ಹುಬ್ಬಳ್ಳಿ: ಯುವಜನೋತ್ಸವದ ಹಿನ್ನೆಲೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವಾಣಿಜ್ಯನಗರಿ ಹುಬ್ಬಳ್ಳಿಗೆ ಆಗಮಿಸುತ್ತಿದ್ದು, ಎಲ್ಲೆಡೆಯೂ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಪ್ರಧಾನಮಂತ್ರಿ ಸ್ವಾಗತಕ್ಕೆ ಹುಬ್ಬಳ್ಳಿಯ ಕಲಾವಿದನೊಬ್ಬ ವಿನೂತನ ರೀತಿಯಲ್ಲಿ ಕಲಾಕೃತಿಯೊಂದನ್ನು ಸಿದ್ಧಪಡಿಸಿದ್ದಾನೆ.
ಹೌದು..ಪ್ರಧಾನಿ ಮೋದಿಗೆ ಅಭಿಮಾನಿ ವಿಶೇಷ ಸ್ವಾಗತ ಮಾಡಲು ಮುಂದಾಗಿದ್ದು, ಹುಬ್ಬಳ್ಳಿಯ ರೇಲ್ವೆ ಮೈದಾನದಲ್ಲಿ ರಂಗೋಲಿಯಲ್ಲಿ ನರೇಂದ್ರ ಮೋದಿಯವರ ಚಿತ್ರ ಬಿಡಿಸುವ ಮೂಲಕ ದಿನೇಶ್ ಚಿಲ್ಲಾಳ ಎಂಬ ಕಲಾವಿದ ತನ್ನ ಕೈಚಳಕವನ್ನು ಪ್ರದರ್ಶನ ಮಾಡಿದ್ದಾನೆ.
ಇನ್ನೂ ರಂಗೋಲಿಯಲ್ಲಿ ನಮೋ ಭಾವಚಿತ್ರ ಅನಾವರಣಗೊಳಿಸಿದ್ದು, ವೇದಿಕೆಯ ಮುಂಭಾಗದಲ್ಲಿಯೇ ಮೋದಿ ಚಿತ್ರ ಬಿಡಿಸಿದ ಕಲಾವಿದ, 75 ನೇ ಅಮೃತ ಮಹೋತ್ಸವದ ಸಂದರ್ಭದಲ್ಲಿ ಮೋದಿಯವರು ಧರಿಸಿದ್ದ ಪೋಷಾಕಿನ ಚಿತ್ರ ರಂಗೋಲಿಯಲ್ಲಿ ಅರಳಿಸಿದ್ದಾನೆ.