Welcome to bigtvnews   Click to listen highlighted text! Welcome to bigtvnews
Breaking News

ವಿಶೇಷ ಸುದ್ದಿ

ಕಿಮ್ಸ್ ಆಸ್ಪತ್ರೆಯಲ್ಲಿ ಸಿಗುತ್ತಿಲ್ಲ ಹೃದಯ ರೋಗಕ್ಕೆ ಸರಿಯಾದ ಚಿಕಿತ್ಸೆ: ತಜ್ಞ ವೈದ್ಯರಿಲ್ಲ, ಅಗತ್ಯ ಸಲಕರಣೆ ಇಲ್ಲವೇ ಇಲ್ಲ…!

ಹುಬ್ಬಳ್ಳಿ : ಅದು ಇಡೀ ಉತ್ತರ ಕರ್ನಾಟಕ ಭಾಗದ ಬಡರೋಗಿಗಳಿಗೆ ಸಂಜೀವಿನಿ ಎಂದೇ ಹೆಸರು ವಾಸಿಯಾಗಿರುವ ಆಸ್ಪತ್ರೆ.‌ ನೂರಾರು ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಆ ಆಸ್ಪತ್ರೆಯಲ್ಲಿ ಹೃದ್ರೋಗ ಶಸ್ತ್ರ ಚಿಕಿತ್ಸೆಗೆ ಬೇಕಾದ ನುರಿತ ತಜ್ಞರೂ ಇಲ್ಲ, ಅಗತ್ಯ ಸಲಕರಣೆಗಳೂ ಇಲ್ಲ. ಹೌದು.. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ತೆರೆದ ಹೃದಯ ಶಸ್ತ್ರ ಚಿಕಿತ್ಸೆಯ ವ್ಯವಸ್ಥೆಯಿಲ್ಲದೇ ಹೃದಯ ರೋಗಿಗಳು ಪರದಾಡುವಂತಾಗಿದೆ. ಉತ್ತರ ಕರ್ನಾಟಕದ ಐದಾರೂ ಜಿಲ್ಲೆಯ ರೋಗಿಗಳಿಗೆ ಆಧಾರವಾದ ಕಿಮ್ಸ್ ಆಸ್ಪತ್ರೆಯಲ್ಲಿ ಪ್ರತಿ …

Read More »

ಎರಡು ತಲೆ, ಮೂರು ಕಣ್ಣುಳ್ಳ ವಿಚಿತ್ರ ಕರು ಜನನ- ಕರು ನೋಡಲು ಮುಗಿಬಿದ್ದ ಜನರು

ಮೈಸೂರು: ಎರಡು ತಲೆ, ಮೂರು ಕಣ್ಣುಗಳಿರುವ ವಿಚಿತ್ರ ಕರುವೊಂದು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಹೊಮ್ಮರಗಳ್ಳಿ ಗ್ರಾಮದಲ್ಲಿ ಜನಿಸಿದ್ದು, ಕರು ನೋಡಲು ಜನರು ಮುಗಿ ಬೀಳುತ್ತಿದ್ದಾರೆ. ಹೊಮ್ಮರಗಳ್ಳಿ ನಿವಾಸಿ ಮಹದೇವಪ್ಪ ಅವರ ಮನೆಯ ಸೀಮೆ ಹಸು‌ ಈ ವಿಚಿತ್ರ ಕರುವಿಗೆ ಜನ್ಮ ನೀಡಿದೆ. ಎರಡು ತಲೆ, ಮೂರು ಕಣ್ಣನ್ನು ಈ ಕರು ಹೊಂದಿದ್ದು, ಈ ಅದ್ಭುತವನ್ನು ನೋಡಿದ ಮನೆ ಮಂದಿ‌ ಸಂತಸಗೊಂಡಿದ್ದಾರೆ. ಈ ಕುರಿತು ‘ಈಟಿವಿ ಭಾರತ’ದ ಜೊತೆ ದೂರವಾಣಿಯಲ್ಲಿ ಮಾತನಾಡಿದ …

Read More »

