Breaking News

ಹಾವೇರಿ

ಲೋಕಸಭೆ ಅಭ್ಯರ್ಥಿ ಹುಡುಕಾಟ ಆರಂಬಿಸಿದ ಕಾಂಗ್ರೆಸ್: ಉಳ್ಳಾಗಡ್ಡಿಮಠಗೆ ಸಿಗಲಿದೆ ಅವಕಾಶ

ಹುಬ್ಬಳ್ಳಿ : ಕೇಂದ್ರ ಸಚಿವ ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಪ್ರಲಾಶ್ ಜೋಶಿ ವಿರುದ್ಧ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಯಾರಾಗಲಿದ್ದಾರೆ ಎನ್ನುವ ಕುತೂಹಲ ಹಾಗೆ ಮುಂದುವರೆದಂತಿದೆ. ಈಗಾಗಲೇ 20 ಜನ ಆಕಾಂಕ್ಷಿಗಳು ಕಾಂಗ್ರೆಸ್ ಟಿಕೆಟ್ ಪಡೆಯಲು ಅರ್ಜಿ ಹಾಕಿದ್ದಾರೆ ಆದ್ರೆ ಅದರಲ್ಲಿ ಇಬ್ಬರು ನಾಯಕರ ಹೆಸರು ಮಾತ್ರ ಈಗ ಸೆಮಿ ಫೈನಲ್ ಹಂತಕ್ಕೆ ತಲುಪಿದ್ದು ಇಬ್ಬರಲ್ಲಿ ಟಿಕೆಟ್ ಭಾಗ್ಯ ಯಾರಿಗೆ ಬರಲಿದೆ ಎಂದು ಕುತೂಹಲ ಮೂಡಿಸಿದೆ ಹೌದು …

Read More »

ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಅಲ್ಲಿಪುರ ಕ್ರಾಸ್‌ ಬಳಿ ಬಸ್ ಪಲ್ಟಿಯಾಗಿ ನಾಲ್ಕು ಮಕ್ಕಳು ಗಂಭೀರ ಗಾಯ…

ಹಾವೇರಿ: ಪ್ರವಾಸಕ್ಕೆ ಹೊರಟ್ಟಿದ್ದ ಸರ್ಕಾರಿ ಬಸ್ ಪಲ್ಟಿಯಾಗಿ ನಾಲ್ಕು ಮಕ್ಕಳು ಗಂಭೀರ ಗಾಯಗೊಂಡಿರುವ ಘಟನೆ ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಅಲ್ಲಿಪುರ ಕ್ರಾಸ್‌ ಬಳಿ ನಡೆದಿದೆ. ಘಟನೆಯಲ್ಲಿ 45 ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಗೊಂಡ ಮಕ್ಕಳನ್ನ ರಾಯಚೂರು ಜಿಲ್ಲೆ ಲಿಂಗಸೂರು ತಾಲೂಕಿನ ಸಜ್ಜನಗುಡ್ಡದ ಸರ್ಕಾರಿ ಶಾಲೆ ಮಕ್ಕಳು ಎಂದು ಗುರುತಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ನಾಲ್ವರನ್ನ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಕಳಿಸಲಾಗಿದೆ. ಸಣ್ಣಪುಟ್ಟ ಗಾಯಗೊಂಡ ಮಕ್ಕಳನ್ನ ಸವಣೂರು ತಾಲೂಕು ಆಸ್ಪತ್ರೆಗೆ ದಾಖಲಿಸಿ …

Read More »

ಗಣೇಶೋತ್ಸವಕ್ಕೆ ಉಸ್ಮಾನಸಾಬ್​ ಎಂಬವರು ವಿವಿಧ ಬಗೆಯ ಏಲಕ್ಕಿ ಮಾಲೆಗಳ ತಯಾರಿ….

ಹಾವೇರಿ: ಗಣೇಶೋತ್ಸವಕ್ಕೆ ಇಲ್ಲಿಯ ಉಸ್ಮಾನಸಾಬ್​ ಎಂಬವರು ವಿವಿಧ ಬಗೆಯ ಏಲಕ್ಕಿ ಮಾಲೆಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಒಂದೆಳೆಯ ಮಾಲೆಗಳಿಂದ ಹಿಡಿದು 25 ಎಳೆಗಳಿರುವ ಮಾಲೆಗಳನ್ನು ಇವರು ತಯಾರಿಸುತ್ತಾರೆ. ಕಳೆದ ಹಲವು ವರ್ಷಗಳಿಂದ ಈ ಕೆಲಸದಲ್ಲಿ ತೊಡಗಿದ್ದಾರೆ. ತಾಯಿಯಿಂದ ಬಂದ ಕಲೆಯನ್ನು ಉಳಿಸಿ, ಬೆಳೆಸಿಕೊಂಡು ಬರುತ್ತಿದ್ದಾರೆ. ವಿಶಿಷ್ಠ ಏಲಕ್ಕಿ ಮಾಲೆ ತಯಾರಿಕೆಗಾಗಿ ಇವರ ತಾಯಿಗೆ ‘ಕರ್ನಾಟಕ ರಾಜ್ಯೋತ್ಸವ’ ಪ್ರಶಸ್ತಿ ಲಭಿಸಿತ್ತು. ಉಸ್ಮಾನಸಾಬ್ ಮಾತನಾಡಿ​, “ಸಾರ್ವಜನಿಕ ಗಣೇಶೋತ್ಸವಗಳಿಗಾಗಿ ಮುಂಚಿತವಾಗಿ ಆರ್ಡರ್‌ಗಳು ಬಂದಿವೆ. ಈಗಾಗಲೇ …

