Breaking News
Hiring Reporter’s For more Information Contact Above Number 876 225 4007 . Program producer
Home / ಸಿನಿಮಾ / ಸುದ್ದಿ

ಸುದ್ದಿ

ಪವನ್ ಒಡೆಯರ್ ಪುತ್ರನ ನಾಮಕರಣ.

ಬೆಂಗಳೂರು: ನಿರ್ದೇಶಕ ಪವನ್ ಒಡೆಯರ್ ಹಾಗೂ ಅಪೇಕ್ಷಾ ದಂಪತಿಗೆ ಗಂಡು ಮಗು ಹುಟ್ಟಿದ್ದು, ಇದೀಗ ತಮ್ಮ ಮುದ್ದು ಮಗುವಿಗೆ ನಾಮಕರಣ ಶಾಸ್ತ್ರ ನೆರವೇರಿಸಿದ್ದಾರೆ. ಈ ಕುರಿತು ವಿಡಿಯೋ ಶೇರ‍್ ಮಾಡಿರುವ ನಿರ್ದೇಶಕ ಪವನ್ ಒಡೆಯರ್, ತಮ್ಮ ಮಗನ ನಾಮಕರಣದ ಸಂದರ್ಭದ ಫೋಟೋ ಹಾಗೂ ಇನ್ನಿತರ ಕೆಲ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅಂದ ಹಾಗೇ ಪವನ್ ಹಾಗೂ ಅಪೇಕ್ಷಾ ದಂಪತಿ ತಮ್ಮ ಮುದ್ದು ಮಗನಿಗೆ ಶೌರ್ಯ ಎಂದು ಹೆಸರಿಟ್ಟಿದ್ದಾರೆ. ಪವನ್ ಒಡೆಯರ್ ಹುಟ್ಟುಹಬ್ಬದ ದಿನದಂದೇ …

Read More »

ರಾಮ್ ಚರಣ್ ಹೊಸ ಚಿತ್ರದ ಲುಕ್ ವೈರಲ್.

ಆಚಾರ್ಯ ಸಿನಿಮಾದ ರಾಮ್​ಚರಣ್​​ ಫಸ್ಟ್​​ ಲುಕ್​​​ ರಿವಿಲ್​​​​ ಆಗಿದೆ. ಆದ್ರೆ ಈ ಪೋಸ್ಟರನ್ನು ಚಿತ್ರತಂಡ ಬಿಡುಗಡೆ ಮಾಡಿಲ್ಲ. ಬದಲಾಗಿ ಈ ಪೋಸ್ಟರ್​ ಫ್ಯಾನ್​ ಮೇಡ್​ ಆಗಿದ್ದು, ಸಖತ್ತಾಗಿ ರೆಡಿ ಮಾಡಲಾಗಿದೆ. ತೆಲುಗಿನ ಮೆಗಾಸ್ಟಾರ್ ಚಿರಂಜೀವಿ ಅಭಿನಯದ ‘ಆಚಾರ್ಯ’ ಸಿನಿಮಾ ಇದೀಗ ಸಖತ್​ ಸುದ್ದಿಯಲ್ಲಿದೆ. ಈ ಚಿತ್ರದಲ್ಲಿ ಚಿರಂಜೀವಿ ಪುತ್ರ ರಾಮ್​​ ಚರಣ್​​ ಕೂಡ ನಟಿಸುತ್ತಿದ್ದಾರೆಂಬ ಸುದ್ದಿ ಅಭಿಮಾನಿಗಳಿಗೆ ಫುಲ್​ ಖುಷಿ​​ ನೀಡಿತ್ತು. ಇದೀಗ ಆಚಾರ್ಯ ಸಿನಿಮಾದ ರಾಮ್​ಚರಣ್​​ ಫಸ್ಟ್​​ ಲುಕ್​​​ …

Read More »

ಕಿರುತೆರೆಗೆ ಎಂಟ್ರಿ ಕೊಟ್ಟ ಸುಧಾರಾಣಿ.

