Breaking News

ಪ್ರಿ-ಪೇಯ್ಡ್ ಆಟೊ ಸೇವೆ ಸ್ಥಗಿತ ಸಾಧ್ಯತೆ: ಹೇಳುವುದು ಒಂದು ಮಾಡುವುದು ಮತ್ತೊಂದು…!

ಹುಬ್ಬಳ್ಳಿ: ಅದು ಇತ್ತೀಚಿಗೆ ಆರಂಭಗೊಂಡಿದ್ದ ಸೇವೆ. ಆ ಸೇವೆ ಜನರಿಗೆ ತಲುಪುವ ಮುನ್ನವೇ ಮೂಲೆ ಸೇರುವಂತಾಗಿದೆ. ಬಹು ನೀರಿಕ್ಷಿತ ನಿರ್ಧಾರ ಈಗ ಚಿಗುರುವ ಮುನ್ನವೇ ಕಮರಿಹೋಗುತ್ತಿದೆ. ಪ್ರಾದೇಶಿಕ ಸಾರಿಗೆ ಇಲಾಖೆ, ಸ್ಥಳೀಯ ಸಂಘಟನೆಯ ಬೆಂಬಲ ಇಲ್ಲದ ಕಾರಣ ಯೋಜನೆ ಸ್ಥಗಿತಗೊಳ್ಳುವ ಸಾಧ್ಯತೆ ಹೆಚ್ಚಿದೆ. ಅಷ್ಟಕ್ಕೂ ಏನಿದು ಯೋಜನೆ ಅಂತೀರಾ ಈ ಸ್ಟೋರಿ ನೋಡಿ..

ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮಿ ರೈಲು ನಿಲ್ದಾಣದ ಮುಂಭಾಗದಲ್ಲಿ ಒಂದೂವರೆ ತಿಂಗಳ ಹಿಂದಷ್ಟೇ ಕಾರ್ಯಾರಂಭವಾಗಿದ್ದ ಪ್ರಿ–ಪೇಯ್ಡ್ ಆಟೊ ಸೇವೆಯು ಪ್ರಾದೇಶಿಕ ಸಾರಿಗೆ ಇಲಾಖೆ ಹಾಗೂ ರೈಲ್ವೆ ಪೊಲೀಸ್‌ ಮತ್ತು ಆಟೊ ಚಾಲಕರ ಸಹಕಾರವಿಲ್ಲದೆ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.‌ ಈ ಕುರಿತು ಪ್ರಿ–ಪೇಯ್ಡ್ ಆಟೊ ಆ್ಯಂಡ್‌ ಟ್ಯಾಕ್ಸಿ ಸರ್ವಿಸ್‌ (ಪಾಟ್ಸ್‌) ಸಂಸ್ಥೆ ನೈರುತ್ಯ ರೈಲ್ವೆ ವಿಭಾಗೀಯ ವ್ಯವಸ್ಥಾಪಕರಿಗೆ ಸೋಮವಾರ ಪತ್ರ ಬರೆದಿದ್ದು, ಜ. 31ರೊಳಗೆ ಸೇವೆ ಸ್ಥಗಿತಗೊಳಿಸುವುದಾಗಿ ತಿಳಿಸಿದೆ.‌ ಬೆಂಗಳೂರು ಮೂಲದ ಪಾಟ್ಸ್‌ ಸಂಸ್ಥೆ ಡಿ. 3ರಂದು ರೈಲ್ವೆ ನಿಲ್ದಾಣದ ಎದುರು 24X7 ಪ್ರಿ-ಪೇಯ್ಡ್ ಸೇವೆ ಆರಂಭಿಸಿತ್ತು. ಸಂಸ್ಥೆಯಡಿ ನೋಂದಾಯಿಸಿಕೊಳ್ಳದ ಆಟೊ ಚಾಲಕರು, ರೈಲು ಇಳಿದ ಪ್ರಯಾಣಿಕರು ನಿಲ್ದಾಣದ ಹೊರಗೆ ಬರುತ್ತಿದ್ದಂತೆ ಮನಸೋ ಇಚ್ಛೆ ಬಾಡಿಗೆ ದರದಲ್ಲಿ ಕರೆದೊಯ್ಯುತ್ತಿದ್ದರು. ಇದನ್ನು ತಪ್ಪಿಸುವಂತೆ ಸಂಸ್ಥೆಯು ಪೊಲೀಸ್‌ ಮತ್ತು ಸಾರಿಗೆ ಇಲಾಖೆಗೆ ನಾಲ್ಕೈದು ಬಾರಿ ವಿನಂತಿಸಿಕೊಂಡಿದೆ. ಇಬ್ಬರೂ ಸಕಾರಾತ್ಮಕವಾಗಿ ಸ್ಪಂದಿಸದಿದ್ದರಿಂದ ಸೇವೆ ಯಿಂದ ಹಿಂದೆ ಸರಿಯುವ ತೀರ್ಮಾನಕ್ಕೆ ಸಂಸ್ಥೆ ಬಂದಿದೆ. ಹೀಗಿದ್ದರೂ ಆರ್.ಟಿ.ಒ ಅಧಿಕಾರಿಗಳು ಮಾತ್ರ ಹೇಳುವುದು ಹೀಗೆ.

