Breaking News

ಹುಬ್ಬಳ್ಳಿ

ಜೂನ್ ೪ ನಗರದ ವಿದ್ಯಾನಗರದಲ್ಲಿ ಬ್ಯಾಂಕರ್ಸ್ ಕ್ಲಬ್ ನ ಬ್ಯಾಂಕರ್ಸ್ ಭವನದ ಉದ್ಘಾಟನೆ

ಜೂನ್ ೪ ನಗರದ ವಿದ್ಯಾನಗರದಲ್ಲಿ ಬ್ಯಾಂಕರ್ಸ್ ಕ್ಲಬ್ ನ ಬ್ಯಾಂಕರ್ಸ್ ಭವನದ ಉದ್ಘಾಟನೆ ಹುಬ್ಬಳ್ಳಿ:ನಗರದ ವಿದ್ಯಾನಗರದಲ್ಲಿ ಬ್ಯಾಂಕರ್ಸ್ ಕ್ಲಬ್ ನ ಬ್ಯಾಂಕರ್ಸ್ ಭವನದ ಉದ್ಘಾಟನೆಯನ್ನು ಜೂನ್ ೪ ರಂದು ಬೆ. ೧೦ ಗಂಟೆಗೆ ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿಯವರು ನೆರವೇರಿಸಲಿದ್ದಾರೆ ಎಂದು ಬ್ಯಾಂಕರ್ಸ್ ಕ್ಲಬ್ ನ ಅಧ್ಯಕ್ಷ ಡಾ. ಡಿ.ಜಿ‌. ಶೆಟ್ಟಿ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯ ಅತಿಥಿಗಳಾಗಿ ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ, ಕೆನರಾ ಬ್ಯಾಂಕಿನ …

Read More »

ತಕ್ಷಣವೇ ನಾಗರಿಕರಿಂದ ಹೆಚ್ಚಿನ ಅರ್ಜಿಗಳಿಗಾಗಿ ಅಧಿಸೂಚನೆ ಹೊರಡಿಸಿಜನಾಗ್ರಹ ರಾಷ್ಟ್ರೀಯ ಮುಖ್ಯಸ್ಥ ಸಂತೋಷ್ ನರಗುಂದ

ತಕ್ಷಣವೇ ನಾಗರಿಕರಿಂದ ಹೆಚ್ಚಿನ ಅರ್ಜಿಗಳಿಗಾಗಿ ಅಧಿಸೂಚನೆ ಹೊರಡಿಸಿ,ಜನಾಗ್ರಹ ರಾಷ್ಟ್ರೀಯ ಮುಖ್ಯಸ್ಥ ಸಂತೋಷ್ ನರಗುಂದ ಹೇಳಿದರು. ಹುಬ್ಬಳ್ಳಿ: ‌ಹು-ಧಾ ಪಾಲಿಕೆ ಇತ್ತೀಚಿನ ಸಮಾನ್ಯ ಸಭೆಯಲ್ಲಿ ವಾರ್ಡ್ ಸಮಿತಿ ರಚನೆ ಕುರಿತು ಸರ್ವಾನುಮತದ ನಿರ್ಣಯದ ಅನುಸಾರವಾಗಿ ತಕ್ಷಣವೇ ನಾಗರಿಕರಿಂದ ಹೆಚ್ಚಿನ ಅರ್ಜಿಗಳಿಗಾಗಿ ಅಧಿಸೂಚನೆ ಹೊರಡಿಸಿ, ಜುಲೈ ತಿಂಗಳಿನ ಸಾಮಾನ್ಯ ಸಭೆಯಲ್ಲಿ ವಾರ್ಡ್ ಸಮಿತಿ ಸದಸ್ಯರ ಅಂತಿಮ ಪಟ್ಟಿಯನ್ನು ಸಲ್ಲಿಸಲು ಮನವಿ ಮಾಡುತ್ತೇವೆಂದು ಜನಾಗ್ರಹ ರಾಷ್ಟ್ರೀಯ ಮುಖ್ಯಸ್ಥ ಸಂತೋಷ್ ನರಗುಂದ ಹೇಳಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ …

Read More »

ಹುಬ್ಬಳ್ಳಿ: ಜಿಮ್ ಮಾಲೀಕ ಆತ್ಮಹತ್ಯೆಗೆ ಕಾರಣ ಗೊತ್ತಾಗಿಲ್ಲ…!

