Breaking News

ಧಾರವಾಡ

Featured Video Play Icon

ಶೂನ್ಯ ಟಿಕೆಟ್ ವಿತರಣೆಯಿಂದ ಸಾರಿಗೆ ಸಂಸ್ಥೆಗೆ ಸಂಕಷ್ಟ: 300 ಕೋಟಿ ಬಾಕಿ ಉಳಿಸಿಕೊಂಡ ಸರ್ಕಾರ…

ಹುಬ್ಬಳ್ಳಿ: ಮೊದಲೇ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದ ಸಾರಿಗೆ ಸಂಸ್ಥೆ, ಗ್ಯಾರಂಟಿ ಯೋಜನೆ ಜಾರಿಯಾದಾಗಿನಿಂದಲೂ ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ ಎನ್ನಲಾಗುತ್ತಿದೆ. ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯ ಕಲ್ಪಿಸಿರುವ ಕರ್ನಾಟಕ ಸರ್ಕಾರದ ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆಯಡಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಮರು ಪಾವತಿಸಬೇಕಾದ ಮೊತ್ತದಲ್ಲಿ ರಾಜ್ಯ ಸರ್ಕಾರ 298,95,81,254 ರೂ. ಬಾಕಿ ಉಳಿಸಿಕೊಂಡಿದೆ… 2023ರ ಜೂನ್ 11ರಂದು ಈ ಯೋಜನೆ ಜಾರಿಗೆ ಬಂದಿತ್ತು. …

Read More »

ಧಾರವಾಡ ಮಹಾನಗರ ಪಾಲಿಕೆ ಅಧಿಕಾರಿಗಳು ಲಂಚ ಕೊಡುವಂತೆ ಕೇಳುತ್ತಿದ್ದಾರೆ….

ಧಾರವಾಡ: ಕರ್ನಾಟಕ ಬಿಜೆಪಿ ಸರ್ಕಾರ ಅವಧಿಯಲ್ಲಿ ಕೇಳಿ ಬಂದಿದ್ದ ಗುತ್ತಿಗೆದಾರರ ಆರೋಪಗಳು ಇದೀಗ ಮತ್ತೆ ಮುನ್ನೆಲೆಗೆ ಬರುತ್ತಿವೆ. ಉತ್ತರ ಕರ್ನಾಟಕ ಸಿವಿಲ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಸುಭಾಷ ಪಾಟೀಲ್ ಅವರು ಧಾರವಾಡ ಪಾಲಿಕೆ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಡೆದ ಕಾಮಗಾರಿ ಸಂಬಂಧ ಬಿಲ್ ಕೇಳಲು ಹೋದರೆ ಮೊದಲು ಲಂಚ ಕೊಡುವಂತೆ ಮಹಾನಗರ ಪಾಲಿಕೆಯಲ್ಲಿ ಎಲ್ಲಾ ಹಂತದ ಅಧಿಕಾರಿಗಳು ಕೇಳುತ್ತಿದ್ದಾರೆ ಎಂದು ಅವರು ಬುಧವಾರ …

Read More »

ಬಿಜೆಪಿಗೆ ಹೊಟ್ಟೆ ಉರಿ ಆಗುತ್ತಿದೆ: ರಾಮಲಿಂಗ ರೆಡ್ಡಿ.

ಧಾರವಾಡ: ಧಾರವಾಡದಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿದರು.ಶಕ್ತಿ ಯೋಜನೆಯಿಂದ ಜನ ದಟ್ಟಣೆ ಹೆಚ್ಚಾಗುತ್ತಿರುವ ವಿಚಾರ ನಾಲ್ಕು ವರ್ಷದಿಂದ ಹೊಸ ಬಸ್ ಖರೀದಿ ಆಗಿರಲಿಲ್ಲ. ಸಿಬ್ಬಂದಿ ನೇಮಕವೂ ಆಗಿರಲಿಲ್ಲ. ಪ್ರತಿದಿನ ರಾಜ್ಯದಲ್ಲಿ 80 ಲಕ್ಷ ಜನ ಓಡಾಡುತ್ತಿದ್ದಾರೆ. ಇಂತಹ ಸಮಯದಲ್ಲಿ ಶಕ್ತಿ ಯೋಜನೆ ಆರಂಬ ಆಯ್ತು ಇದರಿಂದಾಗಿ ಆಗ ನಿತ್ಯ ಓಡಾಡುವವರ ಸಂಖ್ಯೆ 1 ಕೋಟಿ ಮೇಲಾಯ್ತು, ಹೀಗಾಗಿ ಸ್ವಲ್ಪ ಶಾಲಾ ಮಕ್ಕಳಿಗೆ ತೊಂದರೆ ಆಗಿದೆ. ಅವರಿಗೆ ಓಡಾಡಲು ಕಷ್ಟ ಆಗಿದೆ.ಈಗ …

Read More »

ಕಲಘಟಗಿ ಪಟ್ಟಣದ ಪ್ರಮುಖ ಬಿದಿಗಳಲ್ಲಿ ಅಯ್ಯಪ್ಪ ಸ್ವಾಮಿ ಮೂರ್ತಿ ಮೆರವಣಿಗೆ….

