Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ದೆಹಲಿ

ದೆಹಲಿ

ಅಧಿವೇಶನದಲ್ಲಿ ದೇವೇಗೌಡರನ್ನ ಹಾಡಿ ಹೊಗಳಿದ ಪ್ರಧಾನಿ ಮೋದಿ

ನವದೆಹಲಿ: ಇಂದು ರಾಜ್ಯಸಭೆ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ರು. ಈ ವೇಳೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರನ್ನ ಹಾಡಿಹೊಗಳಿದ್ರು. ಹಾಗಾದ್ರೆ, ಪ್ರಧಾನಿ ಮೋದಿಯವ್ರು ಮಾಜಿ ಪ್ರಧಾನಿಗಳ ಬಗ್ಗೆ ಹೇಳಿದ್ದಾದ್ರು ಏನು? ಪ್ರಧಾನಿ ಮೋದಿಯವ್ರು ರಾಜ್ಯ ಸಭೆ ಅಧಿವೇಶನದಲ್ಲಿಂದು ಮಾಜಿ ಪ್ರಧಾನಿ ದೇವೇಗೌಡನ್ನ ಉದ್ದೇಶಿಸಿ, ‘ನಾನು ಗೌರವಾನ್ವಿತ ದೇವೇಗೌಡರಿಗೆ ಆಭಾರಿಯಾಗಿದ್ದೇನೆ. ಅವರು ಈ ಪೂರ್ತಿ ಚರ್ಚೆಗೆ ಒಂದು ಗಾಂಭೀರ್ಯತೆ ನೀಡಿದ್ದಾರೆ. ಅವರು ಸರ್ಕಾರ ಒಳ್ಳೆಯ ಕೆಲಸಗಳನ್ನು ಮೆಚ್ಚಿದ್ದಾರೆ, ಅವರು ತಮ್ಮ …

Read More »

ಟಿಕ್​ಟಾಕ್​ಅನ್ನು ಮೀರಿಸಿ ಮೊದಲ ಸ್ಥಾನ ಪಡೆದ ಟೆಲಿಗ್ರಾಂ

ನವದೆಹಲಿ: ‘ವಾಟ್ಸ್​ಆಯಪ್​’ಗೆ ಪ್ರತಿಸ್ಪರ್ಧಿಯಾದ ಮೆಸೇಜಿಂಗ್ ಆಯಪ್ ‘ಟೆಲಿಗ್ರಾಂ’, ಜನವರಿ ತಿಂಗಳಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಡೌನ್ಲೋಡ್​ ಆದ ನಾನ್-ಗೇಮಿಂಗ್ ಆಯಪ್​ ಆಗಿ ಹೊರಹೊಮ್ಮಿದೆ. ಸೆನ್ಸಾರ್ ಟವರ್​ ನೀಡಿರುವ ವರದಿಯ ಪ್ರಕಾರ 2021 ರ ಜನವರಿಯಲ್ಲಿ ಟೆಲಿಗ್ರಾಂ 63 ಮಿಲಿಯನ್ ಇನ್​ಸ್ಟಾಲ್​ಗಳನ್ನು ಕಂಡಿದ್ದು, ಗೂಗಲ್ ಪ್ಲೇ ಸ್ಟೋರ್​ನಲ್ಲಿ ಈವರೆಗೆ ‘ಟಿಕ್​ಟಾಕ್’​ ಆಯಪ್​ಗಿದ್ದ ಮೊದಲ ಸ್ಥಾನವನ್ನು ತಾನು ಪಡೆದುಕೊಂಡಿದೆ. 2020ರ ಡಿಸೆಂಬರ್ ತಿಂಗಳಲ್ಲಿ 9 ನೇ ಸ್ಥಾನದಲ್ಲಿದ್ದ ಟೆಲಿಗ್ರಾಂ ಜನವರಿ ತಿಂಗಳಲ್ಲಿ ದಿಢೀರನೇ …

Read More »

ರೇಲ್ವೆ ಇಲಾಖೆಯಿಂದ ಮಹತ್ವದ ಮಾಹಿತಿ.

