Breaking News

ಇಂದು ಕಂಡ ಅದ್ಭುತವಾದ ಹಾಗೂ ಮನ ತಟ್ಟುವ ವಿಡಿಯೋ, ಹುಚ್ಚಿಡಿದ ಕಾರಣಕ್ಕಾಗಿ ಮನೆಯಿಂದ ಹೊರಹಾಕಿದ ಪತಿ, ಸ್ಟ್ಯಾಚು ಕಂಡು ಮಹಿಳೆ…… !!!

ಜೀವನದಲ್ಲಿ ನಾವೆಷ್ಟು ಗಳಿಕೆ ಮಾಡಿದ್ದೇವೆ ಎಂಬುದು ನಮ್ಮ ಕೊನೆಯ ಕ್ಷಣದಲ್ಲಿ ಗೊತ್ತಾಗುತ್ತೆ. ಇಂದು ಪ್ರತಿಯೊಬ್ಬ ವ್ಯಕ್ತಿ ಹಣದ ಹಿಂದೆ ಬೆನ್ನು ಹತ್ತಿ ಅದನ್ನು ಪಡೆದುಕೊಳ್ಳುವ ಸಲುವಾಗಿ ಹಗಲು ರಾತ್ರಿ ಕಷ್ಟ ಪಡುತ್ತಾನೆ. ಇದು ಸತ್ಯವಾದ ಸಂಗತಿ ಸಹ. ಏಕೆಂದರೆ ಇಂದು ಮನುಷ್ಯರನ್ನು ಅವರ ವ್ಯಕ್ತಿತ್ವದಿಂದ ಗುರುತಿಸುವದಿಲ್ಲ ಹೊರತಾಗಿ ಅವರ ಬಳಿಯಲ್ಲಿದ್ದ ಸಂಪತ್ತಿನಿಂದ ಗುರುತ್ತಿಸುತ್ತಾರೆ. ಆ ವ್ಯಕ್ತಿ ಎಷ್ಟೇ ಒಳ್ಳೆಯವ ನಾಗಿದ್ದರೂ ಆತನ ಬಳಿಯಲ್ಲಿ ಹಣ ವಿರದಿದ್ದರೆ ಸಮಾಜದ ಜನರು ಆತನನ್ನು ಕೀಳು ದೃಷ್ಟಿಯಿಂದ ಕಾಣುತ್ತಾರೆ, ಅದೇ ಒಬ್ಬ ವ್ಯಕ್ತಿ ಕೆಟ್ಟವನಿದ್ದರೂ ಸಹ ಆತನ ಬಳಿ ಬೇಕಾದಷ್ಟು ಹಣ ವಿದ್ದರೆ ಆತನನ್ನು ಉನ್ನತ ವ್ಯಕ್ತಿಯಹಾಗೆ ನೋಡುತ್ತಾರೆ. ಈ ಸಂಗತಿ ಕಹಿ ಅನಿಸಿದರೂ ಇದೆ ಸತ್ಯ.

ಇಂದು ಸಂಬಂಧಗಳು ನಿಂತಿರುವುದು ಕೇವಲ ಹಣ, ಅಂತಸ್ತಿನ ಮೇಲೆ. ನಿಮ್ಮ ಬಳಿ ಬಹಳಷ್ಟು ಸಂಪತ್ತು ಇದ್ದರೆ ನಿಮಗೆ ಅಪರಚಿತ ವ್ಯಕ್ತಿಗಳು ಸಹ ಸಂಬಂಧಿಕರಾಗುತ್ತಾರೆ, ಆದರೆ ಅದೇ ನಿಮ್ಮ ಬಳಿ ಚೂರು ಸಹ ಹಣ ಸಂಪತ್ತು ಇರದಿದ್ದರೆ ನಿಮ್ಮ ಸಂಬಂಧಿಕರೆ ಅಪರಚಿತರಾಗುತ್ತಾರೆ. ಇಂದಿನ ಕಾಲದ ಜೀವನದಲ್ಲಿ ಮನುಷ್ಯ ಕ್ಕಿಂತ ಹಣಕ್ಕೆ ತುಂಬಾ ಪ್ರಾಮುಖ್ಯತೆ ಕೊಡುತ್ತಾರೆ. ಹಣದ ಸಲುವಾಗಿ ಎಷ್ಟೋ ಸಂಬಂಧಗಳು ದೂರ ವಾಗುತ್ತಿರುವ ಉದಾಹರಣೆಗಳು ಸಮಾಜದಲ್ಲಿ ನಾವು ಕಾಣಬಹುದು.

