ಹುಬ್ಬಳ್ಳಿ: ಜನವರಿ 12 ರ ಒಳಗೆ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಘೋಷಣೆ ಮಾಡಲೇಬೇಕು, ಒಂದು ವೇಳೆ ಮೀಸಲಾತಿ ಘೋಷಣೆ ಆಗದೆ ಹೋದ್ರೆ 13 ರಂದು ಸಿಎಮ್ ಕ್ಷೇತ್ರ ಶಿಗ್ಗಾಂವಿ ಮನೆಯ ಎದುರು ಮತ್ತೊಮ್ಮೆ ಹೋರಾಟ ಮಾಡುತ್ತೇವೆ ಎಂದು ಹುಬ್ಬಳ್ಳಿಯಲ್ಲಿ ಪಂಚಮಸಾಲಿ ಕೂಡಲಸಂಗಮ ಪೀಠದ ಜಯ ಮೃತ್ಯುಂಜಯ ಸ್ವಾಮೀಜಿಗಳು ಎಚ್ಚರಿಕೆಯನ್ನು ನೀಡಿದರು. ಮೀಸಲಾತಿಗಾಗಿ ನಾವೂ ಎರಡೂ ವರ್ಷಗಳಿಂದ ಹೋರಾಟ ಮಾಡತಿದ್ದೆವೆ .ಇದಕ್ಕೆ ತಾರ್ಕಿಕ ಅಂತ್ಯ ಕಾಣಿಸಲು ನಾವು ಡಿಸೆಂಬರ್ 22 ರಂದು ಬೆಳಗಾವಿಯಲ್ಲಿ ಬೃಹತ್ ಸಮಾವೇಶ ಮಾಡದ್ದೆವು ,
ಅಂದು ಬೆಳಗಾವಿಯ ಅಧಿವೇಶನ ಸಮಯದಲ್ಲಿ ಸಿಎಂ ಬೊಮ್ಮಾಯಿ ಅವರು ಡಿಸೆಂಬರ್ 29 ರವರೆಗೆ ಕಾಲಾವಕಾಶ ನೀಡಲು ಪರಿಪರಿಯಾಗಿ ಬೇಡಿ ಕೊಂಡು ಆಣೆ ಪ್ರಮಾಣ ಮಾಡಿ ಸಮಯವನ್ನ ತೆಗೆದುಕೊಂಡಿದ್ದರು. ಆಣೆ ಪ್ರಮಾಣವನ್ನು ನಂಬಿ ನಾವುಗಳು ಮತ್ತೆ ಸರಕಾರವನ್ನು ನಂಬಿ ಮುಂದೆ ನಮ್ಮ ಸಮುದಾಯಕ್ಕೆ ಮೀಸಲಾತಿ ಸಿಗುತ್ತದೆ ಎಂದು ಕನಸು ಇಟ್ಟುಕೊಂಡಿದ್ದೆವು. ಆದರೆ ಸಚಿವ ಸಂಪುಟವನ್ನ ನಡೆಸಿ ಹೊಸದಾಗಿ 2ಡಿ ರಚನೆ ಮಾಡುವುದಾಗಿ ಕಾನೂನು ಸಚಿವರಿಂದ ಹೇಳಿಸಿದ್ದರು. ಡಿಸೆಂಬರ್ 29 ರಂದು ತೆಗೆದುಕೊಂಡ ನಿರ್ಣಯ ಅಸ್ಪಷ್ಟತೆಯಿಂದ ಕೂಡಿದ್ದು . ಈ ಸಂಬಂಧ ನಾವು ಕಾನೂನು ತಜ್ಞರನ್ನ ಸಲಹೆ ಪಡೆದುಕೊಂಡಿದ್ದೆವೆ .ಇಂದಿನ ರಾಜಕೀಯ ಸ್ಥಿತಿಗತಿ ನೋಡಿದಾಗ ರಾಜ್ಯದಲ್ಲಿ ಯವಾಗ ನೀತಿ ಸಂಹಿತೆ ಬರುತ್ತದೆ ಗೊತ್ತಿಲ್ಲ, ಆದ್ದರಿಂದ ಜನವರಿ 12 ರವರೆಗೆ ನಮ್ಮ ಸಮುದಾಯಕ್ಕೆ ಮೀಸಲಾತಿ ಘೋಷಣೆ ಮಾಡಲೇಬೇಕು ಎಂದು ಜಯಮೃತ್ಯಂಜಯ ಸ್ವಾಮಿಗಳು ಆಗ್ರಹ ಮಾಡಿದರು.