ಹುಬ್ಬಳ್ಳಿ: ಯುವಜನೋತ್ಸವದ ಹಿನ್ನೆಲೆಯಲ್ಲಿ ವಾಣಿಜ್ಯನಗರಿ ಹುಬ್ಬಳ್ಳಿಗೆ ಆಗಮಿಸಿದ ಸಿಎಂ ಬಸವರಾಜ ಬೊಮ್ಮಾಯಿಯವರು ಹಣೆಗೆ ಹಚ್ಚಿದ ತಿಲಕವನ್ನು ಅಳಿಸಿಕೊಂಡಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಹೌದು.. ಯುವಜನೋತ್ಸವಕ್ಕೆ ಆಗಮಿಸುವ ಜನನಾಯಕರಿಗೆ ಸ್ವಾಗತ ಮಾಡಲು ವಿಮಾನ ನಿಲ್ದಾಣದಲ್ಲಿ ಸ್ವಾಗತ ಸಮಿತಿ ಆರತಿ ಬೆಳಗಿ ತಿಲಕ ಇಟ್ಟು ಸ್ವಾಗತಿಸುತ್ತಿದೆ. ಆದರೆ ಸಿಎಂ ಬೊಮ್ಮಾಯಿಯವರು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡುವ ಮುನ್ನವೇ ಹಣೆಗೆ ಹಚ್ಚಿದ ಹಿಂದೂ ಸಂಪ್ರದಾಯದ ತಿಲಕವನ್ನು ಅಳಿಸಿಕೊಳ್ಳುವ ಮೂಲಕ ಹೊಸ ಚರ್ಚೆಯನ್ನು ಹುಟ್ಟುಹಾಕಿದ್ದಾರೆ.
ಮೋದಿಯವರ ನೇತೃತ್ವದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಆಗಮಿಸುವ ಮುನ್ನವೇ ಇಂತಹದೊಂದು ನಡೆಯಿಂದ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಕೆಂಗಣ್ಣಿಗೆ ಗುರಿಯಾಗಿದೆ.