Breaking News

ಚಿಕ್ಕಮಗಳೂರು

ಮರ್ಡರ್ :ಹಣಕಾಸಿನ ವಿಚಾರಕ್ಕೆ ಯುವಕನ ಬರ್ಬರ ಕೊಲೆ!

ಅಮೃತಾಪುರ ಗ್ರಾಮದ ಸೇವಾಲಾಲ್ ಸಂಘದ ಚೀಟಿ ವ್ಯವಹಾರದಲ್ಲಿ ಇಬ್ಬರ ನಡುವೆ ಗಲಾಟೆಯಾಗಿದೆ. ಗಲಾಟೆ ವೇಳೆ ರುದ್ರೇಶ್, ಸಂಜುನಾಯ್ಕನ ತಲೆ ಮೇಲೆ ದೊಣ್ಣೆಯಿಂದ ಹಲ್ಲೆ ಮಾಡಿದ್ದಾನೆ. ಪರಿಣಾಮ ಗಂಭೀರ ಗಾಯಗೊಂಡು ರಕ್ತಸ್ರಾವದಿಂದ ಯುವಕ ಸಾವಿಗೀಡಾಗಿದ್ದಾನೆ.ಸಂಜುನಾಯ್ಕ ಮೃತ ದುರ್ದೈವಿ. ರುದ್ರೇಶ್ ನಾಯ್ಕ ಹತ್ಯೆಗೈದ ಆರೋಪಿಯಾಗಿದ್ದಾನೆ. ತರೀಕೆರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಸ್ಥಳ ಪರಿಶೀಲನೆ ನಡೆಸಿದ್ದಾರೆ. ಆರೋಪಿ ರುದ್ರೇಶ್ ನಾಯ್ಕನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Read More »

ವಿದ್ಯುತ್ ತಂತಿ ಸ್ಪರ್ಶಿಸಿ ರೈಲು ಚಾಲಕ ಸಾವು, ರೈಲು ತಡವಾಯ್ತೆಂದು ಹೃದಯಾಘಾತ!!

ತರೀಕೆರೆಯ ಶಿವಪುರ ರೈಲ್ವೆ ಲೆವೆಲ್ ಕ್ರಾಸಿಂಗ್ ನಲ್ಲಿ ವಿದ್ಯುತ್‌ ತಂತಿ ಸ್ಪರ್ಶಿಸಿ ಟಿಪ್ಪ‌ರ್ ಹೊತ್ತಿ ಉರಿದಿದ್ದು, ಬಿಹಾರ ಮೂಲದ ಚಾಲಕ ಬೆಂಕಿ ತಗುಲಿ ಸಾವನ್ನಪ್ಪಿದ್ದಾರೆ.ರೈಲ್ವೆ ಹಳಿಯ ಮೇಲೆ ಟಿಪ್ಪ‌ರ್ ನಿಂತ ಕಾರಣ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಿದ್ದು, ನಿಂತಿದ್ದ ರೈಲಿನಲ್ಲಿ ವೃದ್ಧರೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.ಟಿಪ್ಪರ್ ಗೆ ಬೆಂಕಿ ಹತ್ತಿಕೊಂಡ ಪರಿಣಾಮ ರೈಲು ಸಂಚಾರಕ್ಕಾಗಿ ಅಳವಡಿಸಿದ್ದ ವಿದ್ಯುತ್ ತಂತಿಗಳು ತುಂಡಾಗಿ ಬಿದ್ದಿವೆ. ಇದರಿಂದಾಗಿ ಶಿವಮೊಗ್ಗದಿಂದ ಯಶವಂತಪುರಕ್ಕೆ ತೆರಳುತ್ತಿದ್ದ ಜನ ಶತಾಬ್ದಿ ಮತ್ತು …

Read More »

ಚಾಲಕನ ನಿಯಂತ್ರಣ ತಪ್ಪಿದ ಸರ್ಕಾರಿ ಬಸ್ಸೊಂದು ರಸ್ತೆ ಪಕ್ಕದ ಮನೆಯ ಮೇಲೆ ಪಲ್ಟಿ!!

