ಹಾವೇರಿ: ಪಂಚಮಸಾಲಿ ಸಮುದಾಯಕ್ಕೆ 2A ಬದಲಾಗಿ 2D ಮಿಸಲಾತಿ ನೀಡಿರುವ ಹಿನ್ನಲೆಯಲ್ಲಿ ಇಂದು ಲಿಂಗಯಿತ ಸಮೂದಾಯದ ಮುಖಂಡರು ಮುಖ್ಯಮಂತ್ರಿ ಬಸವರಾಜ ಬೊಮ್ಮಯಿಯವರ ಮನೆ ಮುಂದೆ ಪ್ರತಿಭಟನೆ ಮುಂದಾಗಿದ್ದಾರೆ. ಶಿಗ್ಗಾವಿ ಪಟ್ಟಣದ ರಾಣಿ ಚೆನ್ನಮ್ಮ ವೃತ್ತಕ್ಕೆ ಆಗಮಿಸಿದ ಜಯಮೃತ್ಯಂಜಯ ಸ್ವಾಮೀಜಿ ಮಾಧ್ಯಮರೊಂದಿಗೆ ಮಾತನಾಡಿ ಕಳೆದ ಅಧಿವೇಶನದಲ್ಲಿ ನಮಗೆ ಸಿಎಂ ಮಾತು ಕೊಟ್ಟಿದ್ದರು. ತಾಯಿಯ ಮೇಲೆ ಪ್ರಮಾಣ ಮಾಡಿ ಡಿ,29 ಕ್ಕೆ 2A ಮೀಸಲಾತಿ ನೀಡುತ್ತೇವೆಂದು ಹೇಳಿದರು. ಆದರೆ 2C, 2D ಹೊಸ ಗ್ರೂಪ್ ರಚನೆ ಮಾಡಿ ನಮಗೆ ಘೋಷಣೆ ಮಾಡಿದ್ದಾರೆ. ಇದರಲ್ಲೂ ಏನಿದೆ,ಎಷ್ಟು ಮೀಸಲಾತಿ ಎಂಬುವುದರ ಬಗ್ಗೆ ಸ್ಪೇಷ್ಟನೆ ಕೊಡಲಿಲ್ಲಾ. ಇದೊಂದು ಅಸ್ಪಷ್ಟವಾದ ಹಿನ್ನಲೆ ನಾವು ಒಪ್ಪಿರಲಿಲ್ಲಾ. ಅಸಂವಿದಾನಿಕವಾಗಿ ನಿರ್ಣಯ ತೆಗೆದುಕೊಂಡಿದ್ದರು. ನಾವು ಕೇಳಿದ್ದು 2A ಮೀಸಲಾತಿ ಆದರೆ ಅವರು ನೀಡಿದ್ದು 2 D ಯನ್ನು. ತಾಯಿಯ ಮೇಲೆ ಆಣೆ ಮಾಡಿ ಮಾತು ಕೊಟ್ಟು ತಪ್ಪಿದ್ದಾರೆ. ಹೀಗಾಗಿ ಒಂದು ದಿನದ ಸಾಂಕೇತಿಕವಾಗಿ ಸಿಎಂ ಮನೆ ಮುಂದೆ ಸತ್ಯಾಗ್ರಹ ಮಾಡ್ತಾ ಇದೆವಿ. ನಮ್ಮ ನೋವು ಏನಿದೆ ಇಂದು ಇವತ್ತು ತೋರಿಸಲಿದ್ದೇವೆ. ಮುಂದಿನ ಹೋರಾಟಕ್ಕೇನೂ ಮಾಡಬೇಕೆಂದು ನಿರ್ಣಯ ಕೈಗೊಳ್ತೇವಿ ಮದು ತಿಳಿಸಿದರು. ಇನ್ನೂ ಹೈಕೋರ್ಟ್ ಆದೇಶದ ಕುರಿತು ಪ್ರತಿಕ್ರೀಯೆ ನೀಡಿದ ಜಯಮೃತ್ಯಂಜಯ ಸ್ವಾಮೀಜಿ ನಾವೂ ನಿರಾಕರಣೆ ಮಾಡಿದ್ದೇವೆ,ಹೈಕೋರ್ಟ್ ಕೂಡಾ ಇದನ್ನು ನಿರಾಕರಣೆ ಮಾಡಿದೆ. ಎಲ್ಲೊ ಒಂದು ಕಡೆ ನಮ್ಮ ಮೀಸಲಾತಿ ಹೋರಾಟ ಹತ್ತಿಕ್ಕುವ ಪ್ರಯತ್ನ ನಡಿತಾ ಇದೆ. ಹೀಗಾಗಿ ನಮಗೆ ಅನುಮಾನ ಇತ್ತು,ಈಗ ಅದು ಸತ್ಯವಾಗಿದೆ. ಈ ಹಿನ್ನಲೆ ಅವರ ಮನೆ ಮುಂದೆ ಧರಣಿ ಕುಳಿತುಕೊಳ್ತಾ ಇದ್ದೇವೆ ಎಂದು ತಿಳಿಸಿದ್ದಾರೆ.