ಕಲಘಟಗಿ ಪಟ್ಟಣದ ಜ್ಯೋತಿ ನಗರದ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಮಾಲಾದರಿಗಳಿಂದ ಪಟ್ಟಣದ ಪ್ರಮುಖ ಬಿದಿಗಳಲ್ಲಿ ಅಯ್ಯಪ್ಪ ಸ್ವಾಮಿ ಮೂರ್ತಿ ಮೆರವಣಿಗೆ ನಡೆಯಿತು. ದೇವಸ್ಥಾನದಲ್ಲಿ ಅಯ್ಯಪ್ಪ ಸ್ವಾಮಿ ವಿಶೇಷ ಪೂಜೆ ನೆರೆವೇರಿತು. ಪಟ್ಟಣದ ಪ್ರಮುಖ ಬಿದಿಗಳಲ್ಲಿ ಮಹಿಳೆಯರಿಂದ ಕುಂಭ ಮೇಳ, ಭಜನೆ ಹಾಗೂ ವಿವಿಧ ಕಲಾ ತಂಡಗಳ ಮೂಲಕ ಮೆರವಣಿಗೆ ಸಾಗಿತು. ಅಯ್ಯಪ್ಪ ಸ್ವಾಮಿ ದೇವಸ್ಥಾನದ ಹಿರಿಯ ಮಾಲಾದಾರಿಗಳು ಕುದುರೆ ಮೂಲಕ ಸಾಗಿದರು ಇನ್ನು ಕೆಲವರು ವಾಹನದಲ್ಲಿ ಸಂಚರಿಸಿದರು

Read More »

ಬೈಕ್‌ ಸವಾರನಿಗೆ ಗುದ್ದಿಕೊಂಡು ಹೋದ ಕಾರು…

ಧಾರವಾಡ: ಬೈಕ್‌ ಸವಾರನೊಬ್ಬನಿಗೆ ಕಾರು ಡಿಕ್ಕಿ ಹೊಡೆದುಕೊಂಡು ಹೋದ ಘಟನೆ ಧಾರವಾಡದ ಜೆಎಸ್‌ಎಸ್‌ ಕಾಲೇಜು ಬಳಿ ಸಂಭವಿಸಿದೆ. ಈ ಘಟನೆಯಲ್ಲಿ ಬೈಕ್ ಸವಾರನ ತಲೆಗೆ ಪೆಟ್ಟಾಗಿದೆ. ಇವರು ಪತ್ರಿಕಾ ವಿತರಕರಾಗಿ ಕೆಲಸ ಮಾಡುತ್ತಿದ್ದು, ಬೆಳಿಗ್ಗೆ ಪತ್ರಿಕೆ ಹಾಕಲು ಹೋಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಕಾರು ಚಾಲಕ ಸ್ಥಳದಲ್ಲಿ ನಿಲ್ಲದೇ ಪಾರಾಗಿ ಹೋಗಿದ್ದು, ಈ ಸಂಬಂಧ ಸಂಚಾರ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Read More »

ಪ್ರತಿಪಕ್ಷಗಳ ಸದಸ್ಯರ ಸದಸ್ಯತ್ವ ರದ್ದುಗೊಳಿಸುವ ಕೇಂದ್ರ ಸರ್ಕಾರದ ಕ್ರಮ ಪ್ರಜಾಪ್ರಭುತ್ವ ವಿರೋಧಿ ಹಾಗೂ ಅಸಂವಿಧಾನಿಕ ಕ್ರಮ…

