ಧಾರವಾಡ: ಧಾರವಾಡ ತಾಲೂಕಿನ ಲಕಮಾಪುರ ಗ್ರಾಮದಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಅನುದಾನದಡಿ ಅಂದಾಜು 2ಕೋಟಿ ರೂಪಾಯಿ ಅನುದಾನದಲ್ಲಿ ಗ್ರಾಮದ ಸ್ಥಳೀಯ ಹಳ್ಳಕ್ಕೆ (BCB) ಬ್ರಿಡ್ಜ್ ಕಮ್ ಬ್ಯಾರೇಜ್ ನಿರ್ಮಾಣ ಕಾಮಗಾರಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಅಂದಾಜು ಮೊತ್ತ 30 ಲಕ್ಷ ರೂಪಾಯಿ ಅನುದಾನದಲ್ಲಿ ಲಕಮಾಪೂರ-ಮುಳಮುತ್ತಲ ರಸ್ತೆ ಸುಧಾರಣಾ ಕಾಮಗಾರಿಗೆ ಶಾಸಕ ಅಮೃತ ದೇಸಾಯಿ ಅವರು ಭೂಮಿ ಪೂಜೆ ಸಲ್ಲಿಸಿ ಕಾಮಗಾರಿಗೆ ಚಾಲನೆ ನೀಡಿದರು.
ನಂತರ ಮಾತನಾಡಿ ಅವರು, ಅತಿವೃಷ್ಟಿಯಿಂದ ರಸ್ತೆ ಮೇಲೆ ನೀರು ಬಂದು ರಸ್ತೆ ಸಂಚಾರ ಸ್ಥಗಿತವಾಗುತ್ತಿತ್ತು. ಈ ಬ್ರಿಡ್ಜ್ ಕಮ್ ಬ್ಯಾರೇಜ್ ನಿರ್ಮಾಣದಿಂದ ರಸ್ತೆ ಸಂಪರ್ಕ ಸರಳವಾಗಲಿದೆ ಮತ್ತು ಸ್ಥಳೀಯ ರೈತರ ನೀರಾವರಿಗೆ ಸಹಾಯವಾಗುವುದು ಎಂದರು.
ಈ ಸಂಧರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷರಾದ ರುದ್ರಪ್ಪ ಅರಿವಾಳ, ಮಹೇಶ ಯಲಿಗಾರ, ಗದಿಗೆಪ್ಪ ಹುಬ್ಬಳ್ಳಿ, ದೇವೇಂದ್ರಪ್ಪ ಧಾರವಾಡ, ನಿಂಗನಗೌಡ ಪಾಟೀಲ, ಅಶೋಕ ಹುಡೇದ, ಗಂಗಪ್ಪ ಮುಮ್ಮಿಗಟ್ಟಿ, ಮಾಳೇಶ ತೋಟನ್ನವರ ಸೇರಿದಂತೆ ಅನೇಕರು ಈ ಸಂದರ್ಭದಲ್ಲಿದ್ದರು
bigtvnews | Hubli Dharwad News | Kannada News | Karnataka News Hubli News | News In Hubli | Local news