ತ್ಯಾಜ್ಯ ವಿಲೇವಾರಿಗೆ ಪುತ್ತೂರಿನ ಗ್ರಾ.ಪಂಚಾಯತಿಯಿಂದ ವಿನೂತನ ಪ್ರಯೋಗ

ಪುತ್ತೂರು: ತ್ಯಾಜ್ಯ ವಿಲೇವಾರಿ ಮಾಡುವುದು ದೊಡ್ಡ ಸವಾಲೇ ಸರಿ. ಕಸ ವಿಲೇವಾರಿಗೆ ಮಹಾನಗರ ಪಾಲಿಕೆಗಳೇ ಪರದಾಡುತ್ತಿರಬೇಕಾದರೆ, ಸ್ಥಳೀಯಾಡಳಿತಗಳ ಸ್ಥಿತಿಯನ್ನೊಮ್ಮೆ ಊಹಿಸಿಕೊಳ್ಳಿ. ಇದಲ್ಲದೇ, ತ್ಯಾಜ್ಯ ಸುರಿಯಲು ಸ್ಥಳದ ಸಮಸ್ಯೆ, ಇದರೊಂದಿಗೆ ಸುತ್ತಲಿನ ಜನರ ವಿರೋಧ. ಮನೆಗಳಲ್ಲಿನ ಕಸವನ್ನು ಸಂಗ್ರಹಿಸಬಹುದು, ಅದನ್ನು ವಿಲೇವಾರಿ ಮಾಡುವುದು ಹೇಗೆ? ಎಂಬ ಸಮಸ್ಯೆಗೆ ಸಿಲುಕಿದ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಆಲಂಕೂರು ಗ್ರಾಮ ಪಂಚಾಯಿತಿಯ ವಿನೂತನ ಪ್ರಯೋಗ ಯಶಸ್ಸು ಕಂಡಿದೆ. ಹೌದು, ಮನೆಗಳ ತ್ಯಾಜ್ಯವನ್ನು ಸಂಗ್ರಹಿಸಿ ಎಲ್ಲೆಂದರಲ್ಲಿ …

Read More »

ಆರೋಗ್ಯ ಸಲಹೆ: ನೀವು ಸಕ್ಕರೆ ಪ್ರಿಯರೇ?.. ಅತಿ ಬಳಕೆಗೂ ಮೊದಲು ಕೊಂಚ ಯೋಚಿಸೋದು ಒಳ್ಳೇದು..

ಬೆಂಗಳೂರು : ನಮ್ಮ ದೈನಂದಿನ ಆಹಾರ ಕ್ರಮದಲ್ಲಿ ಸಕ್ಕರೆ ಅತಿ ಕೆಟ್ಟ ಅಭ್ಯಾಸ ಎನ್ನುವುದನ್ನು ವಿಶ್ವ ಆರೋಗ್ಯ ಸಂಸ್ಥೆ ಹೇಳುತ್ತದೆ. ಸಕ್ಕರೆ ಸೇವನೆ ಒಂದು ರೀತಿಯ ಸ್ಲೋ ಪಾಯಿಸನ್ (ನಿಧಾನಗತಿಯ ವಿಷ). ಇದರ ಸೇವನೆಯಿಂದ ಅತಿ ಹೆಚ್ಚು ಆರೋಗ್ಯ ಸಮಸ್ಯೆ ನಮ್ಮನ್ನು ಕಾಡುತ್ತದೆ. ಎಲ್ಲಾ ಬಗೆಯ ಆರೋಗ್ಯ ಸಮಸ್ಯೆಗೆ ಸಕ್ಕರೆಯೇ ಮುಖ್ಯ ಕಾರಣ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಹಾಗಿದ್ದರೆ, ಸಕ್ಕರೆ ಸೇವನೆ ಮಾಡಬಾರದೇ?. ಖಂಡಿತ ಮಾಡಬಹುದು. ಎಷ್ಟು ಪ್ರಮಾಣದಲ್ಲಿ ಮಾಡಬೇಕು, ಯಾವ …

Read More »

ಭೀಕ್ಷುಕನೊಬ್ಬನ ಅಂತ್ಯ ಸಂಸ್ಕಾರದಲ್ಲಿ ಸಾವಿರಾರು ಜನ ಭಾಗಿ

ಬಳ್ಳಾರಿ: ಖ್ಯಾತ ವ್ಯಕ್ತಿ, ರಾಜಕಾರಣಿ, ಸಿನಿಮಾ ನಟರು ಮೃತಪಟ್ಟಾಗ ಅವರ ಅಂತಿಮ ದರ್ಶನ ಪಡೆಯಲು ಸಾವಿರಾರು ಜನರು ಬರುವುದು ಸಹಜ. ಬುದ್ಧಿಮಾಂದ್ಯ, ಹುಚ್ಚನೊಬ್ಬ ಸಾವನ್ನಪ್ಪಿದಾಗ ಸಾವಿರಾರು ಜನರು ಅಂತಿಮ ನಮನ ಸಲ್ಲಿಸಿದ್ದನ್ನು ನೀವು ಕೇಳಿದ್ದೀರಾ? ನೋಡಿದ್ದೀರಾ?. ಬಳ್ಳಾರಿ ಜಿಲ್ಲೆಯ ಹಡಗಲಿ ಪಟ್ಟಣದಲ್ಲಿ ಇಂಥದ್ದೊಂದು ಕುತೂಹಲಕಾರಿ ಘಟನೆ ನಡೆದಿದೆ. ಪಟ್ಟಣದ ಮಾನಸಿಕ ಅಸ್ವಸ್ಥನೊಬ್ಬ ಮೃತಪಟ್ಟಿದ್ದು, ಅವನ ಅಂತ್ಯಕ್ರಿಯೆಯಲ್ಲಿ ಸಾವಿರಾರು ಜನರು ಭಾಗವಹಿಸಿದ್ದಲ್ಲದೇ ಊರ ತುಂಬಾ ಅವನ ಫೋಟೋವುಳ್ಳ ಫ್ಲೆಕ್ಸ್​, ಬ್ಯಾನರ್​ ಹಾಕಿಸಿ ಅದ್ಧೂರಿಯಾಗಿ …

