Welcome to bigtvnews   Click to listen highlighted text! Welcome to bigtvnews
Breaking News

ಬೆಳಗಾವಿ

ಮೊದಲ ಮತ ಲಖನ್​ಗೋ? ಕವಟಗಿಮಠಗೋ? ರಮೇಶ ಜಾರಕಿಹೊಳಿ ಸಸ್ಪೇನ್ಸ್

ಅಥಣಿ: ನನಗೆ ವೈರಿಗಳು ಹೆಚ್ಚಾಗಿದ್ದಾರೆ. ಇದರಿಂದ ಮಾತನಾಡುವಾಗ ಎಚ್ಚರದಿಂದ ಮಾತನಾಡಬೇಕಾಗಿದೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು. ವಿಧಾನಪರಿಷತ್​ ಚುನಾವಣೆಯ ಹಿನ್ನೆಲೆಯಲ್ಲಿ ಅಥಣಿ ಪಟ್ಟಣದಲ್ಲಿ ತಮ್ಮ ಬೆಂಬಲಿಗರ ಜೊತೆ ನಡೆದ ಸಭೆಯಲ್ಲಿ ಮಾತನಾಡಿ, ವಿಧಾನಪರಿಷತ್ ಚುನಾವಣೆಯಲ್ಲಿ ಮೊದಲ ಪ್ರಾಶಸ್ತ್ಯದ ಮತ ಮತ್ತು ಎರಡನೇ ಪ್ರಾಶಸ್ತ್ಯದ ಮತ ಯಾರಿಗೆ ಹಾಕಬೇಕು ಎಂಬುದನ್ನು ಯಾರಿಗೆ ಹಾಕಬೇಕು ಎಂಬುದನ್ನು ಪಕ್ಷದ ವರಿಷ್ಠರ ಜೊತೆ ಮಾತನಾಡಿ ಶೀಘ್ರವೇ ತಿಳಿಸುವೆ ಎಂದು ಹೇಳಿದರು. ಮೊದಲ ಮತ ಲಖನ್​ಗೋ? …

Read More »

ಬೆಳಗಾವಿಯಲ್ಲಿ ಉಮೇದುವಾರಿಕೆ ಸಲ್ಲಿಸಿದ ‘ಕೈ’ ಅಭ್ಯರ್ಥಿ,

ಬೆಳಗಾವಿ: ವಿಧಾನ ಪರಿಷತ್ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ್ ಹಟ್ಟಿಹೊಳಿ ಅವರಿಂದು ನಾಮಪತ್ರ ಸಲ್ಲಿಸಿದ್ದಾರೆ. ಬೆಳಗಾವಿಯ ಡಿಸಿ ಕಚೇರಿಗೆ ಆಗಮಿಸಿದ ಅವರು ಚುನಾವಣೆ ಅಧಿಕಾರಿ ಆರ್. ವೆಂಕಟೇಶಕುಮಾರ್ ಅವರಿಗೆ ಉಮೇದುವಾರಿಕೆ ಸಲ್ಲಿಸಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಮಾಜಿ ಸಚಿವ ಎ.ಬಿ.ಪಾಟೀಲ್, ಶಾಸಕಿಯರಾದ ಲಕ್ಷ್ಮಿ ಹೆಬ್ಬಾಳ್ಕರ್, ಅಂಜಲಿ ನಿಂಬಾಳ್ಕರ್, ಮಾಜಿ ಶಾಸಕರಾದ ಅಶೋಕ ಪಟ್ಟಣ, ವೀರಕುಮಾರ ಪಾಟೀಲ, ಶ್ಯಾಮ ಘಾಟಗೆ ಉಪಸ್ಥಿತರಿದ್ದರು. ಕಾಂಗ್ರೆಸ್‌, ಬಿಜೆಪಿ ಶಕ್ತಿ ಪ್ರದರ್ಶನಪರಿಷತ್ ಚುನಾವಣೆಗಿಂದು ನಾಮಪತ್ರ ಸಲ್ಲಿಕೆಗೆ …

Read More »

