Welcome to bigtvnews   Click to listen highlighted text! Welcome to bigtvnews
Breaking News

ಕ್ರೀಡೆ

ಇನ್ನೆರಡು ದಿನದಲ್ಲಿ ವಿರಾಟ್‌ ಕೊಹ್ಲಿ ODI ನಾಯಕತ್ವದ ಭವಿಷ್ಯ ನಿರ್ಧಾರ- ಎಲ್ಲರ ಚಿತ್ತ ಚೇತನ ಶರ್ಮಾ ಸಮಿತಿ ಮೇಲೆ

ಮುಂಬೈ: ಮುಂಬರುವ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಚೇತನ್ ಶರ್ಮಾ ನೇತೃತ್ವದ ಆಯ್ಕೆ ಸಮಿತಿಯಿಂದ ವಿರಾಟ್ ಕೊಹ್ಲಿಯ ಏಕದಿನ ನಾಯಕತ್ವದ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ. ರೂಪಾಂತರಿ ಕೋವಿಡ್​ 19 ಭಿತಿಯ ನಡುವೆಯೂ ಭಾರತ ತಂಡ ವೇಳಾಪಟ್ಟಿಯಂತೆ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದೆ ಎಂದು ಬಿಸಿಸಿಐ ತಿಳಿಸಿದ್ದು, ದಕ್ಷಿಣ ಆಫ್ರಿಕಾ ಸರ್ಕಾರ ಕೂಡ ಅತ್ಯುತ್ತಮವಾದ ಬಯೋಬಬಲ್ ವ್ಯವಸ್ಥೆ ಕಲ್ಪಿಸಿಕೊಡುವುದಾಗಿ ಭರವಸೆ ನೀಡಿದೆ. 2022ರಲ್ಲಿ ಸಂಪೂರ್ಣ ಟಿ20 ಕ್ರಿಕೆಟ್​ ಪಂದ್ಯಗಳಿಗೆ ಹೆಚ್ಚು ಒತ್ತು …

Read More »

ತಮ್ಮ 4ನೇ ಟೆಸ್ಟ್​ ಪಂದ್ಯದಲ್ಲಿ 5ನೇ ಬಾರಿ 5 ವಿಕೆಟ್ ಪಡೆದು ದಾಖಲೆ ಬರೆದ ಅಕ್ಷರ್ ಪಟೇಲ್!!

ಕಾನ್ಪುರ : ಭಾರತ ತಂಡದ ಎಡಗೈ ಸ್ಪಿನ್ನರ್​ ಅಕ್ಷರ್​ ಪಟೇಲ್ ಮೊದಲ ಟೆಸ್ಟ್​ನ ನ್ಯೂಜಿಲ್ಯಾಂಡ್​ ವಿರುದ್ಧ ಮೊದಲ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಪಡೆಯುವ ಮೂಲಕ ತಾವಾಡಿದ ವೃತ್ತಿ ಜೀವನದ ಮೊದಲ 4 ಪಂದ್ಯಗಳಲ್ಲೇ 5ನೇ ಬಾರಿ 5 ವಿಕೆಟ್ ಪಡೆದ ದಾಖಲೆ ಬರೆದಿದ್ದಾರೆ. ಇದೇ ವರ್ಷ ಇಂಗ್ಲೆಂಡ್​ ವಿರುದ್ಧ ತವರಿನಲ್ಲಿ ನಡೆದಿದ್ದ ಟೆಸ್ಟ್ ಸರಣಿಯಲ್ಲಿ ಪದಾರ್ಪಣೆ ಮಾಡಿದ್ದ ಅವರು, ಮೊದಲ ಪಂದ್ಯದಲ್ಲೇ 7 ವಿಕೆಟ್​ ಪಡೆದು ಮಿಂಚಿದ್ದರು. ನಂತರ ಉಳಿದ ಮೂರು …

Read More »

