ಧಾರವಾಡ : RID 3170 ರ ಜಿಲ್ಲಾ ಅನುದಾನ ಯೋಜನೆ, ರೋಟರಿ ಕ್ಲಬ್ ಧಾರವಾಡ ಹೆರಿಟೇಜ್, ಡಾ.ವಾಯ್.ಎನ್.ಇರಕಲ್ ಎಜುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟನ ಶ್ರೀಯಾ ಕಾಲೇಜ್ ಆಫ್ ನರ್ಸಿಂಗ್ ಮತ್ತು ಪ್ಯಾರಾಮೆಡಿಕಲ್ ಸಾಯನ್ಸಸ್ ಧಾರವಾಡ ಸಹಭಾಗಿತ್ವದಲ್ಲಿ ಸತ್ತೂರಿನ ಆಶ್ರಯ ಕಾಲೋನಿಯ ಹಿರಿಯ ಪ್ರಾಥಮಿಕ ಸರ್ಕಾರಿ ಶಾಲೆಯಲ್ಲಿ ಹೊಸದಾಗಿ ನಿರ್ಮಿಸಲಾದ ಶೌಚಾಲಯ ಬ್ಲಾಕ್‌ಗಳನ್ನು ಉದ್ಘಾಟಿಸಲಾಯಿತು ನೂತನವಾಗಿ ನಿರ್ಮಿಸಲಾದ ಶೌಚಾಲಯ ಬ್ಲಾಕ್‌ಗಳು ಮತ್ತು ಮೂತ್ರಾಲಯಗಳನ್ನು ಮುಖ್ಯ ಅತಿಥಿಗಳಾದ ಮಾಜಿ ರೋಟರಿ ಜಿಲ್ಲಾ ಗವರ್ನರ ಮತ್ತು ಅಂತರ್ ದೇಶ ಸಮಿತಿ ಜಿಲ್ಲಾಧ್ಯಕ್ಷ ಡಾ.ಜೋರ್ಸನ್ ಫರ್ನಾಂಡಿಸ್, ಗೌರವ ಅತಿಥಿಗಳಾದ ಶ್ರೀಯಾ ಕಾಲೇಜಿನ ಕಾರ್ಯದರ್ಶಿಗಳಾದ ಡಾ.ಸತೀಶ್ ಇರಕಲ್, ಧಾರವಾಡ ಕ್ಷೇತ್ರ ಶಿಕ್ಷಣಧಿಕಾರಿಗಳಾದ .ಗಿರೀಶ್ ಪದಕಿ ಹಾಗೂ ಧಾರವಾಡ ಕ್ಷೇತ್ರ ಸಮನ್ವಯ ಅಧಿಕಾರಿಗಳಾದ .ಎಮ್.ಡಿ.ಅಡಿವೆರ್ ಉದ್ಘಾಟಿಸಿದರು.
ಕಾರ್ಯದರ್ಶಿಯಾದ ರೋಟರಿ ಕ್ಲಬ್ ಧಾರವಾಡ ಹೆರಿಟೇಜನ ಮಾಜಿ ಅಧ್ಯಕ್ಷರಾದ.ಡಾ.ವಾಣಿ ಇರಕಲ್, ಮಾಜಿ .ಡಾ.ಭುವನೇಶ್ ಆರಾಧ್ಯ, 2022-23ನೇ ಸಾಲಿನ ಅಧ್ಯಕ್ಷರಾದ .ಡಾ.ಸಂತೋಷ್ ಜೀವಣ್ಣವರ್, ಕಾರ್ಯದರ್ಶಿಯಾದ ರೋಪುಂಡಲೀಕ ಜಗದಾಳೆ, ಶ್ರೀಯಾ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ರೋಡಾ ಜೆಸುರಾಜ, ಶ್ರೀಯಾ ಕಾಲೇಜಿನ ಉಪ-ಪ್ರಾಂಶುಪಾಲರಾದ .ನಾಗರಾಜ ಕಿಲ್ಲೆಲ್ಲಿ, .ಸತ್ಯಜೀತ್ ಮೋರೆ .ಶಿವಾಜಿ ಸೂರ್ಯವಂಶಿ, ಇನ್ನಿತರ ಗಣ್ಯರು, ರೋಟರಿ ಕ್ಲಬ್‌ನ ಸದಸ್ಯರು, ಶ್ರೀಯಾ ಕಾಲೇಜಿನ ಸಿಬ್ಬಂದಿ, ಶಾಲೆಯ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಮಾಜಿ ರೋಟರಿ ಜಿಲ್ಲಾ ಗವರ್ನರ ಮತ್ತು ಅಂತರ್ ದೇಶ ಸಮಿತಿ ಜಿಲ್ಲಾಧ್ಯಕ್ಷ ಡಾ.ಜೋರ್ಸನ್ ಫರ್ನಾಂಡಿಸ್ ರವರು ಕಾರ್ಯಕ್ರಮವನ್ನುದ್ದೇಶಿಸಿ ನಾವು ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಸುಧಾರಿಸುವತ್ತ ಗಮನಹರಿಸುತ್ತಿದ್ದೇವೆ. ಉತ್ತಮ ಶೌಚಾಲಯಗಳಿದ್ದರೆ ಹಾಗೂ ಅದರ ನಿರ್ಮಲತೆಯನ್ನು ಕಾಪಾಡಿಕೊಳ್ಳುವುದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ವಾತಾವರಣ ವೃದ್ಧಿಸಲು ಸಹಾಯವಾಗುತ್ತದೆ ಎಂದು ಹೇಳುತ್ತಾ ಡಾ.ವಾಣಿ ಇರಕಲ್ ರವರು 2021-22ನೇ ಸಾಲಿನ ಅಧ್ಯಕ್ಷತ್ವದಲ್ಲಿ ಶೌಚಾಲಯಗಳನ್ನು ವಿದ್ಯಾರ್ಥಿಗಳಿಗೆ ಪೂರೈಸುವ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಶ್ರಮಿಸಿದ್ದಕ್ಕೆ ಹೃದಯಪೂರ್ವಕವಾಗಿ ಅಭಿನಂದಿಸಿ ಹಾರೈಸಿದರು.
