ಹುಬ್ಬಳ್ಳಿ: ಹುಬ್ಬಳ್ಳಿಯ ಪೂರ್ವ ವಿಧಾನಸಭಾ ಕ್ಷೇತ್ರದ ಕುಂದು ಕೊರತೆಗಳ ಬಗ್ಗೆ ಬಿಜೆಪಿ ಪಕ್ಷದ ಕಾರ್ಯ ಕರ್ತರು ಕಾಂಗ್ರೆಸ್ ಪಕ್ಷದ ಹಾಲಿ ಶಾಸಕ ಪ್ರಸಾದ್ ಅಬ್ಬಯ್ಯ ವಿರುದ್ದ ಆರೋಪ ಮಾಡಿದರು. ಕಳೆದ ೧೦ ವರ್ಷಗಳಿಂದ ಶಾಸಕರಿದ್ದರೂ ಕ್ಷೇತ್ರ ಯಾವುದೇ ಅಭಿವೃದ್ಧಿ ಯಾಗಿಲ್ಲ. ತಮಗೆ ಬೇಕಾದ ವಾರ್ಡಗಳಲ್ಲಿ ಮಾತ್ರ ಕೆಲಸ ಮಾಡಿದ್ದಾರೆ. ಅದನ್ನು ಹೊರತುಪಡಿಸಿ ಬಿಜೆಪಿ ಮತಗಳು ಇರುವ ಕಡೆ ಶಾಸಕರು ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ. ಡಾ.ಬಾಬು ಜಗಜೀವನ್ ರಾಮ್ ಜಿಲ್ಲಾ ಬೃಹತ್ ಭವನದ ಕಾಮಗಾರಿ ಕೆಲಸ ಮಾಡಿಲ್ಲ. ಈ ಹಿಂದೆ ಇದ್ದ ಶಾಸಕ ವೀರಭದ್ರಪ್ಪ ಹಾಲಹರವಿಯವರು ೮೪೫ ಲಕ್ಷ ರೂಪಾಯಿಗಳನ್ನು ಭವನದ ಕಾಮಗಾರಿಗಾಗಿ ಹಣ ಬಿಡುಗಡೆ ಮಾಡಿಸಿದ್ದರು. ಆದರೂ ಕಟ್ಟಡ ಕಾಮಗಾರಿ ೯ ತಿಂಗಳು ಅವದಿಯಲ್ಲಿ ಮುಗಿಯದೇ, ೧೦ ವರ್ಷವಾದ್ರೂ ಮುಗಿಯುತ್ತಿಲ್ಲವೆಂದು ಆರೋಪಿಸಿದರು. ಇನ್ನೂ ಕನಸಿನ ಕೂಸು ಸಿಬಿಟಿ ಬಸ್ ನಿಲ್ದಾಣ ವೂ ಕೂಡ ೧೮ ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದಾರೆ. ಇದು ಬೆಂಗಳೂರು ಶಿವಾಜಿ ನಗರ ರೀತಿಯಲ್ಲಿ ಕಟ್ಟ ಬೇಕಾದ ರೀತಿಯಾಗಲೀ , ಕಟ್ಟಡದ ಮೂಲ ನಕ್ಷೆ ಯ ರೀತಿಯಲ್ಲಿಯೂ ಬಸ್ ಸ್ಟಾಂಡ್ ಕಾಮಗಾರಿ ಮುಗಿದಿಲ್ಲ ಎಂದು ಆರೋಪಿಸಿದರು.