ಅಪ್ಪು ಸ್ಮರಣಾರ್ಥ ನ.27, 28ರಂದು ಶೋಟೋಕಾನ್ ಕರಾಟೆ ಸ್ಪರ್ಧೆ

ಹುಬ್ಬಳ್ಳಿ: ಶೋಟೋಕಾನ್ ಕರಾಟೆ ಸಂಸ್ಥೆಯ ವತಿಯಿಂದ ಪವರ್ ಸ್ಟಾರ್‌ ದಿವಂಗತ ಪುನೀತ್ ರಾಜ್‌ಕುಮಾರ್‌ ಅವರ ಸ್ಮರಣಾರ್ಥವಾಗಿ ಮೂರನೇ ರಾಷ್ಟ್ರೀಯ ಮಟ್ಟದ ಕರಾಟೆ ಮುಕ್ತ ಚಾಂಪಿಯನ್‌ಶಿಪ್ ಸ್ಪರ್ಧೆಯನ್ನು ನ.27 ಮತ್ತು 28ರಂದು ಇಲ್ಲಿನ ಹೊಸ ಕೋರ್ಟ್ ಹತ್ತಿರದ ಚೈತನ್ಯ ಸ್ಪೋರ್ಟ್ಸ್ ಫೌಂಡೇಶನ್‌ನಲ್ಲಿ ಆಯೋಜಿಸಲಾಗಿದೆ ಎಂದು ಸಂಯೋಜಕ ದುರ್ಗಾನಂದ ಹೇಳಿದರು. ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎರಡು ದಿನಗಳ ಕಾಲ ನಡೆಯುವ ರಾಷ್ಟ್ರಮಟ್ಟದ ಕರಾಟೆ ಮುಕ್ತ ಚಾಂಪಿಯನ್‌ಶಿಪ್ ಸ್ಪರ್ಧೆಯನ್ನು ನ.27 ರಂದು …

Read More »

ಫೀಲ್ಡಿಂಗ್ ವೇಳೆ ಇಬ್ಬರು ಕ್ರಿಕೆಟರ್‌ಗಳ ಮಧ್ಯೆ ಡಿಕ್ಕಿ- ಓರ್ವ ಐಸಿಯುಗೆ ದಾಖಲು

ಹುಬ್ಬಳ್ಳಿ: ಹುಬ್ಬಳ್ಳಿಯ ರಾಜನಗರದ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಡಿವಿಷನ್ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ಇಬ್ಬರು ಆಟಗಾರರು ಡಿಕ್ಕಿ ಹೊಡೆದ ಪರಿಣಾಮ ಆಟಗಾರನೋರ್ವ ಗಂಭೀರವಾಗಿ ಗಾಯಗೊಂಡಿದ್ದಾರೆ. ಹುಬ್ಬಳ್ಳಿ ಕ್ರಿಕೆಟ್ ಅಕಾಡೆಮಿ ಎ ಹಾಗೂ ಧಾರವಾಡದ ಎಸ್‌ಡಿಎಂ ಬಿ ತಂಡಗಳ ನಡುವೆ ಪಂದ್ಯದ ನಡೆದ ವೇಳೆ ಘಟನೆ ಸಂಭಸಿವಿದೆ. 19ನೇ ಓವರ್‌ನಲ್ಲಿ ಫೀಲ್ಡಿಂಗ್ ಮಾಡುವಾಗ ಕವರ್ಸ್ ಹಾಗೂ ಪಾಯಿಂಟ್ ಕ್ಷೇತ್ರದ ನಡುವೆ ಎಸ್‌ಡಿಎಂ ಬಿ ತಂಡದ ಪ್ರಜ್ವಲ್ ಶಿರೋಳ ಮತ್ತು …

Read More »

T-20 World Cup: ಸೆಮಿಫೈನಲ್​ ಪಂದ್ಯಕ್ಕೂ ಮುನ್ನ ಪಾಕ್​ಗೆ ಶಾಕ್​..ಇಬ್ಬರು ಪ್ರಮುಖ ಆಟಗಾರರು ಹೊರಕ್ಕೆ..?

