Breaking News

ಜ.13 ರಿಂದ 16 ರವರೆಗೆ ಶ್ರೀ ಪ್ರಸನ್ನ ಮಹಾಗಣಪತಿಗೆ ಬ್ರಹ್ಮಕಲಶೋತ್ಸವ

ಹುಬ್ಬಳ್ಳಿ: ಕಳತ್ತೂರು ಬ್ರಹ್ಮಶ್ರೀ ಉದಯ ತಂತ್ರಿವರ್ಯರ ನಿರ್ದೇಶನ ಹಾಗೂ ಪುರೋಹಿತರಾದ ಪ್ರಭಾಕರ್ ಭಟ್ ಅವರ ನೇತೃತ್ವದಲ್ಲಿ ಶ್ರೀ ಪ್ರಸನ್ನ ಮಹಾಗಣಪತಿಗೆ ಬ್ರಹ್ಮಕಲಶೋತ್ಸವ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಜ.13 ರಿಂದ 16 ರವರೆಗೆ ಇಲ್ಲಿನ ಇಂದಿರಾಗಾಜಿನ ಮನೆಯ ಆವರಣದ ಮುಂಭಾಗದ ಹು-ಧಾ ಬಂಟರ ಸಂಘದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಬಂಟರ ಸಂಘದ ಅಧ್ಯಕ್ಷ ಸುಗ್ಗಿ ಸುಧಾಕರ ಶೆಟ್ಟಿ ಹೇಳಿದರು.

ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 1974 ರಲ್ಲಿ ಸ್ಥಾಪನೆಗೊಂಡ ಹು-ಧಾ ಬಂಟರ ಸಂಘ ಸ್ಥಾಪಿಸಿ, ಸಮಾಜದ ಸಂಘಟನೆ, ಸಾಮಾಜಿಕ  ಧಾರ್ಮಿಕ ಕಾರ್ಯಕ್ರಮವನ್ನು ಮಾಡುತ್ತಾ ಬರಲಾಗಿದೆ. ಇದೀಗ  ಹು-ಧಾ ಬಂಟರ ಸಂಘದ ಆವರಣದಲ್ಲಿ ಶ್ರೀ ಪ್ರಸನ್ನ ಮಹಾಗಣಪತಿ ಕ್ಷೇತ್ರವು ನಿರ್ಮಾಣಗೊಂಡು 12 ವರ್ಷವಾಗಿದ್ದು, ಈ ಪರ್ವ ಕಾಲದಲ್ಲಿ ಸಕಲವಘ್ನನಿರ್ವಾಹಕ, ಸಕಲ್ಯೇಶ್ವರ್ಯ ಪ್ರದಾಯಕನಾದ ಶ್ರೀ ಪ್ರಸನ್ನ ಮಹಾಗಣಪತಿ ದೇವತಾ ಸಾನಿಧ್ಯಕ್ಕೆ ಸರ್ವ ಭಕ್ತವೃಂದದವರ ಶಾಸ್ತ್ರೋಕ್ತವಾಗಿ ಬ್ರಹ್ಮಕಲಶೋತ್ಸವವನ್ನು ಆಯೋಜಿಸಲಾಗಿದೆ ಎಂದು ಹೇಳಿದರು.