Read More »

ಕ್ಷುಲ್ಲಕ ಕಾರಣಕ್ಕಾಗಿ ವಿದ್ಯುತ್ ಕಂಬಕ್ಕೆ ಕಟ್ಟಿ ವ್ಯಕ್ತಿಯ ಥಳಿತ…

ಹಾವೇರಿ: ಕ್ಷುಲ್ಲಕ ಕಾರಣಕ್ಕಾಗಿ ವಿದ್ಯುತ್ ಕಂಬಕ್ಕೆ ಕಟ್ಟಿ ವ್ಯಕ್ತಿಯ ಥಳಿಸಿದ ಘಟನೆ ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಮೂಕಬಸರಿಕಟ್ಟಿ ಗ್ರಾಮದಲ್ಲಿ ನಡೆದಿದೆ. ಹಲ್ಲೆಗೆ ಒಳಗಾದ ವ್ಯಕ್ತಿಯನ್ನ ರಾಮಪ್ಪ ಹರಿಜನ ಎಂದು ಗುರುತಿಸಲಾಗಿದೆ. ಡಿಶ್ ಟಿವಿ ಕೇಬಲ್ ಕತ್ತರಿಸಿದ ಆರೋಪದ ಹಿನ್ನೆಲೆ ವ್ಯಕ್ತಿಯನ್ನ ವಿದ್ಯುತ್ ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಏರಿಯಾದಲ್ಲಿ ಕೆಇಬಿ ಸಿಬ್ಬಂದಿ ಮರದ ಟೊಂಗೆಗಳನ್ನ ಕತ್ತರಿಸಿ ಹೋಗಿದ್ದಾರೆ. ಅದರ ಜೊತೆಗೆ ಕೇಬಲ್ ಟಿವಿ ವೈಯರ್ ಕತ್ತರಿಸಿ …

Read More »

ವರ್ಷದ ಸಂಭ್ರಮಕ್ಕೆ ಪಟಾಕಿ ದುರಂತದ ಕರಿಛಾಯೆ….

ಹಾವೇರಿ: ಜಿಲ್ಲೆಯ ಬ್ಯಾಡಗಿ ತಾಲೂಕಿನ ಕಾಟೇನಹಳ್ಳಿ ಗ್ರಾಮದಲ್ಲಿ ಗಣೇಶ ಚತುರ್ಥಿ, ದೀಪಾವಳಿ ಹಬ್ಬ ಬಂದರೆ ಸಾಕು ಸಂಭ್ರಮ ಮನೆ ಮಾಡಿರುತ್ತಿತ್ತು. ಆದರೆ ಈ ವರ್ಷದ ಸಂಭ್ರಮಕ್ಕೆ ಪಟಾಕಿ ದುರಂತದ ಕರಿಛಾಯೆ ಆವರಿಸಿದೆ. ಗ್ರಾಮದ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿ ಸ್ಥಾಪಿಸಿ ಖುಷಿಪಡುತ್ತಿದ್ದ ಗ್ರಾಮದ ಮೂರು ಜೀವಗಳು ಪಟಾಕಿ ದುರಂತದಲ್ಲಿ ಬಲಿಯಾಗಿವೆ. ಕಾಟೇನಹಳ್ಳಿ ಗ್ರಾಮದ ಸ್ನೇಹಿತರಾಗಿದ್ದ ಶಿವಾನಂದ ಅಕ್ಕಿ(22), ದ್ಯಾಮಪ್ಪ ಓಲೇಕಾರ್ (25) ಹಾಗೂ ರಮೇಶ ಬಾರ್ಕಿ(26) ಪಟಾಕಿಯಲ್ಲಿ ದುರಂತದಲ್ಲಿ ಸಾವಿಗೀಡಾದವರು. …

Read More »

