ಧಾರವಾಡ : ಗೋವಾ ರಸ್ತೆಗೆ ಹೊಂದಿಕೊಂಡು ಇರುವಂತಹ ಪ್ರತಿಷ್ಠಿತ ಆದಿತ್ಯ ಪಾರ್ಕ್, ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆಯ ನಿರ್ಲಕ್ಷಕ್ಕೆ ಒಳಗಾಗಿದೆ. ಇದನ್ನು ಖಂಡಿಸಿ ಆದಿತ್ಯ ಪಾರ್ಕ್ ನಿವಾಸಿಗಳು ತಮ್ಮ ಬಡಾವಣೆಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡುವಂತೆ ಆಗ್ರಹಿಸಿ ರಾಷ್ಟ್ರೀಯ ಹೆದ್ದಾರಿಯನ್ನು ಬಂದು ಮಾಡುವ ಮೂಲಕ ತಮ್ಮ ಅಸಮಾಧಾನದ ಹೋರಾಟವನ್ನು ಮಾಡಿದರು. ಆದಿತ್ಯ ಪಾರ್ಕ್ ಬಡಾವಣೆ ಸುಮಾರು 16 ವರ್ಷಗಳಿಂದ ಮೂಲಭೂತ ಸೌಲಭ್ಯಗಳಾದ ರಸ್ತೆ ಡಾಂಬರಿಕಾರಣ, ಬಡಾವಣೆ ಸ್ವಚ್ಛತೆ, ಕುಡಿಯುವ ನೀರಿನ ಸೌಲಭ್ಯ, ಮಕ್ಕಳು ಹಾಗೂ ಹಿರಿಯ ನಾಗರಿಕರಿಗಾಗಿ ಉದ್ಯಾನವನ, ಇತ್ಯಾದಿಗಳಿಂದ ವಂಚಿತವಾಗಿದೆ.ಇಲ್ಲಿಯವರೆಗೆ ಜಿಲ್ಲಾಡಳಿತವಾಗಲಿ ಸಂಬಂಧಪಟ್ಟ ಮಹಾನಗರ ಪಾಲಿಕೆಯ ಸದಸ್ಯರಾಗಲಿ ಯಾವುದೇ ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ, ನಮ್ಮ ಬಡಾವಣೆಗೇ ಮಲತಾಯಿ ಧೋರಣೆಯನ್ನು ಮಾಡುತ್ತಿದ್ದಾರೆಂದು ಆದಿತ್ಯ ಪಾರ್ಕ್ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು. ಈ ರಸ್ತೆ ತಡೆಯಿಂದ ಸುಮಾರು ಹೊತ್ತು ಟ್ರಾಫಿಕ್ ಜಾಮ್ ಆಗಿತ್ತು.
ರಸ್ತೆ ತಡೆ ಮಾಡುವ ಸಂದರ್ಭದಲ್ಲಿ ಆದಿತ್ಯ ಪಾರ್ಕ್ ನಿವಾಸಿಗಳು ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳ ಮಧ್ಯದಲ್ಲಿ ಮಾತಿನ ಚಕಮಕಿ ನಡಿಯಿತು. ಈ ಕೂಡಲೇ ಸಂಬಂಧಪಟ್ಟ ಮಹಾನಗರ ಪಾಲಿಕೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಪ್ರತಿಭಟನಾ ಸ್ಥಳಕ್ಕೆ ಬೇಕೆಂದು ಪೊಲೀಸ್ ಇಲಾಖೆ ಸಿಬ್ಬಂದಿಗಳೊಂದಿಗೆ ವಾಗ್ವಾದ ನಡೆಸಿದರು. ಪರಿಸ್ಥಿತಿ ಹದಗೆಟ್ಟು ಹೋಗುವುದನ್ನು ಅರಿತ ಪಾಲಿಕೆಯ ಅಧಿಕಾರಿಗಳು ಹಾಗೂ ನೀರು ಸರಬರಾಜು ಮಾಡುವ ಎಲ್ ಎನ್ ಟಿ ಕಂಪನಿಯ ಅಧಿಕಾರಿಗಳು ತಕ್ಷಣವೇ ಹೋರಾಟ ನಡೆಯುತ್ತಿರುವ ಸ್ಥಳಕ್ಕೆ ಧಾವಿಸಿ ಪ್ರತಿಭಟನಕಾರರನ್ನು ಮನವೊಲಿಸಿ ಆದಷ್ಟು ಬೇಗ ತಮ್ಮ ಎಲ್ಲ ರೀತಿಯ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡುವುದಾಗಿ ಆಶ್ವಾಸನೆ ನೀಡಿ ಪ್ರತಿಭಟನಕಾರರನ್ನು ಸಮಾಧಾನಗೊಳಿಸಿದರು . ಈ ಹೋರಾಟದಲ್ಲಿ ಚನ್ನಬಸಪ್ಪ ಮರದ, ಜಂಗಮನವರ್, ಬಸವರಾಜ್ ಕಲ್ಯಾಣಪುರ, ದೊಡಮನಿ, ಹೊಸಮನಿ , ಬಸವರಾಜ್ ದುರ್ಗಾಡೆ, ಇನ್ನಿತರರು ಪಾಲ್ಗೊಂಡಿದ್ದರು.