BigTv News
December 20, 2022
Breaking News, ಬಳ್ಳಾರಿ
ಬಳ್ಳಾರಿ : ಕಷ್ಟಗಳ ನಡುವೆ ಓದಿ ಮುಂದೆ ಬರಬೇಕು ಎಂದು ಆಸೆ ಹೊತ್ತಿದ್ದ ಮೂವರು ಹಾಸ್ಟೇಲ್ ವಿದ್ಯಾರ್ಥಿಗಳು ಸರಕಾರಿ ಬಸ್ ಡಿಕ್ಕಿ ಹೊಡೆದು ಮೃತಪಟ್ಟ ಘಟನೆ ಬಳ್ಳಾರಿಯಲ್ಲಿ ಭಾನುವಾರ ರಾತ್ರಿ ಸಂಭವಿಸಿದೆ. ಎಮ್ಮಿಗನೂರಿನ ಕನಕರಾಜು(19), ಮುರುಡಿ ಗ್ರಾಮದ ಶಂಕರ(18), ಸಂಡೂರು ತಾಲೂಕಿನ ನಾಗೇನಹಳ್ಳಿಯ ಹೊನ್ನೂರ(22) ಮೃತಪಟ್ಟ ವಿದ್ಯಾರ್ಥಿಗಳು.ಹಾಸ್ಟೇಲ್ ನಲ್ಲಿ ಓದುತ್ತಿದ್ದ ಎಸ್ಟಿ/ಎಸ್ಟಿ ವಿದ್ಯಾರ್ಥಿಗಳು ಮನೆಯಲ್ಲಿ ಕಷ್ಟ ಎಂಬ ಕಾರಣಕ್ಕೆ ಪಾರ್ಟ್ ಟೈಂ ಕೆಲಸ ಮಾಡಿಕೊಂಡು ವಿದ್ಯಾಭ್ಯಾಸ ಮುಂದುವರಿಸಿದ್ದರು. ಕ್ಯಾಟರಿಂಗ್ ಕೆಲಸ …
Read More »
BigTv News
November 26, 2022
Breaking News, ಬಳ್ಳಾರಿ
ಬಳ್ಳಾರಿ: ಪೊಲೀಸ್ ಅಧಿಕಾರಿ ಸೋಗಿನಲ್ಲಿ ಜನರನ್ನು ಸುಲಿಗೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಳ್ಳಾರಿ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ. ಗದಗಿನ ಸಂಜಯ ಬಸಪ್ಪ ಕೊಪ್ಪದ (25) ಹಾಗೂ ಬಳ್ಳಾರಿಯ ನಂದೀಶ್ (24) ಬಂಧಿತ ಆರೋಪಿಗಳು.ಇವರು ಸಾರ್ವಜನಿಕರಿಂದ ನಾಲ್ಕು ತೊಲೆ ಬಂಗಾರ, 1,500 ರೂ. ನಗದು ಹಾಗೂ ಎರಡು ಬೈಕ್ ಸುಲಿಗೆ ಮಾಡಿದ್ದರು ಎಂದು ತಿಳಿದುಬಂದಿದೆ. ಆರೋಪಿಗಳ ಬಂಧನಕ್ಕೆ ಡಿಎಸ್‌ಪಿ ಸತ್ಯನಾರಾಯಣರಾವ್ ನೇತೃತ್ವದಲ್ಲಿ ಇನ್ಸ್ಪೆಕ್ಟರ್ ನಿರಂಜನ, ಶಾರದಾ ಅವರನ್ನೊಳಗೊಂಡ ವಿಶೇಷ ತಂಡ …
Read More »
BigTv News
October 18, 2022
Breaking News, ಬಳ್ಳಾರಿ
ಬಳ್ಳಾರಿ : ಅಕ್ರಮ ಭೂ ಹಗರಣದಲ್ಲಿ ಭಾಗಿಯಾಗಿರುವ ಸಚಿವ ಶ್ರೀರಾಮುಲು, ಈ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿದ್ದಾರೆ. ಅವರಿಗೆ ಕಾನೂನಿನ ಮೇಲೆ ಗೌರವ ಇದ್ದರೆ, ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಅಥವಾ ಸಿಎಂ ಬೊಮ್ಮಾಯಿ ಅವರು ಸಚಿವ ಸ್ಥಾನದಿಂದ ಶ್ರೀರಾಮುಲು ಅವರನ್ನು ವಜಾಗೊಳಿಸಬೇಕು ಎಂದು ಮಾಜಿ ಸಂಸದ ಉಗ್ರಪ್ಪ ಆಗ್ರಹಿಸಿದ್ದಾರೆ. ಬಳ್ಳಾರಿಯ ಜಿಲ್ಲಾ ಪತ್ರಿಕಾ ಭವನದಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ನಾನು ತಿನ್ನಲ್ಲ, ತಿನ್ನೋಕೆ …
Read More »
BigTv News
September 22, 2022
