Breaking News

ರಾಮನಗರ

ಮಾಜಿ ಸಿಎಂ ಹಟ್ಟುಹಬ್ಬ ದಿನವೇ ಐತಿಹಾಸಿಕ ಶ್ರೀನಿವಾಸ ಕಲ್ಯಾಣೋತ್ಸವ

ರಾಮನಗರ: ರಾಜ್ಯದ ಅಭಿವೃದ್ಧಿ ಹಾಗೂ ಜಿಲ್ಲೆಯ ಸಮಸ್ತ ಜನತೆಗೆ ಒಳಿತಾಗಲಿ ಎಂಬ ಕಾರಣಕ್ಕೆ ಡಿ.16ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ಶ್ರೀನಿವಾಸ ಕಲ್ಯಾಣ ಆಯೋಜಿಸಲಾಗಿದೆ ಎಂದು ಜೆಡಿಎಸ್​ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್​ ಕುಮಾರಸ್ವಾಮಿ ತಿಳಿಸಿದ್ದಾರೆ. ಶ್ರೀನಿವಾಸ ಕಲ್ಯಾಣೋತ್ಸವ ಐತಿಹಾಸಿಕ ಕಾರ್ಯಕ್ರಮವಾಗಿದೆ. ಅಂದು ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಹುಟ್ಟುಹಬ್ಬವೂ ಆಗಿದೆ. ಕಾರ್ಯಕ್ರಮ ಪಕ್ಷಾತೀತವಾಗಿರಲಿದ್ದು, ಎಲ್ಲರನ್ನೂ ಆಹ್ವಾನಿಸಲಿದ್ದೇವೆ. ಅತಿಹೆಚ್ಚು ಜನ ಸೇರುವ ನಿರೀಕ್ಷೆ ಇದ್ದು ರಾಮನಗರ ಸೇರಿ ಪಕ್ಕದ ಮಂಡ್ಯ, ಮೈಸೂರು, ತುಮಕೂರು, …

Read More »

ಬಂಡೇಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

ರಾಮನಗರ : ಬಂಡೇಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣ ದಿನಕ್ಕೊಂದು ಮೇಜರ್ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಪೊಲೀಸ್ ಕಸ್ಟಡಿಯಲ್ಲಿರುವ ಮೂವರು ಆರೋಪಿಗಳು ವಿಚಾರ ವೇಳೆ ಮಹತ್ವದ ವಿಚಾರಗಳನ್ನು ಬಾಯ್ಬಿಟ್ಟಿದ್ದಾರೆ ಎನ್ನಲಾಗಿದೆ. ಶ್ರೀಗಳ ಆತ್ಮಹತ್ಯೆ ಹಿಂದೆ ಮತ್ತೊಬ್ಬ ಪ್ರತಿಷ್ಠಿತ ಮಠವೊಂದರ ಪ್ರಭಾವಿ ಸ್ವಾಮೀಜಿಯ ಕೈವಾಡವಿದೆ ಎಂಬ ಶಂಕೆ ವ್ಯಕ್ತವಾಗಿದೆ. ಬಂಡೆ ಮಠದ ಬಸವಲಿಂಗ ಶ್ರೀ ಆತ್ಮಹತ್ಯೆ ಸಂಬಂಧ ಮೂವರು ಆರೋಪಿಗಳನ್ನು ಕಸ್ಟಡಿಗೆ ಪಡೆದಿರುವ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ. ಡೆತ್ನೋಟ್ನಲ್ಲಿ ಇಬ್ಬರು ಶ್ರೀಗಳಿಂದ ತೊಂದರೆ …

Read More »

ಮದುವೆ ಮಂಟಪ ಸೇರ ಬೇಕಾದ ಖಾಕಿ ಪಡೆ ಮಸಣ ಸೇರದ : ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

