Welcome to bigtvnews   Click to listen highlighted text! Welcome to bigtvnews
Breaking News

ಬೆಂಗಳೂರು

ಅಪ್ಪು ಕುಟುಂಬಕ್ಕೆ ಆದಿಚುಂಚನಗಿರಿ ಶ್ರೀಗಳಿಂದ ಸಾಂತ್ವನ

ಬೆಂಗಳೂರು: ಸ್ಯಾಂಡಲ್‍ವುಡ್ ನಟ ದಿ. ಪುನೀತ್ ರಾಜ್ ಕುಮಾರ್ ಅವರ ಕುಟುಂಬವನ್ನು ಭೇಟಿಯಾಗಿ ಆದಿಚುಂಚನಗಿರಿ ಶ್ರೀಗಳು ಸಾಂತ್ವನ ಹೇಳಿದ್ದಾರೆ. ಇಂದು ಪುನೀತ್ ರಾಜ್‍ಕುಮಾರ್ ನಿವಾಸಕ್ಕೆ ಆಗಮಿಸಿದ ಆದಿಚುಂಚನಗಿರಿ ಶ್ರೀಗಳು ಅಪ್ಪು ಕುಟುಂಬಕ್ಕೆ ಸಾಂತ್ವನ ಹೇಳಿ ಧೈರ್ಯ ತುಂಬಿದರು. ಬಳಿಕ ಮಾತನಾಡಿದ ಅವರು, ಕನ್ನಡ ಕಲಾ ಕ್ಷೇತ್ರಕ್ಕೆ ಪುನೀತ್ ರಾಜ್‍ಕುಮಾರ್ ಅವರು ನೀಡಿದ ಕೊಡುಗೆ ಅಪಾರ. ಮೊದೊಲಿನಿಂದಲೂ ರಾಜ್‍ಕುಮಾರ್ ಕುಟುಂಬಕ್ಕೆ ಮತ್ತು ಮಠಕ್ಕೆ ಅವಿನಾಭಾವ ಸಂಬಂಧ ಇದೆ ಎಂದರು. ರಾಜ್‍ಕುಮಾರ್ ಕುಟುಂಬದ ಕುಡಿ …

Read More »

ಕೋವಿಡ್ ಹೆಚ್ಚಳದಿಂದ ಕಠಿಣ ಕ್ರಮ ಅನಿವಾರ್ಯ: ಲಾಕ್ ಡೌನ್ ಪ್ರಸ್ತಾಪವಿಲ್ಲ ಸಿಎಂ ಬೊಮ್ಮಾಯಿ

ಹುಬ್ಬಳ್ಳಿ: ಕೋವಿಡ್ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯವಾಗಿದೆ. ಈ ಬಗ್ಗೆ ಆರೋಗ್ಯ ಸಚಿವರಿಗೂ ಸೂಚನೆ ನೀಡಿದ್ದೇನೆ. ಲಾಕ್ ಡೌನ್ ಪ್ರಸ್ತಾಪ ಇಲ್ಲ. ಲಾಕ್ ಡೌನ್ ಮಾಡುವುದಿಲ್ಲ. ಕ್ರಿಸ್ ಮಸ್ ಹಾಗೂ ಹೊಸ ವರ್ಷ ಸಂಭ್ರಮಾಚರಣೆ ವೇಳೆ ನಿರ್ಬಂಧ ಹೇರುವ ಬಗ್ಗೆ ತೀರ್ಮಾನ ಮಾಡಿಲ್ಲ ಎಂದು ಸಿಎಂ‌ ಬಸವರಾಜ ಬೊಮ್ಮಾಯಿ ಹೇಳಿದರು. ಬಸವರಾಜ್ ಬೊಮ್ಮಾಯಿ(ಮುಖ್ಯಮಂತ್ರಿಗಳು) ನಗರದ ವಿಮಾನ ನಿಲ್ದಾಣದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ನಾನು ಖಾಸಗಿ …

Read More »

ಹುಬ್ಬಳ್ಳಿ ಮೂಲದ ವ್ಯಕ್ತಿ ಅರಸಿಕೇರೆಯಲ್ಲಿ ನೇಣಿಗೆ ಶರಣು

ಬೆಂಗಳೂರು : ಹುಬ್ಬಳ್ಳಿ ಮೂಲದ ಲಾರಿ ಚಾಲನೊಬ್ಬ ಬೆಂಗಳೂರಿನ ಅರಸಿಕೇರಿಯಲ್ಲಿ ಭಾನುವಾರದಂದು ನೇಣಿಗೆ ಶರಣಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬೆಂಗಳೂರಿನ ಅರಸಿಕೇರಿ ಬಳಿ ರಸ್ತೆ ಬದಿಯಲ್ಲಿ ಲಾರಿ ನಿಲ್ಲಸಿ ಪಕ್ಕದಲ್ಲಿರುವ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ, ಮೃತ ವ್ಯಕ್ತಿ ಲಾರಿ‌ಚಾಲಕನಾಗಿದ್ದು KA25 AA 7128 ನಂಬರ ಹೊಂದಿದ್ದು, ಹುಬ್ಬಳ್ಳಿ ಮೂಲದವನೆಂದು ಶಂಕೆ ವ್ಯಕ್ತವಾಗಿದೆ ಎಂದು ಹೇಳಲಾಗ್ತಿದೆ.ಈ ಕುರಿತು ಸ್ಥಳಕ್ಕೆ ಪೋಲೀಸರು ಭೇಟಿ ನೀಡಿ ಪರಿಶೀಲನೆ ನೆಡೆಸಿದ್ದಾರೆ‌.