ಇಂದು ನಡೆಯಲಿರುವ ಸೆಮಿಫೈನಲ್ ಪಂದ್ಯಕ್ಕೂ ಮುನ್ನವೇ ಪಾಕ್​ ತಂಡಕ್ಕೆ ಆಘಾತ ಉಂಟಾಗಿದೆ. ಇಬ್ಬರು ಪ್ರಮುಖ ಆಟಗಾರರು ಜ್ವರದ ಕಾರಣದಿಂದಾಗಿ ಇಂದಿನ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ದುಬೈ: ಟಿ-20 ವಿಶ್ವಕಪ್ ಟೂರ್ನಿಯ (T20 World Cup) ಸೆಮಿಫೈನಲ್ ಪಂದ್ಯದಲ್ಲಿಂದು ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನ (AUSvsPAK) ಮುಖಾಮುಖಿಯಾಗಲಿವೆ. ಈಗಾಗಲೇ ಆಡಿರುವ ಎಲ್ಲ ಪಂದ್ಯಗಳಲ್ಲೂ ಭರ್ಜರಿ ಜಯದಾಖಲಿಸಿರುವ ಪಾಕ್​ ತಂಡಕ್ಕೆ ಆಘಾತ ಉಂಟಾಗಿದೆ. ಪಾಕ್​ನ ಇಬ್ಬರು ಪ್ರಮುಖ ಆಟಗಾರರು ಇಂದು ನಡೆಯುವ ಪಂದ್ಯಕ್ಕೆ ಅಲಭ್ಯರಾಗುವ …

Read More »

ದೀಪಾವಳಿ ಹಬ್ಬದ ಪ್ರಯುಕ್ತ ಹೋರಿ ಬೆದರಿಸುವ ಸ್ಪರ್ಧೆ:ದೀಪಾವಳಿ ಭರ್ಜರಿ ಹೋರಿ ಹಬ್ಬ

ಹಾನಗಲ್ ತಾಲೂಕಿನ ಮಾಸನಕಟ್ಟಿ ಗ್ರಾಮದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಹೋರಿ ಬೆದರಿಸುವ ಸ್ಪರ್ಧೆ. ಹಾನಗಲ್: ಹಾನಗಲ್ ತಾಲೂಕಿನ ಮಾಸನಕಟ್ಟಿ ಗ್ರಾಮದಲ್ಲಿ ದೀಪಾವಳಿ ಪ್ರಯುಕ್ತ ಹೋರಿ ಬೇದರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.. ನಾಡಿನ ದೊಡ್ಡ ಹಬ್ಬವಾದ ದೀಪಾವಳಿ ಹಬ್ಬದ ಪ್ರಯುಕ್ತ ಹಾನಗಲ್ ತಾಲೂಕಿನ ಮಾಸನಕಟ್ಟಿ ಗ್ರಾಮದಲ್ಲಿ ಹೋರಿ ಬೆದರಿಸುವ ಕಾರ್ಯಕ್ರಮ ವಿಜೃಂಭಣೆಯಿಂದ ನೆಡೆಯಿತು. ರೈತ ತಾನು ಬೆಳೆಸಿದ ಎತ್ತುಗಳನ್ನು ಶೃಂಗರಿಸಿ ಅದಕ್ಕೊಂದು ಹೆಸರು ನೇಮಿಸಿ ಅದನ್ನು ಕೂಗುತ್ತಾ ಅಖಾಡದಲ್ಲಿ ಓಡೋಕೆ ಬಿಟ್ಟರೆ ನೋಡುಗರಿಗೆ …

Read More »

