Welcome to bigtvnews   Click to listen highlighted text! Welcome to bigtvnews
Breaking News

ಜಿಲ್ಲೆ

ತವರಿನಲ್ಲಿ ಕೈ ಜಾರಿದ್ದ ಸ್ಥಾನವನ್ನು ದಕ್ಕಿಸಿಕೊಳ್ಳೊಕೆ ಪರಿಷತ್‌ ಚುನಾವಣಾ ಮೂಲಕ ಬಿಎಸ್‌ ವೈ ರಣತಂತ್ರ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ತವರು ಜಿಲ್ಲೆ ಶಿವಮೊಗ್ಗ ವಿಧಾನ ಪರಿಷತ್ ಚುನಾವಣೆ ಪ್ರತಿಷ್ಠೆಯಾಗಿದೆ. ಕಾಂಗ್ರೆಸ್ ತೆಕ್ಕೆಯಿಂದ ಮರಳಿ ಸ್ಥಾನವನ್ನು ದಕ್ಕಿಸಿಕೊಳ್ಳುವ ಮೂಲಕ ತಮ್ಮ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಲು ಮುಂದಾಗಿದ್ದಾರೆ. ಉಪ ಸಮರದಲ್ಲಿ ಸಿಎಂ ತವರಿನ ಸೋಲು ಪರಿಷತ್ ಚುನಾವಣೆಯಲ್ಲಿ ಮಾಜಿ ಸಿಎಂ ತವರಿನಲ್ಲಿ ಅಗಬಾರದು ಎನ್ನುವ ಕಾರಣಕ್ಕೆ ಆದ್ಯತೆ ಮೇಲೆ ಬಿಎಸ್​ವೈ ಪ್ರಚಾರದ ಕಣಕ್ಕಿಳಿದಿದ್ದಾರೆ. ಯಡಿಯೂರಪ್ಪ ಪರಿಷತ್​​ ಚುನಾವಣಾ ಪ್ರಚಾರ : ಇತ್ತೀಚಿನ ವರ್ಷಗಳಲ್ಲಿ ಯಾವುದೇ ಚುನಾವಣಾ ಪ್ರಚಾರಕ್ಕೂ ಕೊಡದಷ್ಟು ಸಮಯ …

Read More »

ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಪ್ರಕರಣ: ಆರೋಪಿ ಅರೆಸ್ಟ್‌

ಉಳ್ಳಾಲ (ಮಂಗಳೂರು): ಶಾಲಾ ಬಾಲಕಿ ಮೇಲೆ ಲೈಂಗಿಕ ಕಿರುಕುಳಕ್ಕೆ ಯತ್ನಿಸಿದ್ದ ಪ್ರಕರಣ ಸಂಬಂಧ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ. ನಿನ್ನೆ ತಲಪಾಡಿಯ ಬಳಿ ಶಾಲೆಗೆ ತೆರಳುವ ವೇಳೆ ಆರೋಪಿ ಅಡ್ಡಗಟ್ಟಿ ಲೈಂಗಿಕ ಕಿರುಕುಳಕ್ಕೆ ಯತ್ನಿಸಿ ಪರಾರಿಯಾಗಿದ್ದ. ಈ ಸಂಬಂಧ ಉಳ್ಳಾಲ ಪೊಲೀಸರಿಗೆ ಪೋಷಕರು ದೂರು ನೀಡಿದ್ದರು. ಈ ದೂರಿನ ಮೇರೆಗೆ ಸುತ್ತಲಿನ ಸಿಸಿಟಿವಿ ದೃಶ್ಯಗಳ ಆಧರಿಸಿ ಆರೋಪಿ ರಾಶಿಕ್ (22) ಎಂಬಾತನನ್ನು ಬಂಧಿಸಿದ್ದಾರೆ. ಆರೋಪಿ ಮಂಗಳೂರಿನ ಕೆ.ಸಿ ರೋಡ್​​​ನ ಮುಳ್ಳುಗುಡ್ಡೆ ನಿವಾಸಿಯಾಗಿದ್ದು, ನಿನ್ನೆ …