 ಜ.13 ರಂದು ವೈದಿಕ ಕಾರ್ಯಕ್ರಮಗಳು ನಡೆಯಲಿದ್ದು, ಅಂದು ಸಂಜೆ ಸ್ಟೇಷನ್ ರಸ್ತೆಯ ಈಶ್ವರ ದೇವಸ್ಥಾನದಿಂದ ಹೊರೆಕಾಣಿಕೆಯ ಭವ್ಯ ಶೋಭಾಯಾತ್ರೆ ನಡೆಯಲಿದೆ. ಇದಕ್ಕೆ ಹು-ಧಾ ಪಾಲಿಕೆ ಮೇಯರ್ ಚಾಲನೆ ಕೊಡಲಿದ್ದು, ಸಂಜೆ 6.30 ರಿಂದ ಖುತ್ವಿಜರ ಆಗಮನ, ವಧು ಪರ್ಕಾದಿಗಳು, ತೋರಣ ಮೂಹೂರ್ತ, ದೇವತಾ ಪ್ರಾರ್ಥನೆ, ಉಗ್ರಾಣ ಮೂಹರ್ತ, ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 7.30 ರಿಂದ ಧಾರ್ಮಿಕ ಸಭೆ ನಡೆಯಲಿದೆ. ಆರ್.ಎನ್.ಎಸ್ ಸಮೂಹ ಸಂಸ್ಥೆಯ ಅಧ್ಯಕ್ಷ ಸತೀಶ ಶೆಟ್ಟಿ ಉದ್ಘಾಟನೆ ಮಾಡಲಿದ್ದು, ಮಾಜಿ ಮುಖ್ಯಮಂತ್ರಿ ಶೆಟ್ಟರ್ ಸೇರಿದಂತೆ ನಗರದ ಮುಂತಾದ ಗಣ್ಯಮಾನ್ಯರು ಭಾಗವಹಿಸಲಿದ್ದಾರೆ. ಇದೇ ವೇಳೆ ಮೂರು ಸಾವಿರಮಠದ ಡಾ.ಗುರುಸಿದ್ದರಾಜಯೋಗಿಂದ್ರ ಮಹಾಸ್ವಾಮಿಗಳು ಆರ್ಶೀವಚನ ನೀಡಲಿದ್ದಾರೆ, ಪುತ್ತೂರಿನ ಅಂಬಿಕಾ ಕಾಲೇಜಿನ ಉಪನ್ಯಾಸಕರಾದ ಆದರ್ಶ ಗೋಖಲೆ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ ಎಂದರು.

ಜ.14 ರಂದು ಬೆಳಿಗ್ಗೆ 7 ರಿಂದ ಪುಣ್ಯಹ, ದೇವನಾಂದಿ, ಸಪ್ತಶುದ್ದಿ, ಗೋಪೂಜೆ, ಭೂಶುದ್ದಿ ಹೋಮ್, ಗೇಹ ಪ್ರತಿಗ್ರಹ, ಸಂಕಲ್ಪ, ಖುತ್ವಿಗ್ವರಣ, ಕಂಕಣ ಬಂಧನ, ಯಾಗ ಮಂಟಪಾರಾಧನೆ, ಅಷ್ಠೋತ್ತರ ಶತನಾರಿಕೇಲ ಗಣಯಾಗ, ಪ್ರಾಯಶ್ಚಿತ್ತ ಹೋಮಗಳು, ಶ್ರೀ ಸತ್ಯನಾರಾಯಣ ಪೂಜೆ, ಪೂರ್ಣಾಹುತಿ ನಡೆಯಲಿದೆ. ಸಂಜೆ 5.30 ಕ್ಕೆ ಧಾರ್ಮಿಕ ಸಭೆ ನಡೆಯಲಿದೆ. ಕುಕ್ಕೆ ಸುಬ್ರಹ್ಮಣ್ಯಮಠದ ವಿದ್ಯಾಪ್ರಸನ್ನತೀರ್ಥ ಶ್ರೀಪಾದರು ಆರ್ಶೀವಚನ ನೀಡಲಿದ್ದಾರೆ. ಇದರ ಜೊತೆಗೆ ಪ್ರಸನ್ನ ಮಹಾಗಣಪತಿ ವೇದಿಕೆಯಲ್ಲಿ ಬೆಳಿಗ್ಗೆ 9 ರಿಂದ ಭಜನಾ ಕಾರ್ಯಕ್ರಮ, ಗೀತ ಸಾಹಿತ್ಯ ಸಂಭ್ರಮ, ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದರು.

