More »

ಸಿಎಂ ಗೆ ದತ್ತಾತ್ರೇಯ ಸ್ವಾಮಿಯ ಶಾಪ? ಪೂರ್ಣಾವಧಿ ಸರ್ಕಾರ ನಡೆಸಲ್ಲವೇ ಯಡಿಯೂರಪ್ಪ?

ಚಿಕ್ಕಮಗಳೂರು : ಸಿಎಂ ಬಿಎಸ್​ ಯಡಿಯೂರಪ್ಪ ಅವರಿಗೆ ಶಾಪ ವಿಮೋಚನೆ ಆಗಬೇಕಾದರೆ ದತ್ತಪೀಠಕ್ಕೆ ಬರಬೇಕು ಎಂದು ಶ್ರೀರಾಮಸೇನೆ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಇಂದು ಶ್ರೀರಾಮ ಸಂಘಟನೆಯ ವತಿಯಿಂದ ದತ್ತಮಾಲ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು, ದತ್ತಮಾಲಧಾರಣೆ ಮಾಡಿದ ನಂತರ ಮಾತನಾಡಿದ ಅವರು, ಸಿಎಂ ಬಿ.ಎಸ್.ಯಡಿಯೂರಪ್ಪಗೆ ದತ್ತಾತ್ರೇಯನ ಶಾಪ ಇದೆ ಎಂದರು. ಈ ಹಿಂದೆ ಬಿಎಸ್​ವೈ ದತ್ತಮಾಲೆ ಧರಿಸಿದ್ದ ಸಂದರ್ಭದಲ್ಲಿ ಸಿಎಂ ಆದ ನಂತರ ದತ್ತಪೀಠಕ್ಕೆ ಬರುತ್ತೇನೆ ಎಂದು ಹೇಳಿದ್ದರು. …

Read More »

ಸಿಎಂ ಭೇಟಿ ಮಾಡಿದ ಸಚಿವ ಸ್ಥಾನ ಆಕಾಂಕ್ಷಿ ಶಾಸಕ.

ಚಿಕ್ಕಮಗಳೂರು : ಸಚಿವ ಸಂಪುಟ ವಿಸ್ತರಣೆ ವೇಳೆ ಹೇಗಾದ್ರೂ ತಾವೂ ಈ ಸಾರಿ ಅವಕಾಶ ಗಿಟ್ಟಿಸಿಕೊಳ್ಳಲೇಬೇಕು ಅಂತಾ ಪಣ ತೊಟ್ಟಿರುವ ಮೂಡಿಗೆರೆ ಶಾಸಕ ಎಂ ಪಿ ಕುಮಾರಸ್ವಾಮಿ ಅದಕ್ಕಾಗಿ ಲಾಬಿ ಜೋರಾಗಿಯೇ ನಡೆಸಿದ್ದಾರೆ. ನಿನ್ನೆ ದಿಢೀರ್ ಆಗಿ ಮಂಗಳೂರಿಗೆ ಹೋಗಿದ್ದ ಕುಮಾರಸ್ವಾಮಿ ಅವರು, ಬಿಜೆಪಿ ರಾಜ್ಯಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರನ್ನು ಭೇಟಿಯಾಗಿ ಸಚಿವ ಸ್ಥಾನದ ಕುರಿತು ಮಾತಕತೆ ಮಾಡಿದ್ದರು. ಆದರೆ, ವಿಶೇಷ ಏನಂದ್ರೆ ಇಂದು ತಮ್ಮ ಕಾರ್ಯಕರ್ತರೊಂದಿಗೆ ಎಂ ಪಿ …

Read More »

ಕೃಷಿ ವಿ.ವಿ. ಪಕ್ಕದಲ್ಲಿಯೇ ಬಾರ್ ತೆರೆಯುವ ನಿರ್ಧಾರ: ಕರವೇ ವಿರೋಧ.

ಮೈಸೂರು: ನಗರದ ಹೊರವಲಯದ ನಾಗನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಕೃಷಿ ವಿಶ್ವವಿದ್ಯಾಲಯದ ಪಕ್ಕದಲ್ಲೇ ಬಾರ್ ತೆರೆಯಲು ಅನುಮತಿ ನೀಡಿರುವುದನ್ನು ವಿರೋಧಿಸಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಕೃಷಿ ವಿವಿ ಪಕ್ಕದಲ್ಲಿ ಬಾರ್ ತೆರೆಯಲು ಅನುಮತಿ ಕೊಡುವ ಮೂಲಕ ಕೃಷಿ ಪಾವಿತ್ರ್ಯತೆಗೆ ಧಕ್ಕೆ ಉಂಟು ಮಾಡಲಾಗಿದೆ. ಕೊಟ್ಟಿರುವ ಅನುಮತಿ ಹಿಂಪಡೆಯುವಂತೆ ಅಬಾಕಾರಿ ಇಲಾಖೆಗೆ ಪತ್ರ ಬರೆದಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಅದಲ್ಲದೆ ಶೈಕ್ಷಣಿಕ ಕೇಂದ್ರದ 220 ಮೀಟರ್​ …

Read More »

12 ಎಕರೆ ಕಾಫಿ ತೋಟ ನಿರ್ನಾಮ.

ಚಿಕ್ಕಮಗಳೂರು: ಕಾಫಿ ತೋಟದಲ್ಲಿ ಕೆಲಸ ಮಾಡುವ ಕಾರ್ಮಿಕರ ಯಡವಟ್ಟಿನಿಂದ ಸುಮಾರು 12 ಎಕರೆ ಕಾಫಿ ತೋಟ ನಾಶವಾಗಿರುವ ಘಟನೆ ಜಿಲ್ಲೆಯ ಮಾಕೋಡು ಗ್ರಾಮದಲ್ಲಿ ನಡೆದಿದೆ. ಕಾಫಿ ತೋಟಕ್ಕೆ ಕಾಂಟಾಪ್ ಸಿಂಪಡಿಸುವ ಬದಲು ರೌಂಡಪ್ ಕಳೆನಾಶಕ ಸಿಂಪಡಣೆ ಮಾಡಿದ ಹಿನ್ನೆಲೆ 12 ಎಕರೆ ಕಾಫಿ ತೋಟ ಸಂಪೂರ್ಣ ಸುಟ್ಟು ಹೋಗಿದೆ. ಕಾಫಿ ಬೆಳೆಗಾರ ಕಲ್ಲೇಗೌಡ ಎಂಬುವವರಿಗೆ ಸೇರಿದ ಕಾಫಿ ತೋಟ ಸಂಪೂರ್ಣ ಸರ್ವ ನಾಶವಾಗಿದ್ದು, ಕಾಫಿ ಬೆಳೆ ಸೇರಿದಂತೆ ಕಾಳುಮೆಣಸು ಬೆಳೆಯೂ ಹಾನಿಗೊಳಗಾಗಿದೆ. …

Read More »

ಸಿಎಂ ಬೆಂಗಾವಲು ವಾಹನ ಪಲ್ಟಿ.

ಚಿಕ್ಕಮಗಳೂರು: ಬಾಳೆಹೊನ್ನೂರು ಬಳಿಯ ಜೇನುಗದ್ದೆ ಬಳಿ ಮುಖ್ಯಮಂತ್ರಿ ಬೆಂಗಾವಲು ವಾಹನ ಬ್ರೇಕ್ ಜಾಮ್​ ಆಗಿ ಪಲ್ಟಿಯಾಗಿದೆ. ಮಂಗಳೂರಿನಿಂದ ಕೆಲಸ ಮುಗಿಸಿ ಹಿಂದಿರುಗುತ್ತಿದ್ದ ಪೊಲೀಸ್ ಜೀಪ್ ಪಲ್ಟಿಯಾಗಿದ್ದು, ವಾಹನದಲ್ಲಿದ್ದ ಇಬ್ಬರು ಸಿಬ್ಬಂದಿಗೆ ಗಂಭೀರ ಗಾಯವಾಗಿದೆ. ಜೀಪ್ ಚಾಲಕ ಶರತ್ ಎಂಬಾತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. Share

Read More »

ಕಿಡಿಗೇಡಿಗಳಿಂದ ಕಾಫಿ ತೋಟ ಭಸ್ಮ.