Read More »

ಹಂಸಲೇಖ ಹೇಳಿಕೆ ಸಂವಿಧಾನ ಬದ್ಧವಾಗಿದೆ. ಕೋರ್ಟ್ ಅದಕ್ಕೆ ತಡೆಯಾಜ್ಞೆ ನೀಡಿದೆ-ನಟ ಚೇತನ್‌

ಮೈಸೂರು: ಉಡುಪಿಯ ಪೇಜಾವರ ಶ್ರೀಗಳ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆಂಬ ಆರೋಪ ಸಂಬಂಧ ಬಸವನಗುಡಿ ಠಾಣೆಯಲ್ಲಿ ನಾದಬ್ರಹ್ಮ ಹಂಸಲೇಖ ವಿರುದ್ಧ ದಾಖಲಾಗಿದ್ದ ಪ್ರಕರಣಕ್ಕೆ ಹೈಕೋರ್ಟ್‌ ತಡೆ ನೀಡಿರುವುದು ನ್ಯಾಯಕ್ಕೆ ಸಂದ ಜಯ ಎಂದು ನಟ ಚೇತನ್ ಹೇಳಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನ್ಯಾಯಕ್ಕೆ ಬಲವಿದೆ. ಪೊಲೀಸರು ನ್ಯಾಯದ ಪರವಾಗಿದ್ದಾರೆ. ಹಂಸಲೇಖ ಹೇಳಿಕೆ ಸಂವಿಧಾನ ಬದ್ಧವಾಗಿದೆ. ಕೋರ್ಟ್ ಅದಕ್ಕೆ ತಡೆಯಾಜ್ಞೆ ನೀಡಿದೆ ಎಂದರು. ಪಿರಿಯಾಪಟ್ಟಣ …

Read More »

ಕೇರಳದಿಂದ ಬಂದ 13 ನರ್ಸಿಂಗ್​ ವಿದ್ಯಾರ್ಥಿಗಳಲ್ಲಿ ಕೋವಿಡ್ ಪತ್ತೆ-ಮಲೆನಾಡಿನ ಹೆಬ್ಬಾಗಿಲಲ್ಲಿ ಕೊರೋನಾ ಭೀತಿ

ಶಿವಮೊಗ್ಗ: ನಂಜಪ್ಪ ನರ್ಸಿಂಗ್​ ಕಾಲೇಜಿನ 13 ವಿದ್ಯಾರ್ಥಿಗಳಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದೆ. ಈ ವಿದ್ಯಾರ್ಥಿಗಳೆಲ್ಲರೂ ಕೇರಳದಿಂದ ವಾಪಸ್ಸಾಗಿದ್ದರು ಎಂದು ತಿಳಿದುಬಂದಿದೆ. ಕೋವಿಡ್ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳನ್ನು ಕೋವಿಡ್​ ಕೇರ್​ ಸೆಂಟರ್​ನಲ್ಲಿ ಇರಿಸಲಾಗಿದೆ. ನಂಜಪ್ಪ ಲೈಫ್ ಕೇರ್ ಹಾಗೂ ನಂಜಪ್ಪ ನರ್ಸಿಂಗ್ ಕಾಲೇಜನ್ನು ಸೀಲ್​ಡೌನ್ ಮಾಡಲಾಗಿದೆ. ಉಳಿದ ವಿದ್ಯಾರ್ಥಿಗಳ ಪರೀಕ್ಷಾ ವರದಿಗಾಗಿ ಕಾಯಲಾಗುತ್ತಿದೆ. ಧಾರವಾಡ ಮತ್ತು ಮೈಸೂರು ಜಿಲ್ಲೆಗಳ ನರ್ಸಿಂಗ್​ ಕಾಲೇಜು ವಿದ್ಯಾರ್ಥಿಗಳಲ್ಲಿ ಮೊದಲು ಕೋವಿಡ್‌ ಕಂಡು ಬಂದಿತ್ತು. ಧಾರವಾಡ ಜಿಲ್ಲೆಯಲ್ಲಿ ಭಾನುವಾರದಿಂದ …

