Welcome to bigtvnews   Click to listen highlighted text! Welcome to bigtvnews
Breaking News

ಸಿನಿಮಾ

ಕನ್ನಡ ಚಿತ್ರರಂಗದ ಹಿರಿಯ ನಟ ಶಿವರಾಮ್ ಆಸ್ಪತ್ರೆಗೆ ದಾಖಲು: ಆರೋಗ್ಯ ಸ್ಥಿತಿ ಗಂಭೀರ

ಬೆಂಗಳೂರು: ಮನೆಯಲ್ಲಿದ್ದಾಗ ಆಯಾಸವಾಗಿ ಕುಸಿದು ಬಿದ್ದಿರುವ ಸ್ಯಾಂಡಲ್​ವುಡ್ ಹಿರಿಯ ನಟ, ನಿರ್ದೇಶಕ ಶಿವರಾಮ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬೆಂಗಳೂರಿನ ವಿದ್ಯಾಪೀಠ ಸರ್ಕಲ್ ಬಳಿ ಇರುವ ಪ್ರಶಾಂತ್ ಆಸ್ಪತ್ರೆಯ ಐಸಿಯುನಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸ್ಯಾಂಡಲ್​ವುಡ್‌ನ ಹಿರಿಯ ನಟ, ನಿರ್ದೇಶಕ ಶಿವರಾಮ್ ಆಸ್ಪತ್ರೆಗೆ ದಾಖಲಾಗಿದ್ದು, ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

Read More »

ಶಕ್ತಿಧಾಮಕ್ಕೆ ಭೇಟಿಕೊಟ್ಟ ಶಿವರಾಜ್‍ಕುಮಾರ್ ದಂಪತಿ

ಮೈಸೂರು: ಸ್ಯಾಂಡಲ್‍ವುಡ್ ನಟ ಶಿವರಾಜ್‍ಕುಮಾರ್ ಅವರು ಪತ್ನಿ ಗೀತಾ ಶಿವರಾಜ್‍ಕುಮಾರ್ ಅವರ ಜೊತೆಗೆ ಮೈಸೂರಿಲ್ಲಿರುವ ಶಕ್ತಿಧಾಮಕ್ಕೆ ಭೆಟಿಕೊಟ್ಟು ಅಲ್ಲಿಯ ನಿರ್ವಹಣೆಯ ಕುರಿತಾಗಿ ವಿಚಾರಿಸಿದ್ದಾರೆ. ಶಕ್ತಿಧಾಮ ನಿರ್ವಹಣೆ ಕುರಿತಂತೆ ಧರ್ಮದರ್ಶಿಗಳ ಸಭೆ ಮಾಡಿದ್ದಾರೆ. ಟ್ರಸ್ಟ್ ಅಧ್ಯಕ್ಷೆ ಗೀತಾ ಶಿವರಾಜ್‍ಕುಮಾರ್ ನೇತೃತ್ವದಲ್ಲಿ ನಡೆಯುತ್ತಿರುವ ಸಭೆಯಾಗಿದೆ. ಸಭೆಯಲ್ಲಿ ಟ್ರಸ್ಟ್ ಉಪಾಧ್ಯಕ್ಷ, ನಿವೃತ್ತ ಐಪಿಎಸ್ ಅಧಿಕಾರಿ ಕೆಂಪಯ್ಯ, ಮ್ಯಾನೇಂಜಿಂಗ್ ಟ್ರಸ್ಟಿ ಜಯದೇವ್, ಖಜಾಂಚಿ ಸುಮನ ಸೇರಿದಂತೆ ಟ್ರಸ್ಟ್ ಪದಾಧಿಕಾರಿಗಳು ಭಾಗಿಯಾಗಿದ್ದಾರೆ. 150 ಮಕ್ಕಳ ಹಾರೈಕೆ, ಶಿಕ್ಷಣ …

Read More »