ಧಾರವಾಡ ಕೇಂದ್ರ ಬಿಜೆಪಿ ಸರ್ಕಾರದ ಪ್ರಜಾಪ್ರಭುತ್ವ ವಿರೋಧಿ ಧೋರಣೆ ಖಂಡಿಸಿ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್‌ ಸಮಿತಿ ಸದಸ್ಯರು ಪ್ರತಿಭಟನೆ ನಡೆಸಿದರು. ಚಳಿಗಾಲದ ಅಧಿವೇಶನ ಸಂದರ್ಭದಲ್ಲಿ ನೂತನ ಸಂಸತ್ ಮೇಲೆ ದಾಳಿ ನಡೆಸಿದ್ದನ್ನು ನೂತನ ಸಂಸತ್ ಮೇಲೆ ದಾಳಿ ನಡೆಸಿದ್ದನ್ನು ಖಂಡಿಸಿ ಪ್ರತಿಭಟನೆ ನಡೆಸಿದ ಪ್ರತಿಪಕ್ಷಗಳ ಸದಸ್ಯರ ಸದಸ್ಯತ್ವ ರದ್ದುಗೊಳಿಸುವ ಕೇಂದ್ರ ಸರ್ಕಾರದ ಕ್ರಮ ಪ್ರಜಾಪ್ರಭುತ್ವ ವಿರೋಧಿ ಹಾಗೂ ಅಸಂವಿಧಾನಿಕ ಕ್ರಮವಾಗಿದೆ ಎಂದು …

Read More »

ವಿದ್ಯಾರ್ಥಿಗಳು ಮರೆವಾಡ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜನರಲ್ಲಿ ಮತದಾನ ಜಾಗೃತಿ ಮೂಡಿಸಿದರು…..

ಧಾರವಾಡ : ತಾಲೂಕಿನ ಮರೆವಾಡ ಗ್ರಾಮದಲ್ಲಿ ಜಿಲ್ಲಾಡಳಿತ ಮತ್ತು ಸ್ವೀಪ್ ಸಮಿತಿ, ಅಂಜುಮನ್ ಮಹಾವಿದ್ಯಾಲಯದ, ಚುನಾವಣಾ ಸಾಕ್ಷರತಾ ಕ್ಲಬ್ ಮತ್ತು ಎನ್‌.ಎಸ್.ಎಸ್ ಘಟಕ ವತಿಯಿಂದ ಮತದಾರ ಜಾಗೃತಿ ಜಾಥಾ ಕಾರ್ಯಕ್ರಮ ನಡೆಯಿತು. ಬಲಿಷ್ಠ ಭಾರತ ನಿರ್ಮಾಣ ಮಾಡಲು ತಪ್ಪದೇ ಮತದಾನ ಮಾಡಿ, ದೇಶದ ಭವಿಷ್ಯ ನಿರ್ಮಾಣಕ್ಕಾಗಿ ಕಡ್ಡಾಯವಾಗಿ ಮತದಾನ ಮಾಡಿ, ನಮ್ಮ ಮತ ನಮ್ಮ ಹಕ್ಕು ಎಂಬ ಘೋಷವಾಕ್ಯ ಗಳೊಂದಿಗೆ ವಿದ್ಯಾರ್ಥಿಗಳು ಮರೆವಾಡ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜನರಲ್ಲಿ …

Read More »

ಕ್ತಿಯೊಬ್ಬನನ್ನು ಹೊಡೆದು ಕೊಲೆ ಮಾಡಿರುವ ಘಟನೆ ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಹಾಗೂ ಹಾರೋಬೆಳವಡಿ ರಸ್ತೆಯಲ್ಲಿ ನಿನ್ನೆ ತಡರಾತ್ರಿ ಸಂಭವಿಸಿದೆ…

ಧಾರವಾಡ: ಕೇವಲ 30 ಸಾವಿರ ರೂಪಾಯಿಗಾಗಿ ರಾತ್ರೋರಾತ್ರಿ ವ್ಯಕ್ತಿಯೊಬ್ಬನನ್ನು ಹೊಡೆದು ಕೊಲೆ ಮಾಡಿರುವ ಘಟನೆ ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಹಾಗೂ ಹಾರೋಬೆಳವಡಿ ರಸ್ತೆಯಲ್ಲಿ ನಿನ್ನೆ ತಡರಾತ್ರಿ ಸಂಭವಿಸಿದೆ. ಧಾರವಾಡ ತಾಲೂಕಿನ ತಡಕೋಡ ಗ್ರಾಮದ ಸುರೇಶ ದೇವರಹೊರು (42) ಎಂಬ ವ್ಯಕ್ತಿಯೇ ಹತ್ಯೆಗೀಡಾದವನು.ಶಿವಪ್ಪ ಬಡಿಗೇರ ಎಂಬಾತನೇ ಹತ್ಯೆ ಮಾಡಿದ ಆರೋಪಿಯಾಗಿದ್ದು, ಆರೋಪಿಯ ಪತ್ತೆಗಾಗಿ ಜಾಲ ಬೀಸಲಾಗಿದೆ. ಹತ್ಯೆಗೀಡಾದ ಸುರೇಶ್, ಆರೋಪಿ ಶಿವಪ್ಪನಿಗೆ 60 ಸಾವಿರ ರೂಪಾಯಿ ಸಾಲ ಕೊಟ್ಟಿದ್ದ. ಅದರಲ್ಲಿ …