ಜೀ ಕನ್ನಡದ ಅತ್ಯಂತ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾದ ‘ಜೊತೆ ಜೊತೆಯಲಿ’ ಇದೀಗ ಅತ್ಯಂತ ಕುತೂಹಲಕಾರಿ ಘಟ್ಟಕ್ಕೆ ಬಂದು ನಿಂತಿದೆ. ಕನ್ನಡ ಕಿರುತೆರೆ ಇತಿಹಾಸದಲ್ಲಿಯೇ ಅತ್ಯಂತ ದಾಖಲೆ ಯಶಸ್ಸು ಪಡೆದ ಧಾರಾವಾಹಿಗೆ ಖ್ಯಾತ ನಟಿ ಸುಧಾರಾಣಿ ಹಾಗೂ ನಟ ವಿಜಯ್ ಸೂರ್ಯ ಪ್ರವೇಶ ಪಡೆದಿದ್ದಾರೆ. ವಿಶಿಷ್ಟ ಕಥೆಯುಳ್ಳ ಈ ಧಾರಾವಾಹಿ ಮೊದಲ ಕಂತಿನಿಂದಲೇ ವೀಕ್ಷಕರನ್ನು ಸೂಜಿಗಲ್ಲಿನಂತೆ ಸೆಳೆದಿತ್ತು. 45 ವರ್ಷದ ಯಶಸ್ವಿ ಉದ್ಯಮಿ, ಶ್ರೀಮಂತ ಆರ್ಯವರ್ಧನ್ 20 ವರ್ಷದ ಅನು ಸಿರಿಮನೆಯನ್ನು …

Read More »

ಕಂಗನಾ ಕಾಲೆಳೆದ ನೆಟ್ಟಿಗರು.

ಶಿವಸೇನಾ ನಾಯಕ ಸಂಜಯ್‌ ರೌತ್‌ ಜೊತೆಗೆ ಹರಾಕಿರಿ ಮಾಡಿಕೊಂಡು ಸುದ್ದಿ ಮಾಡುತ್ತಿದ್ದ ಬಾಲಿವುಡ್ ನಟಿ ಕಂಗನಾ ರನೌತ್‌ಗೆ ಸಿಆರ್‌ಪಿಎಫ್‌ ಸಿಬ್ಬಂದಿ ಇರುವ ವೈ-ಪ್ಲಸ್‌ ಭದ್ರತೆ ಒದಗಿಸಿದ್ದ ಕೇಂದ್ರ ಸರ್ಕಾರದ ಗೃಹ ಸಚಿವಾಲಯ ಭಾರೀ ಟೀಕೆಗೆ ಗುರಿಯಾಗಿತ್ತು. ತನಗೆ ಜೀವ ಭಯ ಇರುವ ಕಾರಣ ತನಗೆ ಈ ಭದ್ರತೆ ಕೊಡಲಾಗಿದೆ ಎಂದು ಕಂಗನಾ ಹೇಳಿಕೊಂಡಿದ್ದರು. ಇದೀಗ ಮನಾಲಿಯಲ್ಲಿ ಒಂದಷ್ಟು ಸಮಯ ಕಳೆದ ಬಳಿಕ ತನ್ನ ಸಹೋದರಿ ರಂಗೋಲಿಯೊಂದಿಗೆ ಮತ್ತೆ ಮುಂಬಯಿಯಲ್ಲಿ ಕಾಣಿಸಿಕೊಂಡಿರುವ …

Read More »

ರಾಮ್ ಚರಣ್ ಗೆ ಕೋವಿಡ್ ಪಾಸಿಟಿವ್.