ಇನ್ನೂ ಪ್ರತಿದಿನ ಎರಡು ಸಾವಿರದಷ್ಟು ಪ್ರಯಾಣಿಕರು ರೈಲು ನಿಲ್ದಾಣದಿಂದ ನಗರದ ವಿವಿಧೆಡೆಗೆ ಪ್ರಯಾಣಿಸುತ್ತಾರೆ. ಕನಿಷ್ಠ 200 ಮಂದಿ ಪ್ರಿ-ಪೇಯ್ಡ್ ಆಟೋದಲ್ಲಿ ಸಂಚರಿಸಿದರೂ ಖರ್ಚು ವೆಚ್ಚ ಸರಿದೂಗಿಸಿಕೊಳ್ಳಬಹುದು. ಕೌಂಟರ್‌ನಲ್ಲಿ 2022ರ ಡಿ. 3ರಿಂದ 2023ರ ಜ. 22ರವರೆಗೆ 567 ಟಿಕೆಟ್‌ಗಳು ಮಾತ್ರ ಮಾರಾಟವಾಗಿವೆ. ಅದರಿಂದ ಸೇವಾ ಶುಲ್ಕ ಕೇವಲ 1,701 ಸಂಗ್ರಹವಾಗಿದೆ. ಮೂವರು ಸಿಬ್ಬಂದಿಗೆ ವೇತನ, ವಿದ್ಯುತ್‌–ಇಂಟರ್‌ನೆಟ್‌ ಶುಲ್ಕ ಹಾಗೂ ಇತರೆ ವೆಚ್ಚ ಭರಿಸಲು ಸಾಧ್ಯವಾಗದೆ ಸ್ಥಗಿತಗೊಳಿಸುವ ನಿರ್ಧಾರಕ್ಕೆ ಬರಲಾಗಿದೆ. ಹೀಗಿದ್ದರೂ ಅಧಿಕಾರಿಗಳು ಮಾತ್ರ ಈ ಬಗ್ಗೆ ಕಾಳಜಿ ತೋರುತ್ತಿಲ್ಲ.

ಒಟ್ಟಿನಲ್ಲಿ ಜನರಿಗೆ ಮುಕ್ತವಾಗಿರಬೇಕಿದ್ದ ಸೇವೆ ಆರ್.ಟಿ.ಒ ಹಾಗೂ ಸ್ಥಳೀಯ ಆಟೋಗಳ ಅಸಹಕಾರದಿಂದ ಇಂತಹದೊಂದು ಅವ್ಯವಸ್ಥೆ ತಲೆದೂರಿದ್ದು, ಈ ಬಗ್ಗೆ ಇನ್ನಾದರೂ ಜಿಲ್ಲಾಡಳಿತ ಸೂಕ್ತ ನಿರ್ಧಾರವನ್ನು ಕೈಗೊಳ್ಳಬೇಕಿದೆ.

Share News

About BigTv News

Check Also

ಮನೆಯ ಮೇಲ್ಪಾವಣಿಗೆ ತಗಡು ಹಾಕುವ ವೇಳೆಯಲ್ಲಿ ಶಾರ್ಟ್ ಸರ್ಕ್ಯೂಟ್‌

ಹುಬ್ಬಳ್ಳಿ: ಮನೆಯ ಮೇಲ್ಪಾವಣಿಗೆ ತಗಡು ಹಾಕುವ ವೇಳೆಯಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ತಗುಲಿದ ಪರಿಣಾಮ ದೊಡ್ಡ ಪ್ರಮಾಣದ ಬೆಂಕಿ ಹೊತ್ತಿಕೊಂಡಿರುವ …

Leave a Reply

Your email address will not be published. Required fields are marked *

You cannot copy content of this page