Read More »

ನಾವು ಅಧಿಕಾರಕ್ಕೆ ಬಂದ್ರೆ ಪೌರಕಾರ್ಮಿಕರನ್ನ ಖಾಯಂಗೊಳಿಸುತ್ತೇವೆ: ಸಿದ್ದರಾಮಯ್ಯ

ಮೈಸೂರು: ನಾವು ಅಧಿಕಾರಕ್ಕೆ ಬಂದ ತಕ್ಷಣ ಪೌರಕಾರ್ಮಿಕರನ್ನ ಖಾಯಂ ಮಾಡುತ್ತೇವೆ. ಏನೇ ಕಾನೂನು ತೊಡಕುಗಳಿದ್ದರು ಪೌರಕಾರ್ಮಿಕರನ್ನ ಖಾಯಂ ಮಾಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ, ಹಾಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಘೋಷಿಸಿದ್ದಾರೆ. ನಗರದ ಮಾನಸ ಗಂಗೋತ್ರಿಯಲ್ಲಿ ಪೌರಬಂಧು ಪುಸ್ತಕ ಬಿಡುಗಡೆಗೊಳಿಸಿ ನಂತರ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಇದ್ದಾಗ ಪೌರಕಾರ್ಮಿಕರ ಪರವಾಗಿ ಹಲವು ಕೆಲಸಗಳನ್ನು ಮಾಡಿದೆ. ಬಿ.ಆರ್. ಅಂಬೇಡ್ಕರ್ ಅವರು ನಮಗೆ ವೋಟ್ ಮಾಡುವ ಅಧಿಕಾರ ಇದ್ದರೆ ಸಾಲದು, ಸಾಮಾಜಿಕ ಆರ್ಥಿಕ ಸ್ವಾತಂತ್ರ್ಯ …

Read More »

ಎರಡು ತಲೆ, ಮೂರು ಕಣ್ಣುಳ್ಳ ವಿಚಿತ್ರ ಕರು ಜನನ- ಕರು ನೋಡಲು ಮುಗಿಬಿದ್ದ ಜನರು

ಮೈಸೂರು: ಎರಡು ತಲೆ, ಮೂರು ಕಣ್ಣುಗಳಿರುವ ವಿಚಿತ್ರ ಕರುವೊಂದು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಹೊಮ್ಮರಗಳ್ಳಿ ಗ್ರಾಮದಲ್ಲಿ ಜನಿಸಿದ್ದು, ಕರು ನೋಡಲು ಜನರು ಮುಗಿ ಬೀಳುತ್ತಿದ್ದಾರೆ. ಹೊಮ್ಮರಗಳ್ಳಿ ನಿವಾಸಿ ಮಹದೇವಪ್ಪ ಅವರ ಮನೆಯ ಸೀಮೆ ಹಸು‌ ಈ ವಿಚಿತ್ರ ಕರುವಿಗೆ ಜನ್ಮ ನೀಡಿದೆ. ಎರಡು ತಲೆ, ಮೂರು ಕಣ್ಣನ್ನು ಈ ಕರು ಹೊಂದಿದ್ದು, ಈ ಅದ್ಭುತವನ್ನು ನೋಡಿದ ಮನೆ ಮಂದಿ‌ ಸಂತಸಗೊಂಡಿದ್ದಾರೆ. ಈ ಕುರಿತು ‘ಈಟಿವಿ ಭಾರತ’ದ ಜೊತೆ ದೂರವಾಣಿಯಲ್ಲಿ ಮಾತನಾಡಿದ …

Read More »

ಮೈಸೂರಿನ 48 ನರ್ಸಿಂಗ್‌ ವಿದ್ಯಾರ್ಥಿಗಳಿಗೆ ತಗುಲಿದ ಕೊರೊನಾ ಸೋಂಕು!

