ಆಕಸ್ಮಿಕವಾಗಿ ದನದ ಕೊಟ್ಟಿಗೆಯ ಶೆಡ್‌ಗೆ ಬೆಂಕಿ ತಗುಲಿದ ಪರಿಣಾಮ, ಆರು ಎಮ್ಮೆಗಳು ಗಂಭೀರ ಗಾಯಗೊಂಡ ಘಟನೆ ಹುಬ್ಬಳ್ಳಿಯ ರಮೇಶ ಭವನ ನಾಗಶೆಟ್ಟಿಕೊಪ್ಪ ಗ್ರಾಮದಲ್ಲಿ ನಡೆದಿದೆ.
ಹುಬ್ಬಳ್ಳಿ ಹೌದು.ಇಂದು ಸಾಯಂಕಾಲದ ಸಮಯದಯಲ್ಲಿ ದನದ ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ ಹೊತ್ತಿಕೊಂಡ ಪರಿಣಾಮ, ಕೊಟ್ಟಿಗೆಯಲ್ಲಿದ್ದ ಎಮ್ಮೆಗಳಿಗೆ ಬೆಂಕಿಯ ಝಳ ತಾಗಿ ಮೈ ತುಂಬಾ ಅರೆ ಬರೆ ಸುಟ್ಟ ಗಾಯಗಳಾಗಿವೆ.
ಸೈಯ್ಯದ್ ಬೇಫಾರಿ ಎಂಬುವವರ ಸೇರಿದ ಆರು ಎಮ್ಮೆಗಳು ಬೆಂಕಿಯ ಝಳಕ್ಕೆ ತುತ್ತಾಗಿವೆ. ಬೆಂಕಿ ತಗುಲಿದ್ದನ್ನು ಗಮನಿಸಿದ ಸ್ಥಳೀಯರು ಬೆಂಕಿ ನಂದಿಸುವಲ್ಲಿ ಸಪಲರಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲಾ.
ಸದ್ಯ ಪಶು ವೈದ್ಯರು ಎಮ್ಮೆಗಳ ಸುಟ್ಟ ಗಾಯಕ್ಕೆ ಸಂಬಂಧಿಸಿದಂತೆ ಚಿಕಿತ್ಸೆ ನಡೆಸಿದ್ದು, ಕೇಶ್ವಾಪೂರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಹೈನುಗಾರಿಕೆ ನಂಬಿದ್ದ ಸಯ್ಯದ್ ಭೇಪಾರಿ ಕುಟುಂಬದವರಲ್ಲಿ ಆತಂಕ ಮನೆ ಮಾಡಿದೆ.