ಹುಬ್ಬಳ್ಳಿ : ಪ್ರಧಾನಿ ನರೇಂದ್ರ ಮೋದಿ ಆಗಮನದ ಹಿನ್ನೆಲೆಯಲ್ಲಿ, ಪ್ರಧಾನಿ ಮೋದಿಯವರನ್ನು ಮೆಚ್ಚಿಸಲು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಅಧಿಕಾರಿಗಳು ನಗರದಲ್ಲಿ ಕಳಪೆ ಕಾಮಗಾರಿ ನಡೆಸುವ ಮೂಲಕ ಜನರ ಆಕ್ರೋಶಕ್ಕೆ ಕಾರಣರಾಗಿದ್ದಾರೆ. ಇದೇ 12 ರಂದು ಯುವ ಜನೋತ್ಸವ ಉದ್ಘಾಟನೆಗೆಂದು ಅವಳಿ ನಗರಗಳಿಗೆ ಆಗಮಿಸುತ್ತಿರುವ ಪ್ರಧಾನಿ ಮೋದಿ ಬರ ಮಾಡಿಕೊಳ್ಳಲು ರಸ್ತೆಗುಂಡಿ ಮತ್ತು ದೂಳಿನಿಂದ ಕಂಗಾಲಾಗಿದ್ದ ಹುಬ್ಬಳ್ಳಿ ಧಾರವಾಡ ಮಂದಿಗೆ ಆಸರೆಯಾಗಲು ಪ್ರಧಾನಿ ಮೋದಿಯೇ ಬರಬೇಕಾಯಿತು. ಹು-ಧಾ ಪಾಲಿಕೆಯಿಂದ ರಾತ್ರೋರಾತ್ರಿ ರಸ್ತೆಗಳ ಅಭಿವೃದ್ಧಿ ಕಾರ್ಯ ನಡೆಯುತ್ತಿದ್ದು, ಸ್ಮಾರ್ಟ್ ಸಿಟಿ ಬಂಡವಾಳ ಬಯಲಾಗುವ ಭಯದಲ್ಲಿ ರಸ್ತೆಗಳಿಗೆ ತೆಪೆ ಹಾಕುವ ಕಾರ್ಯ ಬಿರುಸಿನಿಂದ ನಡೆಯುತ್ತಿದೆ. ರಸ್ತೆ ಅಕ್ಕಪಕ್ಕದ ಕಾಂಪೌಂಡ್ ಗಳಿಗೆ ಸುಣ್ಣ ಬಣ್ಣ ಹಚ್ಚಲಾಗುತ್ತಿದೆ.
ಹುಬ್ಬಳ್ಳಿ ನಗರದ ರೈಲ್ವೆ ಮೈದಾನದಲ್ಲಿ ಬೃಹತ್ ವೇದಿಕೆ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಇನ್ನೂ ಮೋದಿ ಸಂಚಾರಿಸುವ ರಸ್ತೆಗಳಿಗೆ ಡಾಂಬಾರು ಭಾಗ್ಯ ಒದಗಿ ಬಂದಿದೆ.