ಧಾರವಾಡ: ಕುಂದಗೋಳ ತಾಲೂಕಿನ ಗುಡೇನಕಟ್ಟಿ ಗ್ರಾಮದ ಬಳಿ ಇರುವ ಹೊಲದಲ್ಲಿ ಆಕಸ್ಮಿಕ ಬೆಂಕಿ ತಗುಲಿ ಎರಡು ಬಣಿವೆಗಳು ಸಂಪೂರ್ಣ ಸುಟ್ಟು ಕರಕಲಾದ ಘಟನೆ ನಡೆದಿದೆ. ಭೀಮಪ್ಪ ಸಿದ್ದನ್ನವರ ಇವರಿಗೆ ಸೇರಿದ ಹೊಟ್ಟಿನ ಬಣಿವೆಯಾಗಿದ್ದು, ಅದರಲ್ಲಿ ದಿನನಿತ್ಯ ತಿನ್ನುವ ಆಹಾರದ ಕಾಳು ಕಡಿಗಳನ್ನು ಶೇಖರಸಿಟ್ಟಿದ್ದರು. ಮನೆಯಲ್ಲಿ ಇಟ್ಟರೆ ಹುಳ ಆಗುತ್ತದೆ ಎಂದು ತಮ್ಮ ಬಣಿವೆಯಲ್ಲಿ ಇಟ್ಟಿದ್ದರು ಎಂದು ಹೇಳಲಾಗಿದೆ. ಇನ್ನೂ ಹತ್ತಿದ ತಕ್ಷಣ ಕುಂದಗೋಳ ಅಗ್ನಿಶಾಮಕ ಆಗಮಿಸಿ, ಬೆಂಕಿಯನ್ನು ನಂದಿಸಿದರು. ಅಂದಾಜು ಮೊತ್ತ ಒಂದು ಲಕ್ಷಕ್ಕೂ ಹೆಚ್ಚು ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಈ ನೋವಿನ ಸಂಗತಿಯಲ್ಲಿ ಮನೆಯವರು ಕಣ್ಣೀರು ಹಾಕುತ್ತಿದ್ದ ದೃಶ್ಯ ಮನಕಲುವಂತಿತ್ತು.
