Breaking News

ಚಿತ್ರದುರ್ಗ

ರಣಬಿಸಿಲಿನ ‘ಶಿಕ್ಷೆ’: ಪೊಲೀಸರ ಮೇಲೆಯೇ ದರ್ಪ… PSI ನೇತ್ರಾವತಿಗೆ ಕೊನೆಗೂ ವರ್ಗಾವಣೆ ಶಿಕ್ಷೆ..

ಚಿತ್ರದುರ್ಗ: ಕರ್ತವ್ಯ ನಿರ್ಲಕ್ಷ್ಯದ ನೆಪವೊಡ್ಡಿ ತನ್ನದೇ ಸಹೋದ್ಯೋಗಿಗಳಿಗೆ ರಣಬಿಸಿಲಿನಲ್ಲಿ ನಿಲ್ಲಿಸಿ ಶಿಕ್ಷೆ ನೀಡಿದ ಘಟನೆ ರಾಜ್ಯ ಪೊಲೀಸ್ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದ್ದು, ಸಂಬಂಧಿಸಿದ ಪಿಎಸ್‌ಐ ನೇತ್ರಾವತಿ ವಿರುದ್ಧ ಕೊನೆಗೂ ಶಿಸ್ತು ಕ್ರಮ ಜರುಗಿಸಲಾಗಿದೆ… ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಚಿಕ್ಕಜಾಜೂರು ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದ್ದು, ಪಿಎಸ್‌ಐ ನೇತ್ರಾವತಿ ಅವರು ಸಿಬ್ಬಂದಿಗಳ ಮೇಲೆ ದರ್ಪ ತೋರಿದ ಆರೋಪ ಕೇಳಿಬಂದಿತ್ತು. ಕರ್ತವ್ಯದಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಕಾರಣ ನೀಡಿ,.. …

Read More »

ಲಾರಿಗೆ ಕಾರು ಡಿಕ್ಕಿ: ಬೆಂಗಳೂರಿನ ಮೂವರು ರಿಸರ್ವ್ ಪೊಲೀಸ್ ಅಧಿಕಾರಿಗಳ ಸಾವು..

ಮೃತ ಪೊಲೀಸ್ ಅಧಿಕಾರಿಗಳ ಫೋಟೋ ಬಿಡುಗಡೆ ಮಾಡಿದ ಪೊಲೀಸ್ ಇಲಾಖೆ.. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಹೆಗ್ಗೆರೆ ಗ್ರಾಮದ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೆಂಗಳೂರಿನ ಮೂವರು ಪೊಲೀಸ್ ಸಿಬ್ಬಂದಿಗಳು ದುರ್ಮರಣಕ್ಕೀಡಾಗಿರುವ ದಾರುಣ ಘಟನೆ ನಡೆದಿದೆ. ಬೆಂಗಳೂರಿನಿಂದ ಬಳ್ಳಾರಿಗೆ ಸ್ನೇಹಿತನ ಮದುವೆಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ವೇಗವಾಗಿ ಸಾಗುತ್ತಿದ್ದ ಕಾರು ಮುಂದೆ ಹೋಗುತ್ತಿದ್ದ ಲಾರಿಗೆ ಹಿಂಬದಿಯಿಂದ ಭೀಕರವಾಗಿ ಡಿಕ್ಕಿ ಹೊಡೆದ ಪರಿಣಾಮ ಕಾರು ಸಂಪೂರ್ಣ ಜಖಂಗೊಂಡಿದೆ. …

Read More »

VIDEO: ಶಾಲಾ ಆವರಣದಲ್ಲಿ ನಾಗರಹಾವು ಕಚ್ಚು – ಟೀಚರ್ ಸಮಯಪ್ರಜ್ಞೆ ಮೆರೆದ ಕ್ಷಣ..!

SHOCKING: ವಿದ್ಯಾರ್ಥಿನಿಗೆ ನಾಗರಹಾವು ಕಚ್ಚು – ಬಾಯಿಯಿಂದ ವಿಷ ಹೀರಿಸಿ ಪ್ರಾಣ ಉಳಿಸಿದ ಶಿಕ್ಷಕ..! ಚಿತ್ರದುರ್ಗದಲ್ಲಿ ಹೃದಯಕಂಪಿ ಕ್ಷಣ: ಹಾವು ಕಚ್ಚಿದ ಬಾಲಕಿ, ಶಿಕ್ಷಕರ ಧೈರ್ಯಕ್ಕೆ ಉಳಿದ ಜೀವ..! ನಾಗರಹಾವು ದಾಳಿ – ಕ್ಷಣಾರ್ಧದಲ್ಲಿ ಪ್ರಥಮ ಚಿಕಿತ್ಸೆ ನೀಡಿ ವಿದ್ಯಾರ್ಥಿನಿ ಉಳಿಸಿದ ಟೀಚರ್..! ವಿಷ ಹೀರಿದ ಶಿಕ್ಷಕ: ಪ್ರಾಣ ಪಣಕ್ಕಿಟ್ಟು ಬಾಲಕಿ ಉಳಿಸಿದ ಚಿತ್ರದುರ್ಗದ ಘಟನೆ..! ಹಾವು ಕಚ್ಚಿದ ವಿದ್ಯಾರ್ಥಿನಿ ಚೀರಾಟ – ಓಡಿ ಬಂದ ಶಿಕ್ಷಕನ ಸಾಹಸಕ್ಕೆ ಉಳಿದ …

Read More »

ದುರಂತ: ಟ್ರ್ಯಾಕ್ಟರ್​ನಡಿ ಸಿಲುಕಿ ತುಂಡಾದ ಬಾಲಕನ ದೇಹ!!

ಚಿತ್ರದುರ್ಗದ ಕೆಳಗಳಹಟ್ಟಿ ಗ್ರಾಮದ ಓಬಣ್ಣ ಹಾಗೂ ದೀಪಾ ಎಂಬ ದಂಪತಿಯ ಪುತ್ರ ಈ ಅನಾಹುತದಲ್ಲಿ ಬಲಿಯಾಗಿದ್ದಾನೆ. ದೀಪಾ ತನ್ನ ಪುತ್ರನೊಂದಿಗೆ ತವರಿಗೆ ಬಂದಿದ್ದರು.ಈ ವೇಳೆ ದೀಪಾ ಅವರು ತನ್ನ ತಂದೆ ಮಾರಣ್ಣ ಜೊತೆ ಮಗನನ್ನು ಹೊಲಕ್ಕೆ ಟ್ರ್ಯಾಕ್ಟರ್​​​ನಲ್ಲಿ ಕರೆದುಕೊಂಡು ಹೋಗಿದ್ದರು. ತಾತನೊಂದಿಗೆ ಕುಳಿತಿದ್ದ ಬಾಲಕ ಮಾರ್ಗಮಧ್ಯೆ ಆಯತಪ್ಪಿ ಬಿದ್ದು ಟ್ರ್ಯಾಕ್ಟರ್​​​ನ ರೂಟರ್ ಯಂತ್ರಕ್ಕೆ ಸಿಲುಕಿದಾಗ ದೇಹ ತುಂಡಾಗಿದೆ. ಗುಡೇಕೋಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Read More »

ಕಾಣಹೋಸ್ಸಳ್ಳಿ: ಕಾರು – ದ್ವಿಚಕ್ರ ವಾಹನ ಡಿಕ್ಕಿ , ಸವಾರ ಸ್ಥಳದಲ್ಲೇ ಸಾವು!!

ಕಾರು ಮತ್ತು ದ್ವಿಚಕ್ರ ವಾಹನ ಸಾವರ ಚಿತ್ರದುರ್ಗಕೆಕ ಹೋಗುತ್ತಿದ್ದು, ಕಾರಿನ ಚಾಲಕನು ಓವರ್‍ಟೇಕ್ ಮಾಡುವಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಕಾನಾಹೊಸಹಳ್ಳಿ ಪಿಎಸ್‍ಐ ಸಿದ್ದರಾಂ ಬಿದ್ರಾಣಿ ಅವರು ಭೇಟಿ ನೀಡಿ ಪರೀಶೀಲನೆ ನಡೆಸಿದ್ದು, ಕಾರಿನ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ. ಕಾನಾಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಪಾಸ್ ಪೋರ್ಟ್ ಪಡೆಯಲು ನಕಲಿ ದಾಖಲೆ ನೀಡಿದ್ದ ಆರೋಪಿಗೆ ಶಿಕ್ಷೆ,

ಚಿತ್ರದುರ್ಗ ನಗರದ ರಾಮದಾಸ್ ಕಾಂಪೌಡ್ ವಾಸಿಯಾದ ಜುಲ್ಮೀಕರ್ 2015 ರಲ್ಲಿ ಬೆಂಗಳೂರಿನ ಪ್ರಾದೇಶಿಕ ಪಾಸ್ ಪೋರ್ಟ ಕಛೇರಿಗೆ ಇ.ಸಿ.ಎನ್.ಆರ್ ಪಾಸ್ ಪೋರ್ಟ ಪಡೆಯುವ ಸಲುವಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ್ದರು ನಕಲಿ ಅಂಕಪಟ್ಟಿಯನ್ನು ಸೃಷ್ಟಿಸಿ ಅರ್ಜಿಯ ಜೊತೆ ಸಲ್ಲಿಸಿದ್ದನು. ನಕಲಿ ದಾಖಲೆಗಳನ್ನು ಸೃಷ್ಟಿಸಿ ಪಾಸ್ ಪೋರ್ಟ್ ಪಡೆಯಲು ಪ್ರಯತ್ನಿಸಿದ ಆರೋಪಿಗೆ ಚಿತ್ರದುರ್ಗ ಪ್ರಧಾನ ಹಿರಿಯ ಸಿವಿಲ್ ಜಡ್ಜ್ ಮತ್ತು ಸಿ.ಜೆ.ಎಂ. ನ್ಯಾಯಾಲಯ ಒಂದು ವರ್ಷ ಸಾದಾ ಶಿಕ್ಷೆ ಮತ್ತು 8500 ದಂಡ …