Read More »

ಸಾಂಸ್ಕೃತಿಕ ಸಿರಿ, ಭಾವೈಕ್ಯತೆಯ ಗರಿ ಯರಗುಪ್ಪಿಯ ಮೊಹರಂ ಹಬ್ಬ

ಹುಬ್ಬಳ್ಳಿ:ಹಬ್ಬ-ಹರಿದಿನಗಳು ಮನುಷ್ಯರನ್ನು ಬೆಸೆಯಬೇಕು. ಸಾರಮಸ್ಯ ಮೂಡಿಸಬೇಕು. ಧರ್ಮಗಳ ಮಧ್ಯೆ ಸಾಮರಸ್ಯ ಬೆಸೆಯುವ, ದ್ವೇಷ-ಅಸೂಯೆ ಬಿಟ್ಟು ಎಲ್ಲರನ್ನೂ ಪ್ರೀತಿಸುವಂತೆ ಮಾಡುವ ಹಬ್ಬವನ್ನ ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದಲ್ಲಿ ಶತಮಾನಗಳಿಂದಲೂ ಆಚರಿಸಿಕೊಂಡು ಬರಲಾಗುತ್ತಿದೆ. ಹೌದು ಧರ್ಮ ಯಾವುದಾದರೇನು ಅದರ ತಿರುಳು ಒಂದೇ ಅಂತ ಭಾವೈಕ್ಯತೆಯನ್ನು ಸಾರುವ ಮೊಹರಂ ಹಬ್ಬ ಯರಗುಪ್ಪಿ ಗ್ರಾಮದಲ್ಲಿ ನಡೆಯುತ್ತೆ. ಇಡೀ ನಾಡಿನಲ್ಲಿಯೇ ವಿಶೇಷ ಆಚರಣೆಯಿಂದ ಈ ಗ್ರಾಮ ಸಾಮರಸ್ಯವನ್ನು ಬೆಸೆಯುತ್ತಲೇ ಬಂದಿದೆ. ಇದೇ ಸೆಪ್ಟೆಂಬರ್ 11ಕ್ಕೆ …

Read More »

ವಯಸ್ಸಿಗೆ ಮೀರಿದ ಸ್ವಾಭಿಮಾನ: ಸ್ವತಃ ದುಡಿದು ತನ್ನಬೇಕೆಂಬ ವೃದ್ಧೆಯ ಹಂಬಲ

ಹುಬ್ಬಳ್ಳಿ: ಸ್ವಾಭಿಮಾನ ಎಂಬುದು ಎಷ್ಟು ಶ್ರೀಮಂತವಾಗಿದೆ ಎಂದರೆ ಬೆನ್ನು ಭಾಗುವ ಮುನ್ನ ಕೋಲನ್ನು ಹಿಡಿಯುವ ಮುನ್ನ ಯಾರಲ್ಲಿಯೂ ಕೂಡ ಕೈ ಚಾಚಿ ಬೇಡಬಾರದು ಎಂಬುದು ಒಂದೆಡೆಯಾದರೆ ಬೆನ್ನು ಬಾಗಿ ಕೋಲು ಹಿಡಿದು ಮುಪ್ಪಿನಲ್ಲಿಯೂ ಕೂಡ ಯಾರಿಗೂ ಭಾರವಾಗದ ರೀತಿಯಲ್ಲಿ ಸ್ವಾಭಿಮಾನಿವಾಗಿ ಬದುಕು ಸಾಗಿಸಬೇಕೆಂಬುವಂತದ್ದು, ವೃದ್ಧೆಯೊರ್ವಳು ಕಂಡುಕೊಂಡಿರುವ ಮಹತ್ವದ ಸಂಗತಿಯಾಗಿದೆ. ಹೌದು ಯೌವ್ವನದಲ್ಲಿ ದುಡಿದು ಮನೆಯನ್ನು ಸಾಗಿಸುತ್ತಿದ್ದ ಮಹಾತಾಯಿ ಇಂದು ಮುಪ್ಪಿನಲ್ಲಿಯೂ ಕೂಡ ಸ್ವತಃ ತಾನೇ ದುಡಿದು ಜೀವನ ಸಾಗಿಸುತ್ತಿದ್ದಾಳೆ.ಯಾರ ಹಂಗಿನ …

Read More »
You cannot copy content of this page
Click to listen highlighted text!