ತಂದೆಯನ್ನೇ ಕೊಂದ ಕ್ರೂರಿ ಮಗ

ಬೆಳಗಾವಿ : ಬೆಳಗಾವಿ ತಾಲೂಕಿನ ಕಾಕತಿ ಗ್ರಾಮದಲ್ಲಿ ಬೆಳಂಬೆಳಿಗ್ಗೆ ಕ್ರೂರಿ ಮಗನೊಬ್ಬ ತನ್ನ ಹೆತ್ತ ತಂದೆಯನ್ನೆ ಇಳಿಗೆ ಮನೆಯಿಂದ ಇರಿದು, ತಲೆ ಮತ್ತು ಕಾಲುಗಳನ್ನು ತುಂಡಾಗಿ ಕತ್ತರಿಸಿರುವ ಘಟನೆ ನಡೆದಿದ್ದು ಇಡಿ ಗ್ರಾಮವನ್ನೇ ಬೆಚ್ಚಿಬೀಳಿಸಿದೆ.ಕೊಲೆಯಾದ ವ್ಯಕ್ತಿ 60ವರ್ಷದ ಶಂಕ್ರೆಪ್ಪಾ ಕುಂಬಾರ ನಿವೃತ್ತ ಸಶಸ್ತ್ರ ಪಡೆ ಪೋಲಿಸ್ ಅಧಿಕಾರಿ. ಸಿದ್ದೇಶ್ವರ ನಗರದ ನಿವಾಸಿ. ಶಂಕ್ರೆಪ್ಪಾ ಅವರು 3 ತಿಂಗಳಿದ್ದೆ ಪೋಲಿಸ್ ಸೇವೆಯಿಂದ ನಿವೃತ್ತಿಗೊಂಡಿದ್ದರು. ನಿನ್ನೆ ಇವರ ಮಗ ರಘುವೀರ ಸದಾ ಮೊಬೈಲ್ನಲ್ಲಿ …

Read More »

ಪ್ರವಾಹದಲ್ಲಿ ಕೊಚ್ಚಿಕೊಂಡು ಹೋದ ಯುವಕ ಶವವಾಗಿ ಪತ್ತೆ

ಚಿಕ್ಕೋಡಿ: ಕೃಷ್ಣಾ ನದಿ ನೀರಿನ ಪ್ರವಾಹದಲ್ಲಿ ಕೋಚ್ಚಿಕೊಂಡು ಹೊಗಿದ್ದ ಬಾಲಕನ ಶವ ಪತ್ತೆಯಾಗಿದೆ. ಬಸವರಾಜ ಮಾನಿಕ ಕಾಂಬಳೆ 13 ವರ್ಷದ ಬಾಲಕ ಶವವಾಗಿ ಪತ್ತೆಯಾಗಿದ್ದಾನೆ.ಕಳೆದ 7/8/19 ರಂದು ಕೃಷ್ಣಾ ನದಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದ ಬಾಲಕಇಂದು ಶವವಾಗಿ ಪತ್ತೆಯಾಗಿದ್ದಾನೆ. ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ನದಿಇಂಗಲಗಾವ ಗ್ರಾಮದ ಕಬ್ಬಿಣ ತೋಟದಲ್ಲಿ ಶವ ಪತ್ತೆಯಾಗಿದ್ದು, ಪ್ರವಾಹ ಸಂದರ್ಭದಲ್ಲಿ ಕೃಷ್ಣಾ ನದಿಯಲ್ಲಿ ಆಕಸ್ಮಿಕ ಸೆಳೆತಕ್ಕೆ ಸೀಲುಕಿದ ಬಸವರಾಜ ಕಾಂಬಳೆ ಬೆಳಗಾವಿ ಜಿಲ್ಲೆ ಅಥಣಿ …

Read More »

ವಿಷಪೂರಿತ ಹಾಲಿನ ಅಡ್ಡೆಯ ಮೇಲೆ ದಾಳಿ

ಕೆಮಿಕಲ್‌ ಹಾಲು ತಯಾರಿಕಾ ಘಟಕದ ಮೇಲೆ ಪೊಲೀಸರು ದಾಳಿ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಚಿಂಚಲಿ ಪಟ್ಟಣದಲ್ಲಿ ನಡೆದಿದೆ. ಕೆಮಿಕಲ್ ಮಿಶ್ರಣ ಮಾಡಿ ಹಾಲಿನ ಪ್ಯಾಟ್ ಜಾಸ್ತಿ ಮಾಡುತ್ತಿದ್ದ ಖದೀಮರ ಅಡ್ಡೆಯ ಮೇಲೆ ಖಚಿತ ಮಾಹಿತಿ ಮೇರೆಗೆ ರಾತ್ರೋರಾತ್ರಿ ಪೋಲಿಸರು ದಾಳಿ ನಡೆಸಿದ್ದು, ೬ ಜನ ಖದೀಮರನ್ನು ಬಂಧಿಸಿದ್ದಾರೆ. ಮಹಾರಾಷ್ಟ್ರದ ಸಾಂಗ್ಲಿಯಿಂದ ಕೆಮಿಕಲ್ ತರುವಾಗ ಆರೋಪಿಗಳು ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ. ಕುಮಾರ ಹಾರೂಗೇರಿ ಎಂಬುವವರಿಗೆ …