ರಕ್ಷಾ ಬಂಧನಕ್ಕೂ ಮುನ್ನವೇ ರಾಖಿ ಕಟ್ಟಿಸಿಕೊಂಡ ವೇಗದ ಬೌಲರ್​ ಜಸ್​ಪ್ರೀತ್​ ಬುಮ್ರಾ

ನವದೆಹಲಿ: ಆಗಸ್ಟ್​​ 15ರಂದು ಸ್ವತಂತ್ರ್ಯೋತ್ಸವ ದಿನದ ಜತೆಗೆ ರಕ್ಷಾ ಬಂಧನ ಆಚರಣೆ ಮಾಡಲು ದೇಶದ ಜನರು ಮುಂದಾಗಿದ್ದಾರೆ. ಆದರೆ ಟೀಂ ಇಂಡಿಯಾದ ಯಾರ್ಕರ್​ ಕಿಂಗ್​​ ಜಸ್​ಪ್ರೀತ್​ ಬುಮ್ರಾ ಎರಡು ದಿನ ಮುಂಚಿತವಾಗಿಯೇ ರಕ್ಷಾ ಬಂಧನ ಹಬ್ಬ ಆಚರಣೆ ಮಾಡಿಕೊಂಡಿದ್ದಾರೆ.ಆಗಸ್ಟ್​​ 22ರಿಂದ ವೆಸ್ಟ್​ ಇಂಡೀಸ್​ ವಿರುದ್ಧ ಆರಂಭಗೊಳ್ಳಲಿರುವ ಟೆಸ್ಟ್​ ಸರಣಿಗಾಗಿ ಬುಮ್ರಾ ಕೆರಿಬಿಯನ್​ ಪ್ರವಾಸ ಕೈಗೊಳ್ಳಬೇಕಾಗಿದ್ದು, ಹೀಗಾಗಿ ಇಂದು ಮನೆಯಲ್ಲಿ ಸಹೋದರಿಯಿಂದ ರಾಖಿ ಕಟ್ಟಿಸಿಕೊಂಡಿದ್ದಾರೆ. ಇದರ ಜತೆಗೆ ಎರಡು ಪೋಟೋ ಸಾಮಾಜಿಕ …

Read More »

ರಾಹುಲ್​ ದ್ರಾವಿಡ್​ ಗೆ ಕ್ಲೀನ್​​ ಚಿಟ್​ ನೀಡಿದ ಕ್ರಿಕೆಟ್​ ಸಲಹಾ ಸಮಿತಿ

ಮುಂಬೈ: ಅಂಡರ್​​​-19 ಹಾಗೂ ರಾಷ್ಟ್ರೀಯ ಕ್ರಿಕೆಟ್​ ಅಕಾಡೆಮಿ ನಿರ್ದೇಶಕರಾಗಿರುವ ರಾಹುಲ್​ ದ್ರಾವಿಡ್​ಗೆ ಭಾರತೀಯ ಕ್ರಿಕೆಟ್​ ಮಂಡಳಿ ನೋಟಿಸ್​​ ಜಾರಿ ಮಾಡಿರೋದಕ್ಕೆ ಸಾಕಷ್ಟು ಟೀಕೆ ವ್ಯಕ್ತವಾಗಿತ್ತು. ಇದೇ ವಿಷಯದ ವಿಚಾರಣೆ ನಡೆಸಿರುವ ಸುಪ್ರೀಂಕೋರ್ಟ್​​ ನೇತೃತ್ವದ ಕ್ರಿಕೆಟ್ ಸಲಹಾ ಸಮಿತಿ ಕ್ಲೀನ್​​ ಚಿಟ್​ ನೀಡಿದೆ.ರಾಷ್ಟ್ರೀಯ ಕ್ರಿಕೆಟ್​ ಅಕಾಡೆಮಿ ನಿರ್ದೇಶಕರಾಗಿರುವ ರಾಹುಲ್​ ದ್ರಾವಿಡ್​​ ಇಂಡಿಯಾ ಸಿಮೆಂಟ್​​​​​​ನ ಉಪಾಧ್ಯಕ್ಷರಾಗಿರುವ ಕಾರಣ ಬಿಸಿಸಿಐ ಸ್ವಹಿತಾಸಕ್ತಿ ಸಂಘರ್ಷ ನಿಯಮ ಉಲ್ಲಂಘನೆ ಮಾಡಿರುವ ಆರೋಪದ ಮೇಲೆ ನೋಟಿಸ್​​ ಜಾರಿ ಮಾಡಲಾಗಿತ್ತು. …