ಹುಬ್ಬಳ್ಳಿ: ಇಲ್ಲಿನ ವಿದ್ಯಾನಗರದ ಶಿರೂರು ಪಾರ್ಕ್ ಬಳಿಯ ಆರೆಂಜ್ ಜಿಮ್ ಮಾಲೀಕ ಜಿತೇಂದ್ರ ಶೀಗಿಹಳ್ಳಿ (48) ಮಂಗಳವಾರ ರಾತ್ರಿ ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. ತಮ್ಮ ಮನೆ ಕೊಠಡಿಯ ಫ್ಯಾನ್‌ಗೆ ನೇಣು ಹಾಕಿಕೊಂಡಿದ್ದಾರೆ. ರಾತ್ರಿ ತಮ್ಮ ಮನೆಯ ಮೇಲ್ಭಾಗದಲ್ಲಿರುವ ಕೊಠಡಿಗೆ ಹೋಗಿದ್ದ ಜಿತೇಂದ್ರ ಅವರು ಎಷ್ಟೊತ್ತಾದರೂ ಹೊರಗೆ ಬಂದಿಲ್ಲ. ಕುಟುಂಬದವರು ಬಾಗಿಲು ಬಡಿದಿರೂ ತೆಗೆದಿಲ್ಲ. ಅನುಮಾನ ಗೊಂಡು ಕಿಟಕಿಯಲ್ಲಿ ಇಣುಕಿ ನೋಡಿದಾಗ ನೇಣು ಹಾಕಿಕೊಂಡಿ ರುವುದು ಗೊತ್ತಾಗಿದೆ. ತಕ್ಷಣ ಬಾಗಿಲು `ಮುರಿದು, …

Read More »

ಕಾಮಣ್ಣನ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶವಿಲ್ಲ

ಹುಬ್ಬಳ್ಳಿ: ರಾಣಿ ಚೆನ್ನಮ್ಮ ಈದ್ಗಾ ಮೈದಾನಲ್ಲಿ ಕಾಮಣ್ಣನ ಮೂರ್ತಿ ಪ್ರತಿಷ್ಠಾಪನೆ ವಿಚಾರವಾಗಿ ಪಾಲಿಕೆ ಆಯುಕ್ತ ಗೋಪಾಲಕೃಷ್ಣ ಮಾತನಾಡಿದ್ದಾರೆ. ಪಾಲಿಕೆಗೆ ಹೋಳಿ ಹುಣ್ಣಿಮೆ ಪ್ರಯುಕ್ತ ಕಾಮಣ್ಣನ ಪ್ರತಿಷ್ಠಾಪನೆ ಮಾಡಲು ಗಜಾನನ ಉತ್ಸವ ಮಹಾಮಂಡಳಿಯಿಂದ ಮನವಿಯನ್ನಾ ಕೊಟ್ಟಿದ್ರು. ಸೂಕ್ತ ಬಂದೋಬಸ್ತ ಕಲ್ಪಿಸಲು ಆಗದ ಕಾರಣ ನಾವು ಅನುಮತಿ ಕೊಟ್ಟಿಲ್ಲ. ಮೋದಿ ಅವರು IIT ಉದ್ಘಾಟನೆಗೆ ಬರಲಿದ್ದಾರೆ. ಮೋದಿ ಕಾರ್ಯಕ್ರಮ ಬಂದೋಬಸ್ತ್ ಗಾಗಿ ಪೊಲೀಸ್ ಸಿಬ್ದಂದಿ ಧಾರವಾಡಕ್ಕೆ ಹೋಗ್ತಾರೆ. ಈ ಕಾರಣಕ್ಕೆ ಪೊಲೀಸ್ ಬಂದೋಬಸ್ತ್ …

Read More »

