ಹುಬ್ಬಳ್ಳಿ: ರಾಹುಲ್ ಗಾಂಧೀ ನಿವೃತ್ತಿ ಪಡೆದಿದ್ದಾರೆ ಏನು? ಕಾಂಗ್ರೆಸ್ ನ ಡಿಎನ್ಎ ನಿವೃತ್ತಿ, ಪ್ರಾಮಾಣಿಕತೆ ಇಲ್ಲ, ನಾನ ಕೇಳೊದು ಮಧ್ಯಪ್ರದೇಶದಲ್ಲಿ ಯಾಕೆ ಮಾಡಿಲ್ಲ ನೀವು? ಎಂದು ಹುಬ್ಬಲ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಾಂಗ್ರೇಸ್ ವಿರುದ್ದ ಟೀಕೆ ಮಾಡಿದ್ದಾರೆ. ಇನ್ನೂ
ಸಿದ್ದರಾಮಯ್ಯ ಹತ್ತು ಕೆಜಿ ಅಕ್ಕಿ ಕೊಡುವ ವಿಚಾರಕ್ಕೆ, ಬೊಮ್ಮಾಯಿ ಅತ್ಯಂತ ಟ್ರಾನ್ಸ್ಪರೇಂಟ್ ವ್ಯವಸ್ಥೆ ಮಾಡಿದ್ದಾರೆ ಹೀಗಾಗಿ ಅವರಿಗೆ ದುಡ್ಡು ಹೊಡೆಯಲಿ ಸಿಗೋದಿಲ್ಲ, ಅದಕ್ಕೆ ಆ ಟ್ರಾನ್ಸ್ಪರೇಂಟ್ ವ್ಯವಸ್ಥೆ ಹದೆಗೆಡಿಸುತ್ತಿದ್ದಾರೆ . ಮುಂದೆ ತಮಗೆ ದುಡ್ಡು ಹೊಡೆಯಲಿಕ್ಕೆ ಹೇಗೆ ಲೋಕಾಯುಕ್ತನ್ನ ಹಾಳು ಮಾಡಿದರಲ್ಲ ಹಾಗೆ ಮುಂದಿನ ವ್ಯವಸ್ಥೆ ಹಾಳು ಮಾಡ್ತಾರೆ ಎಂದರು.
ಸಿದ್ದರಾಮಯ್ಯ ಕರಪ್ಟ್ ರಾಜಕಾರಣಿ ಸತ್ಯ , ಹೀಗಾಗಿ ಅವರಿಗೆ ಚಾಮುಂಡಿ ಕ್ಷೇತ್ರದಲ್ಲಿ ಅವರನ್ನ ಮನೆಗೆ ಕಳುಹಿಸಿದ್ರು. ನೀವು ಇಡೀ ರಾಜದಲ್ಲಿ ಕ್ಷೇತ್ರ ಹುಡುಕಾಡುತ್ತೀರಿ. ಯಾಕೆ ಮೈಸೂರು ನಿಲ್ತಿಲ್ಲ? ಅಂದ್ರೆ ನೀವು ಕೆಲಸ ಮಾಡಿಲ್ಲ ನೀವು ಹೇಳಿದ್ದ ಮಾತು ನಡೀತಿಲ್ಲ ಅಂತಾ ಇದರ ಅರ್ಥ, ಎಲ್ಲವೂ ಕಾನೂನು ಮೇಲೆ ನಡೆಯಲ್ಲ. ಜನ ಏನ ತೀರ್ಮಾನ ಮಾಡಬೇಕೋ ಅದನ್ನ ಮಾಡ್ತಾರೆ . ಪೊಲಿಟಿಕಲ್ ಪೈಟ್ ಇರ್ತಾವ ನಾವು ಮಾಡ್ತಾತೀವಿ. ನರೇಂದ್ರ ಮೋದಿ ನಮ್ಮ ದೇಶದ ಚುನಾಯಿತ ಪ್ರಧಾನ ಮಂತ್ರಿ , ಪಾಪ ಖರ್ಗೆ ಅವರನ್ನ ಮಾಡಿದ್ದಾರೆ ಅವರದ್ದು ಏನು ಹೇಳಲ್ಲ, ರಾಹುಲ್ ಗಾಂಧಿ ಸಂದೇಶ ಅಂತಾ ಯಾಕೆ ಹೇಳ್ತಾರೆ, ಖರ್ಗೆರ ಅವರದ್ದು ಅಂತಾ ಯಾಕೆ ಹೇಳಲ್ಲ. ಕಾಂಗ್ರೆಸ್ ನಲ್ಲಿ ಸರ್ವಾಧಿಕಾರ ತುಂಬು ತುಳ್ಕಾತ್ತಾ ಇದೆ. ಯಾವುದು ಸರ್ವೆ ಮಾಡಿದ್ದು ಅಂತಾ ನನಗೆ ಗೊತ್ತಿಲ್ಲ ನಾವು ಮತ್ತೊಮ್ಮೆ ಕಮ್ ಬ್ಯಾಂಕ್ ಮಾಡ್ತೇವಿ ಎಂದು ಜೋಶಿ ತಿಳಿಸಿದರು.