Breaking News, ಬಳ್ಳಾರಿ, ಸುದ್ದಿ, ಹುಬ್ಬಳ್ಳಿ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಮಿಷನ್ ಕಂಪೌಂಡ ಹತ್ತಿರ ಮನೆಯೊಂದರಲ್ಲಿ ಕಳ್ಳತನವಾಗಿತ್ತು. ಕಳ್ಳರು ಒಟ್ಟು 3,20,000/- ಕಿಮ್ಮತ್ತಿನ 71 ಗ್ರಾಂ ತೂಕದ ಬಂಗಾರದ ಆಭರಣಗಳು ಹಾಗೂ 1,00,000/- ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದರು. ಆರೋಪಿಯ ಪತ್ತೆಗಾಗಿ ಪೊಲೀಸ ಆಯುಕ್ತರಾದ ಲಾಬೂರಾಮ ಹಾಗೂ ಉಪ ಪೊಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿ ತಂಡ ರಚನೆ ಮಾಡಲಾಗಿತ್ತು. ಆರೋಪಿತನ ಬಗ್ಗೆ ಮಾಹಿತಿ ಕಲೆ ಹಾಕಿದ ಪೊಲೀಸ ತಂಡ, ಆರೋಪಿ ಆದ ಬಳ್ಳಾರಿ …
Read More »
BigTv News
August 24, 2022
Breaking News, ಬಳ್ಳಾರಿ
ಬಳ್ಳಾರಿ: ಸಾಲದ ಬಾಧೆ ರೈತರನ್ನಷ್ಟೇ ಅಲ್ಲ, ಉದ್ಯಮಿಗಳನ್ನೂ ಕಾಡುತ್ತಿದೆ. ಅವರು ಕೂಡ ಸಾಲಕ್ಕೆ ಹೆದರಿ ಪ್ರಾಣ ಕಳೆದುಕೊಳ್ಳುತ್ತಿರುವ ಪ್ರಕರಣಗಳು ನಡೆಯುತ್ತಿದ್ದು, ಅಂಥ ಸಾವಿನ ಪಟ್ಟಿಗೆ ಇದೀಗ ಮತ್ತೊಂದು ಸೇರ್ಪಡೆ ಆಗಿದೆ. ಸಾಲದ ಕಂತು ಕಟ್ಟಲಾಗದೆ ಎರಡು ಲಾರಿ ಮಾಲೀಕರೊಬ್ಬರು ನೇಣಿಗೆ ಕೊರಳೊಡ್ಡಿದ್ದಾರೆ. ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ಅಂಕಮನಾಳ ಬಳಿ ಈ ಆತ್ಮಹತ್ಯೆ ನಡೆದಿದೆ. ತುಂಬರಗುದ್ದಿ ಗ್ರಾಮದ ಕರಿಯಪ್ಪ ಎಂಬವರು ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರು ಎರಡು …
Read More »
BigTv News
August 17, 2022
Breaking News, ಬಳ್ಳಾರಿ
ಬಳ್ಳಾರಿ : ಭಗವಂತ ಅವಕಾಶ ಕೊಟ್ಟರೆ ಕಾಂಗ್ರೆಸ್ ಪಕ್ಷದಿಂದ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗಬೇಕು ಎಂಬ ಆಸೆ ನನಗೂ ಇದೆ’ ಎಂದು ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ. ಅಲ್ಲದೆ, ಕಳೆದ ಚುನಾವಣೆಯಲ್ಲಿ ಸಿದ್ದರಾಮಯ್ಯ ಗೆದ್ದಿದ್ದು ನಮ್ಮ ನಡುವಿನ ಒಳ ಒಪ್ಪಂದದಿಂದ ಎಂಬ ಗುಟ್ಟನ್ನೂ ಅವರು ಬಹಿರಂಗಪಡಿಸಿದ್ದಾರೆ. ನಗರದ ಜಿಲ್ಲಾ ಕುರುಬರ ಸಂಘದ ವಿದ್ಯಾರ್ಥಿ ನಿಲಯ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಾನು ಕುರುಬ ಸಮುದಾಯದ ವಿರೋಧಿಯಲ್ಲ. ನನ್ನನ್ನು ತಪ್ಪಾಗಿ ತಿಳಿದುಕೊಳ್ಳಬೇಡಿ. …
Read More »
admin
March 18, 2022
Breaking News, ಬಳ್ಳಾರಿ
ಬಳ್ಳಾರಿ: ಐಎಎಸ್ ಅಧಿಕಾರಿ ಸರ್ಕಾರಿ ಆಸ್ಪತ್ರೆಯಲ್ಲಿಯೇ ಮಗುವಿಗೆ ಜನ್ಮ ನೀಡಿ ಮಾದರಿಯಾಗಿದ್ದಾರೆ. ಬಳ್ಳಾರಿ ಜಿಲ್ಲಾ ಪಂಚಾಯತ್ ಸಿಇಓ ಆಗಿರುವ ಐಎಎಸ್ ಅಧಿಕಾರಿ ಕೆ ಆರ್ ನಂದಿನಿ ಅವರು ಬಳ್ಳಾರಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಂಡಿದ್ದು, ನಾರ್ಮಲ್ ಡೆಲಿವರಿ ಮೂಲಕ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