ರಾಮನಗರ : ರಸ್ತೆ ಅಪಘಾತದಲ್ಲಿ ಪೊಲೀಸ್ ಮುಖ್ಯ ಪೇದೆ ಮೃತಪಟ್ಟ ಘಟನೆ ರಾಮನಗರ ಜಿಲ್ಲೆ ಬಿಡದಿಯ ಬೈರಮಂಗಲ ಕ್ರಾಸ್ ಬಳಿ ನಡೆದಿದೆ. ರಾಮನಗರ ತಾಲೂಕಿನ ತಿಮ್ಮೇಗೌಡನ ದೊಡ್ಡಿ ಗ್ರಾಮದ ಚಂದ್ರಶೇಕರ್ ಮೃತಪಟ್ಟಿದ್ದಾರೆ . ಇವರು ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ಮುಖ್ಯ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು . ಭಾನುವಾರ ಸಂಜೆ ಬೈಕ್ ನಲ್ಲಿ ರಾಮನಗರಕ್ಕೆ ವಾಪಸಾಗುವ ವೇಳೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾರೆ . ಇನ್ನು ಎರಡು ದಿನಗಳಲ್ಲಿ ಅವರ …

Read More »

ಕುಮಾರಸ್ವಾಮಿ ಕುರಿತು ಟೀಕೆ ಮಾಡಿದ‌ ಡಿ.ಕೆ. ಸುರೇಶ್‌

ರಾಮನಗರ: ಈಗಲ್‌ಟನ್ ರೆಸಾರ್ಟ್‌ ವಿವಾದದ ಬಗ್ಗೆ ಸದನದಲ್ಲಿ ಕುಮಾರಸ್ವಾಮಿ-ಸಿದ್ದರಾಮಯ್ಯ ನಡುವಿನ ವಾಗ್ವಾದ ಕುರಿತು ಶುಕ್ರವಾರ ಇಲ್ಲಿ ಪತ್ರಕರ್ತರಿಗೆ ಅವರು ಪ್ರತಿಕ್ರಿಯೆ ನೀಡಿದ ಸಂಸದ ಡಿ.ಕೆ. ಸುರೇಶ್‌, ‘ಈಗಲ್‌ಟನ್‌ ಪರವಾಗಿ ಮಾತನಾಡುವ ಮೂಲಕ ಎಚ್.ಡಿ. ಕುಮಾರಸ್ವಾಮಿ ಅವರ ನಿಜವಾದ ಬಣ್ಣ ಬಯಲಾಗಿದೆ’ ಎಂದು  ಲೇವಡಿ ಮಾಡಿದರು. ‘ದಂಡ ಹೆಚ್ಚಾಗಿ ಹಾಕಿರುವುದಕ್ಕೆ ಅವರಿಗೆ ಏನು ತೊಂದರೆ ಆಗಿದೆಯೋ ಗೊತ್ತಿಲ್ಲ. ಸರ್ಕಾರ ಹಾಗೂ ಜಿಲ್ಲಾಧಿಕಾರಿ ಸೇರಿ ಕಾನೂನಿನ ಪ್ರಕಾರ ದಂಡ ನಿಗದಿ ಮಾಡಿದ್ದಾರೆ. ರೆಸಾರ್ಟ್‌ನವರು …

Read More »

ಪೊಲೀಸರಿಗೆ 500 ರೂಪಾಯಿ ವ್ಯಾಲ್ಯೂ ಗೊತ್ತಿರುವುದಿಲ್ಲ : ಮಾಜಿ ಸಿಎಂ ಕಿಡಿ

ರಾಮನಗರ : ಪೊಲೀಸರಿಗೆ 500 ರೂಪಾಯಿ ವ್ಯಾಲ್ಯೂ ಗೊತ್ತಿರುವುದಿಲ್ಲ. ಆದರೆ ರೈತನಿಗೆ ಪ್ರತಿ ರೂಪಾಯಿಯೂ ಮುಖ್ಯವಾಗಿರುತ್ತೆ. ಇದೇ ರೀತಿ ದಂಡ ವಿಧಿಸುತ್ತಿದ್ದರೆ ಪ್ರತಿಭಟನೆ ಮಾಡುತ್ತೇನೆ. ಎಸ್‌ಪಿ ಕಚೇರಿ ಮುಂದೆ ಧರಣಿ ಕೂರುವುದಾಗಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಎಚ್ಚರಿಕೆ ಕೊಟ್ಟಿದ್ದಾರೆ. ಇಲ್ಲಿ ಪೊಲೀಸರು ದಂಡ ವಿಧಿಸುವುದು ಹೆಚ್ಚಾಗಿದೆ ಎಂದು ಜೆಡಿಎಸ್ ಕಾರ್ಯಕರ್ತರಿಂದ ಕುಮಾರಸ್ವಾಮಿಗೆ ದೂರು ನೀಡಲಾಗಿದೆ. ಈ ವೇಳೆ ಪೊಲೀಸರ ವಿರುದ್ಧ ಜೆಡಿಎಸ್ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ …

Read More »

ಮೇಕೆದಾಟು ಪಾದಯಾತ್ರೆ : ಕಾಂಗ್ರೆಸ್ ನಾಯಕರ ವಿರುದ್ಧ FIR ದಾಖಲು

ರಾಮನಗರ: ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಪಾದಯಾತ್ರೆ ನಡೆಸುತ್ತಿರುವ ಕಾಂಗ್ರೆಸ್ ನಾಯಕರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ರಾಮನಗರದ ಐಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಎ1 ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಎ2 ವಿಪಕ್ಷ ನಾಯಕ ಸಿದ್ದರಾಮಯ್ಯ, ಎ3 ಡಿ.ಕೆ. ಸುರೇಶ್‌, ಎ4 ಎಂಎಲ್‌ಸಿ ಎಸ್‌. ರವಿ ಸೇರಿ ಪಾದಯಾತ್ರೆ ನಡೆಸುತ್ತಿರುವ 37 ಕಾಂಗ್ರೆಸ್‌ ನಾಯಕರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.

Read More »

ಬಿಡದಿ ನಗರಕ್ಕೆ ತಲುಪಿದ ಮೇಕೆದಾಟು ಪಾದಯಾತ್ರೆ

ರಾಮನಗರ : ಮೊದಲ ದಿನದ ಮೇಕೆದಾಟು ಪಾದಯಾತ್ರೆ ರೇಷ್ಮೆ ನಗರಿ ರಾಮನಗರದಿಂದ ಆರಂಭವಾಗಿ 16 ಕಿ.ಮಿ. ಸಂಚರಿಸಿ ಬಿಡದಿ ನಗರ ತಲುಪಿದೆ. ಮೊದಲ ದಿನದ ಮೇಕೆದಾಟು ಪಾದಯಾತ್ರೆ ಯಶಸ್ವಿಮೊದಲ ದಿನದಲ್ಲಿ ಹೊರಟ ಪಾದಯಾತ್ರೆಯು ಬೆಂಗಳೂರು-ಮೈಸೂರು ಹೆದ್ದಾರಿ ಮೂಲಕ ಸಾಗಿತು. ಜಾನಪದ ಕಲಾ ತಂಡಗಳು ಕೂಡ ಪಾದಯಾತ್ರೆಗೆ ಸಾಥ್ ನೀಡಿದ್ದವು. ನಂತರ ಮಧ್ಯಾಹ್ನ ಮಾಯಗನಹಳ್ಳಿಯಲ್ಲಿ ಭೋಜನ ಮುಗಿಸಿದ ಮುಖಂಡರು, ಸ್ವಲ್ಪ ಸಮಯ ವಿಶ್ರಾಂತಿ ಪಡೆದು ಪಾದಯಾತ್ರೆ ಮುಂದುವರೆಸಿದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ …

Read More »