ಹೊಸದಿಲ್ಲಿ: ಕೇಂದ್ರ ರೈಲ್ವೆ, ರೈಲ್ವೆ ನೇಮಕಾತಿ ಕೋಶವು ಅಪ್ರೆಂಟಿಸ್ ಹುದ್ದೆಗೆ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದೆ. 2021 ಫೆಬ್ರವರಿ 06 ರಿಂದ ಆನ್‌ಲೈನ್ ಅರ್ಜಿಯನ್ನು ಆಹ್ವಾನಿಸಲಾಗುವುದು. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೇಂದ್ರ ರೈಲ್ವೆ ಅಪ್ರೆಂಟಿಸ್ ನೇಮಕಾತಿ 2021 ಗೆ ಮಾರ್ಚ್ 5, 2021 ರಂದು ಅಥವಾ ಮೊದಲು ಆರ್‌ಆರ್ಸಿ ಅಧಿಕೃತ ವೆಬ್‌ಸೈಟ್ rrccr.com ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಸಾಗಾಟ & ವ್ಯಾಗನ್, ಮುಂಬೈ ಕಲ್ಯಾಣ್ ಡೀಸೆಲ್ ಶೆಡ್, ಪ್ಯಾರೆಲ್ ಕಾರ್ಯಾಗಾರ, ಮನ್ಮಾದ್ …

Read More »

ಡ್ರೈವಿಂಗ್ ಲೈಸೆನ್ಸ್ ಕುರಿತು ಗುಡ್ ನ್ಯೂಸ್.

ನವದೆಹಲಿ: ವಾಹನ ಚಲಾಯಿಸಲು ಬಹುಮುಖ್ಯವಾಗಿ ಡ್ರೈವಿಂಗ್​ ಲೈಸೆನ್ಸ್ ಬೇಕು. ಅದನ್ನು ಪಡೆಯಬೇಕಾದರೆ ಅನೇಕ ಹಂತಗಳನ್ನು ಸಹ ಪೂರ್ಣಗೊಳಿಸಬೇಕಿದೆ. ಅದರಲ್ಲಿ ಡ್ರೈವಿಂಗ್​ ಟೆಸ್ಟ್​ ಸಹ ತುಂಬಾ ಮುಖ್ಯ. ಆದರೆ, ಇಂದು ಮಧ್ಯವರ್ತಿಗಳ ಅಬ್ಬರ ಮತ್ತು ಸರ್ಕಾರಿ ಅಧಿಕಾರಿಗಳ ಬೇಜವಾಬ್ದಾರಿ ಅಥವಾ ದುರಾಡಳಿತದ ಪರಿಣಾಮವಾಗಿ ಲೈಸೆನ್ಸ್​ ಸುಲಭವಾಗಿ ಪಡೆಯುವುದು ದುಸ್ತರವಾಗಿದೆ. ಒಂದಲ್ಲ ಒಂದು ನೆಪ ಹೇಳಿ ಸಾರ್ವಜನಿಕರನ್ನು ಅಲೆದಾಡಿಸುತ್ತಾರೆ. ಅಲ್ಲದೆ, ಹಣ ಖರ್ಚು ಮಾಡಿದರೆ ಟೆಸ್ಟ್​ ಇಲ್ಲದೆ ಪಾಸ್​ ಮಾಡುತ್ತಾರೆ. ಆದಷ್ಟು ಬೇಗ ಡಿಎಲ್​ …

Read More »

‘ಅಂಗವಿಕಲ ವಾಹನ ಸವಾರ’ರಿಗೆ ಗುಡ್ ನ್ಯೂಸ್

ನವದೆಹಲಿ : ಅಂಗವಿಕಲರ ಮಾಲೀಕತ್ವದ ವಾಹನಗಳಿಗೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ. ಈ ಮೂಲಕ ಅಂಗವಿಕಲ ವಾಹನ ಸವಾರರಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಈ ಕುರಿತಂತೆ ಗುರುವಾರ ಮಾಹಿತಿ ನೀಡಿರುವಂತ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿಯವರು, ಹೆದ್ದಾರಿ ಟೋಲ್ ಗಳ ಶುಲ್ಕ ಪಾವತಿಯಲ್ಲಿ ವಿನಾಯಿತಿ ನೀಡಿರುವ ಸಂಬಂಧ ಸರ್ಕಾರ ಈಗಾಗಲೇ ಅಧಿಸೂಚನೆ …

Read More »

