Breaking News

ವಿಜಯಪುರ

ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ವ್ಯಕ್ತಿಯೋರ್ವ ಕೃಷ್ಣಾ ನದಿಗೆ ಹಾರಿ ಆತ್ಮಹತ್ಯೆ!!

ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನ ಆಲಮಟ್ಟಿ ಡ್ಯಾಮ್ ನ ಮುಂಭಾಗದ ಸೇತುವೆ ಮೇಲಿಂದ ನದಿಗೆ ಹಾರಿದ್ದಾನೆ. ರವಿ ಬಾಗಲಕೋಟೆ ತಾಲುಕಿನ‌ ಮುಚಖಂಡಿ‌ ಗ್ರಾಮದ ನಿವಾಸಿಯಾಗಿದ್ದು, ಮನೆಯಲ್ಲಿ‌ ಜಗಳ ಮಾಡಿಕೊಂಡು‌ ನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ. ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ನಿಡಗುಂದಿ‌ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Read More »

ವಿಜಯಪುರ: ಖಾಸಗಿ ಆಸ್ಪತ್ರೆಯಲ್ಲಿ ನೇಣು ಬಿಗಿದುಕೊಂಡು ವೈದ್ಯ ಆತ್ಮಹತ್ಯೆಗೆ ಶರಣು.!

ಆತ್ಮಹತ್ಯೆಗೆ ಶರಣಾದವರನ್ನು ವೈದ್ಯ ಡಾ ರಾಜಶೇಖರ್ ಮುಚ್ಚಂಡಿ ಎಂದು ಗುರುತಿಸಲಾಗಿದೆ. ವಿಜಯಪುರ ಜಿಲ್ಲೆಯ ತಾಳಿಕೋಟೆ ಪಟ್ಟಣದಲ್ಲಿರುವ ಶ್ರೀ ಸಾಯಿ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ. ಡಾ.ರಾಜಶೇಖರ್ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದರು. . ತಾಳಿಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಡಾ.ರಾಜಶೇಖರ್ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Read More »

ಕೆರೆಯಲ್ಲಿ ಈಜಲು ತೆರೆಳಿದ್ದ ಇಬ್ಬರು ಯುವಕರು ನೀರು ಪಾಲು.

ವಿಜಯಪುರ ನಗರದ ಆರು ಜನ ಯುವಕರು ಈಜಾಡಲು ಕುಮಟಗಿ ಕೆರೆತೆ ತೆರಳಿದ್ದರು. ಆರು ಜನ ಯುವಕರು ಈಜಾಡುವ ವೇಳೆ ಇಬ್ಬರು ನೀರು ಪಾಲಾಗಿದ್ದಾರೆ. ನಾಲ್ವರು ಯುವಕರು ಈಜಿ ದಡ ಸೇರಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಮೃತ ಇಬ್ಬರಲ್ಲಿ, ಓರ್ವ ಯುವಕನನ್ನು ಕೆರೆಯಿಂದ ಹೊರ ತೆಗೆದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ದುರಾದೃಷ್ಟಕ್ಕೆ ಯುವಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ನೀರಲ್ಲಿ ಮುಳುಗಿರುವ ಮತ್ತೋರ್ವ ಯುವಕನಿಗಾಗಿ ಶೋಧ ಕಾರ್ಯ ನಡೆದಿದೆ. ವಿಜಯಪುರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ …

Read More »

ಅಪಘಾತ : ನಿಯಂತ್ರಣ ತಪ್ಪಿ ಈರುಳ್ಳಿ ಸಾಗಿಸುತ್ತಿದ್ದ ಕ್ಯಾಂಟರ್ ಪಲ್ಟಿ

ಕೊಲ್ಹಾರದಿಂದ ಆಲಮಟ್ಟಿ ಮೂಲವಾಗಿ ಬಂಗಾರಪೇಟೆಗೆ ಹೋಗುತ್ತಿದ್ದ ಈರುಳ್ಳಿ ತುಂಬಿದ್ದ ಕ್ಯಾಂಟರ್‌, ಎಂಟ್ರನ್ಸ್ ಪ್ಲಾಜಾ ಎದುರಿನಲ್ಲಿರುವ ಇಳಿಜಾರು ಪ್ರದೇಶದಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ನಿಂತಿದ್ದ ಕಾರು ಮತ್ತು ಕ್ರೂಸರ್ ವಾಹನಕ್ಕೆ ಡಿಕ್ಕಿಯಾಗಿ ಪಲ್ಟಿಯಾಗಿದೆ.ಆಲಮಟ್ಟಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕ್ಯಾಂಟರ್ ಪಲ್ಟಿಯಾಗಿದ್ದು ಈರುಳ್ಳಿ ತುಂಬಿದ್ದ ಚೀಲಗಳು ರಸ್ತೆ ತುಂಬೆಲ್ಲಾ ಬಿದ್ದಿರುವುದು

Read More »

ಯತ್ನಾಳ್ ರಾಜೀನಾಮೆಯಿಂದ ಮನನೊಂದಿದ್ದ ಅಭಿಮಾನಿ ಸಾವು!