ಚಿಕ್ಕಮಗಳೂರು: ಕಿಡಿಗೇಡಿಗಳಿಂದ ಬೆಂಕಿ ಬಿದ್ದ ಪರಿಣಾಮ ಸುಮಾರು ಐದು ಎಕರೆ ಕಾಫಿ ತೋಟ ಸಂಪೂರ್ಣ ಭಸ್ಮವಾಗಿರುವ ಘಟನೆ ಮೂಡಿಗೆರೆ ತಾಲ್ಲೂಕಿನ ಮಾಳಿಗ ನಾಡಿನ ಗ್ರಾಮದಲ್ಲಿ ನಡೆದಿದೆ. ಕಾಫಿ ತೋಟವು ಮಾಳಿಗ ನಾಡಿನ ಗ್ರಾಮದ ಕಾರ್ತಿಕ್ ಎಂಬುವವರಿಗೆ ಸೇರಿದ್ದು, ಕಾಫಿ ಗಿಡಗಳನ್ನು ಮಕ್ಕಳಂತೆ ಸಾಕಿದ್ದರು. ಈಗ ಅವೆಲ್ಲ ಬೆಂಕಿಗೆ ಸುಟ್ಟು ಕರಕಲು ಆಗಿವೆ. ಸ್ಥಳಿಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು. ಆದರೆ ಅವರು ಬರುವಷ್ಟರಲ್ಲಿ ಕಾಫಿ ತೋಟ ಭಸ್ಮವಾಗಿದೆ. ಕಳೆದ ಅಗಸ್ಟ್ …

Read More »

ಹುಲಿರಾಯನ ಘರ್ಜನೆಗೆ ಬೆಚ್ಚಿದ ಜನತೆ.

ಚಿಕ್ಕಮಗಳೂರು: ಚಿಕ್ಕಮಗಳೂರಿನ ಮಲೆನಾಡಲ್ಲಿ ಈಗ ಹುಲಿಯದ್ದೇ ಸದ್ದು. ಕಾಫಿತೋಟದಲ್ಲಿ ಹುಲಿಯ ಹೆಜ್ಜೆ ಗುರುತು ಪತ್ತೆಯಾಗಿದ್ದು, ಕಾಫಿತೋಟಕ್ಕೆ ತೆರಳುವ ಕೂಲಿ ಕಾರ್ಮಿಕರಲ್ಲಿ ಆತಂಕ ಸೃಷ್ಟಿಯಾಗಿದೆ. ಹುಲಿಗಳು ಮನುಷ್ಯರಂತೆ ಎಲ್ಲಂದರಲ್ಲಿ ನಿರಂತರವಾಗಿ ಓಡಾಡಲಾಂಭಿಸಿವೆ. ಕೆಲ ದಿನಗಳಿಂದ ಹುಲಿ ಕಾಟ ಮಿತಿ ಮೀರಿದ್ದು, ಜನಸಾಮಾನ್ಯರು ಮನೆಯಿಂದ ಹೊರಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಚಿಕ್ಕಮಗಳೂರು ಜನತೆ ಕಾಡು ಪ್ರಾಣಿಗಳ ಉಪಟಳದಿಂದ ಈ ಕಾಲಕ್ಕೆ ಮುಕ್ತಿಪಡಿಯುವ ಹಾಗೆ ಕಾಣಿಸುತ್ತಿಲ್ಲ. ಮಲೆನಾಡು ಭಾಗದ ಜನರಂತೂ ಒಂದಿಲ್ಲೊಂದು ನರಹಂತಕ ಪ್ರಾಣಿಗಳಿಂದ …

Read More »

ಪ್ರೀತಿ ನಿರಾಕರಿಸಿದ ಯುವತಿಗೆ ಬಂದ ಗತಿ ಏನು ಗೊತ್ತಾ?