ಮೇಕೆದಾಟು ಪಾದಯಾತ್ರೆ : ಬಿಜೆಪಿಯ ಸರ್ಕಾರದ ವಿರುದ್ಧ ಹರಿಹಾಯ್ದ ಕಾಂಗ್ರೆಸ್

ರಾಮನಗರ: ಕಾವೇರಿ ನೀರು ಬಳಕೆಯ ಹಕ್ಕು ಜನರಿಗೆ ದೊರೆಯುವವರೆಗೂ ಹೋರಾಟ ಮುಂದುವರಿಸುವುದಾಗಿ ಕಾಂಗ್ರೆಸ್ ನಾಯಕರು ಭಾನುವಾರ ಇಲ್ಲಿ ಆರಂಭಗೊಂಡ ಮೇಕೆದಾಟು ಎರಡನೇ ಹಂತದ ಪಾದಯಾತ್ರೆಯಲ್ಲಿ ಘೋಷಿಸಿದರು. ಬಿಜೆಪಿಯ ‘ಡಬಲ್‌ ಎಂಜಿನ್‌’ ಸರ್ಕಾರದ ವಿರುದ್ಧ ಹರಿಹಾಯ್ದರು. ಇಲ್ಲಿನ ಟಿ.ಆರ್. ಮಿಲ್‌ ಮೈದಾನದಲ್ಲಿ ಪಾದಯಾತ್ರೆಗೆ ಮರು ಚಾಲನೆ ನೀಡಿದ ಕರ್ನಾಟಕ ಕಾಂಗ್ರೆಸ್‌ನ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ‘ಕಾವೇರಿ ನೀರಿನ ಪ್ರತಿ ಹನಿ ಮೇಲೂ ಈ ಪ್ರದೇಶದ ಜನರಿಗೆ ಹಕ್ಕು ಇದೆ. ಇದು …

Read More »

ಬರ್ಬರವಾಗಿ ಹತ್ಯೆಯಾದ ಕಾಂಗ್ರೆಸ್ ಮುಖಂಡ

ರಾಮನಗರ: ಹೊಟ್ಟೆ ಹಾಗೂ ತಲೆಗೆ ಡ್ರ್ಯಾಗನ್‍ನಿಂದ ಚುಚ್ಚಿ ಕಾಂಗ್ರೆಸ್ ಮುಖಂಡನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ರಾಮನಗರದಲ್ಲಿ ನಡೆದಿದೆ. ಈ ಘಟನೆ ನಿನ್ನೆ ರಾತ್ರಿ 11 ಗಂಟೆ ಸುಮಾರಿಗೆ ಕೊಲೆ ಮಾಡಲಾಗಿದೆ. ಮೃತದೇಹವನ್ನು ಬೆಂಗಳೂರಿನ ರಾಜರಾಜೇಶ್ವರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದ್ದು, ಜಮೀನು ವಿವಾದಕ್ಕೆ ಕೊಲೆ ಮಾಡಿರುವ ಶಂಕೆ ಮೇಲ್ನೋಟಕ್ಕೆ ವ್ಯಕ್ತವಾಗಿದೆ. ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡುವೆ ನಡೆಸಲಾಗುತ್ತಿದೆ.

Read More »

ಕುಮಾರಸ್ವಾಮಿಗೆ ಟಾಂಗ್ ಕೊಟ್ಟ ಡಿ.ಕೆ. ಸುರೇಶ್

ರಾಮನಗರ: ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ಬಗ್ಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವ್ಯಂಗ್ಯವಾಡಿರುವುದಕ್ಕೆ ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್ ಟಾಂಗ್ ಕೊಟ್ಟಿದ್ದಾರೆ. ಕುಮಾರಸ್ವಾಮಿ ಅವರು ಪ್ರಧಾನಮಂತ್ರಿ ಕುಟುಂಬದವರು. ಅವರಿಗೆ ಇರುವಷ್ಟು ಬುದ್ಧಿ, ತಿಳಿವಳಿಕೆ ರಾಜ್ಯದಲ್ಲಿ ಯಾರಿಗೂ ಇಲ್ಲ. ರಾಜ್ಯಕ್ಕಾಗಿ, ರಾಷ್ಟ್ರಕ್ಕಾಗಿ ಕುಮಾರಸ್ವಾಮಿಯವರು ಏನು ಹೇಳುತ್ತಾರೆಯೋ ಅದನ್ನು ಕೇಳಬೇಕು. ಪ್ರಶ್ನಿಸಬಾರದು ಎಂದು ಟಾಂಗ್ ಕೊಟ್ಟಿದ್ದಾರೆ.

Read More »

You cannot copy content of this page