ಹುಬ್ಬಳ್ಳಿ: ಧಾರವಾಡ ವಿಧಾನ ಸಭಾ 7 ಕ್ಷೇತ್ರದಲ್ಲಿ ಒಂದು ಎಸ್ ಸಿ ರಿಸರ್ವ ವೆಷನ್ ಇದ್ದು, ಉಳಿದ ಆರು ಕ್ಷೇತ್ರದಲ್ಲಿ ಯಾವುದಾದರೂ ಒಂದು ಕಡೆ ಮುಸ್ಲಿಂ ಆಕಾಂಕ್ಷಿಗಳಿಗೆ ಟಿಕೆಟ್ ನೀಡುವಂತೆ ಒತ್ತಾಯಿಸಿದರು. ಹುಬ್ಬಳ್ಳಿಯ ಹೋಟೆಲ್ ಒಂದರಲ್ಲಿ ಸಭೆ ನಡೆಸಿದ ಮುಸ್ಲಿಂ ಸಮುದಾಯದವರು ಹುಬ್ಬಳ್ಳಿ-ಧಾರವಾಡ ಸೆಂಟ್ರಲ್-73 ರ ವಿಧಾನ ಸಭಾ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಆಕಾಂಕ್ಷಿಯಾಗಿರುವ ಅಲ್ ಹಾಜ್ ಸಿ.ಎಸ್.ಮಹಬೂಬಭಾಷಾ ರವರಿಗೆ ಟಿಕೆಟ್ ನೀಡಬೇಕೆಂದು ಚರ್ಚೆ ನಡೆಸಿದರು.

ಆರು ಬಾರಿ ಗೆದ್ದಿರುವ ಜಗದೀಶ್ ಶೆಟ್ಟರ್ ಕ್ಷೇತ್ರದಲ್ಲಿ 45000 ಕ್ಕೂ ಹೆಚ್ಚು ಮುಸ್ಲಿಂ ಮತದಾರರು ಇದ್ದು, ಇನ್ನೂ ಹಿಂದೂಳಿದ ಪಂಗಡ ಸೇರಿದಂತೆ ಬಹಳಷ್ಟು ಮತದಾರರು ಕಾಂಗ್ರೆಸ್ ಗೆ ಬೆಂಬಲ ನೀಡಲಿದ್ದಾರೆ. ಇದೂ ವರೆಗೂ ಕಾಂಗ್ರೆಸ್ ಪಕ್ಷ ಕೇವಲ ಹಿಂದೂಗಳಿಗೆ ಟಿಕೆಟ್ ನೀಡಿ ಸೋತಿದೆ.

ಆದ್ರೇ ಈ ಭಾರಿಯಾದ್ರೂ ಮುಸ್ಲಿಂ ಸಮುದಾಯದ ಆಕಾಂಕ್ಷಿಗೆ ಟಿಕೆಟ್ ನೀಡಬೇಕೆಂದು ಒತ್ತಾಯಿಸಿದರು. ಒಂದು ವೇಳೆ ಟಿಕೆಟ್ ಕೈ ತಪ್ಪಿದರೇ ಕಾಂಗ್ರೆಸ್ ಗೆ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲೂ ಪಾಠ ಕಲಿಸುವ ಕೆಲಸ ಮಾಡೋಣ ಎಂದು ಚರ್ಚಿಸಿದರು. ಮುಸ್ಲಿಂರು ಕೇವಲ ನಾಯಕರಿಗೆ ಜೈ ಕಾರ ಹಾಕುವುದಕ್ಕೆ ಅಷ್ಟೇ ಮೀಸಲಾಗಿದ್ದಾರೆ. ಯಾವುದೇ ಉನ್ನತ ಸ್ಥಾನ ಮಾನ ನೀಡಿಲ್ಲ ಎಂದು ಹೇಳಿದರು. ಸಭೆಯಲ್ಲಿ ಮಾಜಿ ಸಂಸದ ಐ.ಜಿ. ಸನದಿ, ಬಾಬಾಜನ್ ಮುದೋಲ್, ಅನ್ವರ್ ಮುದೋಲ್, ಅಸ್ಫಕ್ ಕುಮುಟಗರ್ ಸೇರಿದಂತೆ ನೂರಾರು ಮುಸ್ಲಿಂ ಸಮುದಾಯದವರು ಸಭೆಯಲ್ಲಿ ಭಾಗವಹಿಸಿದ್ದರು.