ಚಿನ್ನ ಖರೀದಿದಾರರಿಗೆ ಭರ್ಜರಿ ಗುಡ್ ನ್ಯೂಸ್

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ನಲ್ಲಿ ಚಿನ್ನ ಮತ್ತು ಬೆಳ್ಳಿಯ ಮೇಲಿನ ಆಮದು ಸುಂಕವನ್ನು ಕಡಿತ ಮಾಡಿದ ನಂತರದಲ್ಲಿ ಚಿನ್ನದ ಬೆಲೆ ಭಾರಿ ಇಳಿಕೆಯಾಗಿದೆ. ಕಳೆದ ನಾಲ್ಕು ದಿನದ ಅವಧಿಯಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಚಿನ್ನದ ದರ 10 ಗ್ರಾಂಗೆ 2500 ರೂ.ನಷ್ಟು ಇಳಿಕೆಯಾಗಿದೆ. ಬಜೆಟ್ನಲ್ಲಿ ಆಮದು ಸುಂಕವನ್ನು ಶೇಕಡ 12.5 ಇದರಿಂದ ಶೇಕಡ 7.5 ರಷ್ಟು ಕಡಿತಗೊಳಿಸಲಾಗಿದೆ. ಇದಾದ ನಂತರದಲ್ಲಿ ಚಿನ್ನದ ದರ …

Read More »

ಆನ್‌ಲೈನ್ ಗೇಮ್ ಆಡುವವರಿಗೆ ಬಿಗ್ ಶಾಕ್.

ಚೆನ್ನೈ: ತಮಿಳುನಾಡು ಸರ್ಕಾರ ಆನ್ಲೈನ್ ಮೂಲಕ ನಡೆಯುವ ಜೂಜು ನಿಯಂತ್ರಣಕ್ಕೆ ಕಠಿಣ ಕಾಯ್ದೆ ಜಾರಿಗೆ ತರಲು ಮುಂದಾಗಿದೆ. ಪ್ರಸಕ್ತ ಅಧಿವೇಶನದಲ್ಲೇ ಕಠಿಣ ಕಾಯ್ದೆ ಜಾರಿಗೆ ಮಸೂದೆ ಮಂಡಿಸಲಾಗಿದೆ. ಪೋಕರ್, ಆನ್ಲೈನ್ ರಮ್ಮಿ ಮೊದಲಾದ ಜೂಜಾಟ ಆಡುವವರಿಗೆ, ಆಡಿಸುವವರಿಗೆ ಎರಡು ವರ್ಷಗಳ ಜೈಲು ಶಿಕ್ಷೆ, 10 ಸಾವಿರ ರೂಪಾಯಿ ದಂಡ ವಿಧಿಸಲು ಅವಕಾಶ ಇದೆ. ವೆಬ್ಸೈಟ್, ಕಂಪ್ಯೂಟರ್, ಆಪ್ ಯಾವುದೇ ರೀತಿಯ ಬೆಟ್ಟಿಂಗ್ ನಲ್ಲಿ ತೊಡಗಿದರೆ ಶಿಕ್ಷಾರ್ಹ ಅಪರಾಧವಾಗುತ್ತದೆ ಎಂದು ಹೇಳಲಾಗಿದೆ. Share

Read More »

ಸಿನೆಮಾ ಟಿಕೆಟ್ ಗೆ ಮೊಬೈಲ್ ನಂಬರ್ ಕಡ್ಡಾಯ.

ಬೆಂಗಳೂರು: ಚಿತ್ರಮಂದಿರಗಳು ಮತ್ತು ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿನಿಮಾ ವೀಕ್ಷಣೆಗೆ ಟಿಕೆಟ್‌ ಖರೀದಿಸುವ ವ್ಯಕ್ತಿಗಳಿಂದ ಕಡ್ಡಾಯವಾಗಿ ಹೆಸರು ಮತ್ತು ಮೊಬೈಲ್‌ ಸಂಖ್ಯೆ ಸಂಗ್ರಹಿಸುವಂತೆ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ. ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ಸಿನಿಮಾ ರಂಗದ ಪ್ರಮುಖರ ಬೇಡಿಕೆಯಂತೆ ಚಿತ್ರಮಂದಿರಗಳು ಹಾಗೂ ಮಲ್ಟಿಪ್ಲೆಕ್ಸ್‌ಗಳಲ್ಲಿ ಶೇ 100 ಪ್ರೇಕ್ಷಕರಿಗೆ ಅವಕಾಶ ಕಲ್ಪಿಸಲು ಬುಧವಾರ ಒಪ್ಪಿಗೆ ನೀಡಲಾಗಿತ್ತು. ಈ ಸಂಬಂಧ ಪರಿಷ್ಕೃತ ಮಾರ್ಗಸೂಚಿ ಹೊರಡಿಸಿರುವ ಸರ್ಕಾರ, ಗ್ರಾಹಕರ ಮಾಹಿತಿ ಸಂಗ್ರಹಿಸುವಂತೆ ಸೂಚಿಸಿದೆ. ಪ್ರೇಕ್ಷಕರು ಎಲ್ಲ …

Read More »

ದೆಹಲಿ ಗಡಿಭಾಗಗಳಲ್ಲಿ ಇಂಟರ್ನೆಟ್ ಸ್ಥಗಿತ.

ನವದೆಹಲಿ: ಹಿಂಸಾಚಾರವನ್ನು ತಡೆಗಟ್ಟಲು ದೆಹಲಿಯ ಗಡಿ ಪ್ರದೇಶಗಳಲ್ಲಿ ಇಂಟರ್‌ನೆಟ್‌ ಸೇವೆಯನ್ನು ಕಡಿತಗೊಳಿಸಲಾಯಿತು ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ಈ ವಿಚಾರವಾಗಿ ಮಾತನಾಡಿರುವ ಕೇಂದ್ರ ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ್‌, ‘ದೆಹಲಿ ಗಡಿ ಪ್ರದೇಶಗಳಲ್ಲಿ ಮತ್ತಷ್ಟು ಹಿಂಸಾಚಾರ ನಡೆಯುವುದನ್ನು ತಡೆಗಟ್ಟಲು ಇಂಟರ್‌ನೆಟ್‌ ಸೇವೆಯನ್ನು ಕಡಿತಗೊಳಿಸಬೇಕಾಯಿತು’ ಎಂದು ಹೇಳಿದ್ದಾರೆ. ‘ಜನವರಿ 06ರಂದು ಅಮೆರಿಕದ ಕ್ಯಾಪಿಟಲ್ ಕಟ್ಟಡದ ಮೇಲೆ ನಡೆದ ದಾಳಿ ಮತ್ತು ಜನವರಿ 26ರಂದು ದೆಹಲಿಯ ಕೆಂಪು ಕೋಟೆಯ ಮೇಲೆ …

Read More »

ರೆಪೋ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡ RBI.

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ನಿರೀಕ್ಷೆಗಿಂತ ಕಡಿಮೆ ಮಟ್ಟದಲ್ಲಿ ದರಗಳನ್ನು ಸ್ಥಿರವಾಗಿಇರಿಸಿದೆ. ಈ ಮೂಲಕ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ರೂಪಾಯಿ ದ್ರವತ್ವವನ್ನು ಖಾತರಿಪಡಿಸುವ ಮೂಲಕ ಚೇತರಿಕೆಯ ಆರ್ಥಿಕತೆಗೆ ಬೆಂಬಲ ನೀಡುವುದನ್ನು ಮುಂದುವರಿಸುವುದಾಗಿ ಆರ್ ಬಿಐ ಪುನರುಚ್ಚರಿಸಿದೆ. 2019ರ ಆರಂಭದಿಂದಚೀಗೆ 135 bps ಕಡಿತದ ನಂತರ ಕರೋನವೈರಸ್ ಸಾಂಕ್ರಾಮಿಕ ದಿಂದ ಆಘಾತವನ್ನು ತಗ್ಗಿಸಲು 2020ರ ಮಾರ್ಚ್ ನಿಂದ ರೆಪೊ ದರವು ಒಟ್ಟು 115 ಬೇಸಿಸ್ ಪಾಯಿಂಟ್ ಗಳಷ್ಟು …

Read More »

ಮಾನವನ ಸಂಪರ್ಕಕ್ಕೆ ಯತ್ನಿಸುತ್ತಿವೆ ಏಲಿಯನ್.

ನವದೆಹಲಿ: ನಾಸಾದಂತಹ ಅನೇಕ ಬಾಹ್ಯಾಕಾಶ ಸಂಸ್ಥೆಗಳು ಭೂಮಿಯಿಂದಾಚೆಗಿನ ಜೀವ ಜಗತ್ತಿನ ಕುರುಹು ಪತ್ತೆ ಮಾಡುವಲ್ಲಿ ಪ್ರಯತ್ನ ಮಾಡುತ್ತಿವೆ. ವಿಶ್ವದಲ್ಲಿ ಮಾನವರ ಇರುವಿಕೆಯನ್ನು ತಿಳಿಸಲು ಅನೇಕ ರೆಡಿಯೋ ಸಿಗ್ನಲ್​ಗಳನ್ನು ಮನುಷ್ಯ ಪ್ರಸಾರ ಮಾಡಿದರೂ ಸಹ, ಅನ್ಯಗ್ರಹ ಜೀವಿಗಳಾದ ಏಲಿಯನ್​ಗಳು ಇವೆ ಎಂದು ದೃಢೀಕರಿಸುವ ಯಾವುದೇ ಪುರಾವೆಯನ್ನು ಪತ್ತೆಹಚ್ಚುವಲ್ಲಿ ವಿಜ್ಞಾನಿಗಳು ಇನ್ನು ಯಶಸ್ಸು ಸಾಧಿಸಿಲ್ಲ. ಏಲಿಯನ್​ಗಳು ವಿಶ್ವದಲ್ಲಿ ಅಸ್ತಿತ್ವದಲ್ಲಿವೆ ಏಲಿಯನ್​ ಸಂಪರ್ಕ ಸಾಧಿಸಲು ಮಾನವ ಪ್ರಯತ್ನಿಸುತ್ತಿದ್ದು, ಅನ್ಯಗ್ರಹ ಜೀವಿಗಳು ಇರುವ ಬಗ್ಗೆ ಅನೇಕ ಬಾಹ್ಯಾಕಾಶ …

