ಧಾರವಾಡ: ಧಾರವಾಡ ಶಹರ ಪೊಲೀಸ್ ಠಾಣೆ ವ್ಯಾಪ್ತಿಯ ಕೋ ಆಫ್ ಸೊಸೈಟಿಯೊಂದರಲ್ಲಿ ಇತ್ತೀಚೆಗೆ ನಡೆದಿದ್ದ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿತನನ್ನು ಇಂದು ಬಂಧಿಸಿ ಆತನಿಂದ 17,90,000/- ರೂ ನಗದು, 21,00,000/- ರೂ ಮೌಲ್ಯದ 615.30 ಗ್ರಾಂ ಚಿನ್ನಾಭರಣಗಳು ಸೇರಿದಂತೆ ಒಟ್ಟು 39,90,000/- ರೂಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಪೊಲೀಸ್ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ ಮಾನ್ಯ ಪೊಲೀಸ್ ಆಯುಕ್ತರಾದ ಶ್ರೀ ರಮನ್ ಗುಪ್ತಾ IPS ರವರು ಶ್ಲಾಘಿಸಿ ಬಹುಮಾನ ಘೋಷಿಸಿರುತ್ತಾರೆ.
