ಬೆಂಗಳೂರು: ಐಪಿಎಸ್ ಅಧಿಕಾರಿಗಳನ್ನ ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಕಾರ್ತಿಕ್ ರೆಡ್ಡಿ, ಎಸ್ ಪಿ ,ರಾಮನಗರ.
ಡಿ ದೇವರಾಜು, ಡಿಸಿಪಿ, ಉತ್ತರ ವಿಭಾಗ.
ಸಿರಿ ಗೌರಿ, ಎಸ್ ಪಿ, ಐಎಸ್ ಡಿ.
ಟಿ ಪಿ ಶಿವಕುಮಾರ್, ಎಸ್ ಪಿ ,ಕೆಪಿಟಿಸಿಎಲ್.
ಶೇಖರ್ ಎಚ್ ಟೆಕ್ಕನವರ್, ಡಿಸಿಪಿ ,ಕಾನೂನು ಸುವ್ಯವಸ್ಥೆ, ಬೆಳಗಾವಿ.
ಪದ್ಮಿನಿ ಸಾಹೊ, ಎಸ್ ಪಿ,ಚಾಮರಾಜನಗರ.
ವಿನಾಯಕ್ ಪಾಟೀಲ್, ಎಐಜಿಪಿ, ಬೆಂಗಳೂರು.
ಸಂತೋಷ್ ಬಾಬು,ಎಸ್ ಪಿ, ಇಂಟೆಲಿಜೆನ್ಸ್.
ರಾಜ್ಯ ಸರ್ಕಾರ ಇನ್ನು ಎರಡು ತಿಂಗಳು ಮಾತ್ರ ಅಧಿಕಾರದಲ್ಲಿದ್ದು, ನಂತರ ಚುನಾವಣಾ ನೀತಿ ಸಂಹಿತೆ ಜಾರಿಯಾಗುತ್ತದೆ. ಈಗ ವರ್ಗಾವಣೆಗಿಒಂಡ ಅಧಿಕಾರಿಗಳನ್ನು ಮುಂದಿನ ಒಂದು ವರ್ಷದವರೆಗೆ ಅಧಿಕಾರಿಗಳ ವರ್ಗಾವಣೆ ಮಾಡುವ ಸಾಧ್ಯತೆ ಬಹುತೇಕ ಕಡಿಮೆ ಎಂದು ಹೇಳಬಹುದು.

ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ- 74 ಡಿವೈಎಸ್‌ಪಿ ವರ್ಗಾವಣೆ:
ಐಪಿಎಸ್ ಅಧಿಕಾರಿಗಳ ವರ್ಗಾವಣೆಯ ಮೊದಲೇ ರಾಜ್ಯ ಸರ್ಕಾರದಿಂದ ಬರೋಬ್ಬರಿ 74 ಡಿವೈಎಸ್‌ಪಿಗಳನ್ನು ವರ್ಗಾವಣೆಗೊಳಿಸಿ ಅದೇಶ ಹೊರಡಿಸಲಾಗಿದೆ. ಈ ವರ್ಗಾವನೆ ಆದೇಶದಿಂದ ಅಧಿಕಾರಿಗಳು ತಮ್ಮ ಸ್ಥಾನದಿಂದ ಬೇರೆಡೆ ಹೋಗಿ ರಿಪೋರ್ಟ್ ಮಾಡಿಕೊಳ್ಳಲಿದ್ದಾರೆ. ಸಂಬಂಧಪಟ್ಟ ಹಿರಿಯ ಮೇಲಧಿಕಾರಿಗಳು ಕೂಡಲೇ ಇವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಲು ಸೂಚಿಸಲಾಗಿದೆ. ವರ್ಗಾವಣೆಗೊಂಡ ಅಧಿಕಾರಿಗಳು ತಮ್ಮ ವರ್ಗಾವಣೆಯಾದ ಸ್ಥಳದಲ್ಲಿ ಕಾಲ ವಿಳಂಬವಿಲ್ಲದೇ ಕರ್ತವ್ಯಕ್ಕೆ ವರದಿ ಮಾಡಿಕೊಂಡು ಪಾಲನಾ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.