ಬಸ್ಸು ಬೆಂಗಳೂರಿನಿಂದ ಶೃಂಗೇರಿಗೆ ಬರುತ್ತಿದ್ದು ಈ ವೇಳೆ ಬಸ್ಸಿನಲ್ಲಿ ಸುಮಾರು 50 ಮಂದಿ ಪ್ರಯಾಣಿಕರಿದ್ದರು ಕೊಪ್ಪ ತಾಲೂಕಿನ ಜಲದುರ್ಗ ತಲುಪುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಮನೆಯ ಮೇಲೆ ಪಲ್ಟಿಯಾಗಿದೆ. ಘಟನೆಯಲ್ಲಿ ಸುಮಾರು 20 ಮಂದಿಗೆ ಗಾಯಗಳಾಗಿದ್ದು ಅವರನ್ನು ಜಯಪುರ, ಕೊಪ್ಪ ಆಸ್ಪತ್ರೆಗೆ ದಾಖಲಿಸಲಾಗಿದೆ. ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ತುಂಗಾ ನದಿಯಲ್ಲಿ ಈಜಲು ತೆರಳಿದ್ದ ಯುವಕ ನಾಪತ್ತೆ!

ಸ್ನೇಹಿತರ ಜೊತೆಗೆ ನದಿಯಲ್ಲೂ ಈಚಲು ತೆರಳಿದ್ದಾಗ ಈ ಒಂದು ಘಟನೆ ಸಂಭವಿಸಿದೆ. ಚಿಕ್ಕಮಗಳೂರು ಜಿಲ್ಲೆಯ ಈಗಾಗಲೇ ಹಲವೆಡೆ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ತುಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ನಾಪತ್ತೆಯಾಗಿರುವ ಯುವಕನಿಗಾಗಿ ಇದೀಗ ಶೋಧ ಕಾರ್ಯ ಮುಂದುವರಿದಿದೆ.ತುಂಗಾ ನದಿಯಲ್ಲಿ ಮನೋಜ್ ನಾಪತ್ತೆಯಾಗಿರುವ ಯುವಕ ಎಂದು ತಿಳಿದು ಬಂದಿದೆ.

Read More »

ಮುಂದಿನ ಐದು ದಿನಗಳಲ್ಲಿ ಗುಡುಗು ಸಹಿತ ಮಳೆ

ದಗದಗ ಬಿಸಿಲಿನ ನಡುವೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ ಐದು ದಿನಗಳಲ್ಲಿ ಗುಡುಗು ಸಹಿತ ಮಳೆ ಅಗಲಿದ್ದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ. ಉತ್ತರ ಕನ್ನಡ. ದಕ್ಷಿಣ ಕನ್ನಡ. ಉಡುಪಿ ಹಾಗೂ ದಕ್ಷಿಣ ಒಳನಾಡು , ಮಲೆನಾಡು ಭಾಗದ ಚಿಕ್ಕಮಂಗಳೂರು. ಕೊಡಗು. ಶಿವಮೊಗ್ಗ. ಹಾಸನ. ಮೈಸೂರು. ಚಾಮರಾಜನಗರ ಜಿಲ್ಲೆಗಳಲ್ಲಿ ಹಗುರದಿಂದಲೇ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ.

Read More »

ಗುಂಡು ಹಾರಿಸಿ, ಮೂವರನ್ನು ಕೊಂದು ಆತ್ಮಹತ್ಯೆಗೆ ಶರಣಾದ ವ್ಯಕ್ತಿ.!

ಪತ್ನಿ ಬಿಟ್ಟು ಹೋಗಿದ್ದಕ್ಕೆ ಬೇಸತ್ತ ವ್ಯಕ್ತಿಯೊಬ್ಬ ತನ್ನ ಮಗಳು ಸೇರಿದಂತೆ ಮೂವರನ್ನು ಗುಂಡಿಕ್ಕಿ ಕೊಲೆ ಮಾಡಿ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಂಗಳವಾರ ರಾತ್ರಿ ಚಿಕ್ಕಮಗಳೂರು ಖಾಂಡ್ಯ ಹೋಬಳಿ ಮಾಗಲು ಗ್ರಾಮದಲ್ಲಿ ಘಟನೆ ನಡೆದಿದೆ.ಕೊಲೆ ಮಾಡಿದ ಬಳಿಕ ಸೆಲ್ಫಿ ವಿಡಿಯೋ ಮಾಡಿ ರತ್ನಾಕರ್ ಸಾಮಾಜಿಕ ಜಾಲತಾಣಗಳಿಗೆ ಹಾಕಿದ್ದಾನೆ.

Read More »

ಪಾಳು ಬಿದ್ದ ಬಸ್ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬ, ನೇಣು ಬಿಗಿದುಕೊಂಡು ಆತ್ಮಹತ್ಯೆ.!

