ಹುಬ್ಬಳ್ಳಿ: ವಾಣಿಜ್ಯ ನಗರೀ ಹುಬ್ಬಳ್ಳಿಯ ದುರ್ಗದ್ ಬೈಲ್ ನಲ್ಲಿ ಇಂದು ವೇದ ಚಿತ್ರದ ಶಿವ ಸಂಭ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಆದ್ರೇ ಸಂಭ್ರಮದಲ್ಲಿ ಅತೀ ಹೆಚ್ಚಾಗಿ ಬಿಜೆಪಿ ಪಕ್ಷದ ಪೂರ್ವ ವಿಧಾನಸಭೆಯ ಕಾರ್ಯಕರ್ತರೇ ಭಾಗಿಯಾಗಿದ್ದರು. ತಾಕಕಾಲಿಯಾ ಎಂಬಂತ್ತೇ ಹ್ಯಾಟ್ರೀಕ್ ಹಿರೋ ಶಿವಣ್ಣ ಮೆರವಣಿಗೆಯಲ್ಲಿ ಭಾಗಿಯಾಗದೇ ಅಭಿಮಾನಿಗಳ ಮುಂದೆ ಪ್ರತ್ಯಕ್ಷರಾದ್ರು. ನೇರವಾಗಿ ನಗರದಲ್ಲಿನ ಅಪ್ಸರ ಚಿತ್ರಮಂದಿರಕ್ಕೆ ಭೇಟಿ ನೀಡಿ, ಅಭಿಮನಿಗಳೊಂದಿಗೆ ಹಾಡನ್ನು ಹಾಡಿ ಸಂಭ್ರಮಿಸಿದರು. ಇನ್ನೂ ಅಭಿಮಾನಿಗಳೊಂದಿಗೆ ಇಡೀ ಚಿತ್ರ ತಂಡವೇ ಹಾಡು ಹಾಡಿ ಸಂಭ್ರಮಿಸಿದೆ.
ತದ ನಂತರ ಶಿವಣ್ಣ ಹಾಗೂ ವೇದ ಚಿತ್ರ ತಂಡ ಹುಬ್ಬಳ್ಳಿಯಿಂದ ನೇರವಾಗಿ ಗದಗ ಕಡೆ ಪ್ರಯಾಣ ಬೆಳೆಸಿದರು.
ಆದ್ರೇ ಶಿವಣ್ಣ ಮೆರವಣಿಗೆಗೆ ಬಾರದೇ ಇದ್ದುದನ್ನೇ ಬಿಜೆಪಿ ಕಾರ್ಯಕರ್ತರು ಅಭಿಮಾನಿಗಳಿಗೆ ತಪ್ಪು ಸಂದೇಶ ನೀಡಿದರು. ಶಿವಣ್ಣ ನವರಿಗೆ ಹುಷಾರಿಲ್ಲವೆಂದು ಸುಳ್ಳು ಸಂದೇಶವನ್ನು ಬಿಜೆಪಿ ಪಕ್ಷದ ಕಾರ್ಯಕರ್ತ ಹಾಗೂ ಶಿವಣ್ಣನವರ ಅಭಿಮಾನಿಯಾಗಿರುವ ಶಿವನಂದ ಮುತ್ತಣ್ಣನವರ ತಿಳಿಸಿದರು.
ಇನ್ನೂ ಮೆರವಣಿಗೆಯ ಮುಖ್ಯ ವಾಹನದಲ್ಲಿ ಪೂರ್ವ ವಿಧಾನಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಟಿಕೆಟ್ ಆಕಾಂಶಿ ಯಾಗಿರುವ ವೀರಭದ್ರಪ್ಪ ಹಾಲಹರವಿ, ಕ್ರಾಂತಿ ಕಿರಣ್ ಹಾಗೂ ಕ್ಷೇತ್ರದ ಅಧ್ಯಕ್ಷ ಪ್ರಭು ನವಲಗುಂದಮಠ ಸೇರಿದಂತೆ ಹಲವಾರು ಜನರು ಭಾಗಿಯಾಗಿದ್ದು ಕಂಡು ಬಂದಿದೆ.