ಹುಬ್ಬಳ್ಳಿ: ಮುಸ್ಲಿಂ ಸಮೂದಾಯದವರ ಜನಸಂಖ್ಯೆ ಹೆಚ್ಚಿರುವ ಕಡೆ ಕನಿಷ್ಟ ಪಕ್ಷ ಒಂದು ಟಿಕೆಟ್ ನೀಡಬೇಕೆಂದು ಮಾಜಿ ಸಂಸದ ಐ ಜಿ ಸನದಿಯವರು ಒತ್ತಾಯಿಸಿದರು. ಅಲ್ಪಸಂಖ್ಯಾತರಿಗೆ ಹುಬ್ಬಳ್ಳಿ ಧಾರವಾಡ ದಲ್ಲಿ ಒಂದು ಟಿಕೆಟ್ ನೀಡುವಂತೆ ಕಾಂಗ್ರೆಸ್ ಗೆ ಮನವಿ ಮಾಡಿದ್ದಾರೆ. ಕಾಂಗ್ರೆಸ್ ನಿಂದ ಇಲ್ಲಿಯವರೆಗೂ ನಮ್ಮ ಸಮುದಾಯಕ್ಕೆ ಯಾವುದೇ ಅನ್ಯಾಯ ಆಗಿಲ್ಲ. ಕಾಂಗ್ರೇಸ್ ಪಕ್ಷದಲ್ಲಿ ಮೊದಲು ಪಾರ್ಟಿ ಅನ್ನುವ ಸಿದ್ದಾಂತ ವಿತ್ತು. ಆದ್ರೇ ಈಗ ಮುಸ್ಲಿಂ ಸಮುದಾಯದ ಧ್ವನಿ ಹೆಚ್ಚಾಗಿದೆ. ಪಾರ್ಟಿಗಿಂತ ಸಮೂದಾಯವೇ ಮುಖ್ಯ ಅನ್ನುವ ಪರಿಸ್ಥಿತಿ ನಮ್ಮ ಸಮುದಾಯದವರು ಬಂದಿದ್ದಾರೆ. ಒಂದು ವೇಳೆ ಟಿಕೆಟ್ ಕೈ ತಪ್ಪಿದರೆ ಪಕ್ಷದ ವಿರುದ್ದ, ಪಕ್ಷ ವಿರೋಧಿ ಚಟುವಟಿಕೆ ಮಾಡುವುದಿಲ್ಲ ಎಂದು ಸನದಿಯವರು ಕಾಂಗ್ರೇಸ್ ಮುಖಂಡರಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.