ಜ.15 ರಂದು ಬೆಳಿಗ್ಗೆ 8 ಗಂಟೆಗೆ ಪುಣ್ಯಾಹ, ಮಹಾಸಂಕಲ್ಪ, ನಾಮತ್ರಯ ಹೋಮ, ನವಗ್ರಹಸಮೇತ ಮೃತ್ಯುಂಜಯ ಯಾಗ, ಆಶ್ಲೇಷಬಲಿ, ಮಹಾಪೂಜೆ, ತೀರ್ಥಪ್ರಸಾದ್ ವಿತರಣೆ ನಡೆಯಲಿದೆ. ಸಂಜೆ 5 ಕ್ಕೆ ಬ್ರಹ್ಮಕಲಶಾದಿ ಮಂಡಲ ರಚನೆ, ಅಧಿವಾಸ ಹೋಮ, ಅಧಿವಾಸಾದಿಗಳು, ಅಷ್ಠವಧಾನ, ಶಯಾಧಿವಾಸ ನಂತರ ಧಾರ್ಮಿಕ ಸಭೆ ನಡೆಯಲಿದೆ. ಮಂಗಳೂರಿನ ಗುರುಪುರ ವಜ್ರದೇಹಿಮಠದ ರಾಜಶೇಖರಾಜನಂದ ಸ್ವಾಮೀಜಿ ಆರ್ಶೀವಚನ ಮಾಡಲಿದ್ದಾರೆ. ಇದಕ್ಕೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಚಾಲನೆ ಕೊಡಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜೈ ಭಾರತ ಜನನಿಯ ತನುಜಾತೆ ಗೀತ ಕಥನ, ನೃತ್ಯ ಪ್ರದರ್ಶನ, ಹಾಸ್ಯ ಸಂಜೆ ನಡೆಯಲಿದೆ ಎಂದು ಹೇಳಿದರು.

ಜ.16 ರಂದು ಗಣಪತಿಗೆ ಪುಣ್ಯಹವಾಚನ, ಮಹಾಸಂಕಲ್ಪ, ಕೃಚ್ಛ್ರಾಚರಣೆ, ಧನುರ್ಲಗ್ನದಲ್ಲಿ ಮೂರ್ತಿ ಪ್ರಾಣಪ್ರತಿಷ್ಠೆ, ಕಳಸಾರೋಹಣ, ತತ್ವಹೋಮ್, ಕಲಶಪೂಜೆ, ಪ್ರತಿಷ್ಠಾಹೋಮ, ಪೂರ್ಣಾಹುತಿ, ನೇತ್ರೋನ್ಮಿಲನ, ಬ್ರಹ್ಮಕಲಶಾಭಿಷೇಕ, ಅಲಂಕಾರ, ಮಹಾಪೂಜೆ, ಫಲಪೂಜೆ ನಡೆಯಲಿದೆ. ಸಂಜೆ 5.30 ರಿಂದ ಧಾರವಾಡ ಸಭೆ ನಡೆಯಲಿದೆ. ಪೇಜಾವರಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಆರ್ಶೀವಚನ ನೀಡಲಿದ್ದಾರೆ. ಇದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ಕೊಡಲಿದ್ದಾರೆ. ಇದರ ಜೊತೆಗೆ ಅಂದು ಯಕ್ಷಗಾನ ಕಲಾವಿದರಿಂದ ಶ್ರೀಕಡ ಸಂಧಾನ, ಗೀತಾ ಗಾಯನ, ಆಳ್ವಾಸ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ನಡೆಯಲಿದೆ. ಈ ಎಲ್ಲ ಕಾರ್ಯಕ್ರಮದಲ್ಲಿ ಅವಳಿನಗರದ ಎಲ್ಲ ಜನರು ಮುಕ್ತವಾಗಿ ಭಾಗವಹಿಸಬಹುದು ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಶಾಂತರಾಮ ಶೆಟ್ಟಿ, ಪ್ರದೀಪ್ ಪಕ್ಕಳ, ಕಾರ್ಯದರ್ಶಿ ಸತೀಶ ಶೆಟ್ಟಿ, ಕೋಶಾಧಿಕಾರಿ ಸುದೀರ್ ಶೆಟ್ಟಿ, ಉಪ ಕಾರ್ಯದರ್ಶಿ ರಾಜೇಂದ್ರ ಶೆಟ್ಟಿ ಇದ್ದರು.

Share News

About BigTv News

Check Also

ಹುಬ್ಬಳ್ಳಿ-ಧಾರವಾಡದಲ್ಲಿ ಅನಧಿಕೃತ ಲೇಔಟ್ ತೆರವು ಕಾರ್ಯಾಚರಣೆ

ಧಾರವಾಡ : ಹು-ಧಾ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರ ಮಾರ್ಗದರ್ಶನದಲ್ಲಿ ಆಯುಕ್ತ ಡಾ: ಸಂತೋಷಕುಮಾರ ಬಿರಾದಾರ ಅವರು …

Leave a Reply

Your email address will not be published. Required fields are marked *

You cannot copy content of this page