ಯತ್ನಾಳ್ ಉಚ್ಚಾನೆಯಿಂದ ಮನನೊಂದಿದ್ದ ಸಂತೋಷ್ ತಟಗಾರ ನಿನ್ನೆಯಷ್ಟೇ ರಾಜೀನಾಮೆಯ ಕುರಿತು ಮಾತನಾಡಿದ್ದರು. ಇಂದು ಕಾರು ಮರಕ್ಕೆ ಗುದ್ದಿ ಸಾವಿಗೀಡಾಗಿದ್ದಾರೆ. ಬಸನಗೌಡ ಪಾಟೀಲ್ ಯತ್ನಾಳ್ ಈ ಸುದ್ದಿ ತಿಳಿದು ತಮ್ಮ ಎಕ್ಸ್ ಖಾತೆಯಲ್ಲಿ ಶ್ರದ್ಧಾಂಜಲಿ ತಿಳಿಸಿ, ಅವರ ಕುಟುಂಬದ ಜೊತೆ ನಿಲ್ಲುವುದಾಗಿ ಬರೆದುಕೊಂಡಿದ್ದಾರೆ.ಇಂದು ವಿಜಯಪುರ ನಗರದಲ್ಲಿ ಶಾಸಕ ಯತ್ನಾಳ ಬೆಂಬಲಿಗರು, ಅಭಿಮಾನಿಗಳು ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

Read More »

ವಿಜಯಪುರ : ಯತ್ನಾಳ ಉಚ್ಚಾಟನೆ, ಬಿಜೆಪಿ ಕಾರ್ಯಕರ್ತರಿಂದ ಸಂಭ್ರಮಾಚರಣೆ.

ಮೊದಲೇ ಈ ಕೆಲಸ ಆಗಬೇಕಿತ್ತು. ಕಳೆದ 10 ವರ್ಷಗಳಿಂದ ಪಕ್ಷವನ್ನು, ನಾಯಕರನ್ನು ಸುಸ್ತು ಮಾಡಿ, ಮುಜುಗರನ್ನು ಈಡುಮಾಡಿದ್ದರು. ಅವರ ಉಚ್ಚಾಟನೆಯಿಂದ ಪಕ್ಷಕ್ಕೆ ಯಾವುದೇ ಹಾನಿಯಾಗದು’ ಎಂದು ಹೇಳಿದರು.ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಉಚ್ಚಾಟನೆಯನ್ನು ಸ್ವಾಗತಿಸಿ, ಅವರ ಸ್ವಕ್ಷೇತ್ರ ವಿಜಯಪುರ ನಗರದಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.ನಗರದ ಶಿವಾಜಿ ವೃತ್ತ, ಗಾಂಧಿ ವೃತ್ತ, ಬಸವೇಶ್ವರ ವೃತ್ತ, ಸಿದ್ದೇಶ್ವರ ಗುಡಿ ಸೇರಿದಂತೆ ವಿವಿಧೆಡೆ ನೂರಾರು ಕಾರ್ಯಕರ್ತರು ಪಟಾಕಿ ಸಿಡಿಸಿ, ಘೋಷಣೆ …

Read More »

ಹೆಂಡತಿಯನ್ನು ಕೊಂದು, ಆತ್ಮಹತ್ಯೆಗೆ ಶರಣಾದ ಪತಿ.

ಹೆಂಡತಿ ಮೇಘಾ ಸಿದ್ದಪ್ಪ ಹರನಾಳ ಎಂಬವಳನ್ನು ಹತ್ಯೆ ಮಾಡಿ, ಜಮೀನು ಪಕ್ಕದ ತೆಗ್ಗಿನಲ್ಲಿ ಬಿಸಾಕಿದ ಗಂಡ ಸಿದ್ದಪ್ಪ ಮಲ್ಲಪ್ಪ ಹರನಾಳ ತಾನೂ ಹತ್ತಿರದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಹೊಲದಲ್ಲಿ ಯಾರೂ ಇಲ್ಲದ ವೇಳೆ ಗಂಡ ಹೆಂಡತಿ ಮಧ್ಯೆ ಕಲಹ ಉಂಟಾಗಿ, ಈ ದುರ್ಘಟನೆ ನಡೆದಿದೆ. ಸ್ಥಳಕ್ಕೆ ಪೋಲಿಸರ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮುದ್ದೇಬಿಹಾಳ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ

Read More »