ಮೆಗಾಸ್ಟಾರ್​ ಚಿರಂಜೀವಿ ಅವರ ಮಗ ಹಾಗೂ ಟಾಲಿವುಡ್​ ರಾಮ್​ ಚರಣ್​ ತೇಜ ಅವರಿಗೆ ಕೊರೋನಾ ಪಾಸಿಟಿವ್​ ಆಗಿದೆ. ತನಗೆ ಕೋವಿಡ್​ ಪಾಸಿಟಿವ್ ಎಂದು ರಾಮ್​ ಚರಣ್​ ಸಾಮಾಜಿಕ ಜಾಲತಾಣದಲ್ಲಿ ಕೆಲವೇ ನಿಮಿಷಗಳ ಹಿಂದೆ ಪೋಸ್ಟ್​ ಮಾಡಿದ್ದಾರೆ. ನನಗೆ ಕೊರೋನಾ ಪಾಸಿಟಿವ್​ ಆಗಿದೆ. ಆದರೆ ಯಾವುದೇ ಲಕ್ಷಣಗಳು ಇಲ್ಲ. ಸದ್ಯ ಹೋಂ ಕ್ವಾರಂಟೈನ್​ ಆಗಿದ್ದೇನೆ. ಬೇಗ ಗುಣಮುಖನಾಗಿ ಹೊರ ಬರುತ್ತೇನೆ ಎಂದು ಟ್ವೀಟ್​ ಮಾಡಿದ್ದಾರೆ ರಾಮ್​ ಚರಣ್​. ಕೆಲವು ದಿನಗಳಿಂದ ನನ್ನೊಂದಿಗೆ …

Read More »

ಮೇಘನಾ ರೀ ಎಂಟ್ರಿ : ಭವಿಷ್ಯ ನುಡಿದ ಸುಂದರ್ ರಾಜ್.

ಬೆಂಗಳೂರು: ವಿವಾಹವಾದ ಬಳಿಕ ಹೆಣ್ಣುಮಕ್ಕಳು ತಮ್ಮ ಹೆಸರಿನ ಜೊತೆ ತನ್ನ ಪತಿಯ ಹೆಸರನ್ನು ಸೇರಿಸಿಕೊಳ್ಳುವುದು ಸರ್ವೇ ಸಾಮಾನ್ಯ. ಆದರೆ ನಟಿ ಮೇಘನಾ ರಾಜ್ ಅವರು ತನ್ನ ಪತಿ ಅಗಲಿದ ನಂತರ ತಮ್ಮ ಹೆಸರಿನ ಜೊತೆ ಸರ್ಜಾ ಎಂಬ ಇನಿಷಿಯಲ್ ಸೇರಿಸಿದ್ದಾರೆ. ತನ್ನ ಪತಿಯನ್ನು ಎಷ್ಟು ಮಿಸ್ ಮಾಡಿಕೊಳ್ಳುತ್ತಿದ್ದಾರೆ ಎಂಬುವುದಕ್ಕೆ ಸಾಕ್ಷಿ, ಚಿರು ತನ್ನೊಟ್ಟಿಗಿಲ್ಲಾದಿರವುದನ್ನು ಸಹಿಸಲು ಸಾಧ್ಯವಾಗದ ಮೇಘನಾ, ತಮ್ಮ ದುಃಖವನ್ನೆಲ್ಲಾ ಪತ್ರದ ಮೂಲಕ ಹೊರ ಹಾಕಿದ್ದರು. ಅವರ ಪ್ರೀತಿ ನೆನ್ನೆ …

Read More »

ಹೈದರಾಬಾದ್ ಗೆ ಆಲಿಯಾ ಎಂಟ್ರಿ.