ಚಿಕ್ಕಮಗಳೂರು ನಗರದ ಕೆಂಪನಹಳ್ಳಿ ನಿವಾಸಿಯಾಗಿರುವ ಮೋಹನ್, 6 ವರ್ಷಗಳ ಹಿಂದೆ ಯುವತಿಯೊಬ್ಬಳನ್ನು ಪ್ರೀತಿಸಿ ಮದುವೆಯಾಗಿದ್ದ.ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಲಕ್ಯಾ ಬಳಿ ಈ ಒಂದು ಘಟನೆ ನಡೆದಿದೆ. ಚಿಕ್ಕಮಗಳೂರು ಮೆಡಿಕಲ್ ಶಾಪ್ ನಲ್ಲಿ ಮೋಹನ್ ಕೆಲಸ ಮಾಡುತ್ತಿದ್ದ. ಈ ಕುರಿತು ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಚಿಕ್ಕಮಂಗಳೂರ್ : ಪ್ಲಾಸ್ಟಿಕ್ ತಿಂದು ಪ್ರಾಣ ಬಿಟ್ಟ ಗೂಳಿ.

ಚಿಕ್ಕಮಂಗಳೂರು ನಗರದ ವಿಜಯಪುರ ಮುಖ್ಯ ರಸ್ತೆಯಲ್ಲಿ ಸುಮಾರು 25 ಕೆಜಿಗು ಹೆಚ್ಚು ತೂಕದ ಪ್ಲಾಸ್ಟಿಕ್ ಅನ್ನು ತಿಂದ 15 ವರ್ಷದ ಗೂಳಿಯೊಂದು ಮೃತಪಟ್ಟಿದೆ. ಗೂಳಿ ಹೊಟ್ಟೆ ಊದಿ ಮಲಗಿರುವುದನ್ನು ಕಂಡು ಹಲವರು ಚಿಕಿತ್ಸೆಗೆ ಮುಂದಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ. ಸರಕಾರಿ ಪಶು ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿ ಗೂಳಿ ಹೊಟ್ಟೆಯಲ್ಲಿದ್ದ ಪ್ಲಾಸ್ಟಿಕ್ ಹೊರ ತೆಗೆದರು.

Read More »

ಚಿಕ್ಕಮಗಳೂರಿನ ಖಾಸಗಿ ರೆಸಾರ್ಟ್ ಈಜುಕೊಳದಲ್ಲಿ ಬಿದ್ದು ದುರ್ಮರಣ

ಮಡಿಕೇರಿ ಕುಶಾಲನಗರ ಮೂಲದ ಪ್ರವಾಸಿ ನಿಶಾಂತ್ ಚಿಕ್ಕಮಗಳೂರಿನ ಖಾಸಗಿ ರೆಸಾರ್ಟ್ ಈಜುಕೊಳದಲ್ಲಿ ಬಿದ್ದು ದುರ್ಮರಣ ಹೊಂದಿದ್ದಾರೆ. ಈಜಲೆಂದು ಈಜುಕೊಳಕ್ಕೆ ಹಾರಿದ ಸಂದರ್ಭ ತಲೆ ಟ್ವಿಸ್ಟ್ ಆಗಿ ಈಜುಕೊಳದಲ್ಲೇ ಅವರು ಸಾವಿಗೀಡಾಗಿದ್ದಾರೆ.ನೀರಿಗೆ ಹಾರಿದ ನಂತರ ನಿಶಾಂತ್ ಕೈ ಕಾಲು ಆಡಿಸದ ಕಾರಣ ಸ್ನೇಹಿತ ಹಾಗೂ ಇತರರು ಮೇಲಕ್ಕೆತ್ತಿದ್ದರು. ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ

Read More »

ಪತ್ರ ಬರೆದಿಟ್ಟು ಸಾವಿಗೆ ಶರಣಾದ ಮಹಿಳೆ!ಕಾಫಿನಾಡಲ್ಲಿ ಘೋರ ಘಟನೆ.

ಚಿಕ್ಕಮಗಳೂರು ತಾಲೂಕಿನ ಭಕ್ತರಹಳ್ಳಿ ಗ್ರಾಮದಲ್ಲಿ ಜಯಂತಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ ದುರ್ದೈವಿಯಾಗಿದ್ದಾರೆ.ಜಯಂತಿ ವಿರುದ್ಧ ಗ್ರಾಮದ ಇಬ್ಬರು ಮಾಟಮಂತ್ರ ಮಾಡಿರುವ ಆರೋಪ ಮಾಡಿದ್ದಾರೆ.10 ವರ್ಷದ ಹಿಂದೆ ಮಂಜುನಾಥ್ ನನ್ನು ಮದುವೆಯಾಗಿದ್ದ ಜಯಂತಿ ಇದೀಗ ವಾಮಾಚಾರದ ಆರೋಪದ ಹಿನ್ನೆಲೆಯಲ್ಲಿ ಡೆತ್ ನೋಟ್ ಬರೆದಿಟ್ಟು ಸೂಸೈಡ್‌ ಮಾಡಿಕೊಂಡಿದ್ದಾರೆ. ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »