Breaking News

ಅಕ್ರಮ ಹಣ ಸಾಗಾಟ, ಕೋಟಿಗೂ ಹೆಚ್ಚು ಹಣ ಭೇಟೆಯಾಡಿದ ಖಾಕಿ.

ಹುಬ್ಬಳ್ಳಿ: ವಾಣಿಜ್ಯ ನಗರೀ ಹುಬ್ಬಳ್ಳಿಯಲ್ಲಿ  ಅಕ್ರಮವಾಗಿ ಹಣ ಸಾಗಾಟ ಮಾಡುತ್ತಿದ್ದ ವ್ಯಕ್ತಿ ಒರ್ವನನ್ನು ಪೋಲಿಸರು ಬಂದಿಸಿದ್ದಾರೆ. ವಿ.ಆರ್.ಎಲ್ ಬಸ್ ನಿಲ್ದಾಣದಿಂದ ಮಂಗಳೂರಿಗೆ ಹೊರಟಿದ್ದ ಅವನು ತನ್ನ ಬ್ಯಾಗಗಳಲ್ಲಿ ಯಾವುದೇ ದಾಖಲೆ ಇಲ್ಲದ 1,14,70,000/- ನಗದು ಹಣ ವನ್ನು  ಸಾಗಿಸುತ್ತಿದ್ದ ವೇಳೆ, ಹುಬ್ಬಳ್ಳಿ ಉಪನಗರ ಪೊಲೀಸ ಠಾಣೆಯ ಪೋಲಿಸರು ಮಾಲ್ ಸಮೇತ ವ್ಯಕ್ತಿಯನ್ನು ಬಂದಿಸಿದ್ದಾರೆ. ದಿನಾಂಕ :-21.01.2023 ಯಾರೋ ಒಬ್ಬ ವ್ಯಕ್ತಿಯು ರಾತ್ರಿ 10-30 ಗಂಟೆಯಿಂದ 11-00 ಗಂಟೆಯೊಳಗೆ ದಾಖಲೆಗಳಿಲ್ಲದೆ ಅಕ್ರಮ ಹಣವನ್ನು

ಸಾಗಾಟ ಮಾಡುತ್ತಾನೆ ಅಂತಾ ಮಾಹಿತಿ ಬಂದಿದ್ದರ ಮೇರೆಗೆ , ಮಾನ್ಯ ಮೇಲಾಧಿಕಾರಿಗಳ ಮಾರ್ಗದರ್ಶನದಂತೆ ಪೊಲೀಸ್ ಇನ್ಸಪೆಕ್ಟರ್ ಶ್ರೀ ಎಮ್.ಎಸ್. ಹೂಗಾರರವರು ತಮ್ಮ ಸಿಬ್ಬಂದಿಗಳೊಂದಿಗೆ ದಾಳಿ ಮಾಡಿ ಒಬ್ಬ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದು ಅವನಿಂದ

1] 1,14,70,000=00 ನಗದು ಹಣ

2] ಒಂದು ಮೊಬೈಲ್ ಹ್ಯಾಂಡಸೆಟ್

ಇವುಗಳನ್ನು ವಶಪಡಿಸಿಕೊಂಡು ಆರೋಪಿತನ ಮೇಲೆ ಕಾನೂನು ಕ್ರಮ ಕೈಗೊಂಡಿದ್ದಾರೆ. ದಾಳಿ ಮಾಡಿ ಆರೋಪಿತನ ಮೇಲೆ ಸೂಕ್ತ ಕಾನು ಕ್ರಮ ಕೈಗೊಳ್ಳಲು ಯಶಸ್ವಿಯಾದ ಉಪನಗರ ಪೊಲೀಸ ಠಾಣೆಯ ಪೊಲೀಸ ಇನ್ಸಪೆಕ್ಟರ್ ಶ್ರೀ ಎಮ್.ಎಸ್.ಹೂಗಾರ, ಮತ್ತು ಸಿಬ್ಬಂದಿ ಜನರಾದ ಮಲ್ಲಿಕಾರ್ಜುನ ಧನಿಗೊಂಡ, ಎಸ್.ವಿ ಯರಗುಪ್ಪಿ, ಮಂಜುನಾಥ ಯಕ್ಕಡಿ, ಮಂಜುನಾಥ ಹಾಲವರ,ಇವರ ಕಾರ್ಯವೈಖರಿಯನ್ನು ಮಾನ್ಯ ಪೊಲೀಸ್ ಆಯುಕ್ತರು ಹುಬ್ಬಳ್ಳಿ-ಧಾರವಾಡ ರವರು ಶ್ಲಾಘಿಸಿರುತ್ತಾರೆ.

Share News

About Shaikh BigTv

Check Also

ಮಾಜಿ ಸಿಎಂ ಯಡಿಯೂರಪ್ಪ ಗೆ ವಾರೆಂಟ್ ಜಾರಿ….

ಮಾಜಿ ಸಿಎಂ ಯಡಿಯೂರಪ್ಪ ಗೆ ವಾರೆಂಟ್ ಜಾರಿ ಜಾಮೀನು ರಹಿತ ಅರೆಸ್ಟ್ ಜಾಮೀನು ರಹಿತ ವಾರೆಂಟ್ ಜಾರಿ 1 ನೇ …

Leave a Reply

Your email address will not be published. Required fields are marked *

You cannot copy content of this page