Read More »

ಸೊಂಟದಲ್ಲಿ ಚಾಕು ಇಟ್ಟುಕೊಂಡು ಕುಡುಕನೊಬ್ಬನ ಪುಂಡಾಟ…

ಧಾರವಾಡ : ಸೊಂಟದಲ್ಲಿ ಚಾಕು ಇಟ್ಟುಕೊಂಡು ಕುಡುಕನೊಬ್ಬ ಪುಂಡಾಟ ನಡೆಸಿ, ಬಾಳೆಹಣ್ಣು ವ್ಯಾಪಾರಸ್ಥರಿಂದ ಸಾರ್ವಜನಿಕವಾಗಿಯೇ ಗೂಸಾ ತಿಂದ ಘಟನೆ ಧಾರವಾಡದಲ್ಲಿ ನಡೆದಿದೆ. ಧಾರವಾಡದ ಹಣ್ಣಿನ ಮಾರುಕಟ್ಟೆಯಲ್ಲಿ ಕುಡುಕನೊಬ್ಬ ವಿಪರೀತ ಮದ್ಯ ಕುಡಿದು ಬಾಳೆಹಣ್ಣಿನ ವ್ಯಾಪಾರಿಯೊಂದಿಗೆ ಜಗಳ ತೆಗೆದಿದ್ದ. ಬಾಳೆಹಣ್ಣು ವ್ಯಾಪಾರಿಗಳು ಆತನಿಗೆ ಸಾರ್ವಜನಿಕವಾಗಿಯೇ ಗೂಸಾ ಸಹ ಕೊಟ್ಟಿದ್ದಾರೆ. ಇಷ್ಟಕ್ಕೇ ಸುಮ್ಮನಾಗದ ಕುಡುಕ ಅಲ್ಲೇ ನಿಂತು ಅವಾಚ್ಯ ಶಬ್ದಗಳಿಂದ ಬಾಳೆಹಣ್ಣು ವ್ಯಾಪಾರಿಯೊಬ್ಬನನ್ನು ಬೈಯುತ್ತಿದ್ದ. ಅಲ್ಲದೇ ಸೊಂಟದಲ್ಲಿ ಚಾಕು ಸಹ ಇಟ್ಟುಕೊಂಡಿದ್ದ. ಆತ …

Read More »

ಅಗಲಿದ ವೀರಯೋಧರಿಗೆ ವೀರ ಸ್ವರ್ಗ ಪ್ರಾಪ್ತಿಯಾಗಲಿ ಎಂದು ಶ್ರದ್ಧಾಂಜಲಿ ಸಲ್ಲಿಸಲಾಯಿತು…

ಧಾರವಾಡ 27 : ಭಾರತೀಯ ಸೇನೆಯ 63 ರಾಷ್ಟ್ರೀಯ ರೈಫಲ್ ನ ಯುವ ವೀರಯೋಧ ಕ್ಯಾಪ್ಟನ್ ಎಂ ವ್ಹಿ ಪ್ರಾಂಜಲ್ ಹಾಗೂ ಇತರ ವೀರಯೋಧರು ಕಾಶ್ಮೀರದ ರಜೋರಿ ಜಿಲ್ಲೆಯಲ್ಲಿ ರಾಷ್ಟ್ರ ರಕ್ಷಣೆಯ ಕಾರ್ಯದಲ್ಲಿ ಪಾಕಿಸ್ತಾನಿಯ ಉಗ್ರರ ದಾಳಿಯಲ್ಲಿ ಹುತಾತ್ಮರಾಗಿ ಭಾರತಮಾತೆಯ ಮಡಿಲಿಗೆ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ , ಅಗಲಿದ ವೀರಯೋಧರಿಗೆ ವೀರ ಸ್ವರ್ಗ ಪ್ರಾಪ್ತಿಯಾಗಲಿ ಎಂದು ಶ್ರದ್ಧಾಂಜಲಿ ಸಲ್ಲಿಸಲಾಯಿತು ಧಾರವಾಡದ ಜಿಲ್ಲಾಧಿಕಾರಿಗಳ ಆವರಣದಲ್ಲಿರುವ ಕಾರ್ಗಿಲ್ ಸ್ಥೂಪದ ಹತ್ತಿರ ಶ್ರದ್ಧಾಂಜಲಿ ಸಭೆ ಏರ್ಪಡಿಸಲಾಗಿತ್ತು. …

Read More »

You cannot copy content of this page