Read More »

ನೀರಿನ ದಾಹ ತೀರಿಸಿಕೊಳ್ಳಲು ಹೋಗಿ ವ್ಯಕ್ತಿ ದುರ್ಮರಣ,

ನೀರಿನ ದಾಹ ತೀರಿಸಿಕೊಳ್ಳಲು ಹೋಗಿ ವ್ಯಕ್ತಿ ದುರ್ಮರಣ ಹೊಂದಿದ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಯಲಿಹಡಗಲಿ ಗ್ರಾಮದ ಹೊರವಲಯದ ಗೊಂದಳೆ ತೋಟದಲ್ಲಿ ನಡೆದಿದೆ. ಕುಡಿಯಲು ನೀರು ತರಲು ಹೋಗಿ ಕೃಷಿ ಹೊಂಡದಲ್ಲಿ ಬಿದ್ದು ಮಲ್ಲಿಕಾರ್ಜುನ್ ಐಗಳಿ(೩೩) ಎಂಬಾತ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾನೆ. ಮೃತ ಮಲ್ಲಿಕಾರ್ಜುನ್ ಯಕ್ಕಂಚಿ ಗ್ರಾಮದ ನಿವಾಸಿ, ಯಕ್ಕಂಚಿ ಗ್ರಾಮದಲ್ಲಿ ಕುಡಿಯುವ ನೀರಿಗೆ ಬರ ಹಿನ್ನೆಲೆ ಕೃಷಿ ಹೊಂಡಕ್ಕೆ ತೆರಳಿದ್ದ ಮಲ್ಲಿಕಾರ್ಜುನ್, ನೀರು ತರುವಾಗಲೇ ಕಾಲು …

Read More »

ಖಾಸಗಿ ಚಾನಲ್ ವರದಿಗಾರನ ಮೇಲೆ ಮಾರಣಾಂತಿಕ ಹಲ್ಲೆ..

ಖಾಸಗಿ ಚಾನಲ್ ವರದಿಗಾರನ ಮೇಲೆ ವ್ಯಕ್ತಿಯೊಬ್ಬನಿಂದ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ಬೆಳಗಾವಿಯ ಕಿತ್ತೂರು ತಾಲೂಕಿನ ವೀರಾಪೂರ ಗ್ರಾಮದಲ್ಲಿ ತಡ ರಾತ್ರಿಯಲ್ಲಿ ನಡೆದಿದೆ. ಬಸವರಾಜು ಪಾಟೀಲ್ ಹಲ್ಲೆಗೊಳಗಾದ ಪರ್ತಕರ್ತ.ವೀರಾಪುರ ಗ್ರಾಮದಲ್ಲಿ ರಾಯಪ್ಪ ಅಂಬಡಗಟ್ಟಿ ಎಂಬಾತ ಗ್ರಾಮಸ್ಥರ ಮೇಲೆ ಗೂಂಡಾಗಿರಿ ನಡೆಸುತ್ತಿದ್ದ. ಇದರ ಬಗ್ಗೆ ಪೋಲಿಸರಿಗೆ ಪತ್ರಕರ್ತ ಮಾಹಿತಿ ನೀಡಿದ್ದ. ಈ ಹಿನ್ನೆಲೆಯಲ್ಲಿ ನನ್ನ ಬಗ್ಗೆ ಪೊಲೀಸರಿಗೆ ಯಾಕೆ? ಹೇಳಿದ್ದಿಯಾ ಅಂತಾ ನಿನ್ನೆ ತಡ ರಾತ್ರಿ ಗೂಂಡಾ ರಾಯಪ್ಪ ಪರ್ತಕರ್ತನ ಮನೆಗೆ …

Read More »