ಪಟಾಕಿ ಗೊಡೋನ್ ಗೆ ಬೆಂಕಿ: ಸುಮಾರು 1 ಕೋಟಿ ಮೌಲ್ಯದ ಸಿಡಿಮದ್ದು ಸುಟ್ಟು ಭಸ್ಮ

ಹಾವೇರಿ: ವೆಲ್ಡಿಂಗ್ ಮಾಡುವಾಗ ಬೃಹತ್ ಪಟಾಕಿಯ ಗೊಡೋನ್ ಗೆ ಬೆಂಕಿ ತಗುಲಿ ಸುಮಾರು 1 ಕೋಟಿ ಮೌಲ್ಯದ ಸಿಡಿಮದ್ದು ಸಂಪೂರ್ಣ ಸುಟ್ಟು ಭಸ್ಮವಾದ ಘಟನೆ ಹಾವೇರಿ ತಾಲೂಕಿನ ಆಲದಕಟ್ಟಿ ಗ್ರಾಮದ ಬಳಿಯ ಇರುವ ಭೂಮಿಕಾ ಟ್ರೇಡರ್ಸ್ ಎಂಬ ಗೊಡೋನ್ ನಲ್ಲಿ ನಡೆದಿದೆ. ಸಿ ಜಿ ವಿರೇಶ್ ಎಂಬುವವರಿಗೆ ಸೇರಿದ್ದ ಗೊಡೋನ್ ಆಗಿದ್ದು, ಕೆಲಸ ಮಾಡುತ್ತಿದ್ದ ಆರು ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತಮಿಳುನಾಡಿನ ಶಿವಕಾಶಿ ಎಂಬಲ್ಲಿಯಿಂದ ಬಂದಿದ್ದ ಪಟಾಕಿ ಸಾಮಾಗ್ರಿಗಳನ್ನು ಇಂದು …

Read More »

ಹಾವೇರಿಗೆ ಬರಲು ಹಾಂಸಿ, ಶಾಕಾರ ಗ್ರಾಮದ ಜನರ ಪರದಾಟ….

ಹಾವೇರಿ: ತಾಲೂಕಿನ ಹಾಂಸಿ, ಶಾಕಾರ ಗ್ರಾಮಗಳನ್ನು ತುಂಗಭದ್ರಾ ನದಿ ಹಾವೇರಿ ಜಿಲ್ಲೆಯಿಂದ ಪ್ರತ್ಯೇಕಿಸುತ್ತದೆ. ಇದರಿಂದಾಗಿ ಗ್ರಾಮಸ್ಥರು ತಮ್ಮ ನಿತ್ಯ ಕೆಲಸ ಕಾರ್ಯಕ್ಕಾಗಿ ಹಾವೇರಿ ತಾಲೂಕು ಕೇಂದ್ರ ಹಾಗೂ ಸಮೀಪದ ಗ್ರಾಮಗಳನ್ನು ಅವಲಂಬಿಸಿದ್ದಾರೆ. ಇದೇ ಕಾರಣದಿಂದ ಸಂಚರಿಸಲು ಬ್ರಿಡ್ಜ್ ಇಲ್ಲದೇ ಸಂಕಷ್ಟ ಎದುರಿಸುತ್ತಿದ್ದಾರೆ. ತೆಪ್ಪ ಅಥವಾ ದೋಣಿಗಳ ಸಹಾಯದಿಂದಲೇ ತುಂಗಭದ್ರಾ ನದಿ ದಾಟಿಯೇ ಹಾವೇರಿಗೆ ಬರಬೇಕಾದ ಪರಿಸ್ಥಿತಿ ಇದೆ. ಇದಲ್ಲದೇ ಇದ್ದರೆ 40 ಕಿ.ಮೀ ದೂರ ಕ್ರಮಿಸಿ ಹಾವೇರಿಯ ಗುತ್ತಲ, ಹಾವನೂರು …

Read More »

ವಿಕಲಚೇತನರ ಸಿಟಿಂಗ್ ಥ್ರೋಬಾಲ್ ಪಂದ್ಯ ಭಾರತದ ಮಹಿಳಾ ,ಪುರುಷರ ತಂಡ ಗೆಲುವು.