ನ.26 ಕ್ಕೆ ಅಮೃತ ಅಪಾರ್ಟ್ಮೆಂಟ್ಸ್ ಚಲನಚಿತ್ರ ರಾಜ್ಯಾದ್ಯಂತ ಬಿಡುಗಡೆ

ಹುಬ್ಬಳ್ಳಿ: ಜಿ-9 ಕಮ್ಯುನಿಕೇಶನ್ಸ್ ಮೀಡಿಯಾ ಆ್ಯಂಡ್ ಎಂಟರ್ಟೈನ್ಮೆಂಟ್ ನಿರ್ಮಾಣದ ಅಮೃತ ಅಪಾರ್ಟ್ಮೆಂಟ್ಸ್ ಚಲನಚಿತ್ರ ನ.26 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ ಎಂದು ಸಾಹಿತಿಗಳಾದ ಶ್ಯಾಮಸುಂದರ್ ಬಿದರಕುಂದಿ ಹೇಳಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು, ಅಮೃತ್ ಅಪಾರ್ಟ್ಮೆಂಟ್ ಇದು ನಗರ ಜೀವನ ಕುರಿತು ಇರುವ ಕತೆ. ಸಂಬಂಧಗಳು, ಭಾವನೆಗಳು, ಅಧುನಿಕ ಜೀವನ ಹೀಗೆ ಸಾಕಷ್ಟುಅಂಶಗಳು ಚಿತ್ರದಲ್ಲಿ ಬರುತ್ತವೆ. ಗುರುರಾಜ್‌ ಕುಲಕರ್ಣಿ ನಿರ್ಮಿಸಿ, ನಿರ್ದೇಶನ ಮಾಡಿರುವ ಚಿತ್ರವಿದು. ತಾರಕ್‌ ಪೊನ್ನಪ್ಪ, ಬಾಲಾಜಿ ಮನೋಹರ್‌, …

Read More »

ನ.25ರಂದು ಬಿಗ್ ಬಾಸ್ ಖ್ಯಾತಿಯ, ವಿಶ್ವನಾಥ ಮತ್ತು ಅವರ ತಂಡದ ಹೊಸ ಸಾಂಗ್ ರಿಲೀಸ್

ಧಾರವಾಡ : ಬಿಗ್ ಬಾಸ್ ಖ್ಯಾತಿಯ ಮತ್ತು ಅಪ್ಪಟ ಉತ್ತರ ಕರ್ನಾಟಕದ ಪ್ರತಿಬೆ ವಿಶ್ವನಾಥ ಹಾವೇರಿ ಹಾಗೂ ತಂಡದವರು ಹೊಸ ಗೀತೆಯೊಂದನ್ನ ರಚಿಸಿದ್ದು, ಈ ಅಲ್ಬಮ್ ಸಾಂಗ್ ಇದೇ ನ.25ರಂದು ಯ್ಯೂಟ್ಯೂಬ್ ಮೂಲಕ, ವಿಶ್ವದಾದ್ಯಂತ ರಿಲೀಸ್ ಮಾಡಲಾಗ್ತಿದೆ. ವಿಶ್ವನಾಥ ಹಾಗೂ ತಂಡದವರ ಬಹುನಿರೀಕ್ಷಿತ ಈ ದೃಶ್ಯಕಾವವನ್ನ (ಹಾಡು) ಸ್ಯಾಮ್ಯುಯೆಲ್ .ಎನ್ ಬರೆದು , ಸಂಯೊಜೀಸಿದ್ದಾರೆ ಎಂದು ವಿಶ್ವನಾಥ ಹಾವೇರಿ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ತಂಡದ ಸದಸ್ಯರು, ಧಾರವಾಡದ ಈ ಪುಣ್ಯ …

Read More »

ರಮೇಶ ಅರವಿಂದ ಅಭಿನಯದ‌ 100 ಚಿತ್ರ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ

ಹುಬ್ಬಳ್ಳಿ: ಸೂರಜ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಉಮಾ ಹಾಗೂ ಎಂ.ರಮೇಶ ರೆಡ್ಡಿ ನಿರ್ಮಾಣಗೊಂಡಿರುವ 100 ಶೀರ್ಷಕೆಯ ಕನ್ನಡ ಚಿತ್ರ ಇದೇ 19ರಂದು ರಾಜ್ಯಾದ್ಯಂತ ಬಿಡುಗಡೆಯಾಗಿದ್ದು, ಉತ್ತಮ ಪ್ರದರ್ಶನ ಕಾಣುತ್ತಿದೆ ಎಂದು ನಟ ಹಾಗೂ ಚಿತ್ರ ನಿರ್ದೇಶಕ ರಮೇಶ ಅರವಿಂದ ಹೇಳಿದರು. ಮಾದ್ಯಮದ ಜೊತೆ ಮಾತನಾಡಿದ ಅವರು, ಚಿತ್ರದ ನಿರ್ದೇಶನವನ್ನು ಮಾಡುವ ಮೂಲಕ ಚಿತ್ರದಲ್ಲಿ ನನ್ನ ಎಲ್ಲ ಶಕ್ತಿಯನ್ನು ಹಾಕಿ ನಟಿಸಿದ್ದೇನೆ ಎಂದರು. ಚಿತ್ರದಲ್ಲಿ ರಚಿತಾ ರಾಮ್, ಪೂರ್ಣ, ವಿಶ್ವಕರ್ಣ, ಮಾಲತಿ …

Read More »

ದಾಂಪತ್ಯ ಜೀವನಕ್ಕ ಕಾಲಿಟ್ಟ ಎಸ್‌.ನಾರಾಯಣ ಪುತ್ರ ಪಂಕಜ್

ಬೆಂಗಳೂರು: ಸ್ಯಾಂಡಲ್‍ವುಡ್ ನಟ, ಖ್ಯಾತ ನಿರ್ದೇಶಕ ಎಸ್. ನಾರಾಯಣ್ ಅವರ ಕುಟುಂಬದಲ್ಲಿ ಶುಭ ಸಮಾರಂಭ ನೆರವೇರಿದೆ. ಇತ್ತೀಚೆಗೆ ಎರಡನೇ ಮಗ ಪವನ್ ಅವರ ಮದುವೆ ನಡೆದಿತ್ತು, ಈಗ ಪಂಕಜ್ ಅವರ ಮದುವೆ ನಡೆದಿದೆ. ಮೈಸೂರಿನಲ್ಲಿರುವ ಸ್ಪೆಕ್ಟ್ರಾ ಕನ್ವೆನ್ಷನ್ ಹಾಲ್‍ನಲ್ಲಿ ಪಂಕಜ್ ಅವರ ಮದುವೆ ನಡೆದಿದೆ. ಪಂಕಜ್ ಅವರನ್ನು ಮದುವೆ ಆಗಿರುವ ಹುಡುಗಿಯ ಹೆಸರು ರಕ್ಷಿತಾ ಸುರೇಂದರ್. ಕಳೆದ ತಿಂಗಳು ಪಂಕಜ್ ಮತ್ತು ರಕ್ಷಿತಾ ನಿಶ್ಚಿತಾರ್ಥ ನಡೆದಿತ್ತು. ಇದೀಗ ಇಬ್ಬರು ದಾಂಪತ್ಯ ಜೀವನಕ್ಕೆ …

Read More »

ಪೇಡಾ ನಗರಿಯಲ್ಲಿ ಅಂತರಾಷ್ಟ್ರೀಯ ಚಲನಚಿತ್ರೋತ್ಸವ-ಮಾಲ್ಟೀವ್ಸ್ ನಿಂದ ಬಂದ ಕಲಾವಿದರ ದಂಡು

ಮಾಲ್ಟೀವ್ಸ್ ನಿಂದ ಬಂದ ಕಲಾವಿದರ ತಂಡ ಧಾರವಾಡ : ನವ ಕರ್ನಾಟಕ ಚಲನಚಿತ್ರ ಅಕಾಡೆಮಿ ಸಹಯೋಗದಲ್ಲಿ 2021ರ ನ.19,20 ಹಾಗೂ 21 ರಂದು ಮೂರು ದಿನಗಳ ಕರ್ನಾಟಕ ಅಂತರಾಷ್ಟ್ರೀಯ ಚಲನಚಿತ್ರೋತ್ಸವ, ಕಿರುಚಿತ್ರ ಪ್ರದರ್ಶನ, ಪ್ರಶಸ್ತಿಗಳ ವಿತರಣೆ ಹಾಗೂ ಸಿನೆಮಾಗಳ ಪ್ರದರ್ಶನವು ಸತ್ತೂರಿನ ಹೊಟೇಲ್ ಟ್ರಾವಲ್ ಇನ್‌ನಲ್ಲಿ ನಡೆಯಲಿದೆ ಎಂದು ಅಕಾಡೆಮಿಯ ಅಧ್ಯಕ್ಷ ಡಾ. ಎಂ.ಎಮ. ಮುಮ್ಮಿಗಟ್ಟಿ ಹೇಳಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಪ್ರಥಮ ಬಾರಿಗೆ ಧಾರವಾಡದಲ್ಲಿ ಚಲನಚಿತ್ರೋತ್ಸವದ ಉತ್ಸವವು …