ಕೊಡಗು ಮತ್ತು ಬಿಜಾಪುರದಳ್ಳಿ ಸುರಿದ ಆನೇಕಲ್ ಮಳೆ

ರಾಜ್ಯದ ಹಲವು ಜಿಲ್ಲೆಗಳಲ್ಲಿ ಸೂರ್ಯನ ಬಿಸಿಲಿಗೆ ಕಂಗೆಟ್ಟ ಜನರು ಬೆನ್ನಲ್ಲೇ ಇಂದು ಕೊಡಗು ಮತ್ತು ಬಿಜಾಪುರ ಜಿಲ್ಲೆಯಲ್ಲಿ ಆನೆಕಾಲು ಸಹಿತ ಮಳೆ ಸುರಿದಿದೆ. ಉತ್ತಮ ಮಳೆಯಿಂದ ಮಡಿಕೆರಿ ನಗರ ಸೆರಿದಂತೆ ಹಲವಡೆ ಗುಡುಗು ಸಿಡಿಲು ಸಹಿತ ಆನೆಕಳು ಮಳೆ ಸುರಿದಿದೆ.ಉತ್ತಮ ಮಳೆಯಿಂದ ಕಾಪಿ ಬೆಳೆಗಾರರು ಖುಷಿಯಾಗಿದ್ದಾರೆ . ಬಿಜಾಪುರ ಜಿಲ್ಲೆಯ ಮಲ್ಲೇಶ್ವರ ತಾಲೂಕಿನ ಸಂಗಾಪೂರು ಗ್ರಾಮದಲ್ಲಿ ಕೂಡ ಇಂದು ಅರ್ಧ ಗಂಟೆ ಸೇರಿ ಮಳೆ ಸುತರಿದಿದೆ.

Read More »

ನಿಯಮ ಉಲ್ಲಂಘಿಸಿದ್ದಕ್ಕಾಗಿಟ್ಯಾಂಕರ್ ಚಾಲಕನಿಗೆ ಆರು ತಿಂಗಳು ಜೈಲು.

ವಿಜಯಪುರ ಜಿಲ್ಲೆಯ ಮುದ್ದೆಬಿಹಾಳ ತಾಲ್ಲೂಕಿನ ಜಂಬಲದಿನ್ನಿ ಗ್ರಾಮದ ವೀರೇಶ ಶಾಂತಗೌಡ ಬಿರಾದಾರ ಟ್ಯಾಂಕರ್ ಚಾಲಕ ಶಿಕ್ಷೆಗೆ ಒಳಗಾದ ವ್ಯಕ್ತಿ. ಶಹಾಪುರ ತಾಲ್ಲೂಕಿನ ರಸ್ತಾಪುರ ಗ್ರಾಮದ ಟಂಟಂ ಚಾಲಕ ಮಲ್ಲಪ್ಪ ಮಲ್ಲಪ್ಪ ನಾಯ್ಕೋಡಿ ಅವರಿಗೆ ದಂಡ ವಿಧಿಸಲಾಗಿದೆ. ಟ್ರ್ಯಾಕ್ಟರ್‌-ಟಂಟಂ ಡಿಕ್ಕಿಯಾಗಿ ಆರು ಜನರ ಸಾವಿಗೆ ಕಾರಣವಾದ ಟ್ಯಾಂಕರ್ ಚಾಲಕನಿಗೆ ಆರು ತಿಂಗಳು ಜೈಲು ಶಿಕ್ಷೆ, ₹3500 ದಂಡ, ವಿಧಿಸಲಾಗಿದೆ.

Read More »

ವಿಜಯಪುರ: ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಕಾರು ಡಿಕ್ಕಿ; ದುರ್ಮರಣಕ್ಕಿಡಾದ ಯುವಕರು.

ವಿಜಯಪುರ ತಾಲೂಕಿನ ಹೆಗಡಿಹಾಳ ಕ್ರಾಸ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಮೂವರು ಸಾವನ್ನಪ್ಪಿರುವಂತಹ ದಾರುಣ ಘಟನೆ ನಡೆದಿದೆ. ಮೃತರನ್ನು 30 ವರ್ಷದ ಉತ್ನಾಳದ ಬೀರಪ್ಪ ಗೋಡೆಕರ್, 25 ವರ್ಷದ ಹಣಮಂತ ಕಡ್ಲಿಮಟ್ಟಿ ಮತ್ತು ಜುಮನಾಳ ಗ್ರಾಮದ 19 ವರ್ಷದ ಯಮನಪ್ಪ ನಾಟೀಕಾರ್ ಎಂದು ಗುರುತಿಸಲಾಗಿದೆ.ಅಪಘಾತದಲ್ಲಿ ಉಮೇಶ್ ಭಜಂತ್ರಿ ಗಂಭೀರವಾಗಿ ಗಾಯಗೊಂಡಿದ್ದು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ವಿಜಯಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ …

Read More »