ಹುಬ್ಬಳ್ಳಿ:ಹುಬ್ಬಳ್ಳಿಯ ಆನಂದ ನಗರದ ರಸ್ತೆ ಬಳಿ ಬಡ್ಡಿ ವಿಷಯಕ್ಕೆ ಸಂಬಂಧಿಸಿದಂತೆ ಓರ್ವನಿಗೆ ಹೊಟ್ಟೆಯ ಭಾಗಕ್ಕೆ ಚಾಕು ಇರಿಯಲಾಗಿದ್ದು , ಯುವಕ ಗಂಭೀರವಾಗಿ
ಗಾಯಗೊಂಡಿದ್ದು ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಲಾಗಿದೆ.
ತೌಶೀಪ್ ಸಗೀರ ಅಹಮದ್ ಮುಲ್ಲಾ ಅಲಿಯಾಸ್ ಚೋರ ಮುನ್ನಾ (32) ಹಲ್ಲೆಗೆ ಒಳಗಾದವನು. ವಿಶಾಲ ಗಣೇಶ ಹೋಟಕರ ಹಾಗೂ ಪ್ರಮೋದ ಚಂದ್ರಕಾಂತ ಮಾನೆ ಎಂಬುವವರು ಚಾಕು ಇರಿದಿದ್ದು, ಚೋರ್ ಮುನ್ನಾ ವಿಶಾಲ ಹಾಗೂ ಪ್ರಮೋದ್ ಗೆ ಹಣ ಕೊಡಬೇಕಾಗಿತ್ತು. ಹಣ
ಕೊಡದೇ ಸತಾಯಿಸುತಿದ್ದ ಎನ್ನಲಾಗಿದೆ.

ಚೋರ್ ಮುನ್ನಾ ಅಟೋ ಚಾಲಕನಾಗಿದ್ದು, ಹಾಗೂ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂದು ತಿಳಿದು ಬಂದಿದೆ. ಈತನ ಮೇಲೆ ರೌಡಿ ಶೀಟರ್ ಹಾಗೂ ಎಮ್ ಓ ಬಿ ಪ್ರಕರಣ ದಾಖಲಾಗಿದೆ. ಇನ್ನೂ ರೌಡಿ ಶೀಟರ್ ಪ್ರಮೋದ್ ಹಾಗೂ ವಿಶಾಲ ಜೊತೆಗೆ ಹಣಕಾಸು ವ್ಯವಹಾರಗಳನ್ನ ಹೊಂದಿದ್ದ ಎಂದು ತಿಳಿದು ಬಂದಿದೆ. ಹಳೇ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ. ಇನ್ನೂ ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಪೋಲಿಸರು ಶೋಧ ನಡೆಸಿದ್ದಾರೆ.