ನಾವು ನಮ್ಮವರು ಎಂಬ ಭ್ರಮೆಯಲ್ಲಿ ನಾವು ಬದುಕುತ್ತೇವೆ, ಆದರೆ ಅವರು ಸಹ ನಮ್ಮನ್ನು ಅದೇ ತರಹ ನೋಡುತ್ತಾರೆ ಎಂಬುದು ನಮ್ಮ ಭ್ರಮೆ ಅಷ್ಟೇ. ಇಡೀ ಜಗತ್ತಿನಲ್ಲಿ ಅದೆಷ್ಟೋ ಜನರು ಎಲ್ಲ ಸಂಬಂಧಗಳು ತೊರೆದು ಅಥವಾ ದೂರವಾಗಿ ಏಕಾಂಗಿಯಾಗಿ ಬದುಕುತ್ತಿರುವ ಉದಾಹರಣೆಗಳು ಕಾಣಬಹುದು. ಸದ್ಯಕ್ಕೆ ಅಂತಹದ್ದೇ ಒಬ್ಬ ಮಹಿಳೆಯ ವೀಡಿಯೋ ಸೋಶಿಯಲ್ ಮಿಡಿಯಾದಲ್ಲಿ ತುಂಬಾನೇ ವೈರಲ್ ಆಗುತ್ತಿದೆ.

ಪ್ರಸ್ತುತ ವೀಡಿಯೋದಲ್ಲಿ ಒಬ್ಬ ಮಹಿಳೆ ಅಂದರೆ ರಸ್ತೆಯ ಮೇಲೆ ವಾಸ ಮಾಡುವ ಮಹಿಳೆ ಒಂದು ಚಹಾದ ಅಂಗಡಿಗೆ ಹೋಗಿ ತನಗೆ ಕುಡಿಯಲು ಒಂದು ಚಹಾವನ್ನು ತಗೆದುಕೊಳ್ಳುತ್ತಾಳೆ. ಚಹಾ ತಗೆದುಕೊಂಡು ಅಂಗಡಿಯ ಮುಂದಿದ್ದ ಸ್ಟ್ಯಾಚು ಕಂಡು ಅದರೊಂದಿಗೆ ಮಾತನಾಡಲು, ಮತ್ತು ಅದಕ್ಕೆ ಮುತ್ತಿಕ್ಕಲು ಶುರು ಮಾಡುತ್ತಾಳೆ, ಅಲ್ಲದೆ ಅದರ ಮುಖದ ಮೇಲೆ ಮತ್ತು ಬೆನ್ನಿನ್ನ ಮೇಲೆ ಕೈಯಾಡಿಸಿ ಅದಕ್ಕೆ ಪ್ರೀತಿಯಿಂದ ಮುತ್ತು ಸಹ ಕೊಡುತ್ತಾಳೆ. ಈ ಹುಚ್ಚ ಮಹಿಳೆಯ ಹೃದಯದಲ್ಲಿ ಬೇರೆಯವರ ಸಲುವಾಗಿ ಎಷ್ಟೊಂದು ಪ್ರೀತಿ ತುಂಬಿರಬಹುದು ಎಂಬುದು ಈ ವಿಡಿಯೋ ನೋಡಿದ ಮೇಲೆ ಗೊತ್ತಾಗುತ್ತೆ.

ಮನಮುಟ್ಟುವ ಈ ವಿಡಿಯೋ ಇನ್ಸ್ಟಾಗ್ರಾಮ್ ನಲ್ಲಿ chah premi_amruttuly ಎಂಬ ಹೆಸರಿನ ಖಾತೆಯ ಮೂಲಕ ಶೇರ್ ಮಾಡಲಾಗಿದೆ ಇದುವರೆಗೆ ಈ ವೀಡಿಯೋವನ್ನು ಸುಮಾಗುವವೆರು ಒಂದು ಮಿಲಿಯನ್ ಗಿಂತಲೂ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ. ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ

Share News

About BigTv News

Check Also

ಹುಬ್ಬಳ್ಳಿ-ಧಾರವಾಡದಲ್ಲಿ ಅನಧಿಕೃತ ಲೇಔಟ್ ತೆರವು ಕಾರ್ಯಾಚರಣೆ

ಧಾರವಾಡ : ಹು-ಧಾ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರ ಮಾರ್ಗದರ್ಶನದಲ್ಲಿ ಆಯುಕ್ತ ಡಾ: ಸಂತೋಷಕುಮಾರ ಬಿರಾದಾರ ಅವರು …

Leave a Reply

Your email address will not be published. Required fields are marked *

You cannot copy content of this page