ಕಾಮಣ್ಣ ಪ್ರತಿಷ್ಠಾಪನೆ ಅವಕಾಶ ನೀಡಿದ ಹು-ಧಾ ಮಹಾನಗರ ಪಾಲಿಕೆ

ಹುಬ್ಬಳಿ: ಹುಬ್ಬಳ್ಳಿಯ ರಾಣಿಚೆನ್ನಮ್ಮ ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮತ್ತು ಟಿಪ್ಪು ಜಯಂತಿ ಆಚರಣೆಗೆ ನೀಡಿದ ಬೆನ್ನಲ್ಲೇ ಈಗ ಕಾಮಣ್ಣನ ಮೂರ್ತಿ ಪ್ರತಿಷ್ಠಾಪನೆಗೂ ಸಹ ಮಹಾನಗರ ಪಾಲಿಕೆ ಅವಕಾಶ ನೀಡಿದೆ. ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಮೇಯರ್ ಈರೇಶ್ ಅಂಚಟಗೇರಿ ಮಹತ್ವದ ಆದೇಶ ಹೊರಡಿಸಿದ್ದಾರೆ.. ಈ ಹಿಂದೆ ಗಣೇಶ ಉತ್ಸವಕ್ಕೆ ಅನುಮತಿ ಕೇಳಿದ್ದ ರಾಣಿ ಚನ್ನಮ್ಮ ಮೈದಾನ ಗಜಾನನ ಉತ್ಸವ ಮಹಾಮಂಡಳಿ ಈ ಬಾರಿಯೂ ಸಹ, ಅಧ್ಯಕ್ಷ ಸಂಜಯ್ …

Read More »

ಹುಬ್ಬಳ್ಳಿ: ಬೈಕ್ ಎಸ್ಕೇಪ್ ಮಾಡಿ ಪರಾರಿ ಆದ ಕಳ್ಳನ ಕರಾಮತ್ತು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆ.

ಹುಬ್ಬಳ್ಳಿ: ನಗರದ ಎಪಿಎಂಸಿ ಹತ್ತಿರ ಉಳ್ಳಾಗಡ್ಡಿ ಮಾರ್ಕೆಟ್ ನಲ್ಲಿ ನಿಲ್ಲಿಸಿದ ಸ್ಪ್ಲೆಂಡರ್ ಬೈಕ್ ಎಸ್ಕೇಪ್ ಮಾಡಿದ ಆರೋಪಿ. ಪೈಗಂಬರ್ ಅನ್ನೂನೆ ಕಳ್ಳತನ ಮಾಡಿದ ಆರೋಪಿಯಂದು ತಿಳಿದುಬಂದಿದೆ, ಆರೋಪಿಯ ಕಳ್ಳತನದ ಕೃತ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಬೈಕ್ ಕಳೆದುಕೊಂಡವರು ಸದ್ಯ ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ನವನಗರ ಪೊಲೀಸರು ಆರೋಪಿ ಪತ್ತೆಗೆ ಜಾಲ ಬೀಸಿದ್ದಾರೆ.

Read More »

ಹುಬ್ಬಳ್ಳಿ: ಕೆರೆಯಲ್ಲಿ ಯುವಕನ ಶವ ಪತ್ತೆ, ಕೊಲೆಯೋ ಅಥವಾ ಆತ್ಮಹತ್ಯೆಯೋ ?

ಹುಬ್ಬಳ್ಳಿ: ತಾಲೂಕಿನ ಗಾಮಣಗಟ್ಟಿ ಗ್ರಾಮದ ಕೆರೆಯಲ್ಲಿ ಯುವಕನ ಮೃತದೇಹ ಪತ್ತೆಯಾಗಿದೆ, ಮೃತ ಯುವಕನ ಹೆಸರು ಸದ್ದಾಂ ಸವಾಂತನವರ್ ಎಂದು ತಿಳಿದುಬಂದಿದೆ. ಮೃತ ಯುವಕ ಮೂರು ದಿನದಿಂದ ನಾಪತ್ತೆಯಾಗಿದ್ದು ಇವತ್ತು ಶವವಾಗಿ ಪತ್ತಯಾಗಿದ್ದಾನೆ, ಇದು ಆತ್ಮಹತ್ಯೆಯೋ ಅಥವಾ ಕೊಲೆ ಎಂಬ ಅನುಮಾನ ವ್ಯಕ್ತವಾಗಿದ್ದು ಈ ಸಂಬಂಧ ನವನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Read More »

