Breaking News
Hiring Reporter’s For more Information Contact Above Number 876 225 4007 . Program producer
Home / Breaking News / ಬ್ಯಾಂಕ್ ವಿಲೀನೀಕರಣ ವಿರೋಧಿಸಿ ನಾಳೆ ಪಂಜು ಮೆರವಣಿಗೆ.

ಬ್ಯಾಂಕ್ ವಿಲೀನೀಕರಣ ವಿರೋಧಿಸಿ ನಾಳೆ ಪಂಜು ಮೆರವಣಿಗೆ.

ಹುಬ್ಬಳ್ಳಿ: ರಾಷ್ಟ್ರದಲ್ಲಿ ಬ್ಯಾಂಕುಗಳ ವಿಲೀನೀಕರಣಗೊಳಿಸುತ್ತಿರುವುದನ್ನು ವಿರೋಧಿಸಿ ಜ.10 ರಂದು ಸಂಜೆ 5.30 ಕ್ಕೆ ಪಂಜು ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಹು-ಧಾ ಬ್ಯಾಂಕ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಸ್ಟೀಪನ್ ಜಯಚಂದ್ರ ಹೇಳಿದರು.

ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದ ವಿತ್ತ ಸಚಿವೆ ನಿರ್ಮಲಾ ಶೀತಾರಾಮನ್ ಅಗಸ್ಟ್ 30 ರಂದು ದೇಶದ 10 ಪ್ರಮುಖ ರಾಷ್ಟ್ರೀಕೃತ ಬ್ಯಾಂಕ್ ಗಳನ್ನು ವಿಲೀನೀಕರಣಗೊಳಿಸಿ ನಾಲ್ಕು ಬ್ಯಾಂಕ್ ಗಳನ್ನು ಮಾಡುವುದಾಗಿ ಘೋಷಣೆ ಮಾಡಿದ್ದು, ಪರಿಣಾಮ ಬ್ಯಾಂಕುಗಳ ನೌಕರರು, ಅಧಿಕಾರಿಗಳು, ನಿವೃತ್ತರು, ಹಾಗೂ ಗ್ರಾಹಕರಿಗೆ ತೀವ್ರ ಆಘಾತವಾಗಿದೆ. ವಿಲೀನೀಕರಣ ಪ್ರಕ್ರಿಯೆಯಿಂದ ರಾಜ್ಯದಲ್ಲಿ ಕಾರ್ಪೋರೇಷನ್ ,ಸಿಂಡಿಕೇಟ್ ಬ್ಯಾಂಕ್ ಗಳು ತಮ್ಮ ಅಸ್ಮಿತೆ ಜೊತೆಗೆ ಅಸ್ತಿತ್ವವನ್ನು ಕಳೆದುಕೊಳ್ಳಲಿವೆ. ಜೊತೆಗೆ ಬ್ಯಾಂಕುಗಳು ರಾಷ್ಟ್ಟೀಕರಣದಿಂದಾಗಿ ಬ್ಯಾಂಕಿಂಗ್ ಸೇವಾ ಸೌಲಭ್ಯಗಳು ದೇಶದ ಮೂಲೆ ಮೂಲೆಗಳನ್ನು ತಲುಪಿ ಆಯಾ ಪ್ರದೇಶಗಳ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಸಹಕಾರಿಯಾಗಿದೆ. ಆದರೆ ಬ್ಯಾಂಕುಗಳ ವಿಲೀನೀಕರಣ ರಾಷ್ಟ್ರೀಕರಣದ ಮೂಲ ಉದ್ದೇಶವನ್ನೇ ವಿಫಲಗೊಳಿಸಿದ್ದು, ಇದನ್ನು ಎಲ್ಲಾ ಕಾರ್ಮಿಕ ಸಂಘಟನೆಗಳು, ಸಹಯೋಗಿ ಸಂಸ್ಥೆಗಳು ತೀವ್ರವಾಗಿ ವಿರೋಧಿಸಿ ಪಂಜು ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದರು.
ಅಂದು ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು) ನೇತೃತ್ವದಲ್ಲಿ ಎಲ್ಲಾ ಬ್ಯಾಂಕುಗಳ ಸಿಬ್ಬಂದಿಗಳು ಲ್ಯಾಮಿಂಗ್ಟನ್ ರಸ್ತೆಯ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಿಂದ ರಾಣಿ ಚೆನ್ನಮ್ಮ ವೃತ್ತದ ಮಾರ್ಗವಾಗಿ ಹಳೆಯ ಬಸ್ ನಿಲ್ದಾಣದ ಬಸವವನ ಮಾರ್ಗವಾಗಿ ಕಾರ್ಪೋರೇಷನ್ ಬ್ಯಾಂಕಿನ ವಲಯ ಕಚೇರಿಗೆ ಮೊಂಬತ್ತಿ ಮೆರವಣಿಗೆ ಮಾಡಲಿದ್ದಾರೆ. ನಂತರ ಬ್ಯಾಂಕ್ ವಿಲೀನೀಕರಣದ ಬಗ್ಗೆ ಚರ್ಚೆ ನಡೆಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಾರ್ಪೋರೇಷನ್ ಬ್ಯಾಂಕ್ ಅಧಿಕಾರಿಗಳ ಸಂಘದ ವಲಯ ಕಾರ್ಯದರ್ಶಿ ರಾಮಚಂದ್ರ ವೈಚಾಳ್, ಜೆಸಿಟಿಯುನ ಮಹೇಶ ಪತ್ತಾರ, ಸಿಂಡಿಕೇಟ್ ಬ್ಯಾಂಕ್ ಅಧಿಕಾರಿಗಳ ಸಂಘದ ವಲಯ ಕಾರ್ಯದರ್ಶಿ ಗಜಾನನ ಹೆಗಡೆ, ಉಪಾಧ್ಯಕ್ಷ ತಿಪ್ಪಣ್ಣ ಹಬೀಬ, ಹು-ಧಾ ಬ್ಯಾಂಕ್ ನೌಕರರ ಸಂಘದ ಅಧ್ಯಕ್ಷ ಬಾಲಕೃಷ್ಣ ಸೇರಿದಂತೆ ಮುಂತಾದವರು ಇದ್ದರು.

Share

About Shaikh BIG TV NEWS, Hubballi

Check Also

ಹುಬ್ಬಳ್ಳಿಯಲ್ಲಿ ಬ್ಲ್ಯಾಕ್ ಫಂಗಸ್ ಇಂಜೆಕ್ಷನ್ ಮಾರಾಟ ಮೂವರ ಬಂಧನ

ಹುಬ್ಬಳ್ಳಿ: ಕೊರೋನಾ ಸಮಯದಲ್ಲಿ ಮಾರಿಯಂತೆ ಕಾಡುತ್ತಿರುವ ಬ್ಲ್ಯಾಕ್ ಫಂಗಸ್ ಚಿಕಿತ್ಸೆಗಾಗಿ ಜನರು ಪರದಾಟ ನಡೆಸಿರುವ ಸಮಯದಲ್ಲೇ, ಈ ರೋಗಕ್ಕೆ ಬಳಕೆಯಾಗುವ …

One comment

  1. Govt was took wrong decision ,Bank merger is not a solution to reduce NPA . I strongly oppose for bank merger.

Leave a Reply

Your email address will not be published. Required fields are marked *

error: Content is protected !!