ಕೀವ್ : ಉಕ್ರೇನ್ ನಗರಗಳ ಮೇಲೆ ರಷ್ಯಾ ದಾಳಿ ಮುಂದುವರಿದಿದೆ. ನಗರದ ವಸತಿ ಕಟ್ಟಡದ ಮೇಲೆ ರಷ್ಯಾ ಸೈನಿಕರು ದಾಳಿ ನಡೆಸಿದ್ದು, ಈ ದಾಳಿಯಲ್ಲಿ ಖ್ಯಾತ ನಟಿಯೊಬ್ಬರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ.
ನಗರದ ವಸತಿ ಕಟ್ಟಡದ ಮೇಲೆ ರಷ್ಯಾ ಸೈನಿಕರು ನಡೆಸಿದ ರಾಕೆಟ್ ಶೆಲ್ ದಾಳಿಯಲ್ಲಿ ಖ್ಯಾತ ನಟಿ ಒಕ್ಸಾನಾ ಶ್ವೆಟ್ಸ್ನ್ನು (67) ಕೊಂದಿದ್ದಾರೆ ಎಂದು ಯಂಗ್ ಥಿಯೇಟರ್ ತಂಡ ಹೇಳಿಕೆ ನೀಡಿದೆ.