ಕ್ಷುಲ್ಲಕ ಕಾರಣಕ್ಕೆ ಪರಸ್ಪರ ಹೊಡೆದಾಡಿಕೊಂಡ ಕಿಮ್ಸ್ ಆಸ್ಪತ್ರೆಗೆ ದಾಖಲು

ಹುಬ್ಬಳ್ಳಿ: ಪ್ರಸಿದ್ದ ಮೀನಿನ ವ್ಯಾಪಾರಸ್ಥ ಕುಟುಂಬ ಪರಸ್ಪರ ಹೊಡೆದಾಡಿಕೊಂಡ ಕಿಮ್ಸ್ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ. ಹುಬ್ಬಳ್ಳಿಯ ಗಣೇಶ್ ಪೇಟೆಯ ಪ್ರಸಿದ್ದ ಮೀನಿನ ವ್ಯಾಪಾರಸ್ಥ ಯೂಸುಫ್ ಕೈರಾತಿ ಹಾಗೂ ಅವರ ಕುಟುಂಬದ ಮತ್ತೊಬ್ಬ ಸದಸ್ಯ ಅನೀಫ್ ಕೈರಾತಿ ಮದ್ಯ ಆಸ್ತಿ ವಿಚಾರಕ್ಕೆ ಪದೆ ಪದೆ ಜಗಳವಾಗುತ್ತಿತ್ತು, ಇವತ್ತು ಕೂಡ ಇದೆ ವಿಷಯವಾಗಿ ಇಬ್ಬರ ಮದ್ಯ ಜಗಳ ನಡೆದು ಜಗಳ ವಿಪೋಪಕ್ಕೆ ಹೋಗಿದೆ. ಹಲ್ಲೆಗೆ ಒಳಗಾದ ಯೂಸುಫ್ ನನ್ನು ಕಿಮ್ಸ್ ಆಸ್ಪತ್ರೆಗೆ …

Read More »

ಸಿಡಿ ಮಂತ್ರಿಗಳನ್ನು ಕಟ್ಟಿಕೊಂಡು ಸಿಎಮ್ ಆಗಿದ್ದೀರಿ, ರಾಜಿನಾಮೆ ಕೊಟ್ಟು ಸಜ್ಜನರ ಜೊತೆಗೆ ಬನ್ನಿ

ಹುಬ್ಬಳ್ಳಿ: ಜೆಡಿಎಸ್‌ಗೆ ಸಜ್ಜನರು ಸೇರುತ್ತಿದ್ದಾರೆ, ಈಗಾಗಲೇ ಬಿಡುಗಡೆ ಮಾಡಿರುವ 93 ಜನರ ಪಟ್ಟಿಯಲ್ಲಿ ಐದಾರು ಬದಲಾವಣೆ ಆಗಬಹುದು ಎಂದು ಹುಬ್ಬಳ್ಳಿಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಮ್ ಇಬ್ರಾಹಿಂ ಹೇಳಿಕೆ ನೀಡಿದರು. ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಚರತ್ನ ರಥಯಾತ್ರೆ ಹಳ್ಳಿಹಳ್ಳಿ ತಲುಪುತ್ತಿದೆ, ಜನಸಾಗರ ಸೇರುತ್ತಿದೆ.  ಹುಬ್ಬಳ್ಳಿ, ಬೆಳಗಾವಿ ಭಾಗದಲ್ಲಿ ಅನೇಕ ಪಕ್ಷಗಳ ಪ್ರಮುಖರು ಜೆಡಿಎಸ್ ಸೇರ್ಪಡೆ ಆಗುತ್ತಿದ್ದಾರೆ. ಹಿಂದೆ ನಮಗೆ ಕ್ಯಾಂಡಿಡೇಟ್ ಇಲ್ಲಾ ಅಂತಿದ್ರು, ಈಗ ಪ್ರತಿ …

Read More »

ಹುಬ್ಬಳ್ಳಿಧಾರವಾಡದಲ್ಲಿ ಸ್ವಚ್ಚತಾ ಅಭಿಯಾನ!

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಿಂದ ವಾರ್ಡ್ ಸಂಖ್ಯೆ 76,77,78,79ರ ಪ್ರದೇಶದಲ್ಲಿ ಸಾಮೂಹಿಕ ಸ್ವಚ್ಛತಾ ಅಭಿಯಾನ ನಡೆಯುತ್ತಿದೆ. ಹೌದು, ನಗರದಲ್ಲಿಂದು ಸ್ವಚ್ಚತಾ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿರುವ ಪಾಲಿಕೆ ಅಧಿಕಾರಿಗಳು ಪ್ರತಿದಿನ ಸಾಮೂಹಿಕ ಸ್ವಚ್ಚತಾ ಕಾರ್ಯ ಮಾಡುತ್ತಿದ್ದಾರೆ.ಇನ್ನೂ ಸಾರ್ವಜನಿಕರು ಸಹ ಇದಕ್ಕೆ ಸಹಕಾರ ಮಾಡಿದ್ದು ಸ್ವಚ್ಚತಾ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಪಾಲಿಕೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಇದ್ದರು.

Read More »

You cannot copy content of this page