ಈ ಯೋಜನೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಶಾಲೆಗೆ ಬರಲು ಪ್ರೇರಣೆಯಾಯಿತೆಂದು ಹೇಳಿದರು. ಗೌರವ ಅತಿಥಿಗಳಾದ ಶ್ರೀಯಾ ಕಾಲೇಜಿನ ಕಾರ್ಯದರ್ಶಿ ಡಾ.ಸತೀಶ್ ಇರಕಲ್ ವಿದ್ಯಾರ್ಥಿಗಳಿಗೆ ಪ್ರೇರಕ ಭಾಷಣ ಮಾಡಿದರು.
ಇನ್ನೋರ್ವ ಗೌರವ ಅತಿಥಿಗಳಾದ ಧಾರವಾಡ ಕ್ಷೇತ್ರ ಸಮನ್ವಯ ಅಧಿಕಾರಿಗಳಾದ ಎಮ್.ಡಿ.ಅಡಿವೆರ್ ರವರು ಕಾರ್ಯಕ್ರಮವನ್ನುದ್ದೇಶಿಸಿ ಒಟ್ಟಿಗೆ ಸೇರುವುದು ಒಂದು ಆರಂಭ, ಒಟ್ಟಿಗೆ ಇರುವುದೇ ಒಂದು ಪ್ರಗತಿ, ಒಟ್ಟಿಗೆ ಕೆಲಸ ಮಾಡುವುದು ಯಶಸ್ಸು ಎಂದು ಹೇಳುತ್ತಾ ಜಿಲ್ಲಾ ಅನುದಾನ ಯೋಜನೆಯಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಕೃತಜ್ಞತೆಯನ್ನು ತಿಳಿಸಿದರು.
ಸ್ವತಃ ಧಾರವಾಡ ಕ್ಷೇತ್ರ ಶಿಕ್ಷಣಧಿಕಾರಿಗಳಾದ .ಗಿರೀಶ್ ಪದಕಿ ಹಾಗೂ ಶಾಲಾ ಆಡಳಿತ ಮಂಡಳಿಯವರು ಶಾಲೆಗೆ ಮೂಲಭೂತ ಸೌಕರ್ಯಗಳಾದ ಕೊರತೆಯನ್ನು ಬೇಕಾದ ಶೌಚಾಯಲಯಗಳ ಡಾ.ವಾಯ್.ಎನ್.ಇರಕಲ್ ಎಜುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ ಮತ್ತು ರೋಟರಿ ಕ್ಲಬ್ ಧಾರವಾಡ ಹೆರಿಟೇಜ್ ರವರ ಗಮನಕ್ಕೆ ತಂದು ಶಾಲೆಗೆ ಅವುಗಳ ಪೂರೈಕೆ ಮಾಡಬೇಕೆಂದು ವಿನಂತಿಸಿಕೊಂಡರು, ಹಾಗೂ ಕೃತಜ್ಞತೆಗಳನ್ನು ತಿಳಿಸಿದರು. ಅತಿಥಿಗಳನ್ನು ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ.ಎನ್.ಎಸ್.ಪೂಜಾರ ಸ್ವಾಗತಿಸಿ ಸನ್ಮಾನಿಸಿದರು. ನಿರೂಪಣೆಯನ್ನು ಪಲ್ಲವಿ ಹಾಗೂ ಎಮ್.ಎಸ್.ಹಿರೇಮಠ ಮಾಡಿದರು. ಶೋಭಾ ಸುತಗಟ್ಟಿ ಅತಿಥಿಗಳ ಪರಿಚಯ ಮಾಡಿದರು ವಂದನಾರ್ಪಣೆಯನ್ನು ಶ್ರೀಮತಿ.ಜಿ.ಜಿ.ಬಡಿಗೇರ ಸಲ್ಲಿಸಿದರು.