Breaking News

ಹುಬ್ಬಳ್ಳಿಯ ರೈಲ್‌ ಸೌಧ್‌ದಲ್ಲಿ ಶಿಶು ಪಾಲನಾ ಕೇಂದ್ರ ನವೀಕರಣ

ರೈಲ್ವೆ ಮಹಿಳಾ ಸಿಬ್ಬಂದಿ ಮತ್ತು ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ರೈಲ್‌ ಸೌಧದಲ್ಲಿ ಶಿಶುಗಳ ಆರೈಕೆ ಕೇಂದ್ರ ನವೀಕರಣಗೊಂಡಿದ್ದು ಇಂದು ನೈರುತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕರಾದ ಶ್ರೀ ಸಂಜೀವ್‌ ಕಿಶೋರ್‌ ಅವರು ಉದ್ಘಾಟಿಸಿದರು.

ನೈರುತ್ಯ ರೈಲ್ವೆ ಮಹಿಳಾ ಕಲ್ಯಾಣ ಸಂಸ್ಥೆಯ ಸಹಯೋಗದಲ್ಲಿ ಎರಡು ಕೊಠಡಿಯ ಕೇಂದ್ರ ಸ್ಥಾಪಿಸಲಾಗಿದೆ. ರೈಲ್ವೆ ಇಲಾಖೆಯಲ್ಲಿ ವೃತ್ತಿನಿರತರಾದ ತಾಯಂದಿರ ಅನುಕೂಲಕ್ಕಾಗಿ ತಮ್ಮ ಎಂಟು ತಿಂಗಳಿಂದ ಏಳು ವರ್ಷದ ಮಕ್ಕಳನ್ನು ಶಿಶುಪಾಲನಾ ಕೇಂದ್ರದಲ್ಲಿ ಬಿಟ್ಟು ಹೋದರೆ ಅವರನ್ನು ಬೆಳಿಗ್ಗೆ 9:30 ರಿಂದ ಸಂಜೆ 6 ಗಂಟೆ ವರೆಗೆ ಕೇಂದ್ರದ ಸಿಬ್ಬಂದಿಯೇ ಆರೈಕೆ ಮಾಡುವರು. ಪ್ಲೇ ಹೋಂ ರೀತಿ ಕೇಂದ್ರವನ್ನು ಸಿದ್ಧಪಡಿಸಲಾಗಿದೆ.

ಶಿಶು ಆರೈಕೆ ಕೇಂದ್ರದಲ್ಲಿ ಮಹಿಳೆಯರ ವಿಶ್ರಾಂತಿ ಕೊಠಡಿ, ಶೌಚಾಲಯ, ಮಗುವಿಗೆ ಎದೆ ಹಾಲುಣಿಸಲು ಪ್ರತ್ಯೇಕ ಕೊಠಡಿ ಹಾಗೂ ಸ್ಯಾನಿಟರಿ ಪ್ಯಾಡ್‌ ವೆಂಡಿಂಗ್‌ ವ್ಯವಸ್ಥೆ ಕಲ್ಪಿಸಲಾಗಿದೆ. ಮಕ್ಕಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಬಿಸಿ ನೀರು, ಆಟದ ಸಾಮಗ್ರಿಗಳು, ತೊಟ್ಟಿಲು, ಉತ್ತಮ ಬೆಡ್‌ ವ್ಯವಸ್ಥೆ, ಸ್ಮಾರ್ಟ್‌ ಟೆಲಿವಿಷನ್, ಎಲ್ಲಾ ಗೋಡೆಗಳಿಗೆ ಬಣ್ಣಬಣ್ಣದ ಕಲಿಕಾ ಚಿತ್ರಗಳನ್ನು ಬಿಡಿಸಲಾಗಿದ್ದು ಮಕ್ಕಳನ್ನು ಆಕರ್ಷಿಸುತ್ತದೆ. ಆರೈಕೆ ಕೇಂದ್ರದಲ್ಲಿ ಮೂವರು ಶಿಶುಪಾಲಕಿಯರಿದ್ದಾರೆ. ಈಗಾಗಲೇ ಕೇಂದ್ರದಲ್ಲಿ 15 ಮಕ್ಕಳಿದ್ದು, ಈ ಸೌಲಭ್ಯದಿಂದ ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡುವ ತಾಯಂದಿರಿಗೆ ಅನುಕೂಲವಾಗಿದೆ.

SWR-WWO ಅಧ್ಯಕ್ಷರಾದ ಡಾ ವಂದನಾ ಶ್ರೀವಾಸ್ತವ, ಪ್ರಧಾನ ಮುಖ್ಯ ಸಿಬ್ಬಂದಿ ಅಧಿಕಾರಿ ಶ್ರೀ ಅಲೋಕ್ ಕುಮಾರ್ ಉಪಸ್ಥಿತರಿದ್ದರು.

Share News

About BigTv News

Check Also

Featured Video Play Icon

ಸಂಸ್ಕೃತಿ ಇಲಾಖೆಯ ಸಚಿವರಿಗೆ ಸಂಸ್ಕೃತಿಯೇ ಇಲ್ಲ: ರಾಜ್ಯ ಸರ್ಕಾರದ ಭವಿಷ್ಯ ನುಡಿದ ಟೆಂಗಿನಕಾಯಿ..!

ಹುಬ್ಬಳ್ಳಿ; ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಬಗ್ಗೆ ಸರಿಯಾದ ರೀತಿಯಲ್ಲಿ ಮಾತನಾಡಬೇಕು. ಆಕಾಶಕ್ಕೆ ಉಗುಳಿದರೇ …

Leave a Reply

Your email address will not be published. Required fields are marked *

You cannot copy content of this page