Breaking News

ನಾಯಕ ಜನಾಂಗಕ್ಕೆ 7.5% ಮೀಸಲಾತಿ ಜಾರಿಮಾಡಬೇಕೆಂದು ಒತ್ತಾಯಿಸಿ ಪ್ರತಿಭಟನೆ

ಚಾಮರಾಜನಗರ:- ನಾಯಕ ಜನಾಂಗಕ್ಕೆ 7.5% ಮೀಸಲಾತಿ
ಜಾರಿಮಾಡಬೇಕೆಂದು ಒತ್ತಾಯಿಸಿ ನಾಯಕ ಸಮುದಾಯದ
ಮುಖಂಡರು ಚಾಮರಾಜನಗರದಲ್ಲಿ ಪ್ರತಿಭಟನೆ ನಡೆಸಿದರು. ನಗರದ ಚಾಮರಾಜೇಶ್ವರ
ದೇವಸ್ಥಾನದ ಮುಂಭಾಗದಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ನಾಯಕ ಜನಾಂಗದ ಮುಖಂಡರು, ಪಚ್ಚಪ್ಪ
ವೃತ್ತದಲ್ಲಿ ಕೆಲಕಾಲ ಮಾನವ ಸರಪಳಿ ನಿರ್ಮಿಸಿ, ಸರ್ಕಾರದ ವಿರುದ್ದ ಘೋಷಣೆ ಕೂಗಿದರು. ಈ ವೇಳೆ ಮಾತನಾಡಿದ
ಮಾಜಿ ಜಿಲ್ಲಾಪಂಚಾಯತ್ ಅಧ್ಯಕ್ಷ ಎಂ.ರಾಮಚಂದ್ರ, ರಾಜ್ಯ ಸರ್ಕಾರಕ್ಕೆ ಮನದಟ್ಟು ಮಾಡುವ ಸಲುವಾಗಿ ರಾಜ್ಯಾದ್ಯಂತ
ಪ್ರತಿಭಟನೆಗೆ ಕರೆ ನೀಡಿ ಸಾಂಕೇತಿಕವಾಗಿ ರಸ್ತೆ ತಡೆಮಾಡುವ ಮೂಲಕ ಪ್ರತಿಭಟನೆ ಹಮ್ಮಿ
ಕೊಳ್ಳಲಾಗಿದೆ ಎಂದರು. ಇದೇ ತಿಂಗಳ 25 ರಂದು ರಾಜ್ಯದಲ್ಲಿನ ನಾಯಕ ಸಮುದಾಯದ ಒಂದು ಲಕ್ಷಕ್ಕೂ ಹೆಚ್ಚು ಜನ
ಪಾದಯಾತ್ರೆ ಮೂಲಕ ಬೆಂಗಳೂರಿಗೆ ತೆರಳಿ ಕೇಂದ್ರ ಸರ್ಕಾರದಿಂದ ಜಾರಿಯಾಗಿರುವ ಮೀಸಲಾತಿ ರಾಜ್ಯದ
ಜನರಿಗೆ ನೀಡಬೇಕೆಂದು ಒತ್ತಾಯಿಸಲಾಗುವುದು ಎಂದು ಹೇಳಿದರು. ರಾಜ್ಯ ಸರ್ಕಾರ
ನಾಯಕ ಜನಾಂಗಕ್ಕೆ ಮೀಸಲಾತಿ ನೀಡುವುದರಲ್ಲಿ ಮೀನಾವೇಶ ಅನುಸರಿಸಿದರೆ ಸರ್ಕಾರದ ವಿರುದ್ದ ಉಗ್ರ ಪ್ರತಿಭಟನೆ
ನಡೆಸಲಾಗುವುದೆಂದು ಅವರು ಎಚ್ಚರಿಸಿದರು.

Share News

About admin

Check Also

ಮಹದೇಶ್ವರ ದೇಗುಲದ ಗೋಪುರ ಹತ್ತಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ!!

ಮಲೆ ಮಹದೇಶ್ವರ ದೇಗುಲದ ಗೋಪುರವನ್ನು ಹತ್ತಿ ವ್ಯಕ್ತಿಯೊಬ್ದ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಇಂದು ಮುಂಜಾನೆ ನಡೆದಿದೆ.ಅರೆಬರೆ ಬಟ್ಟೆಯಲ್ಲಿರುವ ವ್ಯಕ್ತಿಯೊಬ್ಬ ಗೋಪುರವನ್ನು …

Leave a Reply

Your email address will not be published. Required fields are marked *