ಮುಂಬೈ : ಖ್ಯಾತ ನಿರ್ದೇಶಕ ಎಸ್​.ಎಸ್​ ರಾಜಮೌಳಿ ಅವರ ಮುಂಬರುವ ರೈಸ್ ರೋರ್ ರಿವೊಲ್ಟ್ (ಆರ್​ಆರ್​ಆರ್) ಸಿನಿಮಾದ ಶೂಟಿಂಗ್​ ಭರ್ಜರಿಯಾಗಿ ಮುತ್ತಿನ ನಗರಿಯಲ್ಲಿ ನಡೆಯುತ್ತಿದೆ. ಇದೀಗ ಸಿನಿಮಾ ಸೆಟ್​ಗೆ ಬಾಲಿವುಡ್​ ನಟಿ ಆಲಿಯಾ ಭಟ್​ ಆಗಮಿಸಿದ್ದು, ಇಡೀ ಚಿತ್ರತಂಡ ಅವರನ್ನು ಸ್ವಾಗತಿಸಿದೆ. ಡಿವಿವಿ ಎಂಟರ್‌ಟೈನ್‌ಮೆಂಟ್ ಬ್ಯಾನರ್​ನಡಿ ಆರ್​ಆರ್​ಆರ್ ಸಿನಿಮಾ ನಿರ್ಮಾಣಗೊಳ್ಳುತ್ತಿದೆ. ಇನ್ನು “ನಮ್ಮ ಪ್ರೀತಿಯ ಸೀತಾ, ಅತ್ಯಂತ ಪ್ರತಿಭಾವಂತ ಮತ್ತು ಸುಂದರವಾದ ಆಲಿಯಾ ಭಟ್​ಗೆ ಸ್ವಾಗತ” ಎಂದು ಡಿವಿವಿ ಎಂಟರ್‌ಟೈನ್‌ಮೆಂಟ್‌ನ ಅಧಿಕೃತ ಟ್ವಿಟ್ಟರ್​ …

Read More »

ಮದಗಜ ಟೀಸರ್ ಬಿಡುಗಡೆಗೆ ಸಿದ್ದತೆ.

ಬೆಂಗಳೂರು: ರಾಬರ್ಟ್ ನಿರ್ಮಾಪಕ ಉಮಾಪತಿ ಗೌಡ ನಿರ್ಮಾಣದಲ್ಲಿ ಮೂಡಿಬಂದಿರುವ ಮದಗಜ ಸಿನಿಮಾ ಡಬ್ಬಿಂಗ್ ಕೆಲಸಗಳು ಮುಗಿದಿವೆ. ಸದ್ಯದಲ್ಲೇ ಟೀಸರ್ ಹೊರತರಲು ಚಿತ್ರತಂಡ ಸಿದ್ಧತೆ ನಡೆಸಿದೆ. ಇತ್ತೀಚೆಗಷ್ಟೇ ಚಿತ್ರತಂಡ ಚಿತ್ರೀಕರಣ ಪೂರ್ತಿ ಮಾಡಿತ್ತು. ರೋರಿಂಗ್ ಸ್ಟಾರ್ ಶ್ರೀಮುರಳಿ, ಆಶಿಕಾ ರಂಗನಾಥ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ಮದಗಜ ಸಿನಿಮಾ ಟೀಸರ್ ಸದ್ಯದಲ್ಲೇ ನಿಮ್ಮೆದುರು ಬರಲಿದೆ. Share

Read More »

ನಟ ದಿಲೀಪ್ ಕುಮಾರ್ ಆರೋಗ್ಯ ಸ್ಥಿತಿ ಗಂಭೀರ.

ನವದೆಹಲಿ: ಬಾಲಿವುಡ್ ನ ಹಿರಿಯ ನಟ ದಿಲೀಪ್ ಕುಮಾರ ಅವರ ಆರೋಗ್ಯ ತೀವ್ರ ಹದಗೆಟ್ಟಿದೆ. ಈ ಬಗ್ಗೆ ಅವರ ಪತ್ನಿಯೇ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಸ್ವಾತಂತ್ರ್ಯ ಪೂರ್ವದಿಂದಲೂ ಹಿಂದಿ ಸಿನಿಮಾಗಳಲ್ಲಿ ನಟಿಸುತ್ತಿರುವ ದಿಲೀಪ್ ಕುಮಾರ್ ಅವರನ್ನು ಭಾರತ ಚಿತ್ರರಂದ ದಂತಕತೆ ಎಂದೇ ಕರೆಯಲಾಗುತ್ತದೆ. ದಿಲೀಪ್ ಅವರಿಗೆ ಈಗ 97 ವರ್ಷ ವಯಸ್ಸಾಗಿದ್ದು, ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಅವರ ಬಳಲುತ್ತಿದ್ದಾರೆ. ದಿಲೀಪ್ ಬಹಳ ಬಳಲಿದ್ದಾರೆ. ಅವರಿಗೆ ಮನೆಯಲ್ಲಿಯೇ ಓಡಾಡಲು ಸಾಧ್ಯವಾಗುತ್ತಿಲ್ಲ. ದಿಲೀಪ್ …