ಹಾವೇರಿ :ಮಲೇಶಿಯಾದ ಕ್ವಾಲಾಲಂಪುರದಲ್ಲಿ ಜುಲೈ 29 ಮತ್ತು 30 ರಂದು ನಡೆದ ವಿಕಲಚೇತನರ ಸಿಟ್ಟಿಂಗ್​ ಥ್ರೋಬಾಲ್ ಪಂದ್ಯಾವಳಿಯಲ್ಲಿ ಭಾರತ ಮಹಿಳಾ ಮತ್ತು ಪುರುಷ ತಂಡಗಳು ಗೆಲ್ಲುವ ಮೂಲಕ ಚಿನ್ನದ ಪದಕ ಬೇಟೆಯಾಡಿದ್ದಾರೆ. ಈ ಇಬ್ಬರು ಆಟಗಾರರು ಹಾವೇರಿ ಜಿಲ್ಲೆಯವರಾಗಿದ್ದು, ಮಹಿಳಾ ತಂಡವನ್ನು ಹಿರೇಕೆರೂರು ತಾಲೂಕಿನ ಬನ್ನಿಹಟ್ಟಿ ತಾಂಡಾದ ಮಂಜುಳಾ ಲಮಾಣಿ ಹಾಗು ಪುರುಷ ತಂಡವನ್ನು ರಾಣೆಬೆನ್ನೂರು ತಾಲೂಕಿನ ಕಾಕೋಳ ಗ್ರಾಮದ ಹರೀಶ್ ಶಿವಣ್ಣನವರ್ ಮುನ್ನಡಿಸಿದ್ದರು. ಮುಂಬರುವ ಪ್ಯಾರಾ ಏಷ್ಯನ್​ ಗೇಮ್ಸ್ …

Read More »

ಒಂದು ಕಾಲದಲ್ಲಿ ಪಟ್ಟಣದ ಪ್ರತಿಷ್ಠಿತ ಶಾಲೆಯಾಗಿದ್ದ ಎಸ್​ಜೆಜೆಎಂ ಪಬ್ಲಿಕ್ ಶಾಲೆ ಈಗ ಹಲವು ಇಲ್ಲಗಳ ನಡುವೆ ಕಾರ್ಯ…

ಹಾವೇರಿ:ಜಿಲ್ಲೆಯ ಬ್ಯಾಡಗಿ ಪಟ್ಟಣದಲ್ಲಿರುವ ಎಸ್​ಜೆಜೆಎಂ ಪಬ್ಲಿಕ್ ಶಾಲೆ ಹಲವು ದಶಕಗಳನ್ನು ಕಂಡ ಶಾಲೆ. ಈ ಸರ್ಕಾರಿ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳು ದೇಶ ವಿದೇಶಗಳಲ್ಲಿ ವಿವಿಧ ವೃತ್ತಿಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಒಂದು ಕಾಲದಲ್ಲಿ ಬ್ಯಾಡಗಿ ಪಟ್ಟಣದ ಪ್ರತಿಷ್ಠಿತ ಶಾಲೆಯಾಗಿದ್ದಎಸ್​ಜೆಜೆಎಂ ಪಬ್ಲಿಕ್ ಶಾಲೆ ಈಗ ಹಲವು ಇಲ್ಲಗಳ ನಡುವೆ ಕಾರ್ಯನಿರ್ವಹಿಸುತ್ತಿದೆ ಎಂದು ಪೋಷಕರು ಆರೋಪಿಸಿದ್ದಾರೆ.ಅಜ್ಞಾನದ ಕತ್ತಲೆ ಓಡಿಸಿ ಬೆಳಕು ನೀಡಬೇಕಾದ ಶಾಲೆಯಲ್ಲಿ ವಿದ್ಯುತ್ ಇಲ್ಲ. ಇಲ್ಲಿಯ ಮಕ್ಕಳು ಕತ್ತಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಶಾಲೆಯ ಮೂಲೆ …

Read More »

ಸಂಪುಟದ ತೀರ್ಮಾಣಕ್ಕೆ ಕಾದು ನೊಡೋಣ: ಬಸವರಾಜ ಬೊಮ್ಮಾಯಿ

ಹಾವೇರಿ: ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರೆಂಟಿಗಳ ಬಗ್ಗೆ ಸಂಪುಟದಲ್ಲಿ ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೊ ಕಾದು ನೋಡೊಣ ಎಂದು  ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ಹಾವೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗ್ಯಾರಂಟಿ ಜಾರಿ ಮಾಡಲು ಮುಖ್ಯಮಂತ್ರಿಗಳು ಸಭೆಗಳನ್ನು ಮಾಡಲಿ, ನಾಳೆ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಗೊತ್ತಾಗಲಿದೆಯಾವುದು ಕೊಡುತ್ತಾರೆ ಯಾವುದು ಇಲ್ಲ, ಏನು ಕಂಡಿಷನ್ ಹಾಕುತ್ತಾರೆ ಎನ್ನುವುದು ಗೊತ್ತಾಗುತ್ತದೆ ಎಂದರು.ಡಿಸಿಎಂ ಡಿ. ಕೆ. ಶಿವಕುಮಾರ್ ಶಾಸಕ ಲಕ್ಷ್ಮಣ ಸವದಿ ಹಾಗೂ ಮಾಜಿ …

Read More »

You cannot copy content of this page