Breaking News

ಧಾರವಾಡಕ್ಕೆ ಮತ್ತೇ ಪ್ರಧಾನಿ ಮೋದಿ ಫೆಬ್ರವರಿ 6ರಂದು ಆಗಮನ

ಬೆಂಗಳೂರು: ಹೇಗಾದರೂ ಮಾಡಿ ಕರ್ನಾಟಕದಲ್ಲಿ ಕಮಲವನ್ನು ಅರಳಿಸಬೇಕೆಂದು ಪಣ ತೊಟ್ಟಿರುವ ಬಿಜೆಪಿ ಕೇಂದ್ರ ನಾಯಕರು ಸಂಪೂರ್ಣವಾಗಿ ಕರ್ನಾಟಕಕ್ಕೆ ತಮ್ಮ ಸಮಯವನ್ನು ಮೀಸಲಿಟ್ಟಿರುವಂತೆ ಕಾಣುತ್ತಿದೆ. ಈಗಾಗಲೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ  ರಾಜ್ಯಕ್ಕೆ ಬಂದಿದ್ದು, ಬರುವ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ  ಅವರು ಮತ್ತೆ ರಾಜ್ಯಕ್ಕೆ ಆಗಮಿಸಲಿದ್ದಾರೆ. ಹೌದು ಈ ವರ್ಷ ಆರಂಭವಾಗುತ್ತಿದ್ದಂತೆ

ಎರಡು ಬಾರಿ ರಾಜ್ಯ ಪ್ರವಾಸ ಮಾಡಿರುವ ಪ್ರಧಾನಿ ಮೋದಿ ಫೆಬ್ರವರಿ 6ರಂದು ರಾಜ್ಯಕ್ಕೆ ಬರಲಿದ್ದಾರೆ. ವಿಶೇಷವೆಂದರೆ ಈ ಬಾರಿಯೂ ಸರ್ಕಾರಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಈಗ ಮತ್ತೆ ಫೆಬ್ರವರಿ 6 ರಂದು ಮತ್ತೆ ಧಾರವಾಡಕ್ಕೆ ಭೇಟಿ ನೀಡಲಿದ್ದು ಧಾರವಾಡದ ಐಐಟಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ತದನಂತರ ತುಮಕೂರು  ಜಿಲ್ಲೆಯ ಜಿಲ್ಲೆಯ ಗುಬ್ಬಿಗೆ ಭೇಟಿ ನೀಡಿ ಗುಬ್ಬಿ ಬಳಿಯ ಹೆಚ್​ಎಎಲ್​​ ಹೆಲಿಕಾಪ್ಟರ್​ ಘಟಕ ಉದ್ಘಾಟಿಸಲಿದ್ದಾರೆ. ನಂತರ ಫೆಬ್ರವರಿ 27 ರಂದು ಶಿವಮೊಗ್ಗ ಜಿಲ್ಲೆಗೆ ಭೇಟಿ ನೀಡಿ ಶಿವಮೊಗ್ಗ ವಿಮಾನ ನಿಲ್ದಾಣವನ್ನು ಉದ್ಘಾಟಿಸಲಿದ್ದಾರೆ.

ಆದ್ರೇ ಮೋದಿ ಇತ್ತ ರಾಜ್ಯಕ್ಕೆ ಬರುತ್ತಿರುವುದು ಕಾಂಗ್ರೇಸ್ ಪಕ್ಷದವರು ಟೀಕಿಸಿದ್ದಾರೆ. ಬರಗಾಲ ಬಂದಾಗ ಬರಲಿಲ್ಲ, ನೆರೆ ಬಂದಾಗ ಮೋದಿ ಬರಲಿಲ್ಲ ಆದ್ರೇ ಎಲೆಕ್ಷನ್ ಬಂದಾಗ ಮಾತ್ರ  ಮರೆಯೋಲ್ಲ ಎಂದು ವ್ಯಂಗ್ಯ ಮಾಡುವ ಪೋಸ್ಟರ್ ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾರೆ. ಇದಕ್ಕೆ ಧಾರವಾಡ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಒಬ್ಬರ ಮೇಲೆ ಒಬ್ಬರು ಆರೋಪದ ಕೇಸರೇಚಾಟ ನಡೆಯುತ್ತಿದೆ.

Share News

About BigTv News

Check Also

Featured Video Play Icon

ಈ ನೆಲದ ಕಾನೂನಿನ ಬಗ್ಗೆ ಭಯವೇ ಇಲ್ಲದಂತಾಗಿದೆ:ಮೂಜಗು ಸ್ವಾಮೀಜಿ ಬೇಸರ…

ಹುಬ್ಬಳ್ಳಿ: ಈ ನೆಲದ ಕಾನೂನಿನ ಬಗ್ಗೆ ಯಾವ ಭಯನೇ ಉಳಿಯದಂತಾಗಿದೆ. ಈ ನೆಲದ ಕಾನೂನು ಉಳಿಸಿಕೊಳ್ಳಬೇಕಾದ್ರೆ ಸರ್ಕಾರ ನಿರ್ದಾಕ್ಷಿಣ್ಯವಾಗಿ ಕ್ರಮ …

Leave a Reply

Your email address will not be published. Required fields are marked *

You cannot copy content of this page