Read More »

ಶೂಟಿಂಗ್ ಗೆ ಮರಳಿದ ಮಾಧುರಿ ದೀಕ್ಷಿತ್.

ಕೊರೊನಾ ಲಾಕ್​​ಡೌನ್​ ಬಳಿಕ ಬಾಲಿವುಡ್​ ನಟಿ ಮಾಧುರಿ ದೀಕ್ಷಿತ್​​​ ಸಿನಿಮಾ ಶೂಟಿಂಗ್​ಗೆ ಮರಳಿದ್ದಾರೆ. ಈ ಬಗ್ಗೆ ತಮ್ಮ ಸೋಷಿಯಲ್​ ಮೀಡಿಯಾ ಖಾತೆ ಟ್ವಿಟರ್​​ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ‘ಆಜ ನಾಚ್ಲಿ’ ನಟಿ ತಾವು ಸಿನಿಮಾ ಶೂಟಿಂಗ್​ ಸೆಟ್​​​ನಲ್ಲಿ ಕುಳಿತಿರುವ ಫೋಟೋವನ್ನು ಟ್ವಿಟರ್​​ನಲ್ಲಿ ಹಂಚಿಕೊಂಡಿದ್ದು, ಸೆಟ್‌ನಲ್ಲಿರುವುದು ಜೀವನದಂತೆ. ಪ್ರತಿ ಸಣ್ಣ ವಿಚಾರವೂ ಮುಖ್ಯವಾಗಿರುತ್ತದೆ. ಜೀವನದಂತೆ, ಪ್ರತಿ ಸಣ್ಣ ವಿವರವೂ ಮುಖ್ಯವಾಗಿರುತ್ತದೆ ಎಂದು ಬರೆದಿದ್ದಾರೆ. ಅಲ್ಲದೆ ಮತ್ತೊಂದು ವಾಕ್ಯವನ್ನು ಬರೆದಿರುವ ಮಾಧುರಿ ದೀಕ್ಷಿತ್​​, ನಿಮ್ಮ …

Read More »

ಅಂಬರೀಶ್ ಮೇಲಿನ ಪ್ರೀತಿಗೆ ಅಭಿಮಾನಿಗಳು ಮಾಡಿದ ಕೆಲಸವೇನು ಗೊತ್ತಾ?

ಮಂಡ್ಯ: ರೆಬೆಲ್ ಸ್ಟಾರ್ ಅಂಬರೀಷ್ ಭೌತಿಕವಾಗಿ ನಮ್ಮನ್ನು ಅಗಲಿ ಎರಡು ವರ್ಷ ಆಗಿದ್ದರೂ ಜನಮಾನಸದಲ್ಲಿ ಅವರು ಎಂದಿಗೂ ಚಿರಸ್ಥಾಯಿಯಾಗಿದ್ದಾರೆ. ಅವರ ಮೇಲಿನ ಪ್ರೀತಿ, ಅಭಿಮಾನ ಜನರಲ್ಲಿ ಹಾಗೆಯೇ ಇದೆ. ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಹೊಟ್ಟೆಗೌಡನದೊಡ್ಡಿಯಲ್ಲಿ ಪ್ರತಿಯೊಬ್ಬರ ಮನೆಯಲ್ಲೂ ಅಂಬರೀಶ್ ಅವರ ಫೋಟೋ ಇಟ್ಟು ಪೂಜೆಸಲಾಗುತ್ತಿದೆ. ಅಲ್ಲದೇ, 8 ಲಕ್ಷ ರೂ. ನಿಧಿ ಸಂಗ್ರಹದ ಮೂಲಕ ‘ಅಂಬಿ ಅಮರ’ ದೇವಾಲಯ ನಿರ್ಮಿಸುವ ಮೂಲಕ ಮೆಚ್ಚಿನ ನಟನಿಗೆ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ. ರೆಬೆಲ್ …