Read More »
admin
March 10, 2022
Breaking News, ಬಳ್ಳಾರಿ
ಬಳ್ಳಾರಿ: ಮಹಿಳೆಯರ ಬಗ್ಗೆ ಅಗೌರವವಾಗಿ ಮಾತನಾಡುವವರ ವಿರುದ್ಧ ಕ್ರಮವಾಗಬೇಕು.ಮಹಿಳೆಯರ ಬಗ್ಗೆ ಅಗೌರವ ತೋರುತ್ತಿದ್ದಾರೆ. ‘ಒಂದು ವೇಳೆ ನಾನು ಸದನದಲ್ಲಿ ಇದ್ದಿದ್ರೆ ಮೆಟ್ಟು ತಗೊಂಡು ಹೊಡೀತಿದ್ದೆ’ ಎಂದು ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ ಅವರು , ಪ್ರತಿಪಕ್ಷದ ಸದಸ್ಯರು ಮೌನದಿಂದ ಹೊರ ಬರಬೇಕು. ಇಂತಹ ಹೇಳಿಕೆಗಳಿಗೆ ಆಸ್ಪದವಾಗದಂತೆ ಪ್ರತಿಭಟಿಸಬೇಕು.ಶಾಸಕ, ಸಚಿವರಾದವರು ಮಹಿಳೆಯರ ಬಗ್ಗೆ ಕೀಳಾಗಿ ಮಾತನಾಡುವುದು ಸರಿಯೇ? ಅಂಥ ಸಂದರ್ಭದಲ್ಲಿ ನಾನೇನಾದರೂ ಸದನದಲ್ಲಿ ಇದ್ದಿದ್ದರೆ …
Read More »
admin
March 7, 2022
Breaking News, ಬಳ್ಳಾರಿ
ಬಳ್ಳಾರಿ: ಉಕ್ರೇನ್ನಿಂದ ಎಲ್ಲಾ ವಿದ್ಯಾರ್ಥಿಗಳನ್ನು ಕರೆತರಲಾಗಿದೆ. 1 ಲಕ್ಷ ಹಣ ಪಡೆದು ಕರೆತಂದಿದ್ದಾರೆ ಎಂಬುದು ಸುಳ್ಳು. ಭಾರತ ಸರ್ಕಾರ ಹರಸಾಹಸಮಾಡಿ ಮಕ್ಕಳನ್ನು ಕರೆತಂದಿದೆ. ವಿದ್ಯಾರ್ಥಿಗಳನ್ನು ಕರೆತರಲು ನಾಲ್ವರು ಸಚಿವರನ್ನು ನಿಯೋಜನೆ ಮಾಡಲಾಗಿದೆ ಎಂದು ಬಳ್ಳಾರಿಯಲ್ಲಿ ಸಾರಿಗೆ ಸಚಿವ ಬಿ.ಶ್ರೀರಾಮುಲು ಹೇಳಿಕೆ ನೀಡಿದ್ದಾರೆ. ಇನ್ನೂ ರಷ್ಯಾ – ಉಕ್ರೇನ್ ಮಧ್ಯೆ ಯುದ್ಧ ಹಿನ್ನಲೆ ಸ್ವದೇ ಶಕ್ಕೆ ಮರಳಿದ ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿ ಸಚಿವ ಶ್ರೀ ರಾಮುಲು ಮಾತನಾಡಿಸಿದ್ದಾರೆ. ಬಳ್ಳಾರಿಯ ಸಬಾ …
Read More »
admin
March 6, 2022
Breaking News, ಬಳ್ಳಾರಿ
ಬಳ್ಳಾರಿ: 2022-23ನೇ ಸಾಲಿನ ರಾಜ್ಯ ಬಜೆಟ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿರುವ ಸಚಿವ ಶ್ರೀರಾಮುಲು, ಬಾಯಿ ಚಪಲಕ್ಕೆ ಮಾತನಾಡುವವರ ಬಾಯಿ ಮುಚ್ಚಿಸಲಾಗದು ಎಂದು ಹೇಳಿದ್ದಾರೆ. ರಾಜ್ಯ ಬಜೆಟ್ ಬಗ್ಗೆ ಪ್ರತಿಕ್ರಿಯಿಸಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಇದು ಅಡ್ಡಕಸಬಿ ಬಜೆಟ್ ಎಂದಿದ್ದರು. ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿರುವ ಶ್ರೀರಾಮುಲು, ಇದು ಸಿದ್ದರಾಮಯ್ಯ ಅವರ ಭಂಡತನ, ಮೊಂಡುತನಕ್ಕೆ ಸಾಕ್ಷಿ. ಸಿದ್ದರಾಮಯ್ಯನವರು 13 ಬಾರಿ ಬಜೆಟ್ ಮಂಡನೆ ಮಾಡಿದ್ದಾರೆ. …
Read More »