Read More »

ಚಿತ್ರದುರ್ಗ:ಬಸ್ ಡಿಕ್ಕಿ ವಿದ್ಯಾರ್ಥಿಗಳ ಸಾವು

ಬಸ್ಸೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿದ ಘಟನೆ ಹಿರಿಯೂರು ಸಮೀಪದ ರಾಷ್ಟ್ರೀಯ ಹೆದ್ದಾರಿ ಕೆಳಗಿನ ಸರ್ವಿಸ್ ರಸ್ತೆ ವೃತ್ತದಲ್ಲಿ ಇಂದು ಸಂಭವಿಸಿದೆ. ಇದರಲ್ಲಿ ನಬೀಲ್ ಎಂಬಾತ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ ಚಿತ್ರದುರ್ಗದ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಸಾರಿಗೆ ಬಸ್ ಗೆ ಬೈಕ್ ಡಿಕ್ಕಿ – ಇಬ್ಬರು ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವು.!

ಬಸ್‌ ಬೈಕ್‌ಗೆ ಡಿಕ್ಕಿಯಾದ ಪರಿಣಾಮ ಕೇರಳ ಮೂಲದ ಇಬ್ಬರು ನರ್ಸಿಂಗ್‌ ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಚಿತ್ರದುರ್ಗದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, KSRTC ಬಸ್ ಬೈಕ್‌ಗೆ ಡಿಕ್ಕಿಯಾದ ಪರಿಣಾಮ ಚಿತ್ರದುರ್ಗ ಸಂಚಾರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು ಪರಿಶೀಲಿಸಿದ್ದಾರೆ. ಮೃತದೇಹಗಳನ್ನು ಪೋಸ್ಟ್ ಮಾರ್ಟಮ್ ಗೆ ಕಳುಹಿಸಲಾಗಿದೆ.

Read More »

ಆಕಸ್ಮಿಕ ಕಾಲು ಜಾರಿ ಹೊಂಡಕ್ಕೆ ಬಿದ್ದ ವೈದ್ಯ ಸ್ಥಳದಲ್ಲೇ ಸಾವು.

ಹೊಸದುರ್ಗ ತಾಲೂಕಿನ ಕುರುಬರಹಳ್ಳಿ ಬಳಿಯ ಜಮೀನಿನಲ್ಲಿ ಶುಕ್ರವಾರ ಘಟನೆ ಸಂಭವಿಸಿದೆ. ತಾಲೂಕಿನ ಬಿಸನಹಳ್ಳಿಯ ಲಂಬಾಣಿ ಹಟ್ಟಿಯ ಡಾಕ್ಟರ್ ಜಯರಾಮ ನಾಯಕ್ ಎಂಬುವರು ತೋಟದಲ್ಲಿನ ಕೃಷಿಹೊಂಡದ ಬಳಿ ಓಡಾಡುತ್ತಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿರುವ ದುರ್ಘಟನೆ ನಡೆದಿದೆ. ವೈದ್ಯಕೀಯ ಸೇವೆಯ ಮೂಲಕ ಗ್ರಾಮಕ್ಕೆ ಚಿರಪರಿಚಿತರಾದ ಇವರು ಬಡ ರೋಗಿಗಳಿಗೆ ಕಡಿಮೆ ದರದಲ್ಲಿ ಚಿಕಿತ್ಸೆ ನೀಡುತ್ತಿದ್ದರು. ಹಲವಾರು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿದ್ದರು. ಆದರೆ ವಿಧಿ ಆಟವೇ ಬೇರೆ ಇತ್ತು. ಕಾಲೇಜು ಹೊಂಡಕ್ಕೆ ಬಿದ್ದು …

Read More »

ಸಿಡಿಲು ಬಡಿದು ಬರೋಬ್ಬರಿ 106 ಕುರಿ ಸಾವು

ಚಿತ್ರದುರ್ಗ: ಸಿಡಿಲು ಬಡಿದು ಬರೋಬ್ಬರಿ 106 ಕುರಿಗಳು ಸಾವನ್ನಪ್ಪಿದ ಘಟನೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಜಾಜೂರು ಗ್ರಾಮದ ಬಳಿ ನಿನ್ನೆ(ಶುಕ್ರವಾರ) ನಡೆದಿದೆ. ಕುರಿಗಳ‌ ಮಾರಣಹೋಮದಿಂದ ಕುರಿಗಾಹಿಗಳು ಲಕ್ಷಾಂತರ ರೂ. ನಷ್ಟಕ್ಕೆ ಸಿಲುಕಿದ್ದಾರೆ. ಕಳೆದ ರಾತ್ರಿ ಜಾಜೂರು ಭಾಗದಲ್ಲಿ ಗುಡುಗು ಸಿಡಿಲು ಸಹಿತ ಭಾರೀ ಮಳೆಯಾಗಿದೆ. ಈ ವೇಳೆ ಸಿಡಿಲು ಬಡಿದು 106 ಕುರಿಗಳು ಸಾವನ್ನಪ್ಪಿವೆ. ಪರಶುರಾಂಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Read More »