Read More »

ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣ : ಜಾಮೀನು ಅರ್ಜಿ ವಜಾ.

ಬೆಂಗಳೂರು: ಸ್ಯಾಂಡಲ್​​ವುಡ್ ಡ್ರಗ್ಸ್ ಜಾಲ ಪ್ರಕರಣದಲ್ಲಿ ಬಂಧಿತರಾಗಿರುವ ಮೂವರು ಆರೋಪಿಗಳು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ನಗರದ ಎನ್​ಡಿಪಿಎಸ್ ವಿಶೇಷ ಕೋರ್ಟ್ ವಜಾ ಮಾಡಿ ಆದೇಶಿಸಿದೆ. ಪ್ರಕರಣದಲ್ಲಿ ಜಾಮೀನು ಕೋರಿ ರಾಗಿಣಿ ಆಪ್ತ ರವಿಶಂಕರ್, ಆದಿತ್ಯ ಅಗರ್ ವಾಲ್ ಹಾಗೂ ವೀರೇನ್​​ ಖನ್ನಾ ಪ್ರತ್ಯೇಕವಾಗಿ ಸಲ್ಲಿಸಿದ್ದ ಅರ್ಜಿಗಳನ್ನು ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿರುವ ಎನ್​​​ಡಿಪಿಎಸ್ ಸ್ಪೆಷಲ್ ಕೋರ್ಟ್ ವಿಚಾರಣೆ ನಡೆಸಿತು. ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶ ಜಿ.ಎಂ.ಶೀನಪ್ಪ ಅವರು, ಪ್ರಕರಣ …

Read More »

ಬಾಲಿವುಡ್ ಚಿತ್ರ ನಿರ್ಮಾಪಕನಿಗೆ ಸಮನ್ಸ್.

ಮುಂಬೈ: ಮಾದಕ ವಸ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್​​ ಚಲನಚಿತ್ರ ನಿರ್ಮಾಪಕನಾಗಿರುವ ಫಿರೋಜ್ ನಾಡಿಯಾದ್ವಾಲಾಗೆ ಸಮನ್ಸ್ ಜಾರಿ ಮಾಡಿರುವ ಎನ್​ಸಿಬಿ ನಾಡಿಯಾದ್ವಾಲಾ ಪತ್ನಿಯನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದೆ. ‘ಫಿರ್ ಹೇರಾ ಫೆರಿ’, ‘ಆವರ ಪಾಗಲ್ ದಿವಾನಾ’ ಮತ್ತು ‘ವೆಲ್ಕಂ’ ಸಿನಿಮಾಗಳನ್ನು ನಿರ್ಮಿಸಿರುವ ಫಿರೋಜ್ ನಾಡಿಯಾದ್ವಾಲಾ ಅವರ ನಿವಾಸದಲ್ಲೂ ಕೂಡಾ ಶೋಧ ನಡೆಸಲಾಗಿದ್ದು, ಹಲವು ಮಾಹಿತಿಯನ್ನು ಕಲೆಹಾಕಲಾಗಿದೆ. ಫಿರೋಜ್ ನಾಡಿಯಾದ್ವಾಲಾಗೆ ಸಮನ್ಸ್ ಹಾಗೂ ಅವರ ಪತ್ನಿಯನ್ನು ಬಂಧಿಸಲಾಗಿದೆ ಎಂದು ಮುಂಬೈನ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋದ …

Read More »

ಓಟಿಟಿಯಲ್ಲಿ ಬಿಡುಗಡೆಗೆ ಸಜ್ಜಾಗಿದೆ ತುಳು ಚಿತ್ರ.