Read More »

ಗೆಲುವಿನ ನಗೆ ಬೀರುವಲ್ಲಿ ಯಡವಿದ ಬುಲ್ಸ್​

ಅಹಮದಾಬಾದ್‌:ಬೆಂಗಳೂರು ಬುಲ್ಸ್​ನ ಪವನ್​ ಶೆರಾವತ್​ ಅವರ ಭರ್ಜರಿ ಪ್ರದರ್ಶನದ ಹೊರತಾಗಿಯೂ ಸೋಮವಾರ ನಡೆದ ಯುಪಿ ಯೋಧ ವಿರುದ್ಧ 35-33 ಅಂಕಳಿಂದ ಸೋಲು ಕಂಡಿದೆ.ಇಡೀ ಟೂರ್ನಿಯಲ್ಲಿ ಬೆಂಗಳೂರಿನ ಪರ ಪವನ್​ ಏಕಾಂಗಿ ಹೋರಾಟ ನಡೆಸುತ್ತಿದ್ದಾರೆ. ಗೆಲುವಿಗಾಗಿ ಹೆಚ್ಚು ಅವರನ್ನೇ ನಂಬಿಕೊಂಡಿರುವುದೇ ತಂಡಕ್ಕೆ ಹಿನ್ನಡೆಯಾಗುತ್ತಿದೆ. ಶನಿವಾರ ಹರಿಯಾಣ ವಿರುದ್ಧ ಮುಗ್ಗರಿಸಿದ್ದ ಬುಲ್ಸ್​ ಯೋಧ ವಿರುದ್ಧವೂ 33-30ರ ಅಂತರದಿಂದ ಮತ್ತೆ ಸೋಲುಕಂಡಿದೆ.ಬೆಂಗಳೂರು ತಂಡದ ಪರ ನಾಯಕ ರೋಹಿತ್‌ ಕುಮಾರ್‌ ವೈಫಲ್ಯವೇ ಸೋಲಿಗೆ ಪ್ರಮುಖ ಕಾರಣವಾಯಿತು. …

Read More »

2.5 ಕಿಮೀ ಪ್ರವಾಹದಲ್ಲಿ ಈಜಿ, ಬಾಕ್ಸರ್​ನಲ್ಲಿ ಬೆಳ್ಳಿ ಪದಕವನ್ನು ಗೆದ್ದನಿಶಾನ್​ ಮನೋಹರ್​​ ಕದಂ

ಬೆಂಗಳೂರು:ಮನಸಿದ್ದರೆ ಮಾರ್ಗ ಎಂಬ ಒಂದು ಮಾತಿದೆ. ಈ ಮಾತನ್ನು ಅದೆಷ್ಟು ಜನ ನಿಜ ಮಾಡ್ತಾರೋ ಗೊತ್ತಿಲ್ಲ. ಆದ್ರೆ ಇಲ್ಲೋರ್ವ ಛಲ ಬಿಡದ ಯುವಕ ಈ ಮಾತನ್ನು ಸಾಬೀತು ಮಾಡಿದ್ದಾನೆ.ಬೆಳಗಾವಿ ಜಿಲ್ಲೆ ಮನ್ನೂರು ಗ್ರಾಮದ ನಿಶಾನ್​ ಮನೋಹರ್​​ ಕದಂ ಎಂಬ ಬಾಕ್ಸರ್​ ಕ್ರೀಡಾಪಟು 45 ನಿಮಿಷಗಳಲ್ಲಿ 2.5 ಕಿಮೀ ಪ್ರವಾಹದ ನೀರಿನಲ್ಲಿ ಈಜಿ ಹೋಗಿ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ.ಹೌದು, ಆಗಸ್ಟ್​​ 7ರಂದು ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಬಾಕ್ಸಿಂಗ್​ ಚಾಂಪಿಯನ್​ಶಿಪ್​ ಇತ್ತು. ಆದರೆ …

Read More »
You cannot copy content of this page
Click to listen highlighted text!