Read More »

ಟೀಂ ಇಂಡಿಯಾ ಆಟಗಾರರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ಕಂಗನಾ.

ಪಾಪ್​ ಸಿಂಗರ್​ ರಿಹನ್ನಾ ಹಾಗೂ ಕ್ಲೈಮೇಟ್​ ಆಕ್ಟಿವಿಸ್ಟ್​ ಗ್ರೆಟಾ ಥನ್​ಬರ್ಗ್​ ರೈತ ಪ್ರತಿಭಟನೆ ಬಗ್ಗೆ ಧ್ವನಿ ಎತ್ತಿದ್ದೇ ತಡ ಭಾರತದ ಅನೇಕ ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣದಲ್ಲಿ ಒಗ್ಗಟ್ಟಿನ ಸಂದೇಶವನ್ನ ಸಾರುತ್ತಿದ್ದಾರೆ. ಈ ಅಭಿಯಾನಕ್ಕೆ ಸ್ಟಾರ್​ ಕ್ರಿಕೆಟಿಗರೂ ಸಾಥ್​ ನೀಡಿದ್ದು ಸಚಿನ್ ತೆಂಡೂಲ್ಕರ್​, ಅನಿಲ್​ ಕುಂಬ್ಳೆ, ಕೊಹ್ಲಿ, ರಹಾನೆ, ರೋಹಿತ್​ ಶರ್ಮಾ ಸೇರಿದಂತೆ ಅನೇಕರು ನಾವೆಲ್ಲ ಒಂದಾಗಿದ್ದೇವೆ ಎಂಬ ಮೆಸೇಜ್​ ನೀಡಿದ್ದಾರೆ. ಆದರೆ ಸದಾ ಒಂದಿಲ್ಲೊಂದು ವಿವಾದದ ಮೂಲಕ ಸುದ್ದಿಯಾಗುವ ನಟಿ …

Read More »

ಭಾರತದ ಕುರಿತಂತೆ ನಿಮ್ಮ ಪ್ರೀತಿ ನೋಡಿದರೆ ಸಂತೋಷವಾಗುತ್ತದೆ

ನವದೆಹಲಿ: ಭಾರತದ ಕುರಿತು ಇಂಗ್ಲೆಂಡ್ ತಂಡದ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್ಸನ್ ಮಾಡಿದ್ದ ಟ್ವೀಟ್ ಗೆ ಪ್ರಧಾನಿ ಮೋದಿ ಪ್ರತಿಕ್ರಿಯೆ ನೀಡಿದ್ದು, ಭಾರತದ ಕುರಿತಂತೆ ನಿಮ್ಮ ಪ್ರೀತಿ ನೋಡಿದರೆ ಸಂತೋಷವಾಗುತ್ತದೆ ಎಂದು ಹೇಳಿದ್ದಾರೆ. ಮಾರಕ ಕೊರೋನಾ ವೈರಸ್ ಸಾಂಕ್ರಾಮಿಕ ಹೋರಾಟದಲ್ಲಿ ನಿರ್ಣಾಯಕ ಪಾತ್ರವಹಿಸಿರುವ ಭಾರತ ಸರ್ಕಾರ ದಕ್ಷಿಣ ಆಫ್ರಿಕಾ ಸೇರಿದಂತೆ ಜಗತ್ತಿನ ಹಲವು ರಾಷ್ಟ್ರಗಳಿಗೆ ಕೊರೋನಾ ಲಸಿಕೆ ಸರಬರಾಜು ಮಾಡುತ್ತಿದೆ. ಇದೇ ವಿಚಾರವಾಗಿ ಟ್ವೀಟ್ ಮಾಡಿರುವ ಇಂಗ್ಲೆಂಡ್ ಮಾಜಿ ಕ್ರಿಕೆಟಿಗ …

Read More »
error: Content is protected !!