ಮಂಗಳೂರು: ಕೊರೊನಾ ವೈರಸ್ ಹಾವಳಿಯಿಂದ ಕಂಗೆಟ್ಟಿರುವ ಕೋಸ್ಟಲ್ ವುಡ್ ಹೊಸ ಪ್ರಯೋಗಕ್ಕೆ ತಯಾರಾಗಿದೆ. ಪೆಪ್ಪೆರೆರೆ ಪೆರೆರೆರೆ ಎಂಬ ತುಳು ಸಿನಿಮಾ ಒಟಿಟಿಯಲ್ಲಿ ಬಿಡುಗಡೆಗೆ ಸಿದ್ಧತೆ ನಡೆಸುತ್ತಿದ್ದು, ಇದು ತುಳು ಚಿತ್ರರಂಗದಲ್ಲಿ ಮೊದಲ ಪ್ರಯೋಗವಾಗಿದೆ. ವಿಜಯ್ ಶೋಭರಾಜ್ ಪಾವೂರು ನಿರ್ದೇಶನದ, ನಿಶಾನ್ ಕೃಷ್ಣ ಭಂಡಾರಿ ನಿರ್ಮಾಪಕರಾಗಿರುವ ಈ ಸಿನಿಮಾವನ್ನು ಕೊರೊನಾದ ಸಂಕಷ್ಟದ ಸಮಯದಲ್ಲಿ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡುವುದಕ್ಕಿಂತ ಒಟಿಟಿಯಲ್ಲಿ ಬಿಡುಗಡೆಗೊಳಿಸಲು ನಿರ್ಧರಿಸಲಾಗಿದೆ. ಈ ನಿಟ್ಟಿನಲ್ಲಿ ಒಟಿಟಿಯಲ್ಲಿ ಮಾತುಕತೆ ನಡೆಸಲಾಗುತ್ತಿದೆ. ಈ ಸಿನಿಮಾ ಬಿಡುಗಡೆಗೆ …

Read More »

ನಾನು very very costly.

ಬೆಂಗಳೂರು: ಧ್ರುವ ಸರ್ಜಾ ಹಾಗೂ ನಿರ್ದೇಶಕ ನಂದಕಿಶೋರ್​ ಕಾಂಬಿನೇಷನ್​ನಲ್ಲಿ ಮತ್ತೊಂದು ಚಿತ್ರ ರೆಡಿಯಾಗ್ತಿದೆ. ಇಂದು ಬೆಳಗ್ಗೆಯಷ್ಟೆ ಈ ಸಿನಿಮಾದ ಮುಹೂರ್ತ ಸಮಾರಂಭ ನೆರವೇರಿತು. ಈ ಸಿನಿಮಾಗೆ ‘ದುಬಾರಿ’ ಅಂತ ಹೆಸರಿಡಲಾಗಿದೆ. ‘ದುಬಾರಿ’ ಅಂತ ಹೆಸರಿಟ್ಟುಕೊಂಡಿರುವ ಧ್ರುವ ಸರ್ಜಾ, ‘ನಾನು very very costly’ ಅಂತ ಹೇಳ್ತಿದ್ದಾರೆ. ಆದ್ರೆ, ಧ್ರುವಗೆ ಈ ಟೈಟಲ್​ ಕೊಟ್ಟಿರೋದೇ ನಿರ್ದೇಶಕ ನಂದಕಿಶೋರ್​. ಅಂದ್ಹಾಗೇ ಇದು ‘ದುಬಾರಿ’ ಸಿನಿಮಾದ ಟ್ಯಾಗ್​ ಲೈನ್. ಉದಯ್​ ಮೆಹ್ತಾ ನಿರ್ಮಾಣದಲ್ಲಿ ‘ದುಬಾರಿ’ …

Read More »
error: Content is protected !!