Breaking News

ಬೀದರ್

ಬೀದರ್ :ತಲೆ ಮೇಲೆ ಕಲ್ಲು ಹಾಕಿ ಯುವಕನ ಕೊಲೆ!!

ಚಾಂಡೇಶ್ವರ ಗ್ರಾಮದ ಹೊರವಲಯದ ಖೇಡ್ ರಸ್ತೆ ಬಳಿಯ ಹೊಲದಲ್ಲಿ ತಲೆ ಮೇಲೆ ಕಲ್ಲು ಹಾಕಿ ಯುವಕನ ಕೊಲೆ ಮಾಡಿದ ಘಟನೆ ನಡೆದಿದೆ.ಕಮಲನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ತನಿಖೆ ಮುಂದುವರೆದಿದೆ.ಘಟನಾ ಸ್ಥಳಕ್ಕೆ ಭಾಲ್ಕಿ ಡಿವೈಎಸ್ಪಿ ಶಿವಾನಂದ್ ಪವಾಡ ಶೆಟ್ಟಿ, ಕಮಲನಗರ ಸಿಪಿಐ ಅಮರೆಪ್ಪ ಶಿವಬಲ್, ಭಾಲ್ಕಿ ಸಿಪಿಐ ಹಣಮರೆಡ್ಡೆಪ್ಪ, ಕಮಲನಗರ ಪಿಎಸ್‌ಐ ಚಂದ್ರಶೇಖರ್ ನಿರ್ಣೆ, ಪಿಎಸ್‌ಐ ಬಾಲಾಜಿ ಬೆಳಕಟ್ಟೆ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.ಕೊಲೆಗೆ ಖಚಿತ …

Read More »

ಆಡಲು ಹೋಗಿ ಇಬ್ಬರು ಬಾಲಕರು ಬಾವಿಯಲ್ಲಿ ಮುಳುಗಿ ಸಾವು!!

ಇಬ್ಬರು ಬಾಲಕರು ತಮ್ಮ ಸ್ನೇಹಿತರ ಜೊತೆಗೆ ಗ್ರಾಮದ ಹೊರವಲಯದಲ್ಲಿರುವ ಬಾವಿಯ ಸಮೀಪ ಆಟವಾಡುತ್ತಿದ್ದರು.ಆಟದ ಸಂದರ್ಭದಲ್ಲಿ, ಬಾಲಕರಿಬ್ಬರೂ ಆಕಸ್ಮಿಕವಾಗಿ ಬಾವಿಯೊಳಗೆ ಬಿದ್ದಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಬಾವಿಯು ಆಳವಾಗಿದ್ದು, ನೀರಿನ ಮಟ್ಟವೂ ಹೆಚ್ಚಿರುವುದರಿಂದ ರಕ್ಷಣೆಯ ಪ್ರಯತ್ನಗಳು ವಿಫಲಗೊಂಡಿದ್ದವು. ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿ, ರಕ್ಷಣಾ ಕಾರ್ಯಾಚರಣೆ ಆರಂಭಿಸಿ ಶವಗಳನ್ನು ಬಾವಿಯಿಂದ ಹೊರತೆಗೆದರು. ಘಟನೆಯಿಂದ ಮೃತ ಬಾಲಕರ ಕುಟುಂಬಗಳು ದುಃಖದ ಸಾಗರದಲ್ಲಿ ಮುಳುಗಿವೆ. ಬೀದರ್ ಜಿಲ್ಲಾ ಪೊಲೀಸರು ಘಟನೆಯ ಕುರಿತು …

Read More »

ಸ್ನೇಹಿತರೊಂದಿಗೆ ಈಜಲು ಹೋದ ವೇಳೆಯೇ ಬಾಲಕರಿಬ್ಬರು ಸಾವು!!

ಭಾನುವಾರ ಮಧ್ಯಾಹ್ನ ಐವರು ಸ್ನೇಹಿತರು ಗ್ರಾಮದ ಸಮೀಪದಲ್ಲಿದ್ದ ಬಾವಿಯೊಂದರಲ್ಲಿ ಈಜಲು ತೆರಳಿದ್ದಾರೆ. ಈ ವೇಳೆ ಈಜು ಬಾರದ ಓರ್ವ ಬಾಲಕ ಬಾವಿಗೆ ಇಳಿದಿದ್ದು, ಆತನನ್ನು ರಕ್ಷಿಸಲು ಹೋದ ಮತ್ತೊಬ್ಬ ಕೂಡ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಮುಚಳಂಬ ಗ್ರಾಮದ ಅವಿನಾಶ ಶರಣಪ್ಪ ಮಚಕೂರೆ, ಭಾಲ್ಕಿ ತಾಲೂಕಿನ ಕೋಟಗೇರಾ ಗ್ರಾಮದ ಬಾಗೇಶ ಕಮಲಾಕರ ಮಾನೆ ಮೃತಪಟ್ಟ ಬಾಲಕರು.