Read More »

ಬೆಂಗಳೂರಲ್ಲಿ ಬಾಯ್ಬಿಟ್ಟ ರಸ್ತೆಗಳಿಗೆ ಪೂಜೆ

ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಮಳೆಯ ನಂತರ ಸಾಕಷ್ಟು ರಸ್ತೆಗಳು ಬಾಯ್ಬಿಟ್ಟಿವೆ. ಇದರಿಂದ ಹಲವಾರು ಅಪಘಾತ ಸಂಭವಿಸಿ ಪ್ರಾಣಾಹುತಿ ಪಡೆದುಕೊಳ್ಳುತ್ತಿವೆ. ರಸ್ತೆ ಗುಂಡಿಗಳನ್ನು ಮುಚ್ಚಿಸದ ಬಿಬಿಎಂಪಿಯ ವಿರುದ್ಧ ನಗರದಲ್ಲಿ ಜನರು ರಸ್ತೆಗುಂಡಿಗಳ ಸುತ್ತ ರಂಗೋಲಿ ಹಾಕಿ, ಹೂವಿನಿಂದ ಅಲಂಕರಿಸಿ, ಆರತಿ ಮಾಡಿ ಪೂಜೆ ಸಲ್ಲಿಸುವುದರ ಮೂಲಕ ವಿನೂತನವಾಗಿ ಪ್ರತಿಭಟಿಸಿ ಗಮನ ಸೆಳೆದರು. ಗುಂಡಿದೇವರಿಗೆ ಹೂವಿನಲಂಕಾರ, ಆರತಿ ನಗರದ ಕಾಕ್ಸ್‌ಟೌನ್ ಚಾರ್ಲ್ಸ್ ಕಾಂಪ್​ಬೆಲ್ ಮುಖ್ಯ ರಸ್ತೆಯಲ್ಲಿ ಜನರು ಈ ವಿನೂತನ ಪ್ರತಿಭಟನೆ …

Read More »

ಸಿದ್ಧು, ಡಿಕೆಶಿ ವಿರುದ್ಧ ಗುಡುಗಿದ ಕೆ.ಎಸ್.ಈಶ್ವರಪ್ಪ: ಅವರು ಹೇಳುವುದೆಲ್ಲ ಬರಿ ಸುಳ್ಳು…!

ಹುಬ್ಬಳ್ಳಿ: ಮಾಜಿ ಸಿಎಂ ಸಿದ್ಧರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಹೇಳುವುದೆಲ್ಲ ಬರಿ ಸುಳ್ಳು. ಸಿದ್ಧರಾಮಯ್ಯ ಹಿಂದುಳಿದ ವರ್ಗದವರಿಗೆ ಏನು ಮಾಡಲಿಲ್ಲ. ಸಿದ್ಧರಾಮಯ್ಯನವರು ಬರಿ ಘೋಷಣೆ ಮಾಡಿದ್ದರು. ಗ್ರಾಮೀಣ ಭಾಗದ ಜನರು ಸಿದ್ದರಾಮಯ್ಯ ಹಿಂದುಳಿದವರಿಗೆ ಏನೂ ಮಾಡಲಿಲ್ಲ ಅಂತಾ ಹೇಳ್ತಾ ಇದಾರೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿ ಕಾರಿದರು. ಕೆ.ಎಸ್.ಈಶ್ವರಪ್ಪ ನಗರದಲ್ಲಿಂದು ಬಿಜೆಪಿ ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆ ಮಾಧ್ಯಮದ ಜೊತೆಗೆ ಮಾತನಾಡಿದ ಅವರು,ಕಾಂಗ್ರೆಸ್ ನಾಯಕರಿಗೆ ಕೇಳಲು ಬಯಸುವೆ. ನೀವೂ …

Read More »

ಮಳೆಯಲ್ಲಿ ಮುಳುಗಿದ ತೂತುಕುಡಿ, ದೇವಾಲಯಗಳ ನಾಡು ರಾಮೇಶ್ವರಂಗೆ ಭಕ್ತಸಾಗರ ಭೇಟಿ, ಚೆನ್ನೈಗೆ ‘ಆರೆಂಜ್​’

