Breaking News
Hiring Reporter’s For more Information Contact Above Number 876 225 4007 . Program producer
Home / Breaking News / ಆರ್ಮಿ ವಾಹನದಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ.

ಆರ್ಮಿ ವಾಹನದಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ.

ಗರ್ಭಿಣಿಯೊಬ್ಬಳು ಆರ್ಮಿ ಆಂಬುಲೆನ್ಸ್​ನಲ್ಲಿ ಮಗುವಿಗೆ ಜನ್ಮ ನೀಡಿದ ಘಟನೆ ಜಮ್ಮು ಕಾಶ್ಮೀರದ ಕುಪ್ವಾರಾ ಜಿಲ್ಲೆಯಲ್ಲಿ ನಡೆದಿದೆ. ಹರಿಗೆಯಾದ ಬಳಿಕ ತಾಯಿ ಹಾಗೂ ಮಗುವನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗರ್ಭಿಣಿಯೊಬ್ಬಳು ಹೆರಿಗೆ ನೋವಿನಿಂದ ಬಳಲುತ್ತಿರೋದ್ರ ಬಗ್ಗೆ ಆಶಾ ಕಾರ್ಯಕರ್ತೆಯೊಬ್ಬರು ಕಲರೂಸ್​ ಕಂಪನಿ ಕಮಾಂಡರ್​ಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಆದರೆ ಸಿಕ್ಕಾಪಟ್ಟೆ ಹಿಮಪಾತ ಆಗ್ತಿರೋದ್ರಿಂದ ಆಂಬುಲೆನ್ಸ್​​ನ್ನು ಕಳುಹಿಸಿಕೊಡಲು ಸಾಧ್ಯವಾಗಲಿಲ್ಲ.

ಕೂಡಲೇ ಗರ್ಭಿಣಿಯಿದ್ದ ಜಾಗಕ್ಕೆ ಆರ್ಮಿ ವಾಹನವನ್ನ ಕಳುಹಿಸಿಕೊಡಲಾಯ್ತು. ಆರ್ಮಿ ವಾಹನ ಗರ್ಭಿಣಿಯನ್ನ ಕರೆದುಕೊಂಡು ಆಸ್ಪತ್ರೆಗೆ ಹೋಗುತ್ತಿದ್ದ ಮಾರ್ಗ ಮಧ್ಯೆದಲ್ಲೇ ಮಹಿಳೆಗೆ ಹೆರಿಗೆ ನೋವು ಜೋರಾಗಿದೆ. ಹೀಗಾಗಿ ಆಶಾ ಕಾರ್ಯಕರ್ತೆ ನೀಡಿದ ಸೂಚನೆಯ ಮೇರೆಗೆ ಆರ್ಮಿ ಗಾಡಿಯನ್ನ ಅಲ್ಲೇ ರಸ್ತೆ ಬಳಿಸಿ ನಿಲ್ಲಿಸಿ ಹೆರಿಗೆ ಮಾಡಿಸಲಾಗಿದೆ. ಆರ್ಮಿ ವೈದ್ಯಕೀಯ ತಂಡದ ನೆರವಿನಿಂದ ಹೆರಿಗೆ ಸುರಕ್ಷಿತವಾಗಿ ನಡೆದಿದ್ದು ತಾಯಿ ಹಾಗೂ ಮಗು ಇಬ್ಬರೂ ಕ್ಷೇಮವಾಗಿದ್ದಾರೆ ಎನ್ನಲಾಗಿದೆ.

Share

About Admin BIG TV NEWS

Check Also

ಹುಬ್ಬಳ್ಳಿಯಲ್ಲಿ ಬ್ಲ್ಯಾಕ್ ಫಂಗಸ್ ಇಂಜೆಕ್ಷನ್ ಮಾರಾಟ ಮೂವರ ಬಂಧನ

ಹುಬ್ಬಳ್ಳಿ: ಕೊರೋನಾ ಸಮಯದಲ್ಲಿ ಮಾರಿಯಂತೆ ಕಾಡುತ್ತಿರುವ ಬ್ಲ್ಯಾಕ್ ಫಂಗಸ್ ಚಿಕಿತ್ಸೆಗಾಗಿ ಜನರು ಪರದಾಟ ನಡೆಸಿರುವ ಸಮಯದಲ್ಲೇ, ಈ ರೋಗಕ್ಕೆ ಬಳಕೆಯಾಗುವ …

Leave a Reply

Your email address will not be published. Required fields are marked *

error: Content is protected !!