Read More »

ಮನೆ ಮುಂದೆ ಆಟವಾಡುತ್ತಿದ್ದ ಬಾಲಕಿ ಕಿಡ್ನ್ಯಾಪ್ ಗೆ ಯತ್ನ.!

ಬೀದರ್ ನ ವಿದ್ಯಾನಗರ ಬಡಾವಣೆಯ 11 ನೇ ಕ್ರಾಸ್ ನಲ್ಲಿರುವ ಸತೀಶ ಬಕ್ಕಾಚೌಡೇಕರ ಎಂಬುವವರ ಮನೆಯಲ್ಲಿ ಈ ಘಟನೆ ನಡೆದಿದೆ.ಯುವಕನೋರ್ವ ಮನೆ ಬಳಿ ಬೈಕ್ ನಿಲ್ಲಿಸಿ ನಿಂತಿದ್ದಾನೆ. ನಂತರ ಗೇಟ್ ಒಳಗೆ ಹೋಗಿ ಆಟವಾಡುತ್ತಿದ್ದ ಬಾಲಕಿ ಓರ್ವಳನ್ನು ಅಪಹರಿಸಲು ಯತ್ನಿಸಿದ್ದಾರೆ. ಆದರೆ ಅಷ್ಟರಲ್ಲೇ ಪೋಷಕರು ಹೊರಬಂದಿದ್ದು, ಅಷ್ಟರಲ್ಲಿ ಯುವಕ ಬೈಕ್ ಓಡಿಸಿಕೊಂಡು ಹೋಗಿ ಎಸ್ಕೇಪ್ ಆಗಿದ್ದಾನೆ.ಸದ್ಯ ಘಟನೆಯ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪೋಷಕರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ.

Read More »

ಕಲಬುರಗಿಯಲ್ಲಿ ATM ಕಳ್ಳತನ,!!ಎಸ್‌ಬಿಐ ಎಂಟಿಎಂಗೆ ಕನ್ನ..

ಕಲಬುರಗಿಯಲ್ಲಿ ನಸುಕಿನ ಜಾವ 3 ಗಂಟೆ ಸುಮಾರಿಗೆ ಹರಿಯಾಣದ ಮೂಲದ ಗ್ಯಾಂಗ್ ಎಟಿಎಂಗೆ ನುಗ್ಗಿದೆ. ಮೊದಲಿಗೆ ಸಿಸಿಕ್ಯಾಮರಾಗೆ ಸ್ಪ್ರೇ ಮಾಡಿದ್ದಾರೆ. ಬಳಿಕ ಲಾಕರ್‌ ಅನ್ನ ಗ್ಯಾಸ್ ಕಟರ್‌ನಿಂದ ಕಟ್ ಮಾಡಿ ಬರೋಬ್ಬರಿ 18 ಲಕ್ಷ ರೂಪಾಯಿ ದೋಚಿದ್ದಾರೆ.ಇದೀಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಆದ್ರೆ, ಬೀದರ್​​ ಎಂಟಿಎಂ ಹಣ ದರೋಡೆಕೋರರು ಇದುವರೆಗೂ ಪತ್ತೆಯಾಗಿಲ್ಲ. ಇದರ ಬೆನ್ನಲ್ಲೇ ಕಲಬುರಗಿಯಲ್ಲೂ ಸಹ ಎಟಿಎಂ ಕಳ್ಳತನವಾಗಿದೆ. ಎಟಿಎಂ ಹಾಗೂ ಬ್ಯಾಂಕ್​​ಗಳನ್ನೇ ಟಾರ್ಗೆಟ್​​ ಮಾಡಿ ಈ ಕೃತ್ಯ ಎಸಗುತ್ತಿರುವುದು …

Read More »

ಅಪರಾಧ : ಬೀದರ್ನಲ್ಲಿ ನ್ಯಾಯಾಧೀಶರ ಮನೆಗೆ ಕನ್ನ.

ಜನವಾಡ ರಸ್ತೆಯಲ್ಲಿನ ನ್ಯಾಯಾಂಗ ವಸ್ತಿಗೃಹದಲ್ಲಿರುವ ಎರಡನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ಎಂ ಎಂಜಿ ಶಾಹಿದ್ ಚೌಟಾಯಿ ಅವರ ಮನೆಗೆ ಕಳ್ಳರು ನುಗ್ಗಿದ್ದರು. 8 ಲಕ್ಷ ಮೌಲ್ಯದ ಚುನಾವಣಾ ವನ್ನು ಕಳುವು ಮಾಡಿದ್ದಾರೆ. ರಂಜಾನ್ ಹಿನ್ನೆಲೆ ನ್ಯಾಯಾಧೀಶರು ಮಾರ್ಚ್ 29 ರಂದು ಕೊಪ್ಪಳಕ್ಕೆ ತೆರಳಿದ್ದರು. ಗಿಡಗಳಿಗೆ ನೀರು ಹಾಕುವ ಸೇವಕ ಬಂದು ನೋಡಿದಾಗ ಮನೆ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.