ಚೆನ್ನೈ: ತಮಿಳುನಾಡಿನ ತೂತುಕುಡಿ ಸೇರಿದಂತೆ ತಿರುಚೆಂದೂರು ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಸಂಪೂರ್ಣ ಜಲಾವೃತಗೊಂಡಿದೆ. ಅಷ್ಟೇ ಅಲ್ಲದೇ ರಾಮನಾಥಪುರಂ ಜಿಲ್ಲೆಗಳು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಗುರುವಾರ ಭಾರಿ ಮಳೆಯಾಗಿದೆ. ಇಂದು ಮತ್ತು ನಾಳೆ ಚೆನ್ನೈಗೆ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ‘ಆರೆಂಜ್’ ಅಲರ್ಟ್ ಘೋಷಿಸಿದೆ. ರಾಮನಾಥಪುರಂ ಜಿಲ್ಲಾಧಿಕಾರಿ ಪರಮಕುಡಿ ಸೇರಿದಂತೆ ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ತಗ್ಗು ಪ್ರದೇಶಗಳ ಪರಿಸ್ಥಿತಿ ಕುರಿತು ಸಭೆ ನಡೆಸಿದರು. ಆರ್.ಎಸ್. ಮಂಗಳಂ ಕಂದಾಯ ಮತ್ತು …

Read More »

ರಾಜ್ಯಾದ್ಯಂತ ಭ್ರಷ್ಟರಿಗೆ ಬಲೆ.. ಕೋಟ್ಯಂತರ ಮೌಲ್ಯದ ಚಿನ್ನಾಭರಣ ಪತ್ತೆ, ಮುಂದುವರೆದ

ಬೆಂಗಳೂರು: ಅಧಿಕಾರ ಪ್ರಭಾವ ಬಳಸಿ ಅಕ್ರಮ ಆಸ್ತಿ ಗಳಿಕೆ ಆರೋಪದಡಿ‌ ಇಂದು ಬೆಳ್ಳಂಬೆಳ್ಳಗೆ ರಾಜ್ಯದೆಲ್ಲೆಡೆ 15 ಸರ್ಕಾರಿ ಅಧಿಕಾರಿಗಳ ಮನೆ-ಕಚೇರಿ ಸೇರಿದಂತೆ 60 ಕಡೆಗಳಲ್ಲಿ ದಾಳಿ ನಡೆಸಿರುವ ಅಧಿಕಾರಿಗಳು ಪರಿಶೀಲನೆ ಚುರುಕುಗೊಳಿಸಿದ್ದಾರೆ. ಮೂವರು ಎಸ್ಪಿಗಳ ನೇತೃತ್ವದಲ್ಲಿ 400ಕ್ಕೂ ಹೆಚ್ಚು ಮಂದಿ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗ ವಿಶೇಷ ತಂಡಗಳಾಗಿ ಪ್ರತ್ಯೇಕ ಕಡೆಗಳಲ್ಲಿ ರಾಜ್ಯಾದ್ಯಂತ ದಾಳಿ ನಡೆಸಿ, ಶೋಧ ನಡೆಸುತ್ತಿದ್ದಾರೆ. ದಾಳಿ ವೇಳೆ ಹಲವರ ಮನೆಯಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ …

Read More »

ರಮೇಶ ಅರವಿಂದ ಅಭಿನಯದ‌ 100 ಚಿತ್ರ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ

ಹುಬ್ಬಳ್ಳಿ: ಸೂರಜ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಉಮಾ ಹಾಗೂ ಎಂ.ರಮೇಶ ರೆಡ್ಡಿ ನಿರ್ಮಾಣಗೊಂಡಿರುವ 100 ಶೀರ್ಷಕೆಯ ಕನ್ನಡ ಚಿತ್ರ ಇದೇ 19ರಂದು ರಾಜ್ಯಾದ್ಯಂತ ಬಿಡುಗಡೆಯಾಗಿದ್ದು, ಉತ್ತಮ ಪ್ರದರ್ಶನ ಕಾಣುತ್ತಿದೆ ಎಂದು ನಟ ಹಾಗೂ ಚಿತ್ರ ನಿರ್ದೇಶಕ ರಮೇಶ ಅರವಿಂದ ಹೇಳಿದರು. ಮಾದ್ಯಮದ ಜೊತೆ ಮಾತನಾಡಿದ ಅವರು, ಚಿತ್ರದ ನಿರ್ದೇಶನವನ್ನು ಮಾಡುವ ಮೂಲಕ ಚಿತ್ರದಲ್ಲಿ ನನ್ನ ಎಲ್ಲ ಶಕ್ತಿಯನ್ನು ಹಾಕಿ ನಟಿಸಿದ್ದೇನೆ ಎಂದರು. ಚಿತ್ರದಲ್ಲಿ ರಚಿತಾ ರಾಮ್, ಪೂರ್ಣ, ವಿಶ್ವಕರ್ಣ, ಮಾಲತಿ …

Read More »
You cannot copy content of this page
Click to listen highlighted text!