Breaking News
Hiring Reporter’s For more Information Contact Above Number 876 225 4007 . Program producer
Home / Breaking News / ಮೋದಿ ಸೊಸೆ ಬಿಜೆಪಿ ಟಿಕೆಟ್ ಆಕಾಂಕ್ಷಿ.

ಮೋದಿ ಸೊಸೆ ಬಿಜೆಪಿ ಟಿಕೆಟ್ ಆಕಾಂಕ್ಷಿ.

ಅಹ್ಮದಾಬಾದ್, ಫೆ.4: ಮುಂಬರುವ ಅಹ್ಮದಾಬಾದ್ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿಯಿಂದ ಸ್ಪರ್ಧಿಸಲು ಪ್ರಧಾನಿ ನರೇಂದ್ರ ಮೋದಿಯವರ ಸೊಸೆ ಸೋನಲ್ ಮೋದಿ ಪಕ್ಷದ ಟಿಕೆಟ್ ಬಯಸಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಹ್ಮದಾಬಾದ್ ಪಾಲಿಕೆಯ ಬೋದಕ್‌ ದೇವ್ ವಾರ್ಡ್‌ನಿಂದ ಸ್ಪರ್ಧಿಸಲು ಬಯಸಿ ಟಿಕೆಟ್ ಕೋರಿದ್ದಾಗಿ ಸ್ಪಷ್ಟಪಡಿಸಿದರು. ಮೋದಿಯವರ ಸಂಬಂಧಿಯಾಗಿ ಅಲ್ಲ; ಬಿಜೆಪಿ ಕಾರ್ಯಕರ್ತೆಯಾಗಿ ಟಿಕೆಟ್ ಕೇಳಿದ್ದೇನೆ ಎಂದು ಅವರು ಹೇಳಿಕೊಂಡರು.

ಪ್ರಧಾನಿ ಮೋದಿಯವರ ಸಹೋದರ ಪ್ರಹ್ಲಾದ್ ಮೋದಿಯವರ ಪುತ್ರಿಯಾಗಿರುವ ಸೋನಲ್ ಮೋದಿ, ನ್ಯಾಯಬೆಲೆ ಅಂಗಡಿ ನಡೆಸುತ್ತಿದ್ದಾರೆ. ಗುಜರಾತ್ ನ್ಯಾಯಬೆಲೆ ಅಂಗಡಿಗಳ ಸಂಘದ ಅಧ್ಯಕ್ಷೆಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಮುಖಂಡರ ಸಂಬಂಧಿಕರಿಗೆ ಟಿಕೆಟ್ ನೀಡುವುದಿಲ್ಲ ಎಂದು ಬಿಜೆಪಿ ಇತ್ತೀಚೆಗೆ ಘೋಷಿಸಿತ್ತು.

ಬೋದಕ್‌ದೇವ್ ವಾರ್ಡ್‌ನಿಂದ ಮಹಿಳಾ ಮೀಸಲು ಕ್ಷೇತ್ರಕ್ಕೆ ಟಿಕೆಟ್ ಬಯಸಿದ್ದೇನೆ. ನಾನು ಸಕ್ರಿಯ ಬಿಜೆಪಿ ಕಾರ್ಯಕರ್ತೆಯಾಗಿದ್ದೆ. ಆದರೆ ಮಕ್ಕಳನ್ನು ಬೆಳೆಸುವ ಹೊಣೆ ಕಾರಣದಿಂದ ಈಗ ಸಕ್ರಿಯವಾಗಿರಲಿಲ್ಲ. ಇದೀಗ ಮಕ್ಕಳು ದೊಡ್ಡವರಾಗಿದ್ದು, ಜನತೆಗಾಗಿ ಹೆಚ್ಚಿನ ಸಮಯ ನೀಡಬಲ್ಲೆ. ಈ ಕಾರಣದಿಂದ ಚುನಾವಣಾ ರಾಜಕೀಯಕ್ಕೆ ಧುಮುಕುತ್ತಿದ್ದೇನೆ” ಎಂದು ಸೋನಲ್ ವಿವರಿಸಿದರು.

Share

About Admin BIG TV NEWS

Check Also

ಹುಬ್ಬಳ್ಳಿಯಲ್ಲಿ ಬ್ಲ್ಯಾಕ್ ಫಂಗಸ್ ಇಂಜೆಕ್ಷನ್ ಮಾರಾಟ ಮೂವರ ಬಂಧನ

ಹುಬ್ಬಳ್ಳಿ: ಕೊರೋನಾ ಸಮಯದಲ್ಲಿ ಮಾರಿಯಂತೆ ಕಾಡುತ್ತಿರುವ ಬ್ಲ್ಯಾಕ್ ಫಂಗಸ್ ಚಿಕಿತ್ಸೆಗಾಗಿ ಜನರು ಪರದಾಟ ನಡೆಸಿರುವ ಸಮಯದಲ್ಲೇ, ಈ ರೋಗಕ್ಕೆ ಬಳಕೆಯಾಗುವ …

Leave a Reply

Your email address will not be published. Required fields are marked *

error: Content is protected !!