ಚಿಕ್ಕಮಗಳೂರು, ಫೆ.5: ಮೂಡಿಗೆರೆ ಕಾಲೇಜು ವಿದ್ಯಾರ್ಥಿನಿಯ ಶಂಕಾಸ್ಪದ ಸಾವು ಪ್ರಕರಣ ತಿರುವು ಪಡೆದುಕೊಂಡಿದ್ದು, ಪ್ರೀತಿ ನಿರಾಕರಿಸಿದ್ದಕ್ಕಾಗಿ ಯುವಕನೋರ್ವ ಆಟೊ ರಿಕ್ಷಾದಿಂದ ತಳ್ಳಿ ಕೊಲೆ ಮಾಡಿರುವ ಬಗ್ಗೆ ದೂರು ದಾಖಲಾಗಿದೆ. ಮೂಡಿಗೆರೆ ತಾಲೂಕಿನ ಬಸವನಹಳ್ಳಿಯ ರಶ್ಮಿ(19) ಕೊಲೆಯಾದ ಯುವತಿ. ಸ್ಥಳೀಯ ಆಟೊ ರಿಕ್ಷಾ ಚಾಲಕ ಚೇತನ್ ಎಂಬಾತ ಕೊಲೆ ಆರೋಪಿ. ಪ್ರೀತಿ ನಿರಾಕರಿಸಿದ್ದಕ್ಕಾಗಿ ರಶ್ಮಿಯನ್ನು ಚೇತನ್ ಆಟೊರಿಕ್ಷಾದಿಂದ ತಳ್ಳಿ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿ ರಶ್ಮಿಯ ಹೆತ್ತವರು ಪೊಲೀಸ್ ದೂರು ನೀಡಿದ್ದಾರೆ. …

Read More »

ಕಿಚ್ಚ ಸುದೀಪ್‌ಗೆ ಅರೆಸ್ಟ್ ವಾರೆಂಟ್ ಜಾರಿ..!

ಚಿಕ್ಕಮಗಳೂರು : ಧಾರಾವಾಹಿ ಶೂಟಿಂಗ್‌ಗಾಗಿ ತೆಗೆದುಕೊಂಡಿದ್ದ ಮನೆ ಮತ್ತು ತೋಟದ ಬಾಡಿಗೆ ನೀಡದೇ ವಂಚಿಸಿದ್ದ ಆರೋಪದಡಿ, ನಟ ಕಿಚ್ಚ ಸುದೀಪ್‌ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಇದೀಗ ಅರೆಸ್ಟ್ ವಾರೆಂಟ್ ಜಾರಿಯಾಗಿದೆ.ಮನೆ ಮತ್ತು ತೋಟದ ಮಾಲೀಕ ದೀಪಕ್ ಮಯೂರ್ ಎಂಬುವವರು ಸುದೀಪ್ ವಿರುದ್ಧ ದೂರು ದಾಖಲಿಸಿದ್ದು, ಚಿಕ್ಕಮಗಳೂರು ಜೆಎಂಎಫ್‌ಸಿ ನ್ಯಾಯಾಲಯದಿಂದ ಸುದೀಪ್‌ಗೆ ಅರೆಸ್ಟ್ ವಾರೆಂಟ್ ಜಾರಿ ಮಾಡಲಾಗಿದೆ.ಸುದೀಪ್‌ ನಿರ್ಮಾಣದ ವಾರಸ್ದಾರ ಧಾರಾವಾಹಿಗಾಗಿ, ದೀಪಕ್ ಮನೆ ಮತ್ತು ತೋಟ ಬಾಡಿಗೆಗೆ …

Read More »
error: Content is protected !!