ಮೈಸೂರು: ಬೆಂಗಳೂರು ಹಾಗೂ ಧಾರವಾಡದ ಕಾಲೇಜು ವಿದ್ಯಾರ್ಥಿಗಳಲ್ಲಿ ಕೋವಿಡ್​​ ದೃಢಪಟ್ಟ ಬೆನ್ನಲ್ಲೇ ಇದೀಗ ಮೈಸೂರಿನ ಕಾಲೇಜು ವಿದ್ಯಾರ್ಥಿಗಳಲ್ಲೂ ಸೋಂಕು ಕಾಣಿಸಿಕೊಳ್ಳುತ್ತಿದೆ. ಒಂದು ವಾರದ ಅವಧಿಯಲ್ಲಿ ಮೈಸೂರಿನ ಎರಡು ಖಾಸಗಿ ಕಾಲೇಜುಗಳ 48 ನರ್ಸಿಂಗ್‌ ವಿದ್ಯಾರ್ಥಿಗಳಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ. ಜಿಲ್ಲಾಡಳಿತದ ಅಧಿಕಾರಿಗಳು ನೀಡಿರುವ ಮಾಹಿತಿಗಳ ಪ್ರಕಾರ, ಎರಡು ಖಾಸಗಿ ನರ್ಸಿಂಗ್ ಕಾಲೇಜುಗಳ 48 ವಿದ್ಯಾರ್ಥಿಗಳಲ್ಲಿ ಕೋವಿಡ್ ತಗುಲಿರುವುದು​​ ದೃಢಪಟ್ಟಿದೆ. ಈ ಎಲ್ಲ ವಿದ್ಯಾರ್ಥಿಗಳು ಎರಡು ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ. ನರ್ಸಿಂಗ್‌ …

Read More »

ಶಕ್ತಿಧಾಮಕ್ಕೆ ಭೇಟಿಕೊಟ್ಟ ಶಿವರಾಜ್‍ಕುಮಾರ್ ದಂಪತಿ

ಮೈಸೂರು: ಸ್ಯಾಂಡಲ್‍ವುಡ್ ನಟ ಶಿವರಾಜ್‍ಕುಮಾರ್ ಅವರು ಪತ್ನಿ ಗೀತಾ ಶಿವರಾಜ್‍ಕುಮಾರ್ ಅವರ ಜೊತೆಗೆ ಮೈಸೂರಿಲ್ಲಿರುವ ಶಕ್ತಿಧಾಮಕ್ಕೆ ಭೆಟಿಕೊಟ್ಟು ಅಲ್ಲಿಯ ನಿರ್ವಹಣೆಯ ಕುರಿತಾಗಿ ವಿಚಾರಿಸಿದ್ದಾರೆ. ಶಕ್ತಿಧಾಮ ನಿರ್ವಹಣೆ ಕುರಿತಂತೆ ಧರ್ಮದರ್ಶಿಗಳ ಸಭೆ ಮಾಡಿದ್ದಾರೆ. ಟ್ರಸ್ಟ್ ಅಧ್ಯಕ್ಷೆ ಗೀತಾ ಶಿವರಾಜ್‍ಕುಮಾರ್ ನೇತೃತ್ವದಲ್ಲಿ ನಡೆಯುತ್ತಿರುವ ಸಭೆಯಾಗಿದೆ. ಸಭೆಯಲ್ಲಿ ಟ್ರಸ್ಟ್ ಉಪಾಧ್ಯಕ್ಷ, ನಿವೃತ್ತ ಐಪಿಎಸ್ ಅಧಿಕಾರಿ ಕೆಂಪಯ್ಯ, ಮ್ಯಾನೇಂಜಿಂಗ್ ಟ್ರಸ್ಟಿ ಜಯದೇವ್, ಖಜಾಂಚಿ ಸುಮನ ಸೇರಿದಂತೆ ಟ್ರಸ್ಟ್ ಪದಾಧಿಕಾರಿಗಳು ಭಾಗಿಯಾಗಿದ್ದಾರೆ. 150 ಮಕ್ಕಳ ಹಾರೈಕೆ, ಶಿಕ್ಷಣ …

