ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡದಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗುತ್ತಿರುವುದು, ಎಲ್ ಆ್ಯಂಡ್ ಟಿ ಕಂಪನಿಯ ಭೇಜವಾಬ್ದಾರಿತನದಿಂದ ಮಾಜಿಮುಖ್ಯಮಂತ್ರಿ ಜಗದೀಶ್ ಶೇಟ್ಟರ್ ತಿಳಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಎಲ್ ಆ್ಯಂಡ್ ಟಿ ಕ್ರೆಡಿಬಲಿಟಿ ಇರುವ ಕಂಪನಿ ಅಂತಾ ಕುಡಿಯು ನೀರಿನ ನಿರ್ವಹಣೆ ಜವಾಬ್ದಾರಿ ಕೊಟ್ಟಿದ್ದೆವು. ಹೆಸರಿಗೆ ತಕ್ಕಂತೆ ಅವರು ನಡೆದುಕೊಂಡಿಲ್ಲ. ಜನರಿಗೆ ಅನಾನುಕೂಲತೆ ಆಗುತ್ತಿದೆ, ನಾಲೆಜ್ ಇಲ್ಲದ ಕಾರಣ ಅವಾಂತರ ಸೃಷ್ಟಿಸಿದ್ದಾರೆ. ಸಮಸ್ಯೆ ಬಗ್ಗೆ ಸದನದಲ್ಲಿ ಮಾತನಾಡಿದ್ದೆ.
ಜಲಮಂಡಳಿಯಲ್ಲಿ ಕೆಲಸ ಮಾಡುತ್ತಿದ್ದ150 ಹಂಗಾಮಿ ನೌಕರರನ್ನು ಖಾಯಂ ಮಾಡಬೇಕು. ಹಂಗಾಮಿ ನೌಕರರಿಗೆ ಎಂಟು ತಿಂಗಳಿಂದ ವೇತನ ಮಾಡಿಲ್ಲ, ಕೂಡಲೇ ಮಾಡಬೇಕು. ನಗರಾಭಿವೃದ್ಧಿ ಸಚಿವರಿಗೆ ಕೂಡಲೇ ಹುಬ್ಬಳ್ಳಿಗೆ ಬಂದು ಮೀಟಿಂಗ್ ಮಾಡಲು ಹೇಳಿದ್ದೇನೆ. ವಾರ್ನಿಂಗ್ ಮಾಡಿ ಸುಧಾರಣೆ ಮಾಡಲು ಸೂಚಿಸಬೇಕು, ಇಲ್ಲವೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದೇನೆ ಎಂದು ಶೆಟ್ಟರ್ ತಿಳಿಸಿದರು.