Read More »

ಅಪ್ಪುಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ-ನುಡಿ ನಮನ ಕಾರ್ಯಕ್ರಮದಲ್ಲಿ ಸಿಎಂ ಘೋಷಣೆ

ಕರುನಾಡಿನ ಯುವರತ್ನ, ಚಂದನ ವನದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಮರೆಯಾಗಿ ಇಂದಿಗೆ ಹದಿನೈದು ದಿನಗಳೇ ಆಗುತ್ತ ಬಂದಿದ್ದರೂ ಕೂಡ, ಅವರ ಅಗಲಿಕೆಯ ನೋವೂ ಮಾತ್ರ ಇಂದಿಂಗೂ ಯಾರಿಂದಲೂ ಮರೆಯಲೂ ಆಗುತ್ತಿಲ್ಲ. ಈ ಮಧ್ಯ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯೂ ಕನ್ನಡ ಚಿತ್ರ ರಂಗದ ಪವರಾಗಿ ಇಂದು ಬೆಂಗಳೂರಿನಲ್ಲಿ ‘ಪುನೀತ್ ನಮನ’ ಕಾರ್ಯಕ್ರಮವನ್ನ ಹಮ್ಮಿಕೊಂಡಿದ್ದು, ಕನ್ನಡ ಚಿತ್ರ ರಂಗ ಸೇರಿದಂತೆ ದಕ್ಷಿಣ ಭಾರತದ ಚಿತರರಂಗದ ಎಲ್ಲ ನಟ ನಟಿಯರು ಭಾಗಿಯಾಗಿ …

Read More »

ಭೀಕರ ರಸ್ತೆ ಅಪಘಾತ- ಸುಶಾಂತ್ ಸಿಂಗ್ ರಾಜಪೂತ್ ಕುಟುಂಬದ 6 ಜನರ ದುರ್ಮರಣ

ಬಿಹಾರ್ : ಬಿಹಾರದ ಲಖಿಸರಾಯ್ ಎಂಬಲ್ಲಿ ಟ್ರಕ್ ಮತ್ತು ಖಾಸಗಿ ವಾಹನವೊಂದರ ಮಧ್ಯ ಭೀಕರ ಅಪಘಾತ ಸಂಭವಿಸಿದ್ದು, ಈ ಅಪಘಾತದಲ್ಲಿ 6 ಜನರು ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾರೆ. ಇನ್ನು ಇವರೆಲ್ಲರವೂ ದಿವಂಗತ, ಬಾಲಿವುಡ್ ನಾಯಕ ನಟ ಸುಶಾಂತ್ ಸಿಂಗ್ ರಾಜಪೂತ್ ಕುಟುಂಬಕ್ಕೆ ಸೇರಿದವರು ಎಂದು ಹೇಳಲಾಗಿದೆ. ಇವರೆಲ್ಲವೂ ಪಟ್ನಾದಲ್ಲಿ ನಡೆದಿದ್ದ ಅಂತೀಮ ಸಂಸ್ಕಾರದ ಕಾರ್ಯಕ್ರಮವನ್ನ ಪೂರೈಸಿಕೊಂಡು ಹುಟ್ಟೂರಿಗೆ ವಾಪಸಾಗುತ್ತಿದ್ದರು. ಬಿಹಾರದ ಲಖಿಸರಾಯ್ ಪ್ರದೇಶದಲ್ಲಿ ಮಂಗಳವಾರ ಬೆಳಗಿನ ಜಾವ ಈ ಬೀಕರ ಅಪಘಾತ …

Read More »
You cannot copy content of this page
Click to listen highlighted text!