Read More »

ಹಾಸನದಲ್ಲಿ ಮಾರಕಾಸ್ತ್ರ ಹಿಡಿದು ಪುಂಡರ ಬೈಕ್ ವೀಲಿಂಗ್

ಹಾಸನ: ಒಂದೆಡೆ ಪೆಟ್ರೋಲ್ ಬೆಲೆ ಗಗನಕ್ಕೇರಿದೆ, ಮತ್ತೊಂದೆಡೆ ರಸ್ತೆ ಅಪಘಾತಗಳು ಹೆಚ್ಚಾಗುತ್ತಿವೆ. ಇಂತಹ ಸಂದರ್ಭದಲ್ಲಿ ಕೆಲ ಪುಂಡ ಹುಡುಗರು ಮಾತ್ರ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ನಡುರಸ್ತೆಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದು ಬೈಕ್ ವೀಲಿಂಗ್ ಮಾಡುತ್ತಿದ್ದಾರೆ. ಇದನ್ನು ಕಂಡ ಜನರು ಭಯಭೀತರಾಗಿದ್ದಾರೆ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಬೆಲಸಿಂದ ಪಾರ್ಕ್ ಬಳಿ ಐದಾರು ಮಂದಿ ಯುವಕರು ಬೈಕ್ ವೀಲಿಂಗ್ ಮಾಡುವ ಜೊತೆಗೆ ಕೈಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದು ಪುಂಡಾಟಿಕೆ ಮಾಡಿರುವ ಘಟನೆ ನಡೆದಿದೆ. ಗುತ್ತಿಗೆದಾರರ ಸಂಘದ …

Read More »

ಅತಿಕ್ರಮಣ ಅಂಗಡಿಗಳಿಗೆ ಬೀಗಹಾಕಿದ ಪ್ರೊಬೇಷನರಿ ತಹಶೀಲ್ದಾರ ಮಾಧವ ಗಿತ್ತೆ

ಅಣ್ಣಿಗೇರಿ : ಪಟ್ಟಣದ ಬಸ್ ನಿಲ್ದಾಣದ ಮುಂಭಾಗದಲ್ಲಿ ರುವ ಸರ್ಕಾರಿ ಜಾಗದಲ್ಲಿ ಕಾನೂನುಬಾಹಿರವಾಗಿ ನಿರ್ಮಿಸಿದ ಅಂಗಡಿಗಳಿಗೆ ಪ್ರೊಬೇಷನರಿ ತಹಶೀಲ್ದಾರ ಮಾಧವ ಗಿತ್ತೆ ಇಂದು ಬೆಳ್ಳಂ ಬೆಳಿಗ್ಗೆ ಬೀಗ ಹಾಕುವ ಮೂಲಕ ಎಚ್ಚರಿಕೆ ನೀಡಿದರು. ಕಟ್ಟಡ ಮಾಲೀಕರು ಕಟ್ಟಡ ನಿರ್ಮಾಣಕ್ಕಾಗಿ ಸ್ಥಳೀಯ ಆಡಳಿತದಿಂದ ಪಾರವಾನಿಗಿ ಪಡೆದಿರುವದು ಒಂದು ಕಡೆಯಾದರೆ, ಕಟ್ಟಡ ನಿರ್ಮಿಸಿರುವದು ಸರ್ಕಾರಿ ಜಾಗದಲ್ಲಿ ಆದ್ದರಿಂದ ಇಂತಹ ಕಟ್ಟಡಗಳಲ್ಲಿ ನಿರ್ಮಾಣವಾದ ವಾಣಿಜ್ಯ ಮಳಿಗೆಗಳನ್ನು ಕೂಡಲೇ ತೆರುವುಗೊಳಿಸಬೇಕು ಎಂದು ಮಾಲೀಕರಿಗೆ ಬೀಗಿ ಹಾಕಿದರು. …

Read More »
You cannot copy content of this page
Click to listen highlighted text!