Read More »

ಮಹಿಳೆಯನ್ನು ಕೊಲೆಗೈದು ಪರಾರಿಯಾಗಿದ್ದ ಆರೋಪಿ ಬಂಧನ.!

ಬೀದರ್ ಜಿಲ್ಲೆ ಬಸವಕಲ್ಯಾಣದ ಶಾ-ಹುಸೇನ್ ಬಡಾವಣೆಯಲ್ಲಿ ಮಹಿಳೆಯ ಭೀಕರವಾಗಿ ಹತ್ಯೆ ಮಾಡಿರುವ ಗಟನೆ ನಡೆದಿದೆ. ಮಹಿಳೆಯನ್ನು ಕೊಲೆಗೈದು ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.ಬೆಡ್ ರೂಮ್‌ನಲ್ಲಿ ಮಹಿಳೆಯನ್ನು ಕೊಲೆಗೈದು ಪರಾರಿಯಾಗಿದ್ದ ಆರೋಪಿ ಕೂಡಾ ಪೌರ ಕಾರ್ಮಿಕನೇ ಆಗಿದ್ದನು. ಕೊಲೆಗೆ ಕಾರಣ ಏನೆಂಬುದು ನಿಖರವಾಗಿ ತಿಳಿದುಬಂದಿಲ್ಲ. ಈ ಕೊಲೆ ಅನೈತಿಕ ಸಂಬಂಧದ ಹಿನ್ನೆಲೆಯಿಂದ ನಡೆದಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಬಸವಕಲ್ಯಾಣ ನಗರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಮುಂದುವರಿಸಿದ್ದಾರೆ.

Read More »

ಬೀದರ್ತ:ತಂಗಿಯನ್ನು ಪ್ರೀತಿಸಿದ್ದಕ್ಕೆ ಯುವಕನನ್ನು ಹತ್ಯೆಗೈದ ಸಹೋದರರು!

ನಿರಗೂಡಿ ಗ್ರಾಮದಲ್ಲಿ ಪ್ರಶಾಂತ್ ಹಾಗೂ ಯುವತಿ ಸಹೋದರರ ನಡುವೆ ಗಲಾಟೆ ನಡೆದಿತ್ತು. ಈ ವೇಳೆ ಪ್ರಶಾಂತ್ ತಲೆ ಮೇಲೆ ಯುವತಿಯ ಸಹೋದರರು ಕಲ್ಲು ಹಾಕಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.ಸ್ಥಳಕ್ಕೆ ಡಿವೈಎಸ್‌ಪಿ ನ್ಯಾಮೇಗೌಡ, ಸಿಪಿಐ ಅಲಿಸಾಬ್ ಭೇಟಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಬೀದರ : ಬುದ್ದಿವಾದ ಹೇಳಿದಕ್ಕೆ ಬಾಲಕಿಯೊಬ್ಬಳ ಆತ್ಮಹತ್ಯೆ.

ಹೆಚ್ಚಾಗಿ ಮೊಬೈಲ್ ಬಳಕೆ ಮಾಡಬೇಡ ಎಂದು ಆಕೆಯ ತಂದೆ ಸಂತೋಷ್ ಬುದ್ಧಿವಾದ ಹೇಳಿದ್ದರು.ಇದರಿಂದಾಗಿ ಮನನೊಂದ ಬಾಲಕಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದು ಬಂದಿದೆ.ಈ ಘಟನೆಗೆ ಸಂಬಂಧಿಸಿದಂತೆ ಕಮಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಧಗಧಗನೇ ಹೊತ್ತುರಿದ ಬಸ್,ಪ್ರಯಾಣಿಕರು ಸೇಫ್.

ಬೀದರ ದಿಂದ ಔರಾದಗೆ ತೆರಳುತ್ತಿದ ಕಲ್ಯಾಣ ಕರ್ನಾಟಕ ಸಾರಿಗೆ ಬಸ್‌ ಎಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡು, ತಕ್ಷಣವೇ ಧಗ ಧಗನೇ ಹೊತ್ತು ಉರಿದಿದೆ.ಸಂತಪುರ ಸಮೀಪದ ಕಪ್ಪಿಕೆರೆ ಗ್ರಾಮ ಕ್ರಾಸ್ ಬಳಿ ಈ ಅವಘಡ ನಡೆದಿದೆ. ಡ್ರೈವರ್ ಹಾಗೂ ಕಂಡಕ್ಟರ ತಕ್ಷಣವೇ ಎಚ್ಚೆತು ಎಲ್ಲಾ ಪ್ರಯಾಣಿಕರಿಗೆ ಕೆಳಗಿಳಿಸಿ ಭಾರೀ ಅನಾಹುತವೊಂದನ್ನು ತಪ್ಪಿಸಿದ್ದಾರೆ. ಅಗ್ನಿಶಾಮಕ ದಳ ಸಿಬ್ಬಂದಿ ಕೂಡಲೇ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ. ಸಂತಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Read More »