ಸ್ವಾಮೀಜಿ ಮೇಲೆ ದುಷ್ಕರ್ಮಿಗಳಿಂದ ಏಕಾಎಕಿ ಹಲ್ಲೆ,

ಸ್ವಾಮೀಜಿಯ ಮೇಲೆ ಕೆಲ ದುಷ್ಕರ್ಮಿಗಳು ತಡರಾತ್ರಿ ಮಠಕ್ಕೆ ನುಗ್ಗಿ ಏಕಾಎಕಿ ಹಲ್ಲೆ‌ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ನಿಪನಾಳ ಗ್ರಾಮದಲ್ಲಿ ನಡೆದಿದೆ. ನಿಪನಾಳದ ಸೇವಾಶ್ರಮ ಮಠದ ಪೀಠಾಧಿಪತಿಗಳಾದ ಪ್ರಭುಮಹರಾಜ(೪೦) ಸ್ವಾಮೀಜಿಗಳ ಮೇಲೆ‌ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ತಡರಾತ್ರಿ ೬ ಜನ‌ ದುಷ್ಕರ್ಮಿಗಳಿಂದ ಏಕಾಎಕಿ ಸ್ವಾಮೀಜಿ ಮೇಲೆ ಹಲ್ಲೆ ನಡೆದ ಹಿನ್ನೆಲೆಯಲ್ಲಿ ತೀವ್ರವಾಗಿ ಗಾಯಗೊಂಡ ಪ್ರಭುಮಹರಾಜ ಸ್ವಾಮೀಜಿ ಆಸ್ಪತ್ರಗೆ ದಾಖಲಾಗಿದ್ದಾರೆ, ಈ ಕುರಿತು ೬ ಜನ ಆರೋಪಿಗಳ ಪರ …

Read More »

ಚಿಕ್ಕೋಡಿ ಪಟ್ಟಣದ ಹೊರವಲಯದಲ್ಲಿ ಅಪರಿಚಿತ ಶವ ಪತ್ತೆ

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ಹೊರವಲಯದಲ್ಲಿ ಅಪರಿಚಿತ ಶವ ಪತ್ತೆಯಾಗಿದೆ. ಸುಮಾರು 38 ವಯಸ್ಸಿನ ವ್ಯಕ್ತಿಯ ಬರ್ಬರವಾಗಿ ಕೊಲೆ ಮಾಡಿ ಎಸೆದಿರುವ ಶಂಕೆ ವ್ಯಕ್ತವಾಗಿದೆ. ಮುಖದ ಮೆಲೆ ಕಲ್ಲು ಹಾಕಿ ಕೊಲೆ ಮಾಡಿ ನಿಪ್ಪಾಣಿ_ಮುಧೋಳ ಹೆದ್ದಾರಿ ಪಕ್ಕ ಶವ ಎಸೆದಿದ್ದಾರೆ. ಈ ಕುರಿತು ಸ್ಥಳಕ್ಕೆ ಚಿಕ್ಕೋಡಿ ಪೊಲೀಸರು ಭೇಟಿ ನೀಡಿ ಪರಿಶಿಲನೆ ನಡೆಸಿದರು. ಪ್ರಕರಣ ದಾಖಲಿಸಿ ಕೊಂಡಿರುವ ಪೋಲಿಸ್ ಇಲಾಖೆ ಆರೋಪಿಗಳಿಗೆ ಬಲೆ ಬೀಸಿದ್ದಾರೆ.

Read More »

ಮಾಜಿ ಶಾಸಕನ ಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೆ ಸಾವು

ಮಾಜಿ ಶಾಸಕನ ಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೆ ಸಾವನ್ನಪ್ಪಿದ ಘಟನೆ ಬೆಳಗಾವಿ ಜಿಲ್ಲೆಯ ಕಬ್ಬೂರು ಹೊರವಲಯದಲ್ಲಿ ನಡೆದಿದೆ. ಖಾನಾಪುರ ಮಾಜಿ ಶಾಸಕ ಅರವಿಂದ ಪಾಟೀಲ್ ಎಂದು ಎನ್ನಲಾಗಿದೆ. ಅಪಘಾತಕ್ಕೀಡಾತ ವ್ಯಕ್ತಿ ಸ್ಥಳದಲ್ಲೆ ಅಸು ನೀಗಿದರೂ ಸಹ ಯಾವುದನ್ನು ವಿಚಾರಣೆ ಮಾಡದೇ ಬೇರೆ ವಾಹನ ಮಾಡಿಕೊಂಡ ಮಾಜಿ ಶಾಸಕರು ಹೋಗಿದ್ದಾರೆ. ಅರವಿಂದ ಪಾಟೀಲ್ ದಂಪತಿಗಳು ಖಾಸಗಿ ಕಾರ್ಯಕ್ರಮಕ್ಕಾಗಿ ರಾಯಭಾಗ ಪಟ್ಟಣಕ್ಕೆ ತೆರಳುತ್ತಿದ್ದ ವೇಳೆ ಬೈಕ್ ಡಿಕ್ಕಿಯಾಗುತ್ತಿದ್ದಂತೆ ಕಾರ್ …

Read More